ಬೆಳಗಾವಿ ನಗರದಲ್ಲಿ ಖಾಸಗಿ ಭಾಜಿ ಮಾರ್ಕೆಟ್‍ಗೆ ಅನುಮತಿ ನೀಡಿದ ಎಪಿಎಂಸಿ ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿ ವಿವಿಧ ರೈತಪರ ಸಂಘಟನೆಗಳ ನಾಯಕರು ಹಾಗೂ ರೈತ ಮುಖಂಡರು ಸುದ್ದಿಗೋಷ್ಠಿಯನ್ನು ನಡೆಸಿದರು. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾಪಾರಿ ಮುಖಂಡರು, ಸರಕಾರಿ ಆದೇಶದಂತೆ ಈಗಾಗಲೇ ಎಪಿಎಂಸಿ ನಮಗೆ ವಾರ್ಷಿಕ ಲೀಸ್ ಮೇಲೆ 132 ಅಂಗಡಿಗಳನ್ನು 20 ಲಕ್ಷದಿಂದ 1ಕೋಟಿ 5ಲಕ್ಷದವರೆಗೆ ಲೀಸ್ ಮೇಲೆ ವ್ಯಾಪಾರ ಮಾಡಲು ಅವಕಾಶ ನೀಡಿದೆ. ಅದರಂತೆ ವ್ಯಾಪಾರ ಮಾಡುತ್ತಿದ್ದೇವೆ. ಆದರೆ …
Read More »Daily Archives: ಜನವರಿ 6, 2022
ಬಹುಕೋಟಿ ವಂಚನೆ ಪ್ರಕರಣ ಆನಂದ ಅಪ್ಪುಗೋಳ್ ಬಂಧನ
ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿ ಚೇರ್‍ಮೆನ್ ಆನಂದ ಅಪ್ಪುಗೋಳ್‍ರನ್ನು ಎಡಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಸೊಸೈಟಿಯ ವಿವಿಧ ಬ್ರ್ಯಾಂಚ್ ಗಳಲ್ಲಿ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗೊಳ್ಳಿ ರಾಯಣ್ಣ ಸೊಸೈಟಿ ಚೇರ್ಮನ್ ಆನಂದ ಅಪ್ಪುಗೊಳ ಬಂಧನವಾಗಿದೆ. ಸೊಸೈಟಿಯ ಗ್ರಾಹಕರಿಗೆ 250 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು, ಆನಂದ ಅಪ್ಪುಗೋಳ್‍ರನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
Read More »ಬೆಳಗಾವಿ ನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭ
ಬೆಳಗಾವಿ ನಗರದಲ್ಲಿ ಇಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭ ನಡೆಯಿತು. ನಗರದ ಪೊಲೀಸ್ ಕಾವಾಯತ್ ಆವರಣದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಜಯಕುಮಾರ್ ಸಾಲಿಮಠ ವಹಿಸಿದ್ದರು. ಉತ್ತರ ವಲಯ ಐಜಿಪಿ ಎನ್. ಸತೀಶ್‍ಕುಮಾರ್, ಬೆಳಗಾವಿ ನಗರಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ ಉಪಸ್ಥಿತರಿದ್ದರು. ಇಂದು ಗುರವಾರ ಪೊಲೀಸ್ ತಂಡಗಳಿಗೆ ಹಗ್ಗ ಜಗ್ಗಾಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತು. …
Read More »ಕೇರಳ, ಮಹಾರಾಷ್ಟ್ರ, ಗೋವಾ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕ್ರಮ ಜಾರಿ
ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಸೇರಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗಿದೆ. ಇದೇ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹಲವು ನಿಯಮಗಳನ್ನು ಸೂಚಿಸಿದೆ. ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರು ಕೋವಿಡ್ ಲಸಿಕೆ ಪಡೆದಿದ್ದರೂ/ ಪಡೆಯದಿದ್ದರೂ ಸಹ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ವಾರಾಂತ್ಯದ ಕರ್ಫ್ಯೂ …
Read More »ಒಮಿಕ್ರಾನ್’ ಸೋಂಕು ಶ್ವಾಸಕೋಶಕ್ಕೆ ಹೋಗಲ್ಲ:ಡಾ.ಕೆ. ಸುಧಾಕರ್
ಬೆಂಗಳೂರು : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನಿಂದ ಶ್ವಾಸಕೋಶಕ್ಕೆ ತೊಂದರೆಯಾಗಲ್ಲ,ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ. ಎರಡು ಡೋಸ್ ಕೊವಿಡ್ ಲಸಿಕೆ ಪಡೆದರೆ ಪರಿಣಾಮ ಕಡಿಮೆ. ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ದೀರ್ಘ ಕಾಲ ಇರುವುದಿಲ್ಲ. ಒಮಿಕ್ರಾನ್ನಿಂದ ಶ್ವಾಸಕೋಶಕ್ಕೆ ತೊಂದರೆಯಾಗಲ್ಲ ಎಂದು ಹೇಳಿದರು. ಕೊರೊನಾದ ಈ ಅಲೆ ದೀರ್ಘ ಕಾಲ ಇರೋದಿಲ್ಲ. ವೇಗವಾಗಿ ಹರಡುತ್ತೆ, ಬೇಗ …
Read More »ಮೇಕೆದಾಟು ನಡಿಗೆ ನಿಲ್ಲದು; ನಮ್ಮನ್ನು ತಡೆಯಲಾಗದು..
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ.6.45ಕ್ಕೆ ಜಿಗಿತಕಂಡು ಸಂಭಾವ್ಯ ಅನಾಹುತದ ಮುನ್ಸೂಚನೆ ನೀಡಿರುವ ಹೊರತಾಗಿಯೂ ಮೇಕೆದಾಟು ಯೋಜನೆಗಾಗಿ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಕೋವಿಡ್ ವ್ಯಾಪಕವಾಗುತ್ತಿರುವ ಹಿನ್ನೆಯಲ್ಲಿ ಸಭೆ, ಸಮಾರಂಭ, ರಾಜಕೀಯ ರ್ಯಾಲಿಗಳಿಗೆ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ಕಾಂಗ್ರೆಸ್ ನಾಯಕರು ಸಭೆ ನಡೆಸಿ, ಪಾದಯಾತ್ರೆ ನಿಲ್ಲಿಸುವುದು ಬೇಡ ಎಂಬ ನಿರ್ಣಯಕ್ಕೆ ಬಂದರು. ಹಾಗೆಯೇ ಜಂಟಿ ಸುದ್ದಿಗೋಷ್ಠಿ …
Read More »ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದ ಆಸ್ತಿ : ಸಚಿವ ಕೆ.ಎಸ್. ಈಶ್ವರಪ್ಪ
ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ ಭಾವನೆಯಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ ಭಾವನೆಯಾಗಿದೆ ಈಗ ಮೇಕೆದಾಟು ಪಾದಯಾತ್ರೆ, ಧರಣಿ ಮಾಡಬೇಡಿ ಎಂದಿದ್ದೇವೆ. ಮಾಡಿಯೇ ಮಾಡುತ್ತೇವೆ ಅಂದರೆ ಅವರಿಗೆ …
Read More »ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಛೋಟಾ ಸಾಹುಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಛೋಟಾ ಸಾಹುಕಾರ ವಿಧಾನ ಪರಿಷತ್ ಚುನಾವಣೆ ಜಿದ್ದಾ ಜಿದ್ದೀ ಕದನದಲ್ಲಿ ವಿಜೇತರಾದ ಶ್ರೀ ಲಖನ ಜಾರಕಿಹೊಳಿ ಅವರು ಇಂದು ವಿಧಾನ ಪರಿಷತ್ ಸದಸ್ಯ ರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಂಗಳೂರಿನಲ್ಲಿ ನಡೆದ ಈ ಒಂದು ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಲಖನ ಜಾರಕಿಹೊಳಿ ಅಭಿಮಾನಿಗಳು ಭಾಗಿ ಯಾಗಿದ್ದರು. ಹಾಗೂ …
Read More »ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ
ಬೆಂಗಳೂರು: ದೇಶಾದ್ಯಂತ ಏರಿಕೆಯಾಗಿದ್ದ ಖಾದ್ಯತೈಲ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಬಳಿಕ ಕಂಪನಿಗಳು ದರ ಇಳಿಕೆ ಮಾಡತೊಡಗಿವೆ. ದಕ್ಷಿಣ ಭಾರತದ ಪ್ರಮುಖ ಖಾದ್ಯ ತೈಲ ಕಂಪನಿಯಾಗಿರುವ ಸನ್ ಪ್ಯೂರ್ ತನ್ನ ಉತ್ಪನ್ನಗಳ ದರ ಕಡಿಮೆ ಮಾಡಿದೆ. ಈ ಮೂಲಕ ಸನ್ ಪ್ಯೂರ್ ಬ್ರಾಂಡ್ ಅಡುಗೆ ಎಣ್ಣೆ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಆಮದು ಸುಂಕ ಕಡಿತ ಮಾಡಿದ ನಂತರ ಸೂರ್ಯಕಾಂತಿ ಎಣ್ಣೆ ದರ ಇಳಿಕೆ ಹಾದಿಯಲ್ಲಿದೆ. …
Read More »ನಾನು ಬದುಕಿರುವಾಗಲೇ ನನ್ನನ್ನು ಸಾಯುಸುತ್ತಿದ್ದಾರೆ – ಹಿರಿಯ ನಟ ಅವಿನಾಶ್ ಬೇಸರ
ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗೆ ಹಿರಿಯ ನಟ ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅವಿನಾಶ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿಗಳನ್ನು ಹಾಕುತ್ತಿದ್ದಾರೆ. ನಾನು ಆರಾಮಾಗಿದ್ದಿನಿ ಬೆಳಿಗ್ಗೆ ವರ್ಕೌಟ್ ಕೂಡ ಮಾಡಿದ್ದೀನಿ. ಹಲವು ಸಿನಿಮಾಗಳಲ್ಲಿ ನಟಿಸೋದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಂಗೆ ದೂರು ಕೊಟ್ಟಿದ್ದೇನೆ. ಯಾರೆ ಆಗಲಿ ಒಬ್ಬ ವ್ಯಕ್ತಿ ಬದುಕಿರುವಾಗಲೇ …
Read More »