Breaking News

Monthly Archives: ಜುಲೈ 2021

ದಿಲ್ಲಿ ಮೇಲೆ ಎಲ್ಲರ ಭಾರ! ಬಿಎಸ್‌ವೈ ಮನೆಗೆ ಮುಂದುವರಿದ ಶ್ರೀಗಳ ಭೇಟಿ

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳ ನಡುವೆಯೇ ಎಲ್ಲರ ದೃಷ್ಟಿ “ದಿಲ್ಲಿ ನಿರ್ಧಾರ’ ದತ್ತ ನೆಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಯಡಿಯೂರಪ್ಪ, ಯಾರೂ ತಮ್ಮ ಪರವಾಗಿ ಹೇಳಿಕೆ ನೀಡಬಾರದು, ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ. ಬುಧವಾರವೂ ಅವರ ನಿವಾಸಕ್ಕೆ ಸಿದ್ಧಗಂಗಾ ಮಠದ ಶ್ರೀಗಳ ಸಹಿತ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. “ಯಾರೂ ತಮ್ಮ ಪರವಾಗಿ ಹೇಳಿಕೆ ಕೊಡುವುದಾಗಲಿ, ಪ್ರತಿಭಟನೆ ನಡೆಸುವುದಾಗಲಿ ಮಾಡಬಾರದು …

Read More »

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ನಂಬಿಸಿ ಸೆಕ್ಸ್ ದಂಧೆ : ನಿರ್ಮಾಪಕ ಸೇರಿದಂತೆ ಮೂವರು ಅರೆಸ್ಟ್

ಸಿನಿಮಾದಲ್ಲಿ ಛಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಆಡಿಷನ್ ಗೆ ಕರೆಯಿಸಿ ವೇಶ್ಯವಾಟಿಕೆ ದಂಧೆಗೆ ತಳ್ಳುತ್ತಿದ್ದ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಪ್ರದೇಶದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿನಿಮಾ ನಿರ್ಮಾಪಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ವೇಶ್ಯಾವಾಟಿಕೆ ಅಡ್ಡಾಗೆ ತಳಳ್ಳುತ್ತಿದ್ದನು ಎನ್ನಲಾಗಿದೆ. ಗ್ರಾಹಕರ ಸೋಗಿನಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ದಾಳಿ ನಡೆಸಿ ನಿರ್ಮಾಪಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. …

Read More »

ರಾಜಕೀಯದ ಬಗ್ಗೆ ಕುತೂಹಲದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳಿಂದ ಶಾಕಿಂಗ್ ನ್ಯೂಸ್

ಶಿರಸಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೇರಳಕಟ್ಟೆ ಗ್ರಾಮದ ಭೂದೇವಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಎದ್ದ ರಾಜಕೀಯ ವಿಪ್ಲವದ ಸುಖಾಂತ್ಯ ಕಾಣಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಬೆಂಬಲಿಸಿದ …

Read More »

ಇಂದು SSLC ಕನ್ನಡ, ಇಂಗ್ಲಿಷ್ ಸೇರಿ ಭಾಷಾ ಪರೀಕ್ಷೆ

ಬೆಂಗಳೂರು:ಎಸ್‌ಎಸ್‌ಎಲ್ಸಿ ಭಾಷಾ ವಿಷಯದ ಪರೀಕ್ಷೆ ಜುಲೈ 22 ರ ಗುರುವಾರ ಇಂದು ನಡೆಯಲಿದೆ. ರಾಜ್ಯದ 4485 ಪರೀಕ್ಷಾ ಕೇಂದ್ರಗಳಲ್ಲಿ 8,76,508 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಜುಲೈ 19 ರಂದು ಮೊದಲ ಪತ್ರಿಕೆಯ ಪರೀಕ್ಷೆ ನಡೆದಿತ್ತು. ಇಂದು ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ನಡೆಸಲಾಗುವುದು. ಆಗಸ್ಟ್ 10 ರೊಳಗೆ ಫಲಿತಾಂಶ …

Read More »

ಆಮ್ಲಜನಕ ಸಿಗದೇ ಒಬ್ಬರೂ ಸತ್ತಿಲ್ಲ ಎಂದು ಹಸೀಸುಳ್ಳು ಹೇಳಿದ ಮೋದಿ ಆಡಳಿತ!

ದೇಶದಲ್ಲಿ ಕರೊನಾ ಎರಡನೇ ಅಲೆಯಲ್ಲಿಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ” – ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ನೀಡಿದ ಆಘಾತಕಾರಿ ಹೇಳಿಕೆ. ದೇಶದಲ್ಲಿ ಕಳೆದ ಏಪ್ರಿಲ್-ಮೇ ಅವಧಿಯಲ್ಲಿ ಕರೋನಾ ಎರಡನೇ ಅಲೆ ಭೀಕರ ಸಾವು-ನೋವುಗಳ ರುದ್ರನರ್ತನ ನಡೆಯುತ್ತಿರುವಾಗ ದೇಶದ ಉದ್ದಗಲಕ್ಕೆ ಆಮ್ಲಜನಕ ಕೊರತೆಯಿಂದ, ಸಕಾಲದಲ್ಲಿ ಜೀವವಾಯು ಲಭ್ಯವಾಗದೆ ಲಕ್ಷಾಂತರ ಮಂದಿ ಸಾವು ಕಂಡಿದ್ದರು. ಜನ ಹಾಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾವು ಕಾಣುತ್ತಿರುವುದನ್ನು ರೋಗಿಗಳ …

Read More »

ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್‌ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್‌ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್‌ ಸಿಟಿ ರೌಂಡ್ಸ್‌ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್‌ ಶಿವು ಅವರಿಗೆ ಸನ್ಮಾನಿಸಿದ್ದಾರೆ. ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, …

Read More »

ಲಂಚ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಟ್ರಾಫಿಕ್ ಕಂಟ್ರೋಲರ್ ಎಸಿಬಿ ಬಲೆಗೆ!

ಮಂಗಳವಾರ ತಡರಾತ್ರಿ ಚಿಂತಾಮಣಿಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲರ್ ವೆಂಕಟಾಚಲಪತಿಯನ್ನು ಬಲೆಗೆ ಕೆಡವಿದ್ದಾರೆ. ವೆಂಕಟಾಚಲಪತಿ ಸಂಬಂಧಿ ಹಾಗೂ ಮೇಲಾಧಿಕಾರಿಯಾಗಿದ್ದ ಡಿಸಿ ಚಂದ್ರಶೇಖರ್ ವರಿಗೆ ಲಂಚದ ಮೊತ್ತ ತಲುಪಿಸುತ್ತಿದ್ದರು. ಕೋಲಾರ ಕೆಎಸ್‌ಆರ್ಟಿಸಿ ಡಿಸಿ ಚಂದ್ರಶೇಖರ್ ತಮ್ಮ ಸಂಬಂಧಿಯಾದ ಜಿಎನ್. ವೆಂಕಟಾಚಲಪತಿ ಮೂಲಕ ಕಂಡಕ್ಟರ್ ಬಳಿ 2 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿವೃತ್ತಿ ಘೋಷಣೆ ಮಾಡಲು ಇಷ್ಟು ದೊಡ್ಡ ಮೊತ್ತ ಕೇಳಿದ್ದು …

Read More »

ಬೆಳಗಾವಿ ಸಿಇಎನ್​ ಪೊಲೀಸರಿಂದ ಸೈಬರ್ ವಂಚಕರ ಬಂಧನ; 50 ಬ್ಯಾಂಕ್ ಖಾತೆ ಫ್ರೀಜ್

ಬೆಳಗಾವಿ: ಬಿಎಸ್​ಎನ್​ಎಲ್​ ನಿವೃತ್ತ ಉದ್ಯೋಗಿ ಖಾತೆಗೆ ಕನ್ನ ಹಾಕಿ 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದ ವಂಚಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್. ಗ್ರಾಮದ ಯಲ್ಲಪ್ಪ ಜಾಧವ್‌ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ, ಚಂದ್ರಪ್ರಕಾಶ್(30), ಆಶಾದೇವಿ(25)ಯನ್ನು ಇಂದು ಜಾರ್ಖಂಡ್‌ಗೆ ತೆರಳಿ ಬೆಳಗಾವಿ ಪೊಲೀಸರು( Karnataka police) ಬಂಧಿಸಿದ್ದಾರೆ. ಕೆವೈಸಿ ಅಪ್​ಡೆಟ್ ನೆಪದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ, ವಾಟ್ಸಪ್ ಪಡೆದಿದ್ದ …

Read More »

41ನೇ ರೈತ ಹುತಾತ್ಮ ದಿನಾಚರಣೆ; ಹುತಾತ್ಮ ರೈತನಿಗೆ ನಮನ ಸಲ್ಲಿಸಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ರೈತರು

ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಹಿನ್ನೆಯಲ್ಲಿ ಬಂಡಾಯದ ನಾಡಿನತ್ತ ಇಂದು (ಜುಲೈ 21) ರೈತ ಸಮೂಹವೇ ಹರಿದು ಬಂದಿತ್ತು. ಹುತಾತ್ಮ ರೈತನ ವೀರಗಲ್ಲಿಗೆ ಹೂವು ಅರ್ಪಿಸಿ ರೈತರು, ಮುಖಂಡರು, ಜನಪ್ರತಿನಿಧಿಗಳು ನಮನ ಸಲ್ಲಿಸಿದರು. ಈ ವೇಳೆ ಮಹದಾಯಿ, ಕಳಸಾ ಬಂಡೂರಿಗಾಗಿ ರೈತರು ಹಸಿರು ಶಾಲು ಹಾರಿಸುವ ಮೂಲಕ ಮತ್ತೆ ರಣಕಹಳೆ ಊದಿದರು. ಜೊತೆಗೆ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಹಾಕುವ ಮೂಲಕ ಸರ್ಕಾರಗಳಿಗೆ …

Read More »

ಅವರು ಸಿಪಿ ಯೋಗೇಶ್ವರ್ ಅಲ್ಲ… ಸಿಡಿ ಯೋಗೇಶ್ವರ್… ಸಿಡಿ ಇಟ್ಕೊಂಡೇ ಆಟ ಆಡ್ತಿದ್ದಾರೆ.: ಡಿ.ಕೆ ಸುರೇಶ್

ನವದೆಹಲಿ: ಅವರು ಸಿಪಿ ಯೋಗೇಶ್ವರ್ ಅಲ್ಲ… ಸಿಡಿ ಯೋಗೇಶ್ವರ್… ಸಿಡಿ ಇಟ್ಕೊಂಡೇ ಆಟ ಆಡ್ತಿದ್ದಾರೆ. ಇದು ಕರ್ನಾಟಕಕ್ಕೆ ಕಪ್ಪು ಚುಕ್ಕೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್ ನವದೆಹಲಿಯಲ್ಲಿ ಸಚಿವ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ರೇಣುಕಾಚಾರ್ಯ ಸಿಡಿ ಪ್ರಸ್ತಾಪ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿದರು. ಲಿಂಗಾಯತರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ವಿಚಾರವಾಗಿ ಹೈಕಮಾಂಡ್ ನಿರ್ದೇಶನವನ್ನು ನಾವು ಪಾಲಿಸುತ್ತೇವೆ. ಯಾವುದೇ ಸಮುದಾಯದ ಅಧ್ಯಕ್ಷ ಆದರೂ ನಾವು …

Read More »