ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಟೆರಿಟರಿ ಹೆಡ್, ಪ್ರಾಡಕ್ಟ್ ಹೆಡ್, ಐಟಿ ಫಂಕ್ಷನಲ್ ಅನಾಲಿಸ್ಟ್ ಮತ್ತು ಇತರ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bankofbaroda.in ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 29 ಏಪ್ರಿಲ್ 2021 ರೊಳಗೆ ಇತ್ತೀಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಖಾಲಿ ಹುದ್ದೆಗಳ ವಿವರಗಳು ಬ್ಯಾಂಕ್ ಆಫ್ ಬರೋಡಾ (ಬಿಒಬಿ) …
Read More »Monthly Archives: ಏಪ್ರಿಲ್ 2021
ಅನುಕಂಪದ ನೌಕರಿ ನಿಯಮ ತಿದ್ದುಪಡಿಗೆ ಅಧಿಸೂಚನೆ: ಏನಿದೆ ಹೊಸ ನಿಯಮದಲ್ಲಿ?
ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದವರು ಮೃತಪಟ್ಟರೆ, ಅನುಕಂಪದ ಆಧಾರದಲ್ಲಿ ಅವಲಂಬಿತರಿಗೆ ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಿದ್ದುಪಡಿ ನಿಯಮದ ಪ್ರಕಾರ, ಸರ್ಕಾರಿ ನೌಕರ ಮೃತಪಟ್ಟರೆ ಆತನ ಜೊತೆ ವಾಸವಿದ್ದ ವಿಧವಾ ಪತ್ನಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ನೇಮಕಾತಿಗೆ ಆಕೆಗೆ ಅರ್ಹತೆ ಇಲ್ಲದಿದ್ದರೆ ಅಥವಾ ನೇಮಕಾತಿ ಬಯಸದೇ ಇದ್ದರೆ …
Read More »ಬೆಳಗಾವಿಯಲ್ಲಿ ಹುಲಿಯಾ ಸಿದ್ದರಾಮಯ್ಯನವರಿಗೆ ಕುಡುಕನ ಕಾಟ!
ಬೆಳಗಾವಿ, ಏಪ್ರಿಲ್ 10: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಚುನಾವಣಾ ಪ್ರಚಾರದ ವೇಳೆ ವ್ಯಕ್ತಿಯೊಬ್ಬ ಗಲಾಟೆ ಮಾಡಿದ್ದರಿಂದ, ಆತನನ್ನು ಸ್ಥಳದಿಂದ ಹೊರಕ್ಕೆ ಹಾಕಿದ ಘಟನೆ ಶುಕ್ರವಾರ (ಏ 9) ರಾತ್ರಿ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪ್ರಚಾರ ಮಾಡುತ್ತಾ ಸಿದ್ದರಾಮಯ್ಯ, “ಏನು ಮಾಡಿದರೂ ರೈತರು ಸುಮ್ಮನಿರುತ್ತಾರೆ ಎಂದು ಬಿಜೆಪಿಯವರು ಅಂದು ಕೊಂಡಿದ್ದರು. ಈಗ ರೈತರ ಪ್ರತಿಭಟನೆಯ ಬಿಸಿ ಬಿಜೆಪಿಗೆ ತಟ್ಟಿದೆ”ಎಂದು ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಆಗ ಸಭೆಗೆ …
Read More »ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು.
ಬೈಲಹೊಂಗಲ: ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಮಾಜದ ವತಿಯಿಂದ ‘ಪಂಚಅಶ್ವ’ ಎಂಬ ಕುದುರೆಯನ್ನು ಶುಕ್ರವಾರ ಕೊಡುಗೆ ನೀಡಲಾಯಿತು. ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯತ್ನಾಳ್ ಹಾಗೂ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಚನ್ನಮ್ಮನ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಕೇಸರಿ ತಿಲಕ ಹಚ್ಚಿಕೊಂಡು ಬಿಳಿ ಬಣ್ಣದ ಕುದುರೆ ಏರಿದ ಯತ್ನಾಳ, ‘ಜೈ …
Read More »ಸೈಯದ್ ಗ್ರಂಥಾಲಯಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳನ್ನು ಬಂಧಿಸಿ: ಸಿದ್ದರಾಮಯ್ಯ ಆಗ್ರಹ
ಮೈಸೂರು: ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಸಾವಿರಾರು ಪುಸ್ತಕಗಳನ್ನು ನಾಶ ಮಾಡಿದ ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಅವರು, ʻಮೈಸೂರಿನ ಅಕ್ಷರ ಪ್ರೇಮಿ ಸೈಯದ್ ಇಸಾಕ್ ಅವರು ಕಷ್ಟಪಟ್ಟು ಕಟ್ಟಿ ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯವನ್ನು ಸುಟ್ಟುಹಾಕಿರುವುದು ಹೇಯಕೃತ್ಯ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಅಕ್ಷರವಿರೋಧಿ ದುಷ್ಕರ್ಮಿಗಳನ್ನು …
Read More »ಕೋಡಿಹಳ್ಳಿ, ಸಾರಿಗೆ ಸಿಬ್ಬಂದಿ ವಶಕ್ಕೆ ಪಡೆದಿದ್ದನ್ನು ಖಂಡಿಸುತ್ತೇನೆ – ಡಿಕೆಶಿ
ಬೆಳಗಾವಿ: ಇದು ಪ್ರಜಾಪ್ರಭುತ್ವ, ರೈತ ಮುಖಂಡ ಇರಬಹುದು,ಕಾರ್ಮಿಕ ಮುಖಂಡ ಇರಬಹುದು, ರಾಜಕೀಯದವರು ನಾವೂ ಸಹ ಸರ್ಕಾರ ವಿರುದ್ಧವೇ ಪ್ರತಿಭಟನೆ ಮಾಡೋದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಿಬ್ಬಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅವರು ಮಾಡಿದ ತಪ್ಪು ಹೇಳುವುದು ನಮ್ಮ ಕೆಲಸ, ಅವರನ್ನು ಹೊಗಳಕ್ಕಾಗುತ್ತಾ(?) ಸಾರಿಗೆ ಸಿಬ್ಬಂದಿ ಹಕ್ಕು ಮೊಟಕು …
Read More »ಕೋವಿಡ್ ಹಗಲಲ್ಲಿ ಹರಡಲ್ಲ, ರಾತ್ರಿ ಮಾತ್ರ ಹರಡುತ್ತೆ ಎಂದ ವಿಜ್ಞಾನಿಯ ಫೋಟೋ ಕೊಡಿ : ಡಿಕೆಶಿ
ಬೆಳಗಾವಿ : ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಶನಿವಾರ ವ್ಯಂಗ್ಯವಾಡಿದ್ದಾರೆ. ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ರಾತ್ರಿ ಕರ್ಫ್ಯೂ ಇಂದ ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾರಿದ್ದಾರೆ. ಪತ್ರಕರ್ತರ …
Read More »ಏಪ್ರಿಲ್ 13ರಂದು ‘ಮದಗಜ’ ಚಿತ್ರದ “lovesome” ಟೀಸರ್ ರಿಲೀಸ್
ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹು ನಿರೀಕ್ಷೆಯ ‘ಮದಗಜ’ ಚಿತ್ರದ ಲವ್ ಟೀಸರ್ ವೊಂದನ್ನು ಏಪ್ರಿಲ್ 13ರಂದು ರಿಲೀಸ್ ಮಾಡುತ್ತಿದ್ದಾರೆ ಈ ಕುರಿತು ಶ್ರೀಮುರಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಟೀಸರ್ ಅನ್ನು ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ …
Read More »ವಕೀಲ್ ಸಾಬ್ ಸಿನಿಮಾ ರಿಲೀಸ್ ದಿನವೇ ಥಿಯೇಟರ್ ಧ್ವಂಸಗೊಳಿಸಿದ ಫ್ಯಾನ್ಸ್..!
ತೆಲಂಗಾಣ : ವಕೀಲ್ ಸಾಬ್ ಸಿನಿಮಾ ರಿಲೀಸ್ ಆದ ದಿನವೇ ಥಿಯೇಟರ್ ಗಳಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳ ಅವಾಂತರ ಸೃಷ್ಟಿಮಾಡಿದ್ದರು. ತಾಂತ್ರಿಕ ದೋಷದಿಂದಾಗಿ ವಕೀಲ್ ಸಾಬ್ ಚಿತ್ರದ ಸ್ಕ್ರೀನಿಂಗ್ ಗೆ ಅಡ್ಡಿಯಾದ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಥಿಯೇಟರ್ ನ್ನು ಧ್ವಂಸಗೊಳಿಸಿದ್ದಾರೆ. ತೆಲಂಗಾಣದ ಜೋಗುಲಂಬಾ ಗಡ್ವಾಲ್ ನ ಥಿಯೇಟರ್ ನಲ್ಲಿ ನಿನ್ನೆ ಬೆಳಿಗ್ಗೆ ಕಾರ್ಯಕ್ರಮದಲ್ಲಿ ಅಡ್ಡಿ ಉಂಟಾಗಿದೆ. ಆಗ ಥಿಯೇಟರ್ ಮ್ಯಾನೇಜ್ ಮೆಂಟ್ ಕೆಲವು ನಿಮಿಷ ಕಾಯುವಂತೆ ಮನವಿ …
Read More »ಕೊರೊನಾ ವೈರಸ್ ಭೀತಿ: ತಲೈವಿ ಚಿತ್ರಕ್ಕೆ ಮತ್ತೆ ನಿರಾಸೆ
ಕೊರೊನಾ ವೈರಸ್ ಎರಡನೇ ಅಲೆಯಿಂದ ಮತ್ತೊಂದು ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಚಿತ್ರ ಪ್ರಪಂಚದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ತಲೈವಿ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಮೊದಲು ನಿರ್ಧರಿಸಿದಂತೆ ಏಪ್ರಿಲ್ 23 ರಂದು ತಲೈವಿ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಬೇಕಿತ್ತು. ಅದಕ್ಕೆ ಬೇಕಾದ ತಯಾರಿ ಸಹ ನಡೆದಿತ್ತು. ಆದರೆ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡ ಪರಿಣಾಮ ಬಿಡುಗಡೆಯಿಂದ ಹಿಂದೆ …
Read More »