Breaking News

Daily Archives: ಅಕ್ಟೋಬರ್ 7, 2021

ಗೋಕಾಕ ನಗರದಲ್ಲಿ ವ್ಯಾಕ್ಸಿನೇಷನ್ ಬೃಹತ್ ಮೇಳ*

*ಗೋಕಾಕ ನಗರದಲ್ಲಿ ವ್ಯಾಕ್ಸಿನೇಷನ್ ಬೃಹತ್ ಮೇಳ*   *ಗೋಕಾಕ ನಗರದಲ್ಲಿರುವ ಸಮಸ್ತ ನಾಗರಿಕರು “ಬೃಹತ್ ವ್ಯಾಕ್ಸಿನೇಷನ್” ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರಾದ ಶ್ರೀ ರಮೇಶ ಜಾರಕಿಹೊಳಿ ಅವರು ಸಮಸ್ತ ಗೋಕಾಕ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ*   *ನಿಮ್ಮ ಹತ್ತಿರದ ಲಸಿಕಾ ಕೇಂದ್ರದ ಮಾಹಿತಿ*   *08/10/21** * *COVID* **VACCINE*CENTERS* **GOKAK * *CITY* 1)Mayur school covaxin 100 doses Covishield 150 doses. 2)Valmiki ground Covishield …

Read More »

ಬೆಂಗಳೂರಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ: ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ

ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡ ಕುಸಿದುಬಿದ್ದ ಘಟನೆ ನಡೆದಿದೆ. ನಗರದ ರಾಮಮೂರ್ತಿ ನಗರ ಬಳಿಯ ಕಸ್ತೂರಿ ನಗರದಲ್ಲಿ ಘಟನೆ ನಡೆದಿದ್ದು ಸದ್ಯ ಯಾವುದೇ ಪ್ರಾಣಾಪಾಯ ಸಂಭವಸಿಲ್ಲ.   ಇಂದು ಏಕಾಏಕಿ ಮೂರಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ಬೆಳಗ್ಗೆಯೇ ಕಟ್ಟಡ ವಾಲಿತ್ತು ಎನ್ನಲಾಗಿದೆ. ಹೀಗಾಗಿ ಕಟ್ಟಡ ವಾಲುತ್ತಿದ್ದಂತೆಯೇ ಮನೆಗಳಲ್ಲಿ ಇದ್ದವರನ್ನ ತಕ್ಷಣವೇ ತೆರವುಗೊಳಿಸಲಾಗಿದೆ. ಹೀಗಾಗಿ ಕಟ್ಟಡ ಕುಸಿದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ರಾಮಮೂರ್ತಿ ನಗರ ಪೊಲೀಸರು ದೌಡಾಯಿಸಿದ್ದಾರೆ.

Read More »

B.S.Y. ಆಪ್ತನ ಮನೆ ಮೇಲೆ ಐಟಿ ರೇಡ್

ಶಿಕಾರಿಪುರ : ‘ನನ್ನ ಆಪ್ತ ಸಹಾಯಕ ಉಮೇಶ್ ಅವರ ನಿವಾಸದ ಮೇಲೆ ಐಟಿ ದಾಳಿಯಾಗಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ‘ನಾಳೆ ಅಧಿಕಾರಿಗಳು ಐಟಿ ದಾಳಿಯ ಕುರಿತು ಮಾಹಿತಿ ನೀಡಲಿದ್ದಾರೆ.ಆ ಬಳಿಕ ನಾನು ಉತ್ತರ ನೀಡುತ್ತೇನೆ. ಯಾರೇ ತಪ್ಪು ಮಾಡಿದರು ಐಟಿ ಅಧಿಕಾರಿಗಳು ಬಿಡುವುದಿಲ್ಲ, ಅವರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ …

Read More »

ಮದುವೆಯಾದ 5 ತಿಂಗಳಿಗೆ ಜೀವ ಚೆಲ್ಲಿದ ನವವಿವಾಹಿತೆ.. ಸಾವಿನ ಸುತ್ತ ಅನುಮಾನದ ಹುತ್ತ

ಗದಗ: ಅವರದ್ದು ಕಿತ್ತು ತಿನ್ನುವ ಬಡತನ, ಮಗಳು ಚೆನ್ನಾಗಿ ಇರಲಿ ಎಂದು ಸ್ಥಿತಿವಂತ ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರು. ಬಡತನ ಇದ್ರೂ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ರು. ಮಗಳು ಚನ್ನಾಗಿಯೇ ಇದ್ದಾಳೆ ಅಂತಾ ಪೋಷಕರು ಅಂದುಕೊಂಡಿದರು. ಅಷ್ಟೇ ಅಲ್ಲ ನಾಲ್ಕು ತಿಂಗಳ ಗರ್ಭಿಣಿಯಾಗಿದ್ಲು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು. ಮುದ್ದಾದ ಮಗಳು ಈವಾಗ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಗಳ ಸಾವು ಈಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಮಗಳನ್ನು ಕಳೆದುಕೊಂಡ …

Read More »

ಲಕ್ಷ್ಮಿ ಹೆಬ್ಬಾಳಕರ್ ಸರಣಿ ಟ್ವೀಟ್ ಬಿಜೆಪಿ ದುಬಾರಿ ದರ್ಬಾರ್ ಟ್ವೀಟರ್ ನಲ್ಲಿ ಗುರುವಾರ ಭಾರಿ ಟ್ರೆಂಡಿಂಗ್

ಬೆಳಗಾವಿ – ಬಿಜೆಪಿ ದುಬಾರಿ ದರ್ಬಾರ್ ಟ್ವೀಟರ್ ನಲ್ಲಿ ಗುರುವಾರ ಭಾರಿ ಟ್ರೆಂಡಿಂಗ್ ಆಗಿದ್ದು, ಬೆಳಗಾವಿ ಗ್ರಾಮೀಣ ಶಾಸಕರೂ, ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಸಹ ಸರಣಿ ಟ್ವೀಟ್ ಮಾಡಿದ್ದಾರೆ. ಒಟ್ಟೂ 11 ಟ್ವೀಟ್  ಅವರ ಟ್ವೀಟ್ ಗಳು ಹೀಗಿವೆ – ಹತ್ತು ಲಕ್ಷ ರೂ. ಗಿಂತಲೂ ಹೆಚ್ಚು ವಾರ್ಷಿಕ ಆದಾಯವಿರುವ, ಸಮರ್ಥ ಕುಟುಂಬಗಳು ತಮ್ಮ ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡಿ, ಅದರಿಂದ ಅಡುಗೆ ಅನಿಲ ಖರೀದಿಸಲಾಗದ …

Read More »

ವಾಹನ ಸವಾರರಿಗೆ ಮತ್ತೆ ಶಾಕಿಂಗ್ ನ್ಯೂಸ್: ದೇಶಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ

ನವದೆಹಲಿ: ದೇಶದ ಜನರು ಎಲ್ಲ ದಿನಬಳಕೆಯ ವಸ್ತಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ 26 ರಿಂದ 30 ಪೈಸೆಗಳಷ್ಟು ಮತ್ತು ಡೀಸೆಲ್ ದರ 35 ರಿಂದ 38 ಪೈಸೆಗಳಷ್ಟು ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 31 ಪೈಸೆ ಏರಿದರೆ, ಪ್ರತೀ ಒಂದು ಲೀಟರ್‌ ಡೀಸೆಲ್‌ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ. ರಾಜ್ಯದ ಪ್ರಮುಖ ನಗರಗಳ …

Read More »

ಅಭಿಮಾನಿಗಳಿಗೆ ಮಿಸ್ಟರ್​ ಕೂಲ್ ಗುಡ್​ನ್ಯೂಸ್ -ಫಾನ್ಸ್​ ಮುಂದೆಯೇ ಧೋನಿಯ ಕೊನೆ ಪಂದ್ಯ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ರಿಟೈರ್​ಮೆಂಟ್​​​ ಹೇಳಿದ್ದೇ ತಡ, ಐಪಿಎಲ್​ಗೂ ಮಿಸ್ಟರ್​ ಕೂಲ್ ಧೋನಿ ಗುಡ್​​ ಬೈ ಹೇಳ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದ್ರೆ, ಕಳೆದ ಆವೃತ್ತಿಯಲ್ಲಿ ಡೆಫನೆಟ್ಲಿ ನೋ ಎಂದಿದ್ದ ಧೋನಿ ಚರ್ಚೆಗಳಿಗೆ ತೆರೆ ಎಳೆದಿದ್ರು. ಇದೀಗ ಮತ್ತೇ ಮಾಹಿ ಪಾಲಿಗೆ ಇದೇ ಕೊನೆ ಐಪಿಎಲ್ ಅನ್ತಿದ್ದಾರೆ. ಹಾಗಾದ್ರೆ, ನಿಜವಾಗಲೂ ಧೋನಿ ನಿವೃತ್ತಿ ಹೇಳ್ತಾರಾ..? ಇಲ್ಲಿದೆ ನೋಡಿ ಒಂದು ರಿಪೋರ್ಟ್​ ವಿಶ್ವ ಕ್ರಿಕೆಟ್​ನ ಶ್ರೇಷ್ಠ ನಾಯಕಎಮ್.ಎಸ್​.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ …

Read More »

ಇಂಜೆಕ್ಷನ್​​ ತೆಗೆದುಕೊಂಡೇ IPL​ನಲ್ಲಿ ವರುಣ್​​ ಬೌಲಿಂಗ್ -ಸಂಪೂರ್ಣ ಫಿಟ್ ಇಲ್ಲದಿದ್ರೆ ವಿಶ್ವಕಪ್​ನಿಂದ ಔಟ್​?

ಟಿ20 ವಿಶ್ವಕಪ್ ಹತ್ತಿರವಾದಷ್ಟೂ ಟೀಮ್ ಇಂಡಿಯಾಕ್ಕೆ ತಲೆನೋವುಗಳು ಹೆಚ್ಚಾಗ್ತಿವೆ. ಕೆಲ ಆಟಗಾರರ ಅಸ್ಥಿರ ಪ್ರದರ್ಶನದಿಂದ ಚಿಂತೆಗೀಡಾಗಿರುವ ಬಿಸಿಸಿಐ ಹಾಗೂ ಮ್ಯಾನೇಜ್​ಮೆಂಟ್​​ಗೆ ಮತ್ತೊಂದು ಹೊಸ ತಲೆ ನೋವು ಆರಂಭವಾಗಿದೆ. ಇದು ಮಹತ್ವದ ಟೂರ್ನಿಯಲ್ಲಿ ಭಾರತಕ್ಕೂ ಹಿನ್ನಡೆಯಾಗಲಿದೆ. ಟಿ20 ವಿಶ್ವಕಪ್​​ಗೂ ಮುನ್ನ ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್​ಗಳು ಎದುರಾಗ್ತಿವೆ. ಈಗಾಗಲೇ ಕೆಲ ಆಟಗಾರರ ಅಸ್ಥಿರ ಪ್ರದರ್ಶನ ಟೀಮ್​ ಮ್ಯಾನೇಜ್​ಮೆಂಟ್​​ ಹಾಗೂ ಬಿಗ್​​ಬಾಸ್​ಗಳನ್ನ ಚಿಂತೆಗೆ ದೂಡಿದೆ. ಅದರ ಬೆನ್ನಲ್ಲೇ ಇದೀಗ ಕೊಲ್ಕತ್ತಾ ನೈಟ್​ …

Read More »

25ನೇ ʼಕಿತ್ತೂರು ಉತ್ಸವʼಕ್ಕೆ ಮುಹೂರ್ತ ಫಿಕ್ಸ್‌ : 2 ದಿನಗಳ ಅದ್ದೂರಿ ಆಚರಣೆ, ಒಂದು ಕೋಟಿ ವೆಚ್ಚ

25ನೇ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಅಕ್ಟೋಬರ್‌ 23, 24ರಂದು ಅದ್ದೂರಿಯಾಗಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಉತ್ಸವದ ಕುರಿತಂತೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯ್ತು. ಸಭೆಯ ನಂತ್ರ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ‘ ಅಕ್ಟೋಬರ್‌ 23, 24ರಂದು 2 ದಿನ ಅದ್ಧೂರಿಯಾಗಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 25ನೇ ಕಿತ್ತೂರು ಉತ್ಸವವನ್ನ …

Read More »

ಬೆಳಗಾವಿ ಮನೆ ಕುಸಿದು 7 ಮಂದಿ ಸಾವು -ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ಬೆಳಗಾವಿ: ಮನೆ ಕುಸಿದು ಒಂದೇ ಕುಟುಂಬದ 6 ಮಂದಿ ಹಾಗೂ ಬಾಲಕಿ ಸಾವನ್ನಪ್ಪಿದ ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ದುರಂತರದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ದುರ್ಘಟನೆ ಕುರಿತಂತೆ ಪ್ರಧಾನಿ ಮೋದಿ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಲಾಗಿದ್ದು, ಬೆಳಗಾವಿಯಲ್ಲಿ ಮನೆ ಕುಸಿತದಿಂದ ಜೀವಹಾನಿಯಾಗಿರುವುದು ದುಃಖಕರ ಸಂಗತಿಯಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರೊಂದಿಗೆ ನಾವಿದ್ದೇವೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ …

Read More »