Breaking News

Monthly Archives: ಡಿಸೆಂಬರ್ 2020

ಬಿಜೆಪಿ ಪಕ್ಷಕ್ಕೆ ಹೊದ  ಬಳಿಕ ಬಿ.ಸಿ.ಪಾಟೀಲ್ ಅವರ ಸಂಸ್ಕೃತಿ ಬದಲಾಗಿದೆ:ಹೆಬ್ಬಾಳ್ಕರ್

ಬೆಳಗಾವಿ : ಮಡಿಕೇರಿಯಲ್ಲಿ ನಿನ್ನೆಅನ್ನದಾತರ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹೇಳಿಕೆಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ವಾಗ್ದಾಳಿ ಮಾಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತನ ಮಗನಾಗಿದ್ದಾರೆ. ಕೃಷಿ ಮಂತ್ರಿಗಳಾಗಿ, ರೈತರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಬಿಜೆಪಿ ಪಕ್ಷಕ್ಕೆ ಹೊದ  ಬಳಿಕ ಅವರ ಸಂಸ್ಕೃತಿ ಬದಲಾಗಿದೆ ಎಂದಿದ್ದಾರೆ. ಈಚೆಗೆ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿ,  …

Read More »

ಬಿಜೆಪಿಗೆ ಅತ್ಯಂತ ಗಟ್ಟಿ ನೆಲೆ ಎಂದೆನಿಸಿಕೊಂಡಿರುವ ನಾಗ್ಪುರದಲ್ಲಿ ಬಿಜೆಪಿ ಸೋಲುಂಡಿದೆ.

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು,  ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ. ಆಡಳಿತದಲ್ಲಿರುವ ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿ ನಾಲ್ಕು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದ ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಅತ್ಯಂತ ಗಟ್ಟಿ ನೆಲೆ ಎಂದೆನಿಸಿಕೊಂಡಿರುವ ನಾಗ್ಪುರದಲ್ಲಿ ಬಿಜೆಪಿ ಸೋಲುಂಡಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ …

Read More »

ಕರ್ನಾಟಕ ಬಂದ್ ಗೆ ಕರೆ ಬಸ್ ಗಳ ಸೇವೆ ಎಂದಿನಂತೆ ಇರಲಿದೆ.

ಬೆಂಗಳೂರು : ಮರಾಠ ಅಭಿವೃದ್ಧಿ ನಿಮಗ ಸ್ಥಾಪನೆ ವಿರೋಧಿಸಿ ಕೆಲ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಆದರೆ  ಕೆಎಸ್ ಆರ್ ಟಿಸಿ , ಬಿಎಂಟಿಸಿ ಬಸ್ ಗಳ ಸೇವೆ ಎಂದಿನಂತೆ ಇರಲಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್  ಹಿನ್ನಲೆ ಬಸ್ ಸಂಚಾರ ಬಂದ್ ಆಗಲಿದೆ ಎಂಬ ಅನುಮಾನ ಜನರಲ್ಲಿದೆ. ಆದರೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. 5 ಸಾವಿರ ಬಸ್ ಗಳು …

Read More »

ರಾಗಿಣಿ ದ್ವಿವೇದಿಗೆ ಇನ್ನೂ ಒಂದು ತಿಂಗಳು ಜೈಲು ಫಿಕ್ಸ್

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಇನ್ನೂ ಒಂದು ತಿಂಗಳು ಜೈಲು ಫಿಕ್ಸ್ ಆಗಿದೆ. ರಾಗಿಣಿ ದ್ವಿವೇದಿ ಜಾಮೀನು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಈ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಕೂಡ ನಟಿ ಜೈಲಿನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಇದೇ ವೇಳೆ ಕೋರ್ಟ್, ರಾಜ್ಯ ಸರ್ಕಾರ ಹಾಗೂ …

Read More »

ಪಲ್ಟಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಚಾಲಕ ಸಾವು

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ರಸ್ತೆ ಪಕ್ಕ ನಿಂತಿದ್ದ ಓಮ್ನಿ ಚಾಲಕ ಬಲಿ ಪಡೆದಿದೆ. ಜಿಲ್ಲೆಯ ವಿರಾಜಪೇಟೆ ಮಡಿಕೇರಿ ರಸ್ತೆಯ ಭೇತ್ರಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತನನ್ನು ಮೂರ್ನಾಡುವಿನ ಹರೀಶ್ ಎಂದು ಗುರುತಿಸಲಾಗಿದೆ. ಲಾರಿ ಮುಗುಚಿಬಿದ್ದು, ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಬಿದ್ದ ಪರಿಣಾಮ ಓಮ್ನಿ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮೂರ್ನಾಡು ಪೋಲಿಸರು …

Read More »

ಬೆಳಗಾವಿ ಉಪಚುನಾವಣೆ ಬಿಜೆಪಿ ಆಕಾಂಕ್ಷಿ ಪಟ್ಟಿಯಲ್ಲಿ ಮತ್ತೊಂದು ಹೆಸರು !

ಬೆಂಗಳೂರು : ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಲೇ ಇದೆ. ಈಗ ಬಿಜೆಪಿಯಿಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಟಿಕೆಟ್ ನೀಡುವಂತೆ ಆಗ್ರಹ ಕೇಳಿ ಬಂದಿದೆ. ವಿವಿಧ ಹಿಂದೂಪರ ಸಂಘಟನೆಯ ಮುಖಂಡರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮುತಾಲಿಕ್ ಕೊಡುಗೆ ಬಹಳಷ್ಟಿದೆ. ಬೆಳಗಾವಿ ಜಿಲ್ಲೆಯಲ್ಲೇ ಮುತಾಲಿಕ್ …

Read More »

ದೇಶದಲ್ಲಿ ಕೊವಿಡ್ ಪ್ರಕರಣ ಸಂಬಂಧಿತ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಲು ಪ್ರಧಾನಿ ಮೋದಿ

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣ ಸಂಬಂಧಿತ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ 10.30ಕ್ಕೆ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಕೊರೊನಾ ಕುರಿತು ಚರ್ಚಿಸಲು ಕರೆಯಲಾಗಿರುವ ಎರಡನೇ ಸರ್ವಪಕ್ಷ ಸಭೆ ಇದು. ಮೊದಲ ಸಭೆಯನ್ನು ಏಪ್ರಿಲ್​ 20ರಂದು ದೇಶವ್ಯಾಪಿ ಲಾಕ್​ಡೌನ್ ಬಗ್ಗೆ ಮಾತನಾಡಲು ಕರೆಯಲಾಗಿತ್ತು. ದೀಪಾವಳಿ ನಂತರ ಕೊರೊನಾ ಪ್ರಕರಣಗಳಲ್ಲಿ ಉಂಟಾಗಿರುವ ಏರಿಳಿತ, ಚಳಿಗಾಲದ ಪರಿಣಾಮ, ಹೊಸವರ್ಷ, ಕ್ರಿಸ್​ಮಸ್​ ಸಂದರ್ಭದಲ್ಲಿ ರೂಪಿಸಬೇಕಾದ ನಿಯಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ …

Read More »

ಡಿಸೆಂಬರ್ 5ರಂದು ಬಂದ್.. ಬಂದ್.. ಬಂದ್.. ಕರ್ನಾಟಕದ, ಕನ್ನಡದ, ಕನ್ನಡಿಗರ ಹಿತರಕ್ಷಣೆಗೆ ನಾವು ಬದ್ಧ.

ಬೆಂಗಳೂರು: ಡಿಸೆಂಬರ್ 5ರಂದು ಬಂದ್.. ಬಂದ್.. ಬಂದ್.. ಕರ್ನಾಟಕದ, ಕನ್ನಡದ, ಕನ್ನಡಿಗರ ಹಿತರಕ್ಷಣೆಗೆ ನಾವು ಬದ್ಧ. ಸರ್ಕಾರದ ಯಾವುದೇ ಬೆದರಿಕೆಗೆ ನಾವು ಬಗ್ಗಲ್ಲ. ಸರ್ಕಾರ ನಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದ್ರೂ ನಾವು ಸುಮ್ಮನಿರಲ್ಲ. ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧವಿದೆ. ಹೀಗಾಗಿ ನಾವು ಬಂದ್ ಮಾಡೇ ಮಾಡ್ತೀವಿ ಅಂತಾ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದು, ನಾಳೆ ಕರ್ನಾಟಕ ಕಂಪ್ಲೀಟ್ ಬಂದ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ …

Read More »

ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. 150 ಸ್ಥಾನಗಳ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ಮತ ಎಣಿಕೆಯಲ್ಲಿ ಬಿಜೆಪಿ 73 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ವೇಳೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) 28 ಸೀಟುಗಳಲ್ಲಿ ಮತ್ತು ಕಾಂಗ್ರೆಸ್ 2 ವಾರ್ಡ್ ನಲ್ಲಿ ಮುನ್ನಡೆಯಲ್ಲಿದೆ @10.06 AM. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದ್ರೆ ಮ್ಯಾಜಿಕ್ ನಂಬರ್ 76 ಅಗತ್ಯವಿದೆ. 2023ರ …

Read More »

ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ ಇಂದು ವಿವಾಹ ವಾರ್ಷಿಕೋತ್ಸವ.

ಧಾರವಾಡ: ಜಿಲ್ಲಾ ಪಂಜಾಯತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಹಿನ್ನೆಲೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ ಇಂದು ವಿವಾಹ ವಾರ್ಷಿಕೋತ್ಸವ. ಹುಟ್ಟುಹಬ್ಬವನ್ನು ಕೂಡ ಜೈಲಿನಲ್ಲಿಯೇ ಆಚರಿಸಿಕೊಂಡಿದ್ದ ವಿನಯ್, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 24 ವರ್ಷ ಕಳೆಯಿತು. 2016 ಜೂನ್ 15ರಂದು ನಡೆದ ಹತ್ಯೆಗೆ ಸಂಬಂಧಿಸಿ ಇದೇ ನವೆಂಬರ್ 5 ರಂದು ಬಂಧನಕ್ಕೊಳಗಾಗಿರೊ ವಿನಯ್​ಗೆ ಸ್ನೇಹಿತರು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಿವಾಹ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ. ನವೆಂಬರ್ …

Read More »