ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಕಲ್ಪಿಸಲು ಮುಂದಾಗಿದ್ದಾರೆ. ಒಂದು ವಾರಗಳ ಕಾಲ ‘ಸುವರ್ಣ ರೈತ – ದುರ್ಗಾ ಟು ಇಸ್ರೇಲ್’ ಹೆಸರಿನಡಿ ಈ ಪ್ರವಾಸ ಕಾರ್ಯಕ್ರಮ ನಡೆಯಲಿದ್ದು, ಪಕ್ಷಾತೀತವಾಗಿ ರೈತರನ್ನು ಆಯ್ಕೆ ಮಾಡುವ ಸಲುವಾಗಿ ಏಳು ಜನರಿರುವ ಸಮಿತಿ ರಚಿಸಲಾಗುತ್ತಿದೆ. ಮಹಿಳೆಯರನ್ನೂ ಒಳಗೊಂಡಂತೆ 40 ವರ್ಷದೊಳಗಿನ ಐವತ್ತು ರೈತರನ್ನು ಇಸ್ರೇಲ್ ಗೆ …
Read More »Yearly Archives: 2022
ಅನ್ಯ ಜಾತಿ ಯುವಕನ ಜತೆ ಮಗಳು ಪರಾರಿ: ಮರ್ಯಾದೆಗೆ ಅಂಜಿ ಸಾವಿನ ಹಾದಿ ಹಿಡಿದ ತಂದೆ, ತಾಯಿ, ಸಹೋದರ
ಚಿಕ್ಕಬಳ್ಳಾಪುರ: ಮಾನ-ಮರ್ಯಾದೆಗೆ ಹೆದರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ ಹಾಗೂ ಮಗ ಮನೋಜ್ ಮೃತ ದುರ್ದೈವಿಗಳು. ಹೆತ್ತ ಮಗಳು ಅನ್ಯ ಜಾತಿಯ ಯುವಕನ ಜೊತೆ ಪರಾರಿಯಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ. 26 ವರ್ಷದ ಮಗಳು ಅರ್ಚನಾ, ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ಯುವಕ ಅನ್ಯಜಾತಿಯವನಾಗಿರುವುದರಿಂದ ಊರಿನವರಿಂದ ನಿಂದನೆ ಒಳಗಾಗಬಹುದು ಎಂದು ಹೆದರಿ …
Read More »‘ಆದಿಪುರುಷ್’ ಟೀಸರ್ ನೋಡಿ ಓಂ ರಾವುತ್ ಮೇಲೆ ಪ್ರಭಾಸ್ ಗರಂ?
ಆದಿಪುರುಷ್’ ಟೀಸರ್ ನೋಡಿ ಸಾಕಷ್ಟು ಜನ ನಿರ್ದೇಶಕ ಓಂ ರಾವುತ್ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಟೀಸರ್ ರಿಲೀಸ್ ಈವೆಂಟ್ ನಂತರ ಸ್ವತಃ ಪ್ರಭಾಸ್ ಕೂಡ ನಿರ್ದೇಶಕರ ಮೇಲೆ ಗರಂ ಆಗಿದ್ದರು ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾನುವಾರಷ್ಟೇ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ‘ಆದಿಪುರುಷ್’ ಸಿನಿಮಾ ಟೀಸರ್ ಲಾಂಚ್ ಮಾಡಲಾಗಿತ್ತು. ರಾಮಾಯಣ ಕಾವ್ಯವನ್ನು ಆಧರಿಸಿ ಈ ಮೋಷನ್ ಕ್ಯಾಪ್ಚರ್ ಆನಿಮೇಷನ್ ಸಿನಿಮಾ ಕಟ್ಟಿಕೊಡಲಾಗ್ತಿದೆ. …
Read More »ಉತ್ತರ ಕರ್ನಾಟಕಕ್ಕೆ ಐಟಿ ಕಂಪೆನಿ ತರಲು ಯತ್ನ: ಅಶ್ವತ್ಥನಾರಾಯಣ
ಹುಬ್ಬಳ್ಳಿ: ಉದ್ಯಮಕ್ಕೆ ಹೂಡಿಕೆ ಮಾಡಲು ಬೇರೆ ಬೇರೆ ರಾಜ್ಯಗಳಿಂದ ಕಂಪೆನಿಗಳು ಬರುತ್ತಿವೆ. ರಾಜ್ಯಕ್ಕೆ ಬರುವ ಐಟಿ ಕಂಪೆನಿಗಳನ್ನು ಉತ್ತರ ಕರ್ನಾಟಕಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಅಶ್ವತ್ಥನಾರಾಯಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಕಲಿಕೆಗೆ ಒತ್ತು ನೀಡಲಾಗಿದೆ. ಆಡ್ಯಮ್ ಪ್ರೋಗ್ರಾಮ್, ಮೈಕ್ರೊಸೈಟ್, ಮೊಡ್ರಿಂಗ್ ಸಹಿತ 1200ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಅಧ್ಯಯನದಲ್ಲಿ …
Read More »ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ
ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ …
Read More »ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು: ಸಿದ್ದರಾಮಯ್ಯಗೆ ಕಾನ್‌ಸ್ಟೆಬಲ್ ಸವಾಲು!
ವಿಜಯಪುರ: ‘ಭಾರತ ಜೋಡೊ’ ಪಾದಯಾತ್ರೆಗೆ ಅಡ್ಡಿ ಪಡಿಸುವ ಬಿಜೆಪಿ ಹುನ್ನಾರದಲ್ಲಿ ಪೊಲೀಸ್‌ನವರೇನಾದರೂ ಶಾಮೀಲಾದ್ರೆ…’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ವಿಜಯಪುರ ಗ್ರಾಮೀಣ ಠಾಣೆ ಕಾನ್‌ಸ್ಟೆಬಲ್‌ವೊಬ್ಬರು ವಿರೋಧ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು’ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್ ರಾಜಶೇಖರ ಖಾನಾಪುರ ಸವಾಲು ಹಾಕಿದ್ದು, ಸಾಮಾಜಿಕ …
Read More »ತಮ್ಮದೇ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಮಾಜಿ ಸಿಎಂ ಬಹಿರಂಗ ಅಸಮಾಧಾನ
ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಹೇಳಿದ ಅವರು, ಪರೋಕ್ಷವಾಗಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಐಟಿಬಿಟಿ ಇಲಾಖೆಯಿಂದ ನಡೆಯುತ್ತಿರುವ ಬೆಂಗಳೂರು ಟೆಕ್ ಉತ್ಸವದಲ್ಲಿ ಬಹಿರಂಗವಾಗಿಯೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್, ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಕೆಲಸ ತೃಪ್ತಿಕರವಾಗಿಲ್ಲ. ಅಧಿಕಾರಿ ವರ್ಗದವರು …
Read More »ಕಾರ್ಮಿಕ ಇಲಾಖೆಯಲ್ಲಿ ನೇಮಕಾತಿ: ಪದವೀಧರರಿಂದ ಅರ್ಜಿ ಆಹ್ವಾನ- 62 ಸಾವಿರ ರೂ.ವರೆಗೆ ಸಂಬಳ
ಕಾರ್ಮಿಕ ಇಲಾಖೆಯಲ್ಲಿರುವ ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಉಳಿಕೆ ಮೂಲ ವೃಂದದ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅ.29ರೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಕಾರ್ಮಿಕ ನಿರೀಕ್ಷಕ- ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಕನ್ನಡ ಭಾಷಾ ಪರೀಕ್ಷೆ , ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಗಳಿಸಿದ ಅಂಕ, ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ …
Read More »ಗೋಕಾಕ್ ಶಾಸಕರಿಗೆ, ಸವದಿಗೆ ಸಚಿವ ಸಂಪುಟ ಸ್ಥಾನಮಾನ ಕೊಡಲಿ: ಮಹೇಶ್ ಕುಮಠಳ್ಳಿ
ಅಥಣಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಲಿ. ನನಗೆ ಸಚಿವ ಸ್ಥಾನಕ್ಕಿಂತಲೂ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ. ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಬೇಡ ಎಂದು ಶಾಸಕ ಮಹೇಶ್ ಕುಮಠಳ್ಳಿ ಅವರು ಹೇಳಿಕೆ ನೀಡಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ. …
Read More »ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರಿಗೆ 43ನೇ ಸ್ಥಾನ: ಸಾರ್ವಜನಿಕರಿಂದ ಟೀಕೆ
ಬೆಂಗಳೂರು: ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2022ರ ಪ್ರಕಾರ 45 ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ 43ನೇ ಸ್ಥಾನ ಪಡೆದುಕೊಂಡಿದೆ. ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ರ್ಯಾಂಕಿಂಗ್ನಲ್ಲಿ 15ರಷ್ಟು ಕುಸಿತ ಕಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ಅಂಕಿ ಅಂಶಗಳನ್ನು ಆಧರಿಸಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 45 ನಗರಗಳಲ್ಲಿ ಬೆಂಗಳೂರು 43ನೇ …
Read More »