Breaking News

Monthly Archives: ಏಪ್ರಿಲ್ 2021

ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ :ಸರ್ಕಾರಿ ಆಸ್ಪತ್ರೆ ವೈದ್ಯ ಎಸಿಬಿ ಬಲೆಗೆ

ಬೆಳಗಾವಿ : ಲಂಚಕ್ಕಾಗಿ ಬೇಡಿಕೆ ಇಟ್ಟು ಹೆರಿಗೆ ಶಸ್ತ್ರಕ್ರಿಯೆಗೊಳಗಾಗಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ಸರ್ಜನ್ ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಅಧಿಕಾರಿಗಳು ಲಂಚದ ಸಮೇತ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ. ಡಾ.ವಿರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದ ವೈದ್ಯನಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಮೂಲದ ಮಹಿಳೆಯನ್ನು ಆಸ್ಪತ್ರೆಯ ಹೆರಿಗೆ ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಮಹಿಳೆಯನ್ನು ಡಿಸ್ಚಾರ್ಜ್ ಮಾಡಲು ವೈದ್ಯ 7 …

Read More »

ಮೃತದೇಹಗಳಿಂದ ತುಂಬಿ ತುಳುಕುತ್ತಿವೆ ಶವಾಗಾರ, ಚಿತಾಗಾರ!

ದುರ್ಗ್ (ಛತ್ತೀಸಗಡ), ಏಪ್ರಿಲ್ 3: ಕೊರೊನಾ ವೈರಸ್ ಎರಡನೆಯ ಅಲೆಯು ದೇಶಾದ್ಯಂತ ಜನರನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ. ಕೋವಿಡ್ ಪ್ರಕರಣಗಳಲ್ಲಿ ಏಕಾಏಕಿ ಏರಿಕೆಯಾಗುತ್ತಿರುವುದು ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಸವಾಲುಗಳನ್ನು ಉಂಟುಮಾಡಿದೆ. ಛತ್ತೀಸಗಡ ದುರ್ಗ್ ಎಂಬ ಪುಟ್ಟ ಪಟ್ಟಣದಲ್ಲಿ ಉಂಟಾಗಿರುವ ಬಿಕ್ಕಟ್ಟು ಕಂಗೆಡಿಸುವಂತಿದೆ. ದುರ್ಗ್ ಜಿಲ್ಲೆಯು ಛತ್ತೀಸಗಡದಲ್ಲಿ ಕೋವಿಡ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದ ಪ್ರದೇಶ. ಇಲ್ಲಿ ಎರಡನೆಯ ಅಲೆಯ ಹೊಡೆತ ದೊಡ್ಡ ವಿಪತ್ತುಗಳನ್ನು ತಂದೊಡ್ಡಿದೆ. ಕಳೆದ ಏಳು ದಿನಗಳಲ್ಲಿ ಕೋವಿಡ್‌ನಿಂದ …

Read More »

ಚಲಿಸುತ್ತಿದ್ದ ಸಾರಿಗೆ ಬಸ್ಸಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕ

ಬೆಳಗಾವಿ : ಮಾಜಿ ಸೈನಿಕರೊಬ್ಬರು ಚಲಿಸುತ್ತಿದ್ದ ಸಾರಿಗೆ ಬಸ್ಸಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿ ಗೋಪಿನಾಥ್ ಜೋತಿರಾಮ ಜಾನವಾಡೆ (27) ಆಗಿದ್ದು, ಇವರು ನಿಪ್ಪಾಣಿ ತಾಲೂಕಿನ ಹಂಚಿನಾಳ (ಕೆಎಸ್ )ನಿವಾಸಿ. ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆ ಏಕಾಏಕಿ ಬಸ್ಸಿನ ಹಿಂಬದಿಯ ಬಾಗಿಲು …

Read More »

14 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ; ಆಸ್ಪತ್ರೆಯ ಎದುರು ಆಂಬುಲೆನ್ಸ್ ನಲ್ಲಿ ಶವಪತ್ತೆ

ಉತ್ತರಪ್ರದೇಶ: ಉತ್ತರಪ್ರದೇಶದ ನೋಯ್ಡಾದ ಖಾಸಗಿ ಆಸ್ಪತ್ರೆಯ ಹೊರಗಡೆ ನಿಂತಿದ್ದ ಆಂಬುಲೆನ್ಸ್ ನಲ್ಲಿ 14 ವರ್ಷದ ಹುಡುಗಿಯ ಶವ ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ ಹುಡುಗಿಯನ್ನು ಅಪಹರಿಸಿ ನೋಯ್ಡಾದ ಖಾಸಗಿ ಆಸ್ಪತ್ರೆಯ ಬಳಿ ಕರೆತಂದು ಕೃತ್ಯ ಎಸಗಿದ್ದಾರೆ. ತಮ್ಮ ಕಾರ್ಯ ಮುಗಿದ ನಂತರ ಹುಡುಗಿಯನ್ನು ವಾಹನದಲ್ಲಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿಗಳು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಾಲಕಿ ಮೃತ ಪಟ್ಟಿದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು …

Read More »

ಸಿಡಿ ಪ್ರಕರಣದಲ್ಲಿ ರೋಚಕ ತಿರುವು, ಮಾಜಿ ಸಚಿವ ಡಿ. ಸುಧಾಕರ್ ಸಿಡಿ ಯುವತಿ ಜತೆ ನಂಟು

ಬೆಂಗಳೂರು: ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ಮಾಜಿ ಸಚಿವ ಡಿ. ಸುಧಾಕರ್ ಸಿಡಿ ಯುವತಿ ಜತೆ ಅತಿ ಹೆಚ್ಚು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಎಸ್​ಐಟಿ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗ ಮೂಲದ ಡಿ. ಸುಧಾಕರ್ ಈ ಹಿಂದೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಸಿಡಿ ಬಿಡುಗಡೆಗೂ ಎರಡು ದಿನ ಮುನ್ನ ಸಿಡಿ ಪ್ರಕರಣದಲ್ಲಿ ಇದ್ದಾಳೆ ಎನ್ನುವ ಯುವತಿ ಬಳಿ ಡಿ.ಸುಧಾಕರ್ ಹಣದ …

Read More »

ಸಿಡಿ ಲೇಡಿ ಪರ ವಕಾಲತ್ತು ವಹಿಸಿದ ವಕೀಲರಿಗೆ ಬಂತು ಕುತ್ತು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕುತೂಹಲ ಹುಟ್ಟಿಸಿದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಹಲವು ತಿರುವುಗಳು ಕಳೆದುಕೊಳ್ಳುತ್ತಿದ್ದಾರೆ, ಇನ್ನೊಂದೆಡೆ ಇವತ್ತು ಪರ ವಕಾಲತ್ತು ವಹಿಸಿದ ವಕೀಲರನ್ನು ಅಮಾನತುಗೊಳಿಸುವ ತಯಾರಿ ನಡೆಯುತ್ತದೆ. ಮಾಧ್ಯಮಗಳ ಮುಂದೆ ಸಿಡಿ ಲೇಡಿಯ ಪರವಾಗಿ ಕೆ.ಎನ್​. ಜಗದೀಶ್​ ಅವರು ಮಾಹಿತಿ ನೀಡುತ್ತಿದ್ದರೆ, ಅಸಲಿಗೆ ಅವರು ಯುವತಿಯ ಪರವಾದ ನಿಜವಾದ ವಕೀಲರಲ್ಲ. ಬದಲಿಗೆ ಜಗದೀಶ್​ ಅವರ ಪಕ್ಕ ಇರುವ ಆರ್​.ಮಂಜುನಾಥ್​ ಅವರು ಯುವತಿಯ ಪರವಾಗಿ ವಕಾಲತ್ತು ವಹಿಸಿದ್ದಾರೆ. ಕೋರ್ಟ್​ನಲ್ಲಿ ವಾದ …

Read More »

ಮಹಾರಾಷ್ಟ್ರದಲ್ಲಿ 1ರಿಂದ 8ನೇ ತರಗತಿವರೆಗೆ ಪರೀಕ್ಷೆ ಇಲ್ಲದೆ ಪಾಸ್

ಮುಂಬೈ: ಕೊರೋನಾ ಕಾರಣದಿಂದಾಗಿ ಇದೀಗ ದೇಶದ ಹಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ಒಂದರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿದೆ. ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೆಕಂಡರಿ ಮತ್ತು ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿದೆ ಈ ನಿರ್ಧಾರ ಕೈಗೊಂಡಿದೆ. ಅಂತಿಮ ವರ್ಷದ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ವಿದ್ಯಾರ್ಥಿಗಳನ್ನು ಕಳುಹಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 47, 827 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ರಾಜ್ಯಾದ್ಯಂತ ಒಟ್ಟಾರೇ …

Read More »

ಏಪ್ರಿಲ್‌ 7 ರಿಂದ ಸಾರಿಗೆ ಮುಷ್ಕರ ಖಚಿತ ; ಖಾಸಗಿ ವಾಹನಗಳಿಗೆ ಅವಕಾಶ

ಬೆಂಗಳೂರು /ಧಾರವಾಡ ; ಕರ್ನಾಟಕ ಸರ್ಕಾರ ಎಸ್ಮಾ ಜಾರಿಗೊಳಿಸಿದರೂ ನಾವು ಭಯ ಪಡುವುದಿಲ್ಲ. ಏಪ್ರಿಲ್ 7ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಖಂಡಿತ” ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ …

Read More »

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು18 ಅಭ್ಯರ್ಥಿಗಳ ಪೈಕಿ 8ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು ೧೮ ಅಭ್ಯರ್ಥಿಗಳ ಪೈಕಿ ೮ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಶನಿವಾರ (ಏ.೩) ಶಿವಸೇನೆ ಹಾಗೂ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೮ ಜನರು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡರು. ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ: ಅಶೋಕ್ …

Read More »

ದೂರದೃಷ್ಟಿ ಹಾಗೂ ಅಭಿವೃದ್ದಿ ಯೋಜನೆಗಳು ನಮ್ಮ ತಂದೆ ಗೆಲುವಿಗೆ ಸಹಕಾರಿಯಾಗಲಿದೆ- ಯುವನಾಯಕಿ ಪ್ರಿಯಾಂಕಾ ಜಾರಕಿಹೊಳಿ

  ಪ್ರಿಯಾಂಕಾ ಜಾರಕಿಹೊಳಿ ಸಮ್ಮುಖದಲ್ಲಿ ಬಿಜೆಪಿ ಕಾರ್ಯಾಕರ್ತರು ಕಾಂಗ್ರೆಸ್ ಗೆ ಸೇರ್ಪಡೆ..     ಗೋಕಾಕ: ದೂರದೃಷ್ಟಿ ಹಾಗೂ ಅಭಿವೃದ್ದಿ ಪರ ಯೋಜನೆಗಳು ಮತ್ತು ಜನಪರ ಕಾರ್ಯಗಳು ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಶನಿವಾರದಂದು ಸಂಜೆ ನಗರದ ಉಪ್ಪಾರ ಗಲ್ಲಿಯಲ್ಲಿ ಲೋಕಸಭಾ ಉಪಚುನಾವಣೆಯ ನಿಮಿತ್ಯ ತಮ್ಮ ತಂದೆಯ ಪರವಾಗಿ ಮತಯಾಚನೆ ಮಾಡುತ್ತಾ ಮಾತನಾಡಿದ ಅವರು, ಮಾತುಗಿಂತ ಕೃತಿ …

Read More »