ಬೆಂಗಳೂರು, ಏ.22- ಲಾಕ್‍ಡೌನ್ ಜಾರಿಯಾದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 816 ಕೋಟಿ ಲಾಸ್ ಆಗಿದೆ. ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುವ ಉದ್ದೇಶದಿಂದ ಸರ್ಕಾರ ಲಾಕ್‍ಡೌನ್ ಜಾರಿಗೆ ತಂದ ನಂತರ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ರಾಜ್ಯದಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಲ್ಲಿಯವರೆಗೆ ಸಂಸ್ಥೆಗೆ 816.23 ಕೋಟಿ ನಷ್ಟ ಸಂಭವಿಸಿದೆ ಎಂದು ಕೆಎಸ್‍ಆರ್‍ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 314.89, ವಾಣಿಜ್ಯ …
Read More »Yearly Archives: 2020
ಆಹಾರದ ಕಿಟ್ ಹಂಚಿಕೆಯಲ್ಲೂ ತಾರತಮ್ಯ : ಸಿದ್ದರಾಮಯ್ಯ ಆರೋಪ
ಬೆಂಗಳೂರು, ಏ.22- ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ, ಕಾರ್ಮಿಕರಿಗೆ ಹಂಚುವ ಆಹಾರದ ಪೊಟ್ಟಣದಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ಅವರು ಬಡವರಿಗೆ ಹಂಚಲು ತಯಾರಿಸುತ್ತಿರುವ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಆದಾಗಿನಿಂದ ಪ್ರತಿ ದಿನ 48 ಸಾವಿರ ನಿರ್ಗತಿಕ ಕಾರ್ಮಿಕ ವರ್ಗಕ್ಕೆ ಆಹಾರ ಮತ್ತು ದಿನ ನಿತ್ಯ ಆಹಾರ …
Read More »ಪೆನ್ಷನ್ ಹಣ ಸಿಗದೆ ಸಂಕಷ್ಟದಲ್ಲಿ ವಿಕಲಚೇತನೆ – ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಹಾಸನ: ಸರ್ಕಾರ ವಿಕಲಚೇತನರಿಗೆ ನೀಡುತ್ತಿದ್ದ 1400 ರೂಪಾಯಿ ಪೆನ್ಷನ್ ಹಣ 9 ತಿಂಗಳುಗಳಿಂದ ಬಾರದ ಕಾರಣ ಎರಡು ಕಾಲಿನಲ್ಲಿ ಸ್ವಾಧೀನವಿಲ್ಲದ ಮಹಿಳೆಯೊಬ್ಬಳು ಓರ್ವ ಮಗನೊಂದಿಗೆ ಸರಿಯಾಗಿ ಊಟವಿಲ್ಲದೆ ಸಂಕಟ ಪಡುತ್ತಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ವಿಕಲಚೇತನೆ ಭಾಗ್ಯಲಕ್ಷ್ಮಿ ತನ್ನ ಮಗನೊಂದಿಗೆ ಅರಸೀಕೆರೆ ಪಟ್ಟಣದಲ್ಲಿ ವಾಸವಿದ್ದು ಹೂಕಟ್ಟಿ ಜೀವನ ಸಾಗಿಸುತ್ತಿದ್ದರು. ಕೊರೊನಾ ಲಾಕ್‍ಡೌನ್ ಆದ ನಂತರ ಹೂ ಕಟ್ಟುವ ಕಾಯಕಕ್ಕೂ ಕುತ್ತು ಬಿದ್ದಿದೆ. ಪರಿಣಾಮ …
Read More »ಧಾರವಾಡ ಜಿಲ್ಲೆಯಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭ…..
ಧಾರವಾಡ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು(ನರೇಗಾ) ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭವಾಗವೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ದೇವಲಿಂಗಿಕೊಪ್ಪದ ಕೆರೆಗೆ ನೀರಿನ ಕಾಲುವೆ …
Read More »ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು……..
ನವದೆಹಲಿ: ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಲಿದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಇಲ್ಲಿಯವರೆಗಿದ್ದ 6 ತಿಂಗಳ ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಏರಿಸಿದೆ. ದೇಶದ ಹಲವೆಡೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಈ ವಾರದಲ್ಲಿ ಬೆಂಗಳೂರಿನ ಪಾದರಾಯನಪುರ, ಮೈಸೂರಿನಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. …
Read More »ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ? – ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಗುರುವಾರದಿಂದ ಭಾಗಶಃ ಸಡಿಲಗೊಳ್ಳಲಿದೆ. ನಾಳೆಯಿಂದ ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ. ಏನಿರುತ್ತೆ?: ಸೇಫ್ ಝೋನ್‍ನಲ್ಲಿ ಕಟ್ಟಡ ನಿರ್ಮಾಣ, …
Read More »ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ
ಬೆಳಗಾವಿ(ಚಿಕ್ಕೋಡಿ): ಲಾಕ್‍ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ. ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು. ಹುಕ್ಕೇರಿ …
Read More »ಪಾಂಡವಪುರ ಪುರಸಭೆಯಿಂದ ಕರೊನಾ ಶವಯಾತ್ರೆ
ಮಂಡ್ಯ ಜಿಲ್ಲೆ ಪಾಂಡವಪುರ: ಮಹಾಮಾರಿ ಕರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಇಲ್ಲಿನ ಪುರಸಭೆ ಅಧಿಕಾರಿಗಳು ಬುಧವಾರ ಕರೊನಾ ಶವಯಾತ್ರೆ ನಡೆಸಿ ಸಾರ್ವಜನಿಕ ರಲ್ಲಿನ ಭಯ ಹೋಗಲಾಡಿಸುವ ಪ್ರಯತ್ನ ನಡೆಸಿದರು. ಪುರಸಭೆ ಕಚೇರಿ ಆವರಣದಿಂದ ಬೆಳಿಗ್ಗೆ 12 ಗಂಟೆಗೆ ಪ್ರಾರಂಭವಾದ ಶವಯಾತ್ರೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿತು. ಕರೊನಾ ಸೋಂಕು ತಡೆಗಟ್ಟಲು ಯಾರೂ ಮನೆಯಿಂದ ಹೊರಗೆ ಬರಬಾರದು. ಬಂದರೆ ಸೋಂಕು ತಗಲುವ ಸಾಧ್ಯತೆ ಗಳಿವೆ …
Read More »ಕಾರಿನಲ್ಲಿ ಮದ್ಯ ಸಾಗಣೆ ಮೂವರ ಬಂಧನ
ಮಂಡ್ಯ ಜಿಲ್ಲೆ ನಾಗಮಂಗಲ: ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ನಾಗಮಂಗಲ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ 5 ಬಾಕ್ಸ್ ಬಿಯರ್ ಬಾಟಲ್ ಪತ್ತೆಯಾಗಿವೆ ಕೆ.ಎ-53 ಎಂಬಿ 6899 ನಂಬರಿನ ಸ್ಟಿಫ್ಟ್ ಕಾರಿನಲ್ಲಿ ಮಧ್ಯ ಪತ್ತೆಯಾಗಿದ್ದು. ಅಕ್ರಮವಾಗಿ ಮಧ್ಯವನ್ನು ಸಾಗಿಸುತ್ತಿದ್ದ ಚನ್ನಪಟ್ಟಣ ತಾಲ್ಲೂಕಿನ ಮಾಕಳ್ಳ್ಳಿ ಗ್ರಾಮದ ಹರೀಶ್ ಗೌಡ, ಸಂದೀಪ್, ಹಾಗೂ ಸೋಮಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗಮಂಗಲ …
Read More »ಇಂದು ಭೂಮಿ ದಿನ : ಕೊರೊನಾ ಹೋರಾಟಗಾರರಿಗೆ ಪ್ರಧಾನಿ ಕೃತಜ್ಞತೆ
ನವದೆಹಲಿ, ಏ.22- ಇಂದು ಭೂಮಿ ದಿನ. ಈ ಸಂದರ್ಭದಲ್ಲಿ ಭೂಮಿ ತಾಯಿಯ ರಕ್ಷಣೆಗಾಗಿ ನಾವೆಲ್ಲರೂ ಪಣ ತೊಟ್ಟು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಭೂಮಂಡಲವು ಹೆಚ್ಚು ಶುದ್ಧವಾಗಿ, ಆರೋಗ್ಯಕರವಾಗಿ ಮತ್ತು ಮತ್ತಷ್ಟು ಸಮೃದ್ಧವಾಗಿರಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಇದಕ್ಕಾಗಿ ದೃಢಸಂಕಲ್ಪ ಮಾಡೋಣ ಎಂದು ಮೋದಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಇಂಟರ್‍ನ್ಯಾಷನಲ್ ಅರ್ಥ್ …
Read More »