Breaking News

Monthly Archives: ಫೆಬ್ರವರಿ 2021

ನೂರು ವರ್ಷದ ಬಳಿಕ ನಡೆಯುತ್ತಿರುವ ಹಿಂಡಲಗಾ ​ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ಜಾತ್ರೆ

ಬೆಳಗಾವಿ​ – ನೂರು ವರ್ಷದ ಬಳಿಕ ನಡೆಯುತ್ತಿರುವ ಹಿಂಡಲಗಾ ​ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ​ಹೆಬ್ಬಾಳಕರ್ ನೇತೃತ್ವದಲ್ಲಿ ಗ್ರಾಮಸ್ಥರು  ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು.​   ​ಮಾರ್ಚ್ 16ರಿಂದ 20ರ ವರೆಗೆ ಜಾತ್ರೆ ನಡೆಯಲಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹ​ರ್ಷದ​​ ವಾತಾವರಣ ನಿರ್ಮಾಣವಾಗಿದೆ.​ ಜಾತ್ರಾ ಮಹೋತ್ಸವಕ್ಕೆ ಯಾವುದೇ ಅಡ್ಡಿ ಆತಂಕಗಳು, ಅಹಿತಕರ ಘಟನೆಗಳು ನಡೆಯ​ದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ​ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸದಸ್ಯ​ರು ಶಾಸಕಿ ಲಕ್ಷ್ಮಿ …

Read More »

ರಾಜ್ಯ ಬಿಜೆಪಿಗೆ 10 ಜನ ವಕ್ತಾರರ ನೇಮಕ: ನಳಿನ ಕುಮಾರ ಕಟೀಲು

ಬೆಂಗಳೂರು – ರಾಜ್ಯ ಬಿಜೆಪಿಗೆ 10 ಜನ ವಕ್ತಾರರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಆದೇಶ ಹೊರಡಿಸಿದ್ದಾರೆ.                     ಮಂಗಳೂರಿನ ಕ್ಯಾ.ಗಣೇಶ ಕಾರ್ಮಿಕ್, ಬೆಂಗಳೂರಿನ ಜಗ್ಗೇಶ, ಯಾದಗಿರಿಯ ರಾಜೂ ಗೌಡ, ಕಲಬುರಗಿಯ ರಾಜಕುಮಾರ ಪಾಟೀಲ, ಬೆಂಗಳೂರಿನ ಚಲುವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ಗಿರಿಧರ ಉಪಾಧ್ಯಾಯ, ಬೆಳಗಾವಿಯ ಪಿ.ರಾಜೀವ, ಎಂ.ಬಿ.ಜಿರಲಿ, ಮೈಸೂರಿನ ಮಹೇಶ್ ವಕ್ತಾರರಾಗಿ ನೇಮಕವಾಗಿದ್ದಾರೆ.

Read More »

ಶೇಂಗಾ ಖರೀದಿ ಮಾಡಿ ನಮ್ಮನ್ನು ಕಾಪಾಡ ಬೇಕೆಂದ ಶೇಂಗಾ ಬೆಳೆದ  ಜಿಲ್ಲೆಯ ರೈತರು

ಯಾದಗಿರಿ : ಶೇಂಗಾ ಬೆಳೆದ  ಜಿಲ್ಲೆಯ ರೈತರು ಉತ್ತಮ ದರ ಸಿಗದೆ ಪರದಾಡುವಂತಾಗಿದೆ.ನಿ ತ್ಯವೂ ಸಾವಿರಾರು ಕ್ವಿಂಟಾಲ್ ಶೇಂಗಾವನ್ನು ಹತ್ತಿಕುಣಿ, ಗುರುಮಠಕಲ್, ಬಂದಳ್ಳಿ,ಅರಕೇರಾ ಕೆ ಹಾಗೂ ಇನ್ನಿತರ ಭಾಗದಿಂದ ಹೊತ್ತು ತಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಉತ್ತಮ ಬೆಲೆ ಸಿಗದೆ, ಸಿಕ್ಕ ಹಣಕ್ಕೆ ರೈತರು ಶೇಂಗಾ ಮಾರಾಟ ಮಾಡುತ್ತಿದ್ದಾರೆ. ‌ಯಾದಗಿರಿ, ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್, …

Read More »

ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಜೈ ಅಂದ ಸಿಂದಗಿ ನಾರಿಯರು!

ವಿಜಯಪುರ : ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಸಿಂದಗಿಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಗೆ ಸಾರ್ವಜನಿಕರಿಂದ  ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಸ್ಪಂದನೆ ದೊರೆತಿದೆ. ಸಿಂದಗಿ ಸಾತವಿರೇಶ್ವರ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೀಪ ಬೆಳಗಿಸಿ ಮಾತನಾಡಿ, …

Read More »

ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ

ಗೋಕಾಕ: ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ ವತಿಯಿಂದ ದಿ. 26 ರಂದು ಸಂಜೆ 5 ಗಂಟೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಅಸೋಸಿಯೇಷನ ಕಾರ್ಯದರ್ಶಿ ರಮೇಶ ಕಳ್ಳಿಮನಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಸ್ಪರ್ಧೆಯಲ್ಲಿ 55, 60, 65, ಹಾಗೂ 65+ ಕೆಜಿ ದೇಹ ತೂಕದ ಸ್ಪರ್ಧಾಳುಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು …

Read More »

ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರೊಂದಿಗೆ ಚರ್ಚಿಸುತ್ತಿರುವ ರೈತ ಸಂಘದ ಮುಖಂಡರು.

ಗೋಕಾಕ: ಕಳೆದ ಎರಡು ವರ್ಷಗಳಿಂದ ನೆರೆ, ಅತಿವೃಷ್ಟಿ ಹಾಗೂ ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ತತ್ತರಿಸಿರುವ ರೈತರಿಗೆ ಈಗ ಸಾಲ ತುಂಬುವಂತೆ ನೋಟಿಸು ನೀಡುತ್ತಿರುವ ಬ್ಯಾಂಕ್‍ನವರು ತಮ್ಮ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಒತ್ತಾಯಿಸಿದ್ದಾರೆ. ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಸಾಲ ತುಂಬಲು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನವರು ರೈತರಿಗೆ ನೀಡುತ್ತಿರುವ ನೋಟಿಸ್‍ನ್ನು ತಹಶೀಲ್ದಾರರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, …

Read More »

ಹುಟ್ಟುಹಬ್ಬದ ಸಂಭ್ರಮದಲ್ಲಿ ಭೂಮಿ ಶೆಟ್ಟಿ

ನಟಿ ಭೂಮಿ ಶೆಟ್ಟಿ ಇಂದು ತಮ್ಮ 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭೂಮಿ ಶೆಟ್ಟಿ 2018ರಲ್ಲಿ ಪ್ರಸಾರವಾಗುತ್ತಿದ್ದ ‘ಕಿನ್ನರಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಎಲ್ಲರ ಮನೆಮಾತಾದರು. ಇವರು ಕನ್ನಡ ಅಲ್ಲದೇ ತೆಲುಗು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.   2019 ರ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸುವ ಮೂಲಕ ಭೂಮಿ ಶೆಟ್ಟಿ ಇನ್ನಷ್ಟು ಜನಪ್ರಿಯತೆ ಪಡೆದರು. ಭೂಮಿ ಶೆಟ್ಟಿ 1998 ಫೆಬ್ರವರಿ 19ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Read More »

ಮುಂದುವರೆದ ʼಮಹಾʼ ಸಿಎಂ ಉದ್ಧಟತನ

ಮುಂಬೈ: ಗಡಿ ವಿಚಾರದ ಬೆನ್ನಲ್ಲೇ ಇದೀಗ ಭಾಷೆ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕ್ಯಾತೆ ತೆಗೆದಿದ್ದು, ಕನ್ನಡ ಪ್ರಾಬಲ್ಯವಿರುವ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಮರಾಠಿ ಪ್ರಚಾರ ನಡೆಸುವಂತೆ ಆದೇಶ ನೀಡಿದ್ದಾರೆ. ಗಡಿ ಭಾಗದಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಕನ್ನಡ ಪ್ರಾಬಲ್ಯವಿರುವ ಹಳ್ಳಿಗಳಲ್ಲಿ ಮರಾಠಿ ಭಾಷೆಯ ಪ್ರಚಾರ ಮಾಡಬೇಕು. ಶೇ.50 ರಷ್ಟು ಮರಾಠಿ ಮಾತನಾಡುವಂತಾಗಬೇಕು ಎಂದು ಪತ್ರದ ಮೂಲಕ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಜತ್, ಅಕ್ಕಲಕೋಟ …

Read More »

ರನ್ ಫಾರ್ ಹೋಪ್, ರನ್ ಫಾರ್ ಬೆಟರ್ ಹೆಲ್ತ್ ಕಾರ್ಯಕ್ರಮ

ಬೆಳಗಾವಿ – ಇಲ್ಲಿಯ ರೋಟರಿ ಕ್ಲಬ್ ಆಫ್ ಸೆಂಟ್ರಲ್ ಫೆ.28ರಂದು ರನ್ನೋತ್ಸವ ಕಾರ್ಯಕ್ರಮ ಆಯೋಜಿಸಿದೆ.   ಅಂದು ಬೆಳಗ್ಗೆ 5.30ಕ್ಕೆ ಸಿಪಿಎಡ್ ಮೈದಾನದಿಂದ ರನ್ನೋತ್ಸವ ಆರಂಭವಾಗಲಿದೆ. 21 ಕಿಮೀ, 10 ಕಿಮೀ ಮತ್ತು 5 ಕಿಮೀ ದೂರದ ಓಟ ಆಯೋಜಿಸಲಾಗಿದೆ. ರನ್ ಫಾರ್ ಹೋಪ್, ರನ್ ಫಾರ್ ಬೆಟರ್ ಹೆಲ್ತ್ ಎನ್ನುವ ಸಂದೇಷದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Read More »

ಐವರು ಮಹಾರಾಷ್ಟ್ರದ ಸಚಿವರಿಗೆ ಕೋವಿಡ್ ದೃಢ..!

ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಹರಡುತ್ತಿರುವ ನಡುವೆ ಮಹಾರಾಷ್ಟ್ರದ ಐವರು ಸಚಿವರಿಗೆ ಸೋಂಕು ದೃಢವಾಗಿರುವುದು ಈಗ ವರದಿಯಾಗಿದೆ. ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ Chhagan Bhujbal ಈಗ ಕೋವಿಡ್ ಪಾಸಿಟಿವ್ ದೃಢಗೊಂಡಿರುವವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. “ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ಎರಡು ಮೂರು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ, ಜಲ …

Read More »