ದೀಪಾವಳಿಯ ಸಮಯದಲ್ಲೇ ಪಾರ್ಶ್ವ ಸೂರ್ಯಗ್ರಹಣವನ್ನು ಕಂಡ ಜಗತ್ತು ಈಗ ಮತ್ತೊಂದು ಗ್ರಹಣಕ್ಕೆ ಸಜ್ಜಾಗುತ್ತಿದೆ. ನ.8ರಂದು ಖಗ್ರಾಸ ಚಂದ್ರಗ್ರಹಣ ಉಂಟಾಗಲಿದ್ದು, ಕೋಲ್ಕತ್ತಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ. ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಸಮುದ್ರ, ಪೆಸಿಫಿಕ್ ಸಮುದ್ರ ಪ್ರದೇಶದಿಂದಲೂ ಈ ಖಗೋಳ ವಿಸ್ಮಯವನ್ನು ವೀಕ್ಷಿಸಬಹುದು ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ. ನ.8ರಂದು ಮಧ್ಯಾಹ್ನ 2.39ಕ್ಕೆ ಭಾಗಶಃ ಚಂದ್ರಗ್ರಹಣ ಆರಂಭವಾಗಲಿದ್ದು, 3.46ರ ವೇಳೆಗೆ ಅದು …
Read More »Yearly Archives: 2022
2023 ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ: ಸಿಎಂ ಬೊಮ್ಮಾಯಿ
ಕಲಬುರಗಿ: ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲಿದ್ದೇವೆ. ಸಮಾವೇಶದಲ್ಲಿ ಪಾಲ್ಗೊಂಡ ಜನಸಾಗರ ನೋಡಿ ಆನೆ ಬಲ ಬಂದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಒಬಿಸಿ ವಿರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ನಮ್ಮದು. 1,500 ಕೋಟಿ ಅನುದಾನವನ್ನು 3 ಸಾವಿರ ಕೋಟಿಗೆ ಈಗಾಗಲೇ ಹೆಚ್ಚಿಸಿದ್ದು, ಮುಂದಿನ ವರ್ಷ ಅದನ್ನು 5 ಸಾವಿರ ಕೋಟಿ ರೂ.ಗೆ …
Read More »ಬಿಲ್ ಪಾವತಿಗೆ ಶೇ.40 ಕಮಿಷನ್ ಬೇಡಿಕೆ; ಗುತ್ತಿಗೆದಾರನಿಂದ ದಯಾಮರಣಕ್ಕೆ ಅರ್ಜಿ
ಹುಬ್ಬಳ್ಳಿ: ಕೋವಿಡ್-19 ವೇಳೆ ಗ್ರಾ.ಪಂ.ಗಳಿಗೆ ಪರಿಕರ ಪೂರೈಸಿದ್ದ ಬಿಲ್ ಪಾವತಿಗೆ ಅಧಿಕಾರಿಗಳು ಶೇ.40ಕ್ಕಿಂತ ಹೆಚ್ಚಿನ ಕಮಿಷನ್ ಕೇಳಿ ಬಿಲ್ ತಡೆ ಹಿಡಿದಿದ್ದಾರೆ. ಈಗ ತಾನು ಸಾಲದಿಂದ ಕಂಗೆಟ್ಟಿದ್ದು, ಆದ್ದರಿಂದ ದಯಾಮರಣಕ್ಕೆ ಅವಕಾಶ ನೀಡುವಂತೆ ನಗರದ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಕೇಶ್ವಾಪುರ ಸುಳ್ಳ ರಸ್ತೆ ಮನೋಜ ಪಾರ್ಕ್ ನಿವಾಸಿ, ಗುತ್ತಿಗೆದಾರ ಬಸವರಾಜ ಅಮರಗೋಳ ಅವರು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. 2020-21ರಲ್ಲಿ ಕೇಂದ್ರ …
Read More »ನಂದಿನಿ ಪ್ರತಿ ಲೀಟರ್ ಹಾಲಿಗೆ 3 ರೂ.ಹೆಚ್ಚಳದರ ಏರಿಕೆಯಿಂದ ರೈತರಿಗೆ ವರದಾನವಾಗಲಿದೆ: ಬಾಲಚಂದ್ರ ಜಾರಕಿಹೊಳಿ:
ಬೆಳಗಾವಿ: ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು. ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲಾಗುವುದು. ಈ ದರ ಏರಿಕೆಯಿಂದ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾನುವಾರ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.ದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲೀಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ …
Read More »ಕೊಪ್ಪಳ :ಪಠ್ಯ ವಿಷಯವನ್ನೇ ನಾಟಕ, ಹಾಡು, ಕಥೆಗೆ ಬದಲಾಯಿಸಿ ಕಲಿಯುವ ವಿದ್ಯಾರ್ಥಿಗಳು
ಕೊಪ್ಪಳ : ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈಗ ಸಮಾಜವಿಜ್ಞಾನದ ಪಠ್ಯ ವಿಷಯವನ್ನೇ ನಾಟಕ, ಹಾಡು, ಕಥೆ, ಕವನದ ರೂಪಕ್ಕೆ ಬದಲಾಯಿಸಿಕೊಂಡು ಕಲಿಕೆ ಸರಳೀಕರಣಗೊಳಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜವಿಜ್ಞಾನ ಶಿಕ್ಷಕ ಕಿಶನರಾವ್ ಕುಲಕರ್ಣಿ ಸಮಾಜ ವಿಜ್ಞಾನದ ಎಲ್ಲ ಸಿಲೆಬಸ್ ಅನ್ನು ನಾಟಕ ಹಾಗೂ ಕಥೆಗಳಿಗೆ ಬದಲಾವಣೆ ಮಾಡಿದ ಕಾರಣಕ್ಕಾಗಿ ವಿದ್ಯಾರ್ಥಿಗಳು ಅಭಿನಯಿಸುವದರೊಂದಿಗೆ ಕಲಿಕೆ ದೃಢೀಕರಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಮಾಜ ವಿಜ್ಞಾನ …
Read More »ದಾವಣಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದೇವೆ: ಯಡಿಯೂರಪ್ಪ
ಕಲಬುರಗಿ: ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದಾವಣಗೆರೆ ಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ಉದ್ದೇಶಿಸಿ ಮಾತನಾಡಿ, ದಾವಣಗೆರೆ ಯಲ್ಲಿ ಶಕ್ತಿ ಪ್ರದರ್ಶನ ಜತೆಗೇ ಮೈಸೂರಿನಿಂದ ರಥಯಾತ್ರೆ ಶುರು ಮಾಡುತ್ತೇವೆ. ಎಲ್ಲ ಕಡೆ ತಿರುಗಾಡಿ ಪಕ್ಷ ಬಲಪಡಿಸಲಾಗುವುದು. ಹೀಗಾಗಿ ಹಿಂದುಳಿದ ವರ್ಗದವರು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಬಲಪಡಿಸಬೇಕೆಂದರು. ದೇಶದಲ್ಲಿ …
Read More »ನ. 2ರಿಂದ ಪಿಡಿಒಗಳ ಪ್ರತಿಭಟನೆ: ಸೇವೆ ವ್ಯತ್ಯಯ
ಮಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ಬೀದಿ ದೀಪ ಸೇವೆ ಹೊರತುಪಡಿಸಿ ಉಳಿದ ಗ್ರಾಮೀಣ ಸೇವೆಗಳು ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ನ. 2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ದ.ಕ., ಉಡುಪಿಯಯ 311 ಪಿಡಿಒಗಳ ಸಹಿತ ರಾಜ್ಯದ 6,026 ಗ್ರಾ.ಪಂ.ಗಳ ಸುಮಾರು 5,600 ಪಿಡಿಒಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಧರಣಿ ಕೈಗೊಳ್ಳುವ ದಿನದಿಂದ …
Read More »ಭಗತ್ ಸಿಂಗ್ ಪಾತ್ರದ ಅಭ್ಯಾಸ ಮಾಡಲು ಹೋಗಿ ಜೀವ ಕಳೆದುಕೊಂಡ 7ನೇ ತರಗತಿ ಬಾಲಕ
ಚಿತ್ರದುರ್ಗ : ಕರ್ನಾಟಕ ರಾಜ್ಯೋತ್ಸವದ ದಿನದಂದು ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿ ಏಳನೇ ತರಗತಿಯ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಮೃತ ದುರ್ದೈವಿ. ಸಂಜಯ್ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಭಗತ್ ಸಿಂಗ್ ಪಾತ್ರ ನಿರ್ವಹಿಸಲು ನಿರ್ಧರಿಸಿದ್ದಾನೆ ಅದರಂತೆ ಶನಿವಾರ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ, ಮನೆಯೊಳಗೇ …
Read More »ಕರಾಳ ದಿನಾಚರಣೆಗೆ ಅನುಮತಿ ಬೇಡ- ಕರವೇ
ಬೆಳಗಾವಿ-ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರದಲ್ಲಿ ಲಕ್ಷಾಂತರ ಕನ್ನಡಿಗರು ಸೇರಿ ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡದ ಹಬ್ಬವನ್ನಾಗಿ ಆಚರಿಸುವ ಸಂಧರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು,ಸೈಕಲ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಗೆ ಅನುಮತಿ ನೀಡಿದ್ರೆ,ಸರ್ಕಾರ ನಾಡವಿರೋಧಿ ಸರ್ಕಾರ, ಎಂದು ಸಾಭೀತಾಗುತ್ತದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂಇಎಸ್ …
Read More »ಕನ್ನಡ ರಾಜ್ಯೋತ್ಸವ ನಿಮಿತ್ತ Team AK Creations ವತಿಯಿಂದ ಅದ್ಭುತ ವಾದ ಗೀತೆ
ಬೆಳಗಾವಿ: ಕನ್ನಡ ರಾಜ್ಯೋತ್ಸವ ಎಂದ್ರೆ ಬೆಳಗಾವಿ ಯುವಕರಿಗೆ ಹಬ್ಬದ ಕಿಂತ ಹೆಚ್ಚು ಅನೇಕ ಜನ ಅನೇಕ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಇಂದು ಬೆಳಗಾವಿಯ ಯುವ ತಂಡ ಒಂದು ಅದ್ಭುತವಾದ ಗೀತೆಯನ್ನು ಇದೆ ನವೆಂಬರ ಒಂದನೇ ತಾರೀಖು Team AK Creations ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಕನ್ನಡದ ಬಗ್ಗೆ ಅದ್ಭುತ ವಾಗೀ ಚಿತ್ರೀಕರಣ ಹೊಂದಿದೆ ಈ ಒಂದು ಹಾಡು ಬೆಳಗಾವಿಯ ಹಾಗೂ ಬೆಂಗಳೂರಿನ ಯುವಕರು ಚಿತ್ರೀಕರಣ …
Read More »