Breaking News

Yearly Archives: 2020

ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರ ನಿಧನ

ಮುಂಬೈ, ಡಿ.21- ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರು ಚಿಕಿತ್ಸೆ ಫಲಿಸದೆ ಥಾಣೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶಾಲಾ ಜೀವನದಲ್ಲೇ ಕ್ರಿಕೆಟ್‍ನತ್ತ ಒಲವು ತೋರಿದ್ದ ವಿಜಯ್ ಶಿರ್ಕೆ ಅವರು ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‍ಗೆ ಆಪ್ತ ಗೆಳೆಯರಾಗಿದ್ದರಲ್ಲದೆ ಸಚಿನ್ ಹಾಗೂ ವಿನೋದ್ ಕಾಂಬ್ಳೆ ಅವರೊಂದಿಗೆ ಹಲವು ಪಂದ್ಯಗಳಲ್ಲಿ ಇನ್ನಿಂಗ್ಸ್ ಕಟ್ಟಿದ್ದರು. ಮುಂಬೈನ ಕಲ್ಯಾಣ್ ಪ್ರಾಂತ್ಯದಲ್ಲಿ ಜನಿಸಿದ ವಿಜಯ್ ಶಿರ್ಕೆ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‍ನ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುವ ಮೂಲಕ …

Read More »

ನಾಗೇಶ್​ ಅಬಕಾರಿ ಸಚಿವರಾದ ನಂತರ ಎಲ್ಲಾ ವಿಭಾಗದಲ್ಲೂ ಲಂಚ ಅಧಿಕವಾಗಿದೆ,

ಕೋಲಾರ; ಬಾರ್ ಗಳ ಲೈಸೆನ್ಸ್ ನವೀಕರಣ ವಿಚಾರದಲ್ಲಿ ಮುಳಬಾಗಿಲು ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಳಬಾಗಿಲು ಶಾಸಕರಾಗಿರೋ ಸಚಿವ ಹೆಚ್​. ನಾಗೇಶ್ ಅವರ ಭ್ರಷ್ಟಾಚಾರ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೆಚ್​. ನಾಗೇಶ್​ ಸಚಿವರಾದ ನಂತರ ಎಲ್ಲಾ ವಿಭಾಗದಲ್ಲೂ ಲಂಚ ಅಧಿಕವಾಗಿದೆ, ಕಮಿಷನ್ ಕಾಮನ್ ಆಗಿದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಕಿಡಿಕಾರಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ 45 ಮಂದಿ …

Read More »

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬುರಗಿ ಸಹ ಲೋಕಲ್ ಫೈಟ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತೆ ತೀವ್ರ ಭದ್ರತೆ ಕೈಗೊಂಡಿದ್ದಾರೆ. 264 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ

ಬೆಳಗಾವಿ(ಡಿಸೆಂಬರ್​. 21): ಅತ್ಯಂತ ಪ್ರತಿಷ್ಠ ಚುನಾವಣೆ ಆಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇದೀಗ ಎಲ್ಲಾ ರೀತಿಯ ಸಿದ್ದತೆ ನಡೆದಿದೆ. ಬೆಳಗಾವಿ ಜಿಲ್ಲೆಯ 7 ತಾಲೂಕಿನಲ್ಲಿ ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇಂದು ಮತ ಪೆಟ್ಟೆಗೆ ಸಮೇತ ಅಧಿಕಾರಿಗಳ ಮತದಾನ ಕೇಂದ್ರಕ್ಕೆ ತೆರಳಿದರು. ಕೊರೋನಾ ವೈರಸ್ ಭೀತಿಯ ನಡುವೆ ಪ್ರತಿಷ್ಠಿತ ಲೋಕಲ್ ಫೈಟ್ ನಡೆಯಲಿದ್ದು, ಗ್ರಾಮೀಣ ಪ್ರದೇಶ ಮತದಾರರು ನಾಳೆ ತಮ್ಮ ಹಚ್ಚು ಚಲಾವಣೆ ಮಾಡಲಿದ್ದಾರೆ. ಬೆಳಗಾವಿ …

Read More »

ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ.

(ಡಿಸೆಂಬರ್​.21): ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ. ಅಂತಹ ಅಳಿಸಲಾಗದ ಶಾಯಿಯನ್ನು ಜಗತ್ತಿನ ಹಲವು ರಾಷ್ಟ್ರಗಳಿಗೆ ಸರಬರಾಜು ಮಾಡುವುದು ನಮ್ಮ ಮೈಸೂರಿನ ಹೆಚ್ಚುಗಾರಿಕೆ. ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗೂ ಇಂಕ್ ಸರಬರಾಜು ಮಾಡಿದ್ದು, 1ನೇ ಹಂತದ ಚುನಾವಣೆಗೆ ಇಂಕ್ ತಲುಪಿಸಿದ್ರೆ, 2ನೇ ಹಂತದ ಚುನಾವಣೆಗೆ ಪ್ಯಾಕಿಂಗ್ ಕಾರ್ಯವು ಮುಗಿದಿದೆ. …

Read More »

ವಿಧಾನಪರಿಷತ್​ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ಬಂಗಲೆ ಮತ್ತು ಕಾರನ್ನು ವಾಪಸ್​ ಮಾಡಿದ್ದಾರೆ.

ಬೆಂಗಳೂರು (ಡಿ. 21): ವಿಧಾನ ಪರಿಷತ್​ನಲ್ಲಿ ಕಳೆದ ವಾರ ನಡೆದ ಕೋಲಾಹಲ ಬೆನ್ನಲ್ಲೇ ಇದೀಗ ವಿಧಾನಪರಿಷತ್​ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ಬಂಗಲೆ ಮತ್ತು ಕಾರನ್ನು ವಾಪಸ್​ ಮಾಡಿದ್ದಾರೆ. ಸರ್ಕಾರಿ ಮನೆ ತೊರೆದಿರುವ ಅವರು ತಮ್ಮ ಸ್ವ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲದೇ ತಮ್ಮ ಮನೆಯ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಂತೆ ಸಭಾಪತಿಯವರೇ ಲೋಕೋಪಯೋಗಿ ಇಲಾಖೆಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ. ಪರಿಷತ್ ಸಭಾಪತಿ​ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದ ಪ್ರತಾಪ್​ …

Read More »

ಕಾಂಗ್ರೆಸ್ ಪಕ್ಷವು ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ

ಬೆಂಗಳೂರು,ಡಿ.21- ಕಾಂಗ್ರೆಸ್ ಪಕ್ಷವು ಜೆಡಿಎಸ್ ಕತ್ತು ಹಿಸುಕುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಆ ಕಾರಣಕ್ಕಾಗಿ ಅನಿವಾರ್ಯವಾಗಿ ಕೆಲವು ನಿರ್ಧಾರಗಳನ್ನು ಮಾಡಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್‍ನ ಕೆಲವು ನಾಯಕರು ಹಾಗೂ ಜೆಡಿಎಸ್‍ನಿಂದ ಹೋದವರೆ ಈಗ ಜೆಡಿಎಸ್ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ನಿಜವಾದ ರಾಜಕಾರಣ ಶುರುವಾಗುವುದು 2023ಕ್ಕೆ ಇದುವರೆಗಿನ ರಾಜಕಾರಣ ತಾತ್ಕಾಲಿಕವಾಗಿ ಮಾಡಿದ್ದು, 2023ಕ್ಕೆ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಸುದ್ದಿಗಾರರಿಗೆ …

Read More »

ಪೋಷಕರು ನಡೆಸುತ್ತಿರುವ ಪ್ರತಿಭಟನೆಗೆ ಉತ್ತರ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪೋಷಕರ ವಿರುದ್ಧವೇ ಗೂಬೆ ಕೂರಿಸಿದ್ದಾರೆ.

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ವಿರೋಧಿಸಿ ಪೋಷಕರು ನಡೆಸುತ್ತಿರುವ ಪ್ರತಿಭಟನೆಗೆ ಉತ್ತರ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪೋಷಕರ ವಿರುದ್ಧವೇ ಗೂಬೆ ಕೂರಿಸಿದ್ದಾರೆ. ಕೊರೋನಾದಿಂದಾಗಿ ಎಲ್ಲಾ ಕ್ಷೇತ್ರಗಳು ಆಎರ್ಹಿಕವಾಗಿ ಸಂಕಷ್ಟಕ್ಕೀಡಾಗಿವೆ. ಪೋಷಕರೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಆದರೆ ಪೋಷಕರು ಆರ್ಥಿಕವಾಗಿ ಶಕ್ತಿವಂತರಾಗಿದ್ದಾಗ ಇಂತದ್ದೇ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳು ಓದಬೇಕು ಎಂದು ಹಠಕ್ಕೆ ಬಿದ್ದು, ರಾತ್ರಿಯಿಡಿ ಶಾಲೆಗಳ ಮುಂದೆ ನಿಂತು ಅರ್ಜಿ ಪಡೆದರು. ತಮ್ಮ ಮಕ್ಕಳಿಗೆ ಅದೇ ಶಾಲೆಯಲ್ಲಿ …

Read More »

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ

ದಾವಣಗೆರೆ: ಕಚೇರಿಯಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಎಂ.ಬಿ.ಶಿವಕುಮಾರ್ (46) ಆತ್ಮಹತ್ಯೆ ಮಾಡಿಕೊಂಡಿರುವ ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕ. ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿರುವ ಅಧೀಕ್ಷಕರ ಕಚೇರಿಯಲ್ಲಿ ಶಿವಕುಮಾರ್ ಅವರ ಶವ ನೇಣು ಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಗಾಂಧೀನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಪ್ರತಿಭಟನಾ ನಿರತರು ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ

ನವದೆಹಲಿ,ಡಿ.21-ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾ ನಿರತರು ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ಹರಿಯಾಣ, ಉತ್ತರಪ್ರದೇಶ ಗಡಿ ಭಾಗದಲ್ಲಿ ಕೊರೆಯುವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ರೈತರು ಒಂದೊಂದು ತಂಡದಂತೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ 11 ಮಂದಿ ರೈತ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ …

Read More »

ಬಿಜೆಪಿ-ಜೆಡಿಎಸ್‌ ವಿಲೀನ ವಿಚಾರ:`ಸ್ವಯಂ ಆತ್ಮಹತ್ಯೆ’ ಮಾಡಿಕೊಳ್ಳುವ ಸನ್ನಿವೇಶ ಬಂದಿಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರ ಪಕ್ಷ ಜೆಡಿಎಸ್ ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಜನರ ಗಟ್ಟಿ ಧ್ವನಿಯಾದ ಜೆಡಿಎಸ್ ಅಂತಹ ಅವಿವೇಕತನ ಪ್ರದರ್ಶನ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ. ವಿಲೀನದಂಥ ಕಪೋಲಕಲ್ಪಿತ ಸುದ್ದಿಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ನಾನು ಬದುಕಿರುವ ತನಕ ಇದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. `ರೈತರ ಸಾಲಮನ್ನಾ’, `ಬಡವರ ಬಂಧು’ ಇಂತಹ ಕಾರ್ಯಕ್ರಮಗಳನ್ನು ನೀಡಿದ, ಶಿಸ್ತುಬದ್ಧ …

Read More »