ಬೆಂಗಳೂರು: ಇಂದು ರಾಜ್ಯದಲ್ಲಿ 1,704 ಮಂದಿಗೆ ಸೋಂಕು ತಗುಲಿದ್ದು, 1,537 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 8,73,046ಕ್ಕೆ ಏರಿಕೆಯಾಗಿದೆ. ಈ ಪೈಕಿ 8,36,505 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,868 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,654 ಮಂದಿ ಸೋಂಕಿಗೆ ಮೃತಪಟ್ಟಿದ್ದು, 470 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 20,399 ಆಂಟಿಜನ್ ಟೆಸ್ಟ್, 1,06,505 ಆರ್‍ಟಿ …
Read More »Yearly Archives: 2020
ಪೊಲೀಸ್ ಪೇದೆಗಳ ನೇಮಕಾತಿಯ ಅರ್ಹತಾ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯೊರ್ವ ಪತ್ತೆಯಾದ ಪ್ರಕರಣ ಬೆಳಕಿಗೆ
ಹುಬ್ಬಳ್ಳಿ: ಪೊಲೀಸ್ ಪೇದೆಗಳ ನೇಮಕಾತಿಯ ಅರ್ಹತಾ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯೊರ್ವ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ನಕಲಿ ಅಭ್ಯರ್ಥಿ ಪರವಾಗಿ ಅಸಲಿ ಪೊಲೀಸ್ ಪೇದೆ ಪರೀಕ್ಷೆ ಬರೆಯುವ ವೇಳೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. ಹುಬ್ಬಳ್ಳಿ ಧಾರವಾಡದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪೊಲೀಸ್ ಪೇದೆಯೋರ್ವ ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ನಕಲಿ ಅಭ್ಯರ್ಥಿ ಪರವಾಗಿ ಪರೀಕ್ಷೆ ಬರೆಯುತ್ತಿದ್ದ …
Read More »ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಚ್ಚ ಹೊಸ ಕಾರನ್ನು ಕ್ಷಣಾರ್ಧದಲ್ಲಿ ಕದ್ದೊಯ್ದ ಕಳ್ಳರು
ಬೆಳಗಾವಿ: ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಚ್ಚ ಹೊಸ ಕಾರನ್ನು ಕ್ಷಣಾರ್ಧದಲ್ಲಿ ಕಳ್ಳರು ಕದ್ದೊಯ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಶೋಕ ನಗರದ ಮೃತ್ಯುಂಜಯ ಬಸಣ್ಣಪ್ಪ ಬೆಲದ್ ಹಾಗೂ ರಾಮತೀರ್ಥ ನಗರದ ಉದ್ಯಮಿ ಅನಿಲ್ ಪಾಟೀಲ್‍ಗೆ ಸೇರಿದ ಇನ್ನೋವಾ ಕ್ರಿಸ್ಟಾ ಕಾರನ್ನು ಕಳ್ಳರು ಹೈಟೆಕ್ ಟೆಕ್ನಿಕ್ ಬಳಸಿ ಕಳ್ಳತನ ಮಾಡಿದ್ದಾರೆ. ಹೈಟೆಕ್ ಕಳ್ಳರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗೆ ಕಳ್ಳತನ? ಕಾರಿನ ಗ್ಲಾಸ್ ಒಡೆಯದೆ ಕಳ್ಳರು ಕಾರಿನ …
Read More »BIG BREAKINGಮನ್ಸೂರ್ ಖಾನ್ ಒತ್ತಡ – ರೋಷನ್ ಬೇಗ್ ಅರೆಸ್ಟ್, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.ಸಂಜಯ್‌ನಗರದ ಸಿಬಿಐ ಕಚೇರಿಯಲ್ಲಿ ರೋಷನ್ ಬೇಗ್ ಅವರನ್ನು ಬೆಳಗ್ಗೆಯಿಂದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಮೊದಲು ಕೇಳಿ ಬಂದಿತ್ತು. ಆರೋಪಿ ಮನ್ಸೂರ್ ಖಾನ್ ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ. ಐಷಾರಾಮಿ ಕಾರು ಸೇರಿದಂತೆ …
Read More »ನಾಲ್ವರು ನಕಲಿ ಪರೀಕ್ಷಾರ್ಥಿಗಳು ಬಂಧನ..!
ಬೆಳಗಾವಿ ನಗರದಲ್ಲಿ ಇಂದು 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ / ಐಆರ್‌ಬಿ / ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 1921 ಅಭ್ಯರ್ಥಿಗಳ ಪೈಕಿ 8461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1 ) ಜಿಐಟಿ ಕಾಲೇಜ , ಉದ್ಯಮಬಾಗ 2 ) ಲವ್‌ಡೇಲ್ ಸೆಂಟ್ರಲ್ ಸ್ಕೂಲ , ಮಾಳಮಾರುತಿ , 3 ) ಕೆಎಲ್‌ಎಸ್ ಸಂಸ್ಥೆ . ಇಂಗ್ಲೀಷ ಮಿಡಿಯಮ್ …
Read More »ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೧೫ ವಸತಿ ಶಾಲೆಗಳನ್ನು ಪ್ರಾರಂಭ:ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೧೫ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಅರಭಾವಿ ಪಟ್ಟಣದ ನಾಡಕಛೇರಿ ಬಳಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅನುದಾನದಡಿ ಮಂಜೂರಾದ ೨೦.೫೦ ಕೋಟಿ …
Read More »ಮೂಢನಂಬಿಕೆ ವಿರುದ್ಧ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು: ಸತೀಶ್ ಜಾರಕಿಹೊಳಿ
ಗೋಕಾಕ : ‘ ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣನವರು ಸೇರಿ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲ್ಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ ದಲಿತ ಸಮುದಾಯದ ಜನರು ಎಲ್ಲ ರಂಗದಿಂದ …
Read More »ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಶಿವರಾಜ್‍ಕುಮಾರ್
ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೈಸೂರಿನ ಫುಟ್‍ಪಾತ್ ಅಂಗಡಿಯಲ್ಲಿ ಸಾಮಾನ್ಯ ಜನರಂತೆ ಕುಳಿತು ಟೀ ಕುಡಿದು ಸರಳತೆ ಮೆರೆದಿದ್ದಾರೆ. ಭಜರಂಗಿ 2 ಸಿನಿಮಾದ ಶೂಟಿಂಗ್‍ಗಾಗಿ ಶಿವರಾಜ್‍ಕುಮಾರ್ ಮೈಸೂರಿಗೆ ತೆರಳಿದ್ದಾರೆ. ವೀಕೆಂಡ್‍ನಲ್ಲಿ ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ್ದಾರೆ. ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿ ಇರುವ ತಮ್ಮ ಅಭಿಮಾನಿ ಮಾದೇಶ್ ಎಂಬುವವರ ಟೀ ಅಂಗಡಿಗೆ ಹೋಗಿದ್ದಾರೆ. ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ …
Read More »ಭಾರತದಲ್ಲಿ ಪಬ್‍ಜಿ ಮೊಬೈಲ್ ಗೇಮ್ ನೋಂದಣಿ ಆರಂಭ
ನವದೆಹಲಿ: ಭಾರತದಲ್ಲಿ ಪಬ್‍ಜಿ ಮೊಬೈಲ್ ಗೇಮ್ ನೋಂದಣಿ ಆರಂಭಗೊಂಡಿದ್ದು, ಕೆಲ ಆಯ್ದ ಬಳಕೆದಾರರಿಗೆ ಲೈವ್ ಗೇಮ್ ಅವಕಾಶ ಸಹ ನೀಡಲಾಗಿದೆ. ಕಂಪನಿ ಭಾರತದ ವೈಬ್‍ಸೈಟ್ ಪಬ್‍ಜಿ ಮೊಬೈಲ್ ಡೌನ್‍ಲೋಡ್ ಲಿಂಕ್ ಸಹ ಪ್ರಕಟಿಸಿದೆ. ಆದ್ರೆ ಸದ್ಯ ಲಿಂಕ್ ಆಕ್ಟಿವ್ ಆಗಿಲ್ಲ. ಗೂಗಲ್ ಪ್ಲೇಸ್ಟೋರ್ ನಲ್ಲಿ ಪಬ್‍ಜಿ ಮೊಬೈಲ್ ಇಂಡಿಯಾ ಮೇಲೆ ಕ್ಲಿಕ್ ಮಾಡಿದಾಗ ಫೇಸ್‍ಬುಕ್ ಪೇಜ್ ರೀಡೈರೆಕ್ಷನ್ ಆಗ್ತಿದೆ. ಆಯ್ದ ಬಳಕೆದಾರರಿಗೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಪಬ್‍ಜಿ ತನ್ನ …
Read More »ಹಾಸನ- ಬೆಂಗಳೂರು ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆಖಾಸಗಿ ಬಸ್.
ದಕ್ಷಿಣ ಕನ್ನಡ: ಜಿಲ್ಲೆಯ ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮಧ್ಯರಾತ್ರಿ ಹಾಸನ- ಬೆಂಗಳೂರು ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ಹಲವು ತೀವ್ರ ಗಾಯಗೊಂಡಿದ್ದಾರೆ. ಬಸ್ ನಲ್ಲಿ 29 ಜನರ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರಿಗೆ ಈವರೆಗೆ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ. ಬಸ್ ಶನಿವಾರ ರಾತ್ರಿ ವಿಟ್ಲದಿಂದ ಬೆಂಗಳೂರಿಗೆ ಹೊರಟಿತ್ತು. ಈ ವೇ …
Read More »