Breaking News

Daily Archives: ಡಿಸೆಂಬರ್ 27, 2020

ಹಂಪಿ ವಿವಿ ಉಳಿಸಲು ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

ಬೆಂಗಳೂರು,ಡಿ.27- ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಉಳಿಸಿ ಹೋರಾಟ ಉಗ್ರರೂಪ ತಾಳುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡುವಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆ ಪಾಳ್ಯದಲ್ಲಿ ನಡೆದ ಕರವೇ ಸಭೆಯಲ್ಲಿ ಮಾತನಾಡಿದ ಅವರು, ಹಂಪಿ ಕನ್ನಡ ವಿವಿಗೆ ಅನುದಾನ ನೀಡುವುದು ಸೇರಿದಂತೆ ವಿಶ್ವವಿದ್ಯಾಲಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿದರು. ಟ್ವಿಟರ್‍ನಲ್ಲಿ ಹಂಪಿ ಕನ್ನಡ ವಿವಿ ಉಳಿಸಿ ಎಂಬ ಅಭಿಯಾನಕ್ಕೆ ಈಗಾಗಲೇ 4,500 ಲಕ್ಷ …

Read More »

ರೀಕ್ಷೆಯಂತೆ ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್‍ನ ಎರಡನೇ ದಿನ ಭರ್ಜರಿ ಆಟ

ಮೆಲ್ಬರ್ನ್, ಡಿ.27- ನಿರೀಕ್ಷೆಯಂತೆ ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್‍ನ ಎರಡನೇ ದಿನ ಭರ್ಜರಿ ಆಟ ಪ್ರದರ್ಶಿಸಿ ಆಸೀಸ್ ವಿರುದ್ಧ ಬೃಹತ್ ಮುನ್ನಡೆಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. # ಗಿಲ್ ಭರ್ಜರಿ ಆರಂಭ: ಪೃಥ್ವಿ ಶಾರ ಕಳಪೆ ಪ್ರದರ್ಶದಿಂದಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವ ಆಟಗಾರ ಶುಭಮನ್ ಗಿಲ್ ಆಸೀಸ್‍ನ ವೇಗ ಹಾಗೂ ಸ್ಪಿನ್ ಅಸ್ತ್ರವನ್ನು ದಿಟ್ಟವಾಗಿ ಎದುರಿಸಿ ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದರು. ನಿನ್ನೆ ದಿನದಾಟದ ಅಂತ್ಯಕ್ಕೆ 28 …

Read More »

ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ

ಬೆಂಗಳೂರು: ಗಡಿ ಭದ್ರತಾ ಪಡೆ ವತಿಯಿಂದ ಆಯೋಜಿಸಿದ್ದ ಪ್ಯಾರಾ ಸೈಕ್ಲಿಂಗ್ ಏಕ್ಸ್ಪೆಡಿಷನ್- 2020 ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬಿ.ಎಸ್.ಎಫ್ ನ ಐ.ಜಿ.ಎಸ್.ಕೆ.ತ್ಯಾಗಿ , ಬಿ.ಎಸ್.ಸಾಧು ಮತ್ತಿತರರು ಉಪಸ್ಥಿತರಿದ್ದರು – ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ಯಾರಾ ಸೈಕ್ಲಿಂಗ್ ಮೂಲಕ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ …

Read More »

ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್, ಆಯಿಲ್ ಮಸಾಜ್!, ಉಚಿತ ಸ್ನಾನ, ಹೇರ್ ಕಟ್!

ಹುಕ್ಕೇರಿ; ಮಹಿಳೆಯರು, ಕಾಲೇಜು ಯುವತಿಯವರು ಹಾಗೂ ಸಿನಿಮಾ ನಟ- ನಟಿಯರು ತಮ್ಮ ಸೌಂದರ್ಯವರ್ದನೆಗೋಸ್ಕರ ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗೋದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆ. ಅಷ್ಟಕ್ಕೂ ಎಲ್ಲಿದೆ ಆ ಪಾರ್ಲರ್ ಎನದರ ವಿಶೇಷ ಅಂತೀರಾ? ಈ ಸ್ಟೋರಿ ಓದಿ. ಹೌದು, ಅಧುನಿಕ ಜಗತ್ತಿನಲ್ಲಿ ಸೌಕರ್ಯಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಕಟ್ಟುಮಸ್ತಾದ ದೇಹದ ಜತೆ ಮುಖದ ಸೌಂದರ್ಯ ಅಂದ ಚಂದಕ್ಕೆ ನಮ್ಮ …

Read More »

ಬ್ರಿಟನ್‍ನಿಂದ ರಿಟರ್ನ್ ಆದ ಗೋವಾ ಶಾಸಕನಿಗೆ ಕ್ವಾರಂಟೈನ್‍

ಪಣಜಿ, ಡಿ.27- ಬ್ರಿಟನ್‍ನಿಂದ ಬಂದ ಗೋವಾ ಶಾಸಕನನ್ನು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‍ನಲ್ಲಿಡಲಾಗಿದೆ. ಪಕ್ಷೇತರ ಶಾಸಕ ರೋಹನ್ ಖೌಂಟೆ ಅವರು ಕೆಲವು ದಿನಗಳ ಹಿಂದೆ ಬ್ರಿಟನ್‍ಗೆ ಪ್ರವಾಸಕ್ಕೆ ತೆರಳಿ ಇಂದು ಬೆಳಗ್ಗೆ ಮರಳಿದ್ದರು. ತಕ್ಷಣ ಅವರನ್ನು ಪರೀಕ್ಷೆಗೊಳಪಡಿಸಲು ಮುಂದಾದಾಗ ಅವರು ಅಲ್ಲಿಂದ ನಿರ್ಗಮಿಸಿದರು. ಇದರಿಂದಾಗಿ ಅವರನ್ನು ಕೂಡಲೇ ವಶಕ್ಕೆ ಪಡೆದು ಪರೀಕ್ಷೆಗೊಳಪಡಿಸಬೇಕೆಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದರು.ಈಗಾಗಲೇ ಬ್ರಿಟನ್‍ನಲ್ಲಿ ರೂಪಾಂತರ ಕೊರೊನಾ ಬಂದಿರುವುದರಿಂದ ಯಾರೇ ಆದರೂ ಅವರನ್ನು ಪರೀಕ್ಷೆಗೊಳಪಡಿಸಬೇಕು ಮತ್ತು ಇವರು …

Read More »

ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ: ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಡಿ.27- ರಾಜ್ಯದಲ್ಲಿ ಬ್ರಿಟನ್ ಮಾದರಿಯ ರೂಪಾಂತರಗೊಂಡ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ ಹಾಕಿದೆ. ಕೋವಿಡ್ ರೂಪಾಂತರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷಾಚರಣೆ ಸಂಬಂಧ ಸರ್ಕಾರದ ವತಿಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ. ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು. ವಿಧಾನಸೌಧದ ಪೂರ್ವ ದ್ವಾರದ …

Read More »

ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣ

ನವದೆಹಲಿ: ಕೊರೊನಾ ಮಾಹಾಮಾರಿ ಸಂದರ್ಭದಲ್ಲಿಯೇ ದೇಶದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ ಬೇಡಿಕೆ ಹೆಚ್ಚಳವಾಗಿದೆ. ಅದರಲ್ಲೂ ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ, ಮುಂಬೈನಲ್ಲಿ ದಾಲ್ ಖಿಚ್ಡಿ, ಚೆನ್ನೈನಲ್ಲಿ ಇಡ್ಲಿ, ದೆಹಲಿಯಲ್ಲಿ ಕಾಫಿ, ಪುಣೆಯಲ್ಲಿ ಮ್ಯಾಗಿ, ಗುರುಗ್ರಾಮದಲ್ಲಿ ಆಲೂ ಟಿಕ್ಕಿ ಬರ್ಗರ್ ಹೆಚ್ಚು ಖರೀದಿಯಾಗುತ್ತಿದೆ. ದೇಶದೆಲ್ಲೆಡೆ ಕಾಂಡೋಮ್ ಖರೀದಿಸುವವರ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಹೈದರಾಬಾದ್ …

Read More »

ಐದು ಕಾರುಗಳ ನಡುವೆ ಸರಣಿ ಅಪಘಾತ,. ಎರಡು ಕಾರು ಪಲ್ಟಿ

ಬೆಂಗಳೂರು: ಏರ್​ಪೋರ್ಟ್ ರಸ್ತೆಯ ಬ್ಯಾಟರಾಯನಪುರ ಫ್ಲೈಓವರ್ ಬಳಿ ಐದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಎರಡು ಕಾರು ಪಲ್ಟಿಯಾಗಿದ್ದು. ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರರ ಜಾಲಿ ರೈಡ್ ನಿಂದಾಗಿ ಈ ಸರಣಿ ಅಪಘಾತ ಸಂಭವಿಸಿದೆ. ನಂದಿಬೆಟ್ಟಕ್ಕೆ ಜಾಲಿ ರೈಡ್ ಹೋಗುತ್ತಿದ್ದ ಬೈಕ್ ಸವಾರರ ಟೀಂ ವೇಗವಾಗಿ ಬಂದು ಕಾರ್ ಓವರ್ ಟೆಕ್ ಮಾಡಿದ್ದಾರೆ. ಗಾಬರಿಯಾದ ಕಾರ್ ಚಾಲಕ ಎದುರು ರಸ್ತೆಗೆ ನುಗ್ಗಿದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. …

Read More »

ಕೊರೋನಾ ಮತ್ತೆ ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ

ಮುಂಬೈ – ಭಾರಿ ಅಬ್ಬರದ ನಂತರ ತಣ್ಣಗಾಗಿದ್ದ ಕೊರೋನಾ ಮತ್ತೆ ಮಹಾರಾಷ್ಟ್ರವನ್ನು ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. 2854 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ. ಕೊರೋನಾ ಮತ್ತು ಪ್ರವಾಹದಿಂದಾಗಿ ಮುಂಬೈ ಮಹಾನಗರ ಸೇರಿದಂತೆ ಬಹುತೇಕ ಮಹಾರಾಷ್ಟ್ರ ರಾಜ್ಯ ಕಂಗೆಟ್ಟುಹೋಗಿತ್ತು. ಅದರಿಂದ ಇನ್ನೇನು ಚೆತರಿಕೆ ಕಾಣುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಕೋರೋನಾ ಅಬ್ಬರಿಸತೊಡಗಿದೆ. ಬ್ರಿಟನ್ ನಿಂದ ಆಗಮಿಸಿರುವ 16 ಜನರು ಸೇರಿದಂತೆ 2854 ಜನರಿಗೆ …

Read More »

ವಿಷ್ಣುವರ್ಧನ್ ಪ್ರತಿಮೆ ಧ್ವಂಸಕರಿಗೆ ಸುದೀಪ್ ಎಚ್ಚರಿಕೆ

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ ಪ್ರತಿಮೆ ಧ್ವಂಸಕರಿಗೆ ಅಭಿನಯ ಚಕ್ರವರ್ತಿ ರನ್ನ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದು, ನಿಮ್ಮ ಹೆಸರು ತಿಳಿಯುವ ಮೊದಲು ದೇಶ ಬಿಟ್ಟು ಹೋಗಿ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಷ್ಣು ಸರ್ ಪ್ರತಿಮೆ ಧ್ವಂಸಗೊಳಿಸಿರುವ ವಿಷಯ ನನಗೆ ತಡವಾಗಿ ತಿಳಿಯಿತು. ವಿಷ್ಣು ಸರ್ ಅಭಿಮಾನಿಯಾಗಿ ಮೂರ್ತಿಯನ್ನ ಒಡೆದು ಹಾಕಿರೋರಿಗೆ ಕೆಲ ವಿಷಯಗಳನ್ನ ಹೇಳಲು ಇಷ್ಟಪಡುತ್ತೇನೆ. …

Read More »