ಗೋಕಾಕ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 75 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಮತ್ತು ರಾಯಬಾಗ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ಇತರರು ಇದ್ದರು
Read More »Yearly Archives: 2020
ಪ್ರಚಾರಕ್ಕಾಗಿ ಅಲ್ಲ,ಮಾನವೀಯ ಸೇವೆಗೆ ಮುಂದಾದ ಮೇದಾರ ಸಮಾಜದ ಹಿತೈಸಿ ಪಕ್ಕಿರಪ್ಪ ಮುರಗೋಡ..!
ಬೆಳಗಾವಿ : ಪ್ರಚಾರಕ್ಕಾಗಿ ಆಸೆಪಡದೆ ಮೇದಾರ ಸಮಾಜದ ಶ್ರೇಯೊಭಿವೃದ್ದಿಗಾಗಿ ಸದಾಕಾಲ ತಮ್ಮ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಾ ಮೇದಾರ ಸಮಾಜದ ಏಳಿಗೆಗೆ ಸದಾಕಾಲ ಶ್ರಮಿಸುತ್ತಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಮಾಜದ ಹಿತೈಸಿಗಳಾದ ಪಕ್ಕಿರಪ್ಪ ಮುರಗೋಡ ಅವರು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ವಾಸಿಸುವ ಸುಮಾರು100 ಕ್ಕೂ ಹೆಚ್ಚು ಮೇದಾರ ಸಮಾಜದ ಕುಲಬಾಂಧವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಕುಲ ಕಸುಬು ಹಾಗೂ …
Read More »ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಬಡ ಕುಟುಂಬದವರಿಗೆ ದಿನ ಬಳಕೆಗೆ ಬೇಕಾದ ದಿನಸಿ ಸಾಮಗ್ರಿಗಳ ವಿತರಣೆ
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕುಟುರನಟ್ಟಿ ಗ್ರಾಮದಲ್ಲಿ 300 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬೇಕಾದ ಆಹಾರ ಕಿಟ್ ಗಳನ್ನು ಅಖಿಲ ಕರ್ನಾಟಕ ವಿಶ್ವ ಕರ್ಮ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಸುರೇಶ ಪತ್ತಾರ ರವರು ವಿತರಿದರು. ಮಾತನಾಡಿ ನಮ್ಮ ಸಮಿತಿಯಿಂದ ಪ್ರತಿ ಹಳ್ಳಿ ಹಳ್ಳಿಗೂ ವಿಷಯ ತಿಳಿದು ಕೊಂಡು ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳು ಪೂರೈಸಲು ಮುಂದಾಗಿದ್ದು. ಕುಟುರನಟ್ಟಿ ಗ್ರಾಮಸ್ಥರಿಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು ದೊರೆತಾಯಿಲ್ಲ.ಆದುದರಿಂದ ದಯಮಾಡಿ ಈ …
Read More »KSRTC ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ
ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಜನರ ಬಳಿ ಹಣ ಇಲ್ಲದಂತಾಗಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ. ಹೀಗಾಗಿ ಕೆಎಸ್‍ಆರ್ ಟಿಸಿ ತನ್ನ ಬಾಡಿಗೆದಾರರು ಹಾಗೂ ಜಾಹೀರಾತುದಾರರಿಗೆ ವಿನಾಯಿತಿ ನೀಡಿ ಸುತ್ತೋಲೆ ಹೊರಡಿಸಿದೆ. ಲಾಕ್‍ಡೌನ್ ಆದಾಗಿನಿಂದ ಎಲ್ಲ ಮಳಿಗೆಗಳು ಬಂದ್ ಆಗಿದ್ದು, ವ್ಯಾಪಾರವಿಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿಯಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್‍ಗಳು ಹಾಗೂ ಜಾಹಿರಾತುದಾರರಿಗೆ ವಿನಾಯಿತಿ ನೀಡಲಾಗಿದೆ. ಲಾಕ್‍ಡೌನ್ ಆರಂಭವಾದ ದಿನದಿಂದ ಮುಗಿಯುವವರೆಗೂ ಬಾಡಿಗೆ ಕಟ್ಟುವುದರಿಂದ ವಿನಾಯಿತಿ ನೀಡಲಾಗಿದೆ. ಮಾನವೀಯತೆ ದೃಷ್ಟಿಯಿಂದ …
Read More »ರೈತರ ಸಂಕಷ್ಟಕ್ಕಿಡಾಗಲು ಅಧಿಕಾರಿಗಳೇ ಕಾರಣ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ
ಚಿಕ್ಕೋಡಿ : ತಾಲೂಕಿನ ರೈತರು ಯಾವ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆಂಬ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿಲ್ಲ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೆ ತಯಾರಿಸಿಲ್ಲ. ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಎಸ್.ಹಿಂಡಿಹೊಳಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವೃ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಕೊರೊನಾ ಮುಂಜಾಗೃತ ಕ್ರಮಗಳ ಕುರಿತಾದ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …
Read More »ಹಾವೇರಿ: ನಕಲಿ ಬಿಡಿ ಬೀಜ ದಾಸ್ತಾನು ಮಳಿಗೆ ಮೇಲೆ ಕೃಷಿ ವಿಷಕ್ಷಣಾ ತಂಡ ದಾಳಿ …….
ಹಾವೇರಿ: ನಕಲಿ ಬಿಡಿ ಬೀಜ ದಾಸ್ತಾನು ಮಳಿಗೆ ಮೇಲೆ ಕೃಷಿ ವಿಷಕ್ಷಣಾ ತಂಡ ದಾಳಿ ನಡೆಸಿ ಸುಮಾರು 6 ಕೋಟಿ ರೂ. ಮೌಲ್ಯದ ಬಿಡಿ ಬೀಜಗಳನ್ನು ವಶ ಪಡೆದುಕೊಂಡಿದೆ. ಗುರುವಾರ ರಾತ್ರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ರಾಷ್ಟ್ರೀ ಹೆದ್ದಾರಿಗೆ ಹೊಂದಿಕೊಂಡಿರುವ ವಕ್ರ ತುಂಡ ಕೋಲ್ಡ್ ಸ್ಟೋರೇಜ್ ಮೇಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ಬ್ಯಾಡಗಿ ಸಿಪಿಐ ಭಾಗ್ಯವತಿ ನೇತೃತ್ವದ ಜಂಟಿ ತಂಡಗಳ ದಾಳಿ ನಡೆಸಲಾಗಿತ್ತು. ಮುಂಗಾರು ಬಿತ್ತನೆಗೆ ಸಿದ್ಧವಾಗಿರುವ …
Read More »ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ
ಬೆಳಗಾವಿ – ಇಂದು ಕುಡಚಿಯ ಕೊರೋನಾ ಸೋಂಕಿತನೋರ್ವನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 4ಕ್ಕೇರಿದೆ. ಬೆಳಗಾವಿಯಲ್ಲಿ ಈವರೆಗೆ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದೆ ಸಾವಿಗೀಡಾಗಿದ್ದಾಳೆ. ಈವರೆಗೆ ಒಟ್ಟೂ 2697 ಜನರ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. ಇವರಲ್ಲಿ 681 ಜನರು ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. 41 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 865 ಜನರು 14 ದಿನದ ಮತ್ತು 1110 ಜನರು 28 ದಿನದ …
Read More »ಕೊರೊನಾ ಕೋಲಾಹಲ- ಕೆಪಿಎಸ್‍ಸಿ ಪರೀಕ್ಷೆಗಳು ಮುಂದೂಡಿಕೆ……….
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯಬೇಕಿದ್ದ ವಿವಿಧ ವಿಭಾಗಗಳ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ. ಕೊರೊನಾ ಅವಾಂತರದಿಂದಾಗಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮೇ, ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಾಲ್ಕು ವಿಭಾಗಗಳ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಲಾಕ್‍ಡೌನ್ ಮುಗಿದ ಬಳಿಕ ಪರೀಕ್ಷಾ ದಿನಾಂಕ ನಿಗದಿ ಮಾಡುವುದಾಗಿ ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಿದಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಅನಗತ್ಯವಾಗಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಇವತ್ತು ಒಂದೇ …
Read More »ಆಸ್ಪತ್ರೆಗೆ ಕರೆದೊಯ್ದಿದ್ದ ಪೇದೆಯ ಹೆಸರನ್ನೇ ಮಗುವಿಗಿಟ್ಟ ತಾಯಿ………
ನವದೆಹಲಿ: ಲಾಕ್‍ಡೌನ್ ಸಮಯದಲ್ಲಿ ದೆಹಲಿ ಪೊಲೀಸರು ಅನೇಕ ಮಾನವೀಯ ಕೆಲಸಗಳಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶದ ವಿವಿಧೆಡೆ ಪೊಲೀಸರು ಅನೇಕ ಬಡವರ ಹಸಿವು ನೀಗಿಸಿದ್ದಾರೆ, ಮಹಿಳೆಯರು, ರೋಗಿಗಳಿಗೆ ಅಗತ್ಯ ವಸ್ತು, ಔಷಧಿ ತಲುಪಿಸುವ ಕೆಲಸ ಮಾಡಿದ್ದಾರೆ. ಅಂಥೆ ಲಾಕ್‍ಡೌನ್ ಸಮಯದಲ್ಲಿ ದೆಹಲಿಯ ಪೊಲೀಸ್ ಪೇದೆ ದಯಾವೀರ್ ಸಿಂಗ್ ಅವರು ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ದಯಾವೀರ್ ಸಿಂಗ್ …
Read More »ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ……….
ಧಾರವಾಡ: ಲಾಕ್‍ಡೌನ್ ಹಿನ್ನೆಲೆ ಮದ್ಯ ಸಿಗದಕ್ಕೆ ಕಂಗಾಲಾದ ಮದ್ಯವ್ಯಸನಿಯೊಬ್ಬ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಗಾಂಧಿಚೌಕ್ ಬಾಲಾಜಿ ಓಣಿ ನಿವಾಸಿ ದೀಪಕ್ ಶಿಂಧೆ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದು, ಕುಡಿಯಲು ಮದ್ಯ ಸಿಗದಕ್ಕೆ ತನ್ನ ಕೈಗೆ ಸಿಕ್ಕ ಸ್ಯಾನಿಟೈಜರ್ ಗಳನ್ನೇ ಕುಡಿದು ಬಿಟ್ಟಿದ್ದಾನೆ. ಸ್ಯಾನಿಟೈಜರ್ ಕುಡಿದ ತಕ್ಷಣವೇ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶಹರ ಠಾಣೆ …
Read More »