Breaking News

Monthly Archives: ಫೆಬ್ರವರಿ 2021

3 ದಿನ ಹೆಂಡ್ತಿ, ಇನ್ಮೂರು ದಿನ ಲವರ್ ನೊಂದಿಗೆ ಇರಲು ವ್ಯಕ್ತಿಗೆ ಸೂಚನೆ..!ಪೊಲೀಸರ ವಿಚಿತ್ರ ಪರಿಹಾರ ಸೂತ್ರ..!

ರಾಂಚಿ : ಪ್ರೇಯಸಿ – ಹೆಂಡತಿ ವಿಚಾರವಾಗಿ ಉದ್ಭವವಾಗಿದ್ದ ಸಮಸ್ಯೆವೊಂದಕ್ಕೆ ಜಾರ್ಖಂಡ್​ ಪೊಲೀಸರು ವಿಚಿತ್ರವಾದ ಪರಿಹಾರ ನೀಡಿದ್ದು, ಮೂರು ದಿನ ಹೆಂಡತಿ ಹಾಗೂ ಇನ್ಮೂರು ದಿನ ಲವರ್​ನೊಂದಿಗೆ ಕಾಲ ಕಳೆಯುವಂತೆ ಪರಿಹಾರ ನೀಡಿದ್ದಾರೆ. ರಾಂಚಿಯ ಕೊಕಾರ್​​ನ ತಿರ್ಲಿ ರೋಡ್​ನಲ್ಲಿ ರಾಜೇಶ್ ಮೆಹ್ತಾ ವಾಸವಾಗಿದ್ದು, ಮದುವೆಯಾದ ನಂತರವೂ ಈತ ಬೇರೆ ಯುವತಿ ಜತೆ ಸಂಪರ್ಕವಿಟ್ಟುಕೊಂಡಿದ್ದ. ಅಷ್ಟೇ ಏಕೆ ಆಕೆ ಜತೆ ಓಡಿ ಹೋಗಿದ್ದ. ಹೀಗಾಗಿ ಹೆಂಡತಿ ಹಾಗೂ ಮಗು ಅನಾಥವಾಗಿದ್ದವು. ಗಂಡ …

Read More »

ಗಾಳಿಯಿಂದ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ…!; ಇಂಡೋನೇಷ್ಯಾ ಮಹಿಳೆಯ ಮಾತು

ಇಂಡೋನೇಷ್ಯಾ(ಫೆ.18): ಯುವತಿಯೊಬ್ಬಳು ಇಂಡೋನೇಷ್ಯಾದಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಹುಟ್ಟುವುದಕ್ಕೆ ಆಕೆ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಗಾಳಿಯು ನನ್ನ ಜನನಾಂಗದ ಮೂಲಕ ನನ್ನ ದೇಹ ಸೇರಿತು. ಆದ್ದರಿಂದ ನಾನು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದು, ಲೈಂಗಿಕ ಕ್ರಿಯೆಯಿಂದ ಅಲ್ಲ ಎಂದು ಯುವತಿ ಹೇಳುತ್ತಿದ್ದಾಳೆ. ಇದನ್ನು ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ. ಈ ಘಟನೆ ಇಂಡೋನೇಷ್ಯಾದ ಸಿಯಾಂಜುರ್​​ ಸಿಟಿಯ ವೆಸ್ಟ್​ ಜಾವಾದಲ್ಲಿ ನಡೆದಿದೆ. …

Read More »

ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ!

ಅಹ್ಮದ್​ನಗರ (ಮಹಾರಾಷ್ಟ್ರ): ಚುನಾವಣೆಗು ಮುನ್ನ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ನಾನಾ ಪ್ರಯತ್ನ ಮಾಡುತ್ತಾರೆ. ಗೆಲುವು ಸಾಧಿಸಿದ ಬಳಿಕವು ಡಿಜೆ ಸೌಂಡ್, ಮೆರವಣಿಗೆಯಂತಹ ಸಂಭ್ರಮಾಚರಣೆ ಮಾಡುತ್ತಾರೆ. ಈ ರೀತಿ ಶಾಸಕ ಅಥವಾ ಸಂಸದರ ಚುನಾವಣೆಯಲ್ಲಿ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್​ನಲ್ಲಿ ಬರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲೆಯ ಅಂಬಿ-ದುಮಾಲಾ ಗ್ರಾಮದಲ್ಲಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪ್ರಮಾಣ …

Read More »

ಪಂಜಾಬ್, ಹರ್ಯಾಣದಲ್ಲಿ ರೈತರಿಂದ ರೈಲು ತಡೆದು ಪ್ರತಿಭಟನೆ, ಬಿಗಿ ಬಂದೋಬಸ್ತ್

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಗುರುವಾರ ಕರೆ ನೀಡಿದ್ದ ರೈಲು ತಡೆ ಚಳವಳಿಗೆ ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಕೆಲಗಂಟೆಗಳ ಕಾಲ ರೈಲು ತಡೆದು ಪ್ರತಿಭಟಿಸಿದರು. 12ಗಂಟೆಯಿಂದ ರೈಲು ತಡೆ ಚಳವಳಿ ಆರಂಭಗೊಂಡಿದ್ದು, 4ಗಂಟೆವರೆಗೆ ಶಾಂತಿಯುತವಾಗಿ ಮುಂದುವರಿಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಹಲವೆಡೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು …

Read More »

ಬಸ್ ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಕಲಬುರಗಿ: ಡೀಸೆಲ್ ಬೆಲೆ ಹೆಚ್ಚಳವಾಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾಪ ಸಂಸ್ಥೆ ಮುಂದಿಲ್ಲ ಎಂದು ಸಾರಿಗೆ ಸಚಿವರಾಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ನಗರದಲ್ಲಿ ದಿ.‌ಚಂದ್ರಶೇಖರ ಪಾಟೀಲ ರೇವೂರ ಫೌಂಡೇಶನ್ ದ ಉಚಿತ ಡಯಾಲಿಸಿಸ್ ಕೇಂದ್ರದ ವೈದ್ಯಕೀಯ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡೀಸೆಲ್ ದರ ಹೆಚ್ಚಳ ಅವಲೋಕಿಸಿದರೆ ದರ ಹೆಚ್ಚಿಸಬೇಕು. ಆದರೆ ಸಂಸ್ಥೆಯ ಬಸ್ ಗಳಲ್ಲಿ‌ ಸಂಚರಿಸುವರು ಬಡ ಹಾಗೂ ಮಧ್ಯಮ ವರ್ಗದವರಿರುತ್ತಾರೆ. ಕೊರೊನಾದಿಂದ …

Read More »

ಐಪಿಎಲ್ ಹರಾಜು 2021: 14.25 ಕೋಟಿ ರೂಗಳಿಗೆ ಆರ್ ಸಿಬಿ ಪಾಲಾದ ಗ್ಲೇನ್ ಮ್ಯಾಕ್ಸ್ ವೆಲ್, ದೆಹಲಿ ಪಾಲಾದ ಸ್ಟೀವ್ ಸ್ಮಿತ್!

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ಬರೊಬ್ಬರಿ 14.25 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಈ ನಿಮಿತ್ತ ಇಂದು ಆಟಗಾರರ ಹರಾಜು ಪ್ರಕ್ರಿಯೆ ಭರದಿಂದ ಸಾಗಿದೆ. ಚೆನ್ನೈನಲ್ಲಿ ಆಟಗಾರರ ಮಿನಿ …

Read More »

ಡಾ.ರಾಜ್‍ ಪ್ರತಿಮೆ ವಿಚಾರದಲ್ಲಿ ನಾಲಿಗೆ ಹರಿಬಿಟ್ಟಿದ್ದ ಶಾಸಕ ಹ್ಯಾರಿಸ್ ಕ್ಷಮೆ ಯಾಚನೆ

ಬೆಂಗಳೂರು, ಫೆ.18- ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಪ್ರತಿಮೆ ವಿಷಯದಲ್ಲಿ ಅವಹೇಳನಕಾರಿಯಾಗಿ ಮಾತನಾಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಕ್ಷಮೆ ಯಾಚಿಸಿದ್ದಾರೆ. ಡಾ.ರಾಜ್‍ಕುಮಾರ್ ಅವರ ಪ್ರತಿಮೆ ವಿಷಯದಲ್ಲಿ ಶಾಸಕ ಹ್ಯಾರಿಸ್ ಹಗುರವಾಗಿ ಮಾತನಾಡಿರುವ ವಿಡಿಯೋ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೈ ರಲ್ ಆಗಿತ್ತು. ನಂತರ ಹ್ಯಾರಿಸ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅವರು ಕ್ಷಮೆ ಯಾಚಿಸಿದ್ದಾರೆ. ಹ್ಯಾರಿಸ್ ಅವರು ಈ …

Read More »

ಬೆಳಗಾವಿ: ರೈಲು ತಡೆಯಲು ಬಂದ ರೈತರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ: ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಮತ್ತು ದೆಹಲಿಯ ಗಡಿಗಳಲ್ಲಿ ಹೋರಾಟನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಲು ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ನಗರದ ರೈಲು ನಿಲ್ದಾಣದಲ್ಲಿ ರೈಲು ತಡೆ ಚಳವಳಿ ನಡೆಸಲು ಮುಂದಾದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದ ರೈತರನ್ನು ಪೊಲೀಸರು ಗೇಟ್‌ನಲ್ಲೇ ತಡೆದರು. ಈ ವೇಳೆ ಪೊಲೀಸರು ಮತ್ತು ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಯಿತು. …

Read More »

ಕೃಷಿ ಕಾಯ್ದೆ ವಿರೋಧಿಸಿ “ರೈಲ್ ರೋಖೋ” ಚಳುವಳಿ, ಪ್ರತಿಭಟನಾಕಾರರು ವಶಕ್ಕೆ

: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರೋ ರೈತರು ಇಂದು ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ವಿಜಯಪುರ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಹಲವಾರು ರೈತರು ರೈಲು ತಡೆಯಲು ಮುಂದಾಗಿದ್ದು, ಅವರನ್ನ ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ವಿಜಯಪುರ ರೈತರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈತರು, ಕಾರ್ಮಿಕ ಸಂಘಟನೆಗಳು ಸೇರಿ ವಿಜಯಪುರದಲ್ಲಿ …

Read More »

ಚಲಿಸುತ್ತಿರುವ ರೈಲಿನಡಿ ಸಿಲುಕಿದ ಹರಿಯಾಣದ ಮಹಿಳೆ ಮುಂದೇನಾಯ್ತು..?

ನೋಡುಗರಿಗೆ ಎದೆ ಝಲ್​ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನ ಕೆಳಗಿದ್ದು, ಉಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಲಿಸುತ್ತಿರುವ ರೈಲಿನ ಕೆಳಗೆ ಮಹಿಳೆ ಇರುವುದನ್ನು ನೋಡಿ ಸುತ್ತಲಿನ ಜನ ದಂಗಾಗಿದ್ದಾರೆ. ಹರಿಯಾಣದ ರಥಕ್​ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಸಿಗ್ನಲ್​ಗಾಗಿ ಕಾಯುತ್ತಿರುವಾಗ ಮಹಿಳೆ ಟ್ರೈನ್​ ಕೆಳಗಿನಿಂದ ಪಕ್ಕದ ರಸ್ತೆಗೆ ಪಾಸಾಗಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ರೈಲು ಕೂಡಲೇ ಚಲಿಸಿದ್ದು, ಮಹಿಳೆ ಪ್ರಾಣ ರಕ್ಷಣೆಗಾಗಿ ರೈಲು ಹಳಿಯ …

Read More »