Breaking News

Yearly Archives: 2022

ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತ ಸಾಗರ

ಸವದತ್ತಿ: ಜಗನ್ಮಾತೆ ನಿತ್ಯ ಪೂಜಿತೆ ಏಳುಕೊಳ್ಳದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರ ಅದ್ದೂರಿಯಿಂದ ವಿಜ್ರಂಭಿಸುತ್ತಿದೆ. 7 ನೇ ದಿನ ರವಿವಾರ ರಾಜ್ಯ ಸೇರಿ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು. ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತ ಯಲ್ಲಮ್ಮ ದೇವಿ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಘಟಸ್ಥಾಪನೆಯ 5 ನೇ ದಿನ ಶುಕ್ರವಾರ ಭಕ್ತರ ಆಗಮನ ಗಣನೀಯವಾಗಿ ಏರಿಕೆ ಕಂಡಿತ್ತು. 7 ನೇ ದಿನ ರವಿವಾರ …

Read More »

ಮತ್ತೆ ಕಬ್ಬಿಗರ ದರ ಸಂಘರ್ಷ; ಹೆಚ್ಚುವರಿ ದರ ನೀಡಲು ಅನ್ನದಾತರ ಒತ್ತಾಯ

ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭ, ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಎಫ್‌ಆರ್‌ಪಿ ಪ್ರಕಾರ ದರ ನಿಗದಿ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಮತ್ತೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ’ ಉಂಟಾಗುವ ಲಕ್ಷಣಗಳು ಕಾಣುತ್ತಿವೆ.   ಸರ್ಕಾರ ದರ ನಿಗದಿ ಮಾಡಿ ಹೊರಡಿಸಿರುವ ಆದೇಶವನ್ನು ರಾಜ್ಯದ ಕಬ್ಬು ಬೆಳೆಗಾರರು ಒಪ್ಪುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಆದೇಶದ ಹಿಂದೆ ಸಕ್ಕರೆ ಕಾರ್ಖಾನೆಗಳ ಲಾಬಿ ಇದೆ. …

Read More »

ಬೋನಸ್ ನೀಡದ್ದಕ್ಕೆ ಗ್ರಾಮ ಪಂಚಾಯಿತಿಗೆ ಚಪ್ಪಲಿ ಹಾರ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದೇ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಗಾಂಧಿ ಜಯಂತಿ ಆಚರಣೆ ಮಾಡಿ ಕಚೇರಿಗೆ ಬಾಗಿಲು ಹಾಕಿ ಹೋಗಲಾಗಿತ್ತು. ಸಿಬ್ಬಂದಿ ಮನೆಗೆ ಹೋದ ನಂತರ ಈ ಕೃತ್ಯ ಎಸಗಲಾಗಿದೆ. ಈ ಬಗ್ಗೆ ದೇವನಹಳ್ಳಿ ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿಡಿಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಪ್ರತಿ ವರ್ಷ ದಸರಾ …

Read More »

ಹಬ್ಬದ ಸಂಭ್ರಮದಲ್ಲೇ ಬೆಳಗಾವಿಯಲ್ಲಿ ಡೆಂಘೀ ದಾಂಗುಡಿ.. ಜ್ವರದಿಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಿ

ಬೆಳಗಾವಿ: ಕೋವಿಡ್ ಕಾರಣಕ್ಕೆ ಎರಡು ವರ್ಷಗಳ ಕಾಲ ಮಂಕಾಗಿದ್ದ ಹಬ್ಬಗಳನ್ನು ಈ ಸಲ ಜನರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂಬ ಖುಷಿಯಲ್ಲಿರುವಾಗಲೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡೆಂಘೀ ದಾಂಗುಡಿ ಆತಂಕ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಪ್ರಸಕ್ತ ಜನವರಿಯಿಂದ ಸೆಪ್ಟೆಂಬರ್‌ವರೆಗೆ 207 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1,683ಕ್ಕೂ ಹೆಚ್ಚು ಮಂದಿಯ ರಕ್ತದ ಮಾದರಿ ತಪಾಸಣೆ ನಡೆಸಲಾಗಿದೆ. ಡೆಂಘೀಯಿಂದಾಗಿ ನೆರೆ ರಾಜ್ಯದಲ್ಲಿ ಚಿಕಿತ್ಸೆಗೆ ಒಳಗಾಗಿ ಮೃತಪಟ್ಟವರ ಮಾಹಿತಿ ಇದೆ. ಈ ಮಧ್ಯೆ …

Read More »

ಉಸಿರುಗಟ್ಟಿ ‌ಜೋಡೆತ್ತು ಸಾವು: ಮುಗಿಲು ಮುಟ್ಟಿದ ಬಡ ರೈತ ಕುಟುಂಬಸ್ಥರ ಆಕ್ರಂದನ

ಬೆಳಗಾವಿ: ಜಿಲ್ಲೆಯ ‌ಬೈಲಹೊಂಗಲಪಟ್ಟಣದ ಪ್ರಭುನಗರ ನಾಲ್ಕನೇ ಅಡ್ಡ ರಸ್ತೆ ನಿವಾಸಿ, ರೈತ ಮಹಿಳೆ ಸಾಬವ್ವ ಹುಡೇದ ಕುಟುಂಬಸ್ಥರಿಗೆ ಸೇರಿದ ಜೋಡೆತ್ತುಗಳು ಉಸಿರುಗಟ್ಟಿ ಸಾವಿಗೀಡಾಗಿವೆ. ದನದ ಕೊಟ್ಟಿಗೆಯಲ್ಲಿ ಬೆಲಗ (ಕಂಬ) ಮುರಿದ ಪರಿಣಾಮ ಜೋಡೆತ್ತುಗಳ ಹಗ್ಗ ಒಂದಕ್ಕೊಂದು ಸಿಲುಕಿಕೊಂಡಿವೆ. ಪರಿಣಾಮ ಅವು ಉಸಿರುಗಟ್ಟಿ ಕೊನೆಯುಸಿರೆಳೆದಿವೆ. ಮಾಲೀಕರಿಗೆ ವಿಷಯ ತಿಳಿಯುವಷ್ಟರಲ್ಲಿ ಜೋಡೆತ್ತುಗಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು ಆರು ಲಕ್ಷ ಮೌಲ್ಯದ …

Read More »

ಬೆಳಗಾವಿಯಲ್ಲಿ ಮಳೆಗೆ ಮನೆ ಕುಸಿತ.. ತಾಯಿ ಮಗು ಬಲಿಯಾದ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ

ಬೆಳಗಾವಿ: ಧಾರಾಕಾರ ಮಳೆ ಹಿನ್ನೆಲೆ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿತ ಆಗಿ ತಾಯಿ ಮಗು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಶೀಲ್ದಾರ ಮಹಾಂತೇಶ ಮಠದ ಅವರು ಹತ್ತು ಲಕ್ಷ ರೂ. ಪರಿಹಾರ ವಿತರಿಸಿದರು. ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಎಂಬುವವರ ಮನೆ ಕುಸಿದು ಮಗ ಪ್ರಜ್ವಲ್ ಮಹಾದೇವ ಬಾಗಿಲದ (5) ಹಾಗೂ ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ (40) ಸ್ಥಳದಲ್ಲೇ …

Read More »

ಬೆಳಗಾವಿ: ನಿಷೇಧಿತ ‌ಪಿಎಫ್ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು ‌ಮಂಜೂರು

ಬೆಳಗಾವಿ: ಎಸ್‌ಡಿಪಿಐ‌ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ನಿಷೇಧಿತ ಪಿಎಫ್ಐನ 6 ಮಂದಿ ಕಾರ್ಯಕರ್ತರಿಗೆ ಒಂದು ವಾರದ ಬಳಿಕ ಜಾಮೀನು ಸಿಕ್ಕಿದೆ.ಒಟ್ಟು 7 ಜನರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಬೆಳಗಾವಿ ಕಾನೂನು ‌ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ‌ಗಡಾಡಿ ಆದೇಶ ಹೊರಡಿಸಿದ್ದಾರೆ. ಎಸ್‌ಡಿಪಿಐ ಬೆಳಗಾವಿ ಜಿಲ್ಲಾಧ್ಯಕ್ಷ ಅಬೀದ್ ಖಾನ್ ಕಡೋಲಿ, ನಿಷೇಧಿತ ‌ಪಿಎಫ್ಐ ಕಾರ್ಯಕರ್ತರಾದ ಝಕೀವುಲ್ಲಾ ಫೈಜಿ, ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಸಮೀವುಲ್ಲಾ ಪೀರ್ಜಾದೆ, ಜಹೀರ್ ಘೀವಾಲೆ ರೆಹಾನ್ …

Read More »

ಹುಬ್ಬಳ್ಳಿಯಲ್ಲಿ ರಸ್ತೆ ಸಮಸ್ಯೆ ಕಂಡು ಧರೆಗಿಳಿದ ದೇವತೆ..!

ಹುಬ್ಬಳ್ಳಿ(ಧಾರವಾಡ): ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಸ್ತೆಗಳ ಪರಿಸ್ಥಿತಿ ನೋಡಿದರೆ ಭಯ ಮೂಡುವಂತಿದೆ. ಇಲ್ಲಿನ ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯೊಬ್ಬಳು ವಿನೂತನ ರೀತಿಯಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾಳೆ. ಹುಬ್ಬಳ್ಳಿಯ ಹರ್ಷಿತಾ ಮೆಹರವಾಡೆ ಎಂಬ ಬಾಲಕಿ ರಾಜಧಾನಿ ಕಾಲೋನಿಯಲ್ಲಿರುವ ರಸ್ತೆ ಅವ್ಯವಸ್ಥೆ ಕುರಿತು ದೇವತೆ ವೇಷದಲ್ಲಿ ಸಾಕ್ಷ್ಯಚಿತ್ರದ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆದಿದ್ದಾಳೆ. ದಸರಾ ಸಂದರ್ಭದಲ್ಲಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯ ವಿಡಂಬನಾತ್ಮಕ ಪ್ರದರ್ಶನ ಮಾಡಲಾಗಿದೆ. ದುರ್ಗಾ ದೇವಿ ವೇಶ ಧರಿಸಿರುವ ಬಾಲಕಿ …

Read More »

F,S,L, ಅಧಿಕಾರಿ ಆತ್ಮಹತ್ಯೆ; ಕ್ಷಮಿಸಿ ಎಂದು ವಿಚ್ಛೇದಿತ ಪತಿಗೆ ಡೆತ್​ನೋಟ್ ಮೂಲಕ ವಿನಂತಿ

ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪಾರ್ಟ್​ಮೆಂಟ್​ವೊಂದರಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳದಲ್ಲಿ ಡೆತ್​ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ಕ್ಷಮೆಯನ್ನೂ ಕೋರಲಾಗಿದೆ.   ಎಫ್‌ಎಸ್​ಎಲ್​ ಅಧಿಕಾರಿ ಶ್ರುತಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಈಕೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್​​ನಲ್ಲಿ ನೇಣು ಬಿಗಿದುಕೊಂಡಿದ್ದರು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಕೆ ಇತ್ತೀಚೆಗೆ ವಿಚ್ಛೇದನ ಪಡೆದು ಪತಿಯಿಂದ ದೂರವಿದ್ದರು. ಆದರೆ ತನ್ನನ್ನು …

Read More »

ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿ; ಕೆಲಸಗಾರನಿಂದಲೇ ಹತ್ಯೆಯಾಗಿರುವ ಶಂಕೆ

ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹೀಗಾಗಿ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.   ಈ ಘಟನೆ ನಡೆದ ಬಳಿಕ ಹೇಮಂತ್ ಕುಮಾರ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಎಂಬಾತ ನಾಪತ್ತೆಯಾಗಿದ್ದು, ಆತನೇ ಈ ಕೊಲೆ ಮಾಡಿರಬಹುದು ಎಂಬ ಅನುಮಾನದ ಮೇರೆಗೆ …

Read More »