Breaking News

Yearly Archives: 2020

ಮಂಗಳೂರು:ಶ್ರೀಕ್ಷೇತ್ರ ಧರ್ಮಸ್ಥಳದ ವಿಷು ಜಾತ್ರೆ ರದ್ದು.

ಮಂಗಳೂರು: ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಾರ್ಷಿಕ ವಿಷು ಮಾಸದ ಜಾತ್ರೆ ರದ್ದು ಮಾಡಲಾಗಿದೆ ಅಂತ ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೇವರ ಪ್ರಶ್ನೆ ಮೂಲಕ ನೋಡಿ ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ-ಕೋಲಗಳು, ಐದು ದಿನಗಳ ಕಾಲ ನಡೆಯಬೇಕಿದ್ದ ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ ವಿಹಾರ ಹಾಗೂ ಅವಭೃತ ವಿಹಾರವೂ ರದ್ದು ಮಾಡಲಾಗಿದೆ …

Read More »

ಕೊರೋನಾ ಭೀತಿ: ‘ನಮ್ಮ ಜೀವಕ್ಕೂ ಬೆಲೆ ಕೊಡಿ‘ ಎಂದು ಇಎಸ್‌ಐ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ

ಬೆಂಗಳೂರು(ಏ.11): ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ವೈರಸ್​​ ಪಾಸಿಟಿವ್​​ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಂದಿಗೆ ಕೊರೋನಾ ಬಂದಿರುವುದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗಾಗಿಯೇ ಬೆಂಗಳೂರನ್ನು ಕರ್ನಾಟಕದ ಕೊರೋನಾ ಹಾಟ್​​ಸ್ಪಾಟ್​​ ಎಂದು ಗುರುತಿಸಲಾಗಿದೆ. ಹೀಗಿರುವಾಗ ದಿನವಿಡೀ ಕೊವಿಡ್ 19 ಶಂಕಿತ ರೋಗಿಗಳಿಗೆ ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಇಎಸ್‌ಐ(ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್) ಆಸ್ಪತ್ರೆ ವೈದ್ಯರು ಮತ್ತು ನರ್ಸ್‌ಗಳು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ತಮಗೂ ಕೊರೋನಾ ಬರುವ …

Read More »

ದೆಹಲಿ ಸಭೆಯಲ್ಲಿ ಭಾಗಿಯಾದವರ ಕಣ್ಣಾಮುಚ್ಚಾಲೆ – ತಪ್ಪಿಸಿಕೊಂಡು ತಿರುಗುವವರನ್ನು ಜೈಲಿಗೆ ಕಳುಹಿಸಿ ; ಡಿಸಿಎಂ ಗೋವಿಂದ ಕಾರಜೋಳ

ಕಲಬುರ್ಗಿ(ಏ.11): ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದ ಕೆಲವರು ಮಾತ್ರ ಮಾಹಿತಿ ನೀಡಿದ್ದಾರೆ. ಆದರೆ ಮತ್ತೆ ಕೆಲವರು ತಪ್ಪಿಸಿಕೊಂಡು ಅಡ್ಡಾಡುತ್ತಿದ್ದಾರೆ. ಹಾಗೆ ತಪ್ಪಿಸಿಕೊಂಡು ಅಡ್ಡಾಡುವವರನ್ನು ಜೈಲಿಗೆ ಕಳುಹಿಸಿ ಎಂದು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು. ಕೊರೋನಾ ಹಿನ್ನೆಲೆಯಲ್ಲಿ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ, ಮಾಹಿತಿ ನೀಡದೇ ತಪ್ಪಿಸಿಕೊಂಡು ತಿರುಗುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಾಕ್ ಡೌನ್  ಜಾರಿಯಲ್ಲಿದ್ದರೂ ಅನಗತ್ಯವಾಗಿ ಅಡ್ಡಾಡುವವರನ್ನು ಹಿಡಿದು ಒಳಗೆ …

Read More »

ಕಾರವಾರ:ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೊರೊನಾ ತಡೆ ಬಗ್ಗೆ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಕ್ತವಾಗಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಣಯದಂತೆ ಜಿಲ್ಲೆಯಲ್ಲಿಯೂ ಸಾಮಾಜಿಕ ಅಂತರ …

Read More »

ರಾತ್ರೋರಾತ್ರಿ ಗುಂಪು ಸೇರಿದ ಯುವಕರು – ಪ್ರಶ್ನಿಸಿ ಗದರಿಸಿದ್ದಕ್ಕೆ ಕಾಲ್ಕಿತ್ತರು

ಹಾಸನ: ರಾತ್ರೋರಾತ್ರಿ ಗುಂಪು ಸೇರಿದ ಯುವಕರನ್ನು ಸ್ಥಳೀಯರು ಪ್ರಶ್ನೆ ಮಾಡಿ ಗದರಿಸಿ ವಾಪಸ್ ಕಳಿಸಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ನಗರದ ಮುಜಾವರ್ ಮೊಹಲ್ಲಾ ಬಡಾವಣೆಯಲ್ಲಿ ನಡೆದಿದೆ. ಕೊರೊನಾ ಭಯದಿಂದ ದೇಶ ಲಾಕ್‍ಡೌನ್ ಆಗಿದೆ. ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಮನವಿ ಮಾಡಿಕೊಳ್ಳುತ್ತದೆ. ಆದರೆ ಅರಸೀಕೆರೆ ನಗರದಲ್ಲಿ 20 ಜನ ಯುವಕರು ಒಟ್ಟಿಗೆ ಸೇರಿಕೊಂಡಿದ್ದರು. ಇವರನ್ನು ಪ್ರಶ್ನಿಸಿದರೆ ನಾವು ನಮಾಜ್ ಮಾಡಲು ಬಂದಿದ್ದೇವೆ. ನಮಗೆ ಕೊರೊನಾ …

Read More »

“ಸಿಎಂ ರಿಲೀಫ್ ಫಂಡ್‍ಗೆ ಒಟ್ಟು 1.80 ಕೋಟಿ ರೂ. ಜಮೆ” ಸಚಿವ ಸುರೇಶ್ ಕುಮಾರ್

ರಾಜ್ಯದಲ್ಲಿ 215 ಜನರಿಗೆ ಕೊರೊನಾ- 39 ಜನ ಡಿಸ್ಚಾರ್ಜ್ – ಬೆಂಗ್ಳೂರಿನಲ್ಲಿ ಇಂದಿನಿಂದ ಒಂದು ತಿಂಗ್ಳು ಕಠಿಣ ಕ್ರಮ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆ ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಈವರೆಗೂ 1.80 ಕೋಟಿ ರೂ. ಜಮೆಯಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 215ಕ್ಕೆ …

Read More »

ಹಿಂಬಾಗಿಲಿನಿಂದ ಮದ್ಯ ಮಾರಾಟಕ್ಕೆ ಮುಂದಾದ ಮಾಲೀಕ ಅರೆಸ್ಟ್

ರಾಯಚೂರು: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ಹಿನ್ನೆಲೆ ಇಡೀ ದೇಶಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆ ಬಾರ್ ಗಳ ಬೀಗಕ್ಕೆ ಸೀಲ್ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಲಿಂಗಸುಗೂರಿನ ಹಟ್ಟಿಯಲ್ಲಿ ಬಾರ್ ಮಾಲೀಕನೋರ್ವ ತನ್ನ ಅಂಗಡಿಯಲ್ಲಿನ ಮದ್ಯವನ್ನು ಹಿಂಬಾಗಿಲಿನಿಂದ ತಾನೇ ಕದ್ದು ಮಾರಾಟ ಮಾಡಲು ಮುಂದಾದ ವೇಳೆ ಸಿಕ್ಕಿಬಿದ್ದಿದ್ದಾನೆ ಇಲ್ಲಿನ ಕೋಹಿನೂರ್ ಬಾರ್ ಅಂಡ ರೆಸ್ಟೋರೆಂಟ್ ನಲ್ಲಿ ಮದ್ಯ ಹಾಗೂ ನಗದು ಹಣವನ್ನು ತೆಗೆಯುತ್ತಿದ್ದ ವೇಳೆ …

Read More »

ದ್ರಾಕ್ಷಿ ಹಣ್ಣು ವಿತರಿಸಿ ಕೊರೋನಾ ಜಾಗೃತಿ ಮೂಡಿಸಿದ ಕರುನಾಡು ಸೈನಿಕರು

  ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಸರಕಾರಿ ಆಸ್ಪತ್ರೆಯ ಸೇವಾ ಸಿಬ್ಬಂದಿಗಳಿಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮತ್ತು ಶಿವಾಪೂರ, ಹಳ್ಳೂರ ಗ್ರಾಮದ ಬಡ ಕುಟುಂಬ ಮತ್ತು ಜನತಾ ಪ್ಲಾಟದ ಗುಡಿಸಲು ನಿವಾಸಿಗಳಿಗೆ ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಮತ್ತು ಅದ್ಯಕ್ಷರಾದ ಸವಿತಾ ತುಕ್ಕನ್ನವರ ಅವರು ಮನೆ ಮನೆಗೆ ತೆರಳಿ 4ಕ್ವಿಂಟಲ್ ದ್ರಾಕ್ಷಿ ಹಣ್ಣು ಉಚಿತವಾಗಿ ವಿತರಿಸಿ ಮಾನವೀಯತೆ …

Read More »

ಹುಬ್ಬಳ್ಳಿ:ನೈರುತ್ಯ ರೈಲ್ವೆಯಲ್ಲಿ 80,000 ಬೆಡ್‍ಗಳ 312 ಐಸೋಲೇಷನ್ ಬೋಗಿಗಳ ನಿರ್ಮಾಣ

ಹುಬ್ಬಳ್ಳಿ , ಏ.11- ರೈಲ್ವೆ ಇಲಾಖೆಯ 10 ದಿನದಲ್ಲಿ 80,000 ಬೆಡ್‍ಗಳ ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈರುತ್ಯ ರೈಲ್ವೆ ವತಿಯಿಂದ 312 ಐಸೊಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು. ಹುಬ್ಬಳ್ಳಿಯ ರೈಲ್ವೆ ವರ್ಕಶಾಪ್‍ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ 20,000 …

Read More »

ಹುಬ್ಬಳ್ಳಿಯ ಕಮರಿಪೇಟೆ ಠಾಣೆಯ ಐವರು ಪೊಲೀಸರು ಹೋಂಕ್ವಾರಂಟೈನ್‍ಗೆ

ಹುಬ್ಬಳ್ಳಿ, ಏ.11- ಪೊಲೀಸ್ ಇಲಾಖೆಗೂ ಕೊರೊನಾ ವೈರಸ್ ಬಿಸಿ ತಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕಮರಿಪೇಟೆ ಪೊಲೀಸ್ ಠಾಣೆಯ ಐದು ಜನ ಪೊಲೀಸರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ. ಐದು ಜನ ಪೊಲೀಸ್ ಸಿಬ್ಬಂದಿ ಕೈಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸೀಲ್ ಹಾಕಿ ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಹುಬ್ಬಳ್ಳಿಯ ಮುಲ್ಲಾ ಓಣಿಯ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಕಮರಿಪೇಟೆ ಠಾಣಾ ವ್ಯಾಪ್ತಿಯಲ್ಲಿರುವ ಮುಲ್ಲಾ ಓಣಿಯಲ್ಲಿರುವ …

Read More »