Breaking News

Yearly Archives: 2022

ಬಸವರಾಜ ಹೊರಟ್ಟಿ ಅತಂತ್ರಕ್ಕೆ ಬಿಜೆಪಿ ಯತ್ನ? ಡಿಸೆಂಬರ್‌ವರೆಗೆ ಸಭಾಪತಿ ಆಯ್ಕೆ ಇಲ್ಲ

ಹುಬ್ಬಳ್ಳಿ: ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಲ್ಲದೆ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಗೆ ದಿಢೀರ್‌ ತಡೆಯೊಡ್ಡುವ ಮೂಲಕ ಬಿಜೆಪಿ ನಾಯಕರು ಹೊರಟ್ಟಿ ಅವರನ್ನು ಅತಂತ್ರ ಮಾಡುವ ಯತ್ನಕ್ಕೆ ಮುಂದಾಗಿ ದ್ದಾರೆಯೇ ಎಂಬ ಶಂಕೆ ಮೂಡಿದೆ.   ಹೊರಟ್ಟಿ ಸುಮಾರು ಮೂರು ದಶಕಗಳ ಕಾಲದ ಜನತಾ ಪರಿವಾರದ ನಂಟು ತೊರೆದು ಬಿಜೆಪಿ ಸೇರಿ ಪಶ್ಚಿಮ …

Read More »

ಶಬರಿಮಲೆಗೆ ಏರ್‌ಪೋರ್ಟ್‌: ಇಂದು ಮಣ್ಣು ಪರೀಕ್ಷೆ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಆಗಮಿಸುವವರಿಗಾಗಿ ಅನುಕೂಲವಾಗಲು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಕೆಲಸಗಳು ಶುರುವಾಗಿವೆ. ಚೆರುವಲ್ಲಿ ಎಸ್ಟೇಟ್‌ನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಸೋಮವಾರ ಆರಂಭವಾಗಲಿದೆ. ಈ ಮೂಲಕ ತಜ್ಞರ ತಂಡ, ರನ್‌ವೇ ನಿಲ್ದಾಣಕ್ಕೆ ಅಲ್ಲಿನ ಮಣ್ಣಿನ ಸ್ಥಿತಿ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲಿದೆ. ಕನ್ಸಲ್ಟಿಂಗ್‌ ಸಂಸ್ಥೆ ಲೂಯಿಸ್‌ ಬರ್ಗರ್‌ ಪರವಾಗಿ ಜಿಯೋ ಐಡಿ ಏಜೆನ್ಸಿಯ ಅಧಿಕಾರಿಗಳು ಮಣ್ಣಿನ ಪರೀಕ್ಷೆ ನಡೆಸಲು ನವದೆಹಲಿಯಿಂದ ಶಬರಿಮಲೆಗೆ ಆಗಮಿಸಿದ್ದಾರೆ.

Read More »

ಚಿರತೆ ಬಗ್ಗೆ ಸುಳ್ಳು ಮಾಹಿತಿ: ಮೋದಿ ಸುಳ್ಳುಗಾರ ಎಂದ ಜೈರಾಮ್ ರಮೇಶ್

ನವದೆಹಲಿ, ಸೆ.18: ದೊಡ್ಡ ಬೆಕ್ಕುಗಳು ಅಂದರೆ ಚಿರತೆಗಳು ದೇಶದಲ್ಲಿ ನಾಶವಾಗಿವೆ ಎಂದು ಘೋಷಿಸಿದ ನಂತರ ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.   2009 ರಲ್ಲಿ ‘ಪ್ರಾಜೆಕ್ಟ್ ಚೀತಾ’ ಆರಂಭಿಸಿದ ಪತ್ರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಚಿರತೆಗಳನ್ನು ಮರು ಪರಿಚಯಿಸಲು ಪ್ರಯತ್ನಗಳನ್ನು ಮಾಡಲಿಲ್ಲ …

Read More »

V.R.L.​ ಸಂಸ್ಥೆ ಹೆಸರಲ್ಲಿ ನಕಲಿ ವೆಬ್​ಸೈಟ್​ ತೆರೆದು ವಂಚಿಸುತ್ತಿದ್ದವರ ಬಂಧನ..

ಬೆಂಗಳೂರು: ವಿಆರ್‌ಎಲ್ ಸಂಸ್ಥೆ ಹೆಸರಿನ ಮೂವರ್ಸ್‌ ಆಯಂಡ್ ಪ್ಯಾಕರ್ಸ್‌ ಎಂಬ ನಕಲಿ ವೆಬ್‌ಸೈಟ್ ತೆರೆದು ವಂಚಿಸುತ್ತಿದ್ದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಬ್ರಹ್ಮದೇವ್ ಯಾದವ್ (25), ಮುಕೇಶ್ ಕುಮಾರ್ ಯಾದವ್ (20), ವಿಜಯ್ ಕುಮಾರ್ ಯಾದವ್ (22) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ ನಾಲ್ಕು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರೊಬ್ಬರು ಇತ್ತೀಚೆಗೆ ತಮ್ಮ …

Read More »

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಮೀನುಗಾರರಂತೆ ರೈತರಿಗೂ ಡೀಸೆಲ್ ರಿಯಾಯ್ತಿ

ಧಾರವಾಡ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮಾದರಿಯಲ್ಲಿ ರೈತರಿಗೂ ರೈತ ಶಕ್ತಿ ಯೋಜನೆ ಮೂಲಕ ಡೀಸೆಲ್ ರಿಯಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.   ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ. ಸಾಮಾನ್ಯವಾಗಿ ರೈತರು ಬಿತ್ತನೆ …

Read More »

BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!

ಹುಬ್ಬಳ್ಳಿ (ಸೆ.18): ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಏಕಾಂಗಿ ಆದ್ರಾ? ಅನ್ನೋ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಯಡಿಯೂರಪ್ಪ ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಯಾವೊಬ್ಬ ಸ್ಥಳೀಯ ನಾಯಕರು ಅತ್ತ ಸುಳಿಯದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಸಂದರ್ಭದಲ್ಲಿ ಒಬ್ಬ ಸ್ಥಳೀಯ ಬಿಜೆಪಿ ನಾಯಕರೂ (BJP Leaders) ಸಹ ಸ್ವಾಗತಕ್ಕೆ ಬಂದಿರಲಿಲ್ಲ. ಬಿಎಸ್​ವೈ ಸ್ವಾಗತಕ್ಕೆ ಬರಲಿಲ್ಲ ನಾಯಕರು ಬಿಜೆಪಿ …

Read More »

“ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ ಕಳಸ್ತೇನೆ” :ಯತ್ನಾಳ್!

ಗದಗ: ನಿನ್ನೆ ಗದಗದಲ್ಲಿ (Gadag) ನಡೆದ ಹಿಂದೂ ಮಹಾ ಗಣಪತಿ ಧರ್ಮ ಸಭೆಯಲ್ಲಿ‌ (Hindu Mahaganapati Dharma Sabhe) ಭಾಗವಹಿಸಿ ಮಾತ್ನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾರ್ಯ ವೈಖರಿ ಬಗ್ಗೆ ಟೀಕಿಸಿದ್ರು. ಅಲ್ದೆ, ನಾನು ಸಿಎಂ ಆದ್ರೆ ಬದಲಾವಣೆ ಆಗುತ್ತೆ ಅನ್ನೋ ಮೂಲಕ ಸಿಎಂ ಆಗುವ ಆಸೆಯನ್ನ ಮತ್ತೊಮ್ಮೆ ಬಹಿರಂಗ ಪಡೆಸಿದ್ರು.‌ ನಾನು ಮುಖ್ಯಮಂತ್ರಿ ಆಗಿದ್ರೆ.. …

Read More »

ಮೈಸೂರು ದಸರಾ 2022: ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್ ವ್ಯವಸ್ಥೆ ಜಾರಿ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ವತಿಯಿಂದ ಏಕೀಕೃತ ಟಿಕೆಟ್ (ಕಾಂಬೋ ಟಿಕೆಟ್) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು 5 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆ ಆರ್ ಎಸ್ ಬೃಂದಾವನಕ್ಕೆ ತೆರಳಬಹುದು. ಪ್ರವಾಸಿಗರು ಈ ಏಕೀಕೃತ ಟಿಕೆಟ್ ಪಡೆಯುವುದರಿಂದ, 5 ಸ್ಥಳಗಳಲ್ಲಿ ಟಿಕೆಟ್​ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ …

Read More »

ಧಾರವಾಡ ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ವದಂತಿ: ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಗೆ ಥಳಿತ

ಧಾರವಾಡ: ಜಿಲ್ಲೆಯಲ್ಲಿ ಮಕ್ಕಳ‌ ಕಳ್ಳರ ವದಂತಿ ಹೆಚ್ಚಿರುವ ಹಿನ್ನೆಲೆ ಸಂಶಯಾಸ್ಪದ ವ್ಯಕ್ತಿಗಳು ಓಡಾಟ ಬಹಳ ದುಸ್ತರವಾಗಿದೆ. ಹೀಗಿರುವಾಗ ಮಕ್ಕಳ ಕಳ್ಳ ಎಂದು ಅನುಮಾನಗೊಂಡ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಈ ವ್ಯಕ್ತಿಯ ಜೇಬಿನಲ್ಲಿ ವಿವಿಧ ಮಕ್ಕಳ ಫೋಟೋ, ಗುರುತಿನ ಚೀಟಿ ಹಾಗೂ ಎಟಿಎಂ ಕಾರ್ಡ್‌ ಇದ್ದಿದ್ದನ್ನು ನೋಡಿದ ಗ್ರಾಮಸ್ಥರು, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ …

Read More »

ದೇಶಕ್ಕಾಗಿ ಕಾವಲುಗಾರ ಯಾವ ಕೆಲಸ ಮಾಡಿದ್ದಾರೆ?: ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮನ್ನು ದೇಶದ ಕಾವಲುಗಾರ ಅಂತಾರೆ. ಆದರೆ, ನೀವು ಯಾವ ಚೌಕಿದಾರ್ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಭಾರತ್ ಜೋಡೋ ಪೂರ್ವಭಾವಿ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರಿಗೆ …

Read More »