Breaking News

Daily Archives: ಅಕ್ಟೋಬರ್ 18, 2021

CM ಮಾಸ್ಟರ್ ಪ್ಲಾನ್; ಓಲೇಕಾರ ನಿವಾಸಕ್ಕೆ ಬೊಮ್ಮಾಯಿ ಭೇಟಿ

ಹಾವೇರಿ: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲ ಬೇಕಾಗಿರುವ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು, ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರದ ವೈಭವ ಲಕ್ಷ್ಮೀ ಪಾರ್ಕ್ ನಲ್ಲಿರೋ ಶಾಸಕ ಓಲೇಕಾರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಓಲೇಕಾರ‌ ನಡುವಿನ‌ ಮುನಿಸು …

Read More »

ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ದುರ್ಗೆ ಹಾಗೂ ಬಿಜೆಪಿ ಸರ್ಕಾರ ಭಸ್ಮಾಸುರ ಇದ್ದಂತೆ. ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ ಅಂತ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಕಿರಣ್‌ ಖಂಡೋಲ್ಕರ್‌ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಬಗ್ಗೆ ಮಾತುಕತೆ ನಡೆದಿದೆ ಅಂತ ಅವರು ಹೇಳಿದರು. ಈ ಮಾತಿಗೆ ಸಿಎಂ ಪ್ರಮೋದ್‌ …

Read More »

ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?

ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ …

Read More »

ಕೊನೆಗೂ ಬೆಂಗಳೂರು ಸಿಟಿ ರೌಂಡ್ಸ್​ಗೆ ಬಂದ್ರು ಸಿಎಂ ಬೊಮ್ಮಾಯಿ..!

ಬೆಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಸಾಲು ಸಾಲು ಅವಘಡ ಸಂಭವಿಸುತ್ತಿವೆ. ವಾಸ್ತವ ಸ್ಥಿತಿ ಅರಿಯುವ ಉದ್ದೇಶದಿಂದ ಸಿಎಂ ಬಸವರಾಜ್ ಬೊಮ್ಮಾಯಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಿಟಿ ರೌಂಡ್ಸ್​​ ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದರು. ಬಳಿಕ ಮಳೆಯಿಂದ ಅವಘಡಕ್ಕೊಳಗಾದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಸ್ತೆ ಗುಂಡಿಗಳು, ಟ್ರಾಫಿಕ್ ಜಾಮ್ ಜಂಕ್ಷನ್ಸ್, ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹಾಗೂ ರಾಜಕಾಲುವೆಯನ್ನು …

Read More »

ಮುದ್ದೆಯಲ್ಲಿ ವಿಷ ಹಾಕಿದ ಬಾಲಕಿ – ತಂದೆ, ತಾಯಿ ಸೇರಿ ನಾಲ್ವರ ಹತ್ಯೆ

ಚಿತ್ರದುರ್ಗ: 17 ವರ್ಷದ ಬಾಲಕಿಯೊಬ್ಬಳು ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದು ಇಡೀ ಕುಟುಂಬಕ್ಕೆ ಮುದ್ದೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿರುವ ಆಘಾತಕಾರಿ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.   ಪೋಷಕರ ಬೈಗುಳ, ಕೂಲಿಗೆ ಕಳಿಸುವುದು, ತಿರಸ್ಕಾರ ಭಾವದಿಂದ ನೊಂದ ಬಾಲಕಿ, ಹೆತ್ತವರು, …

Read More »