Breaking News

Daily Archives: ಡಿಸೆಂಬರ್ 17, 2020

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ

ಕೊಪ್ಪಳ : ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಕಳೆದೊಂದು ದಶಕದಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಚುನಾವಣೆಯಲ್ಲೂ ಈ ವಿಷಯವನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಬರುವ ಅಭ್ಯರ್ಥಿಗಳು ಚುನಾಯಿತರಾದ ನಂತರ ಮರೆತುಬಿಡುತ್ತಾರೆ. ಇದು ಯಾವುದೋ ಒಂದು ಪಕ್ಷದ ವಿರುದ್ಧ ಮಾಡುತ್ತಿರುವ ಆರೋಪವಲ್ಲ. ಯೋಜನೆ ಅನುಷ್ಠಾನಗೊಳ್ಳಲು, ಜನರಿಗೆ, ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ರೈತಮುಖಂಡರು, ಪ್ರಗತಿಪರರಾದ ದೇವೇಂದ್ರಪ್ಪ ಬಳೂಟಗಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ …

Read More »

ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕಿದಷ್ಟು ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ.

ಬೀದರ್; ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶ- ವಿದೇಶಗಳಲ್ಲೂ ಈ ಮಠದ ಭಕ್ತರಿದ್ಧಾರೆ. ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಾಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಈ ಪವಾಡ ಪುರುಷನ ಹುಟ್ಟೂರು ಯಾವುದು ಅಂತ ಅದೇಷ್ಟೋ ಭಕ್ತರಿಗೆ ಗೊತ್ತಿಲ್ಲ. ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನೆಲೆನಿಂತು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪವಾಡ …

Read More »

ಮತ್ತೊಂದು ಜೀವಂತ ಹೃದಯ ರವಾನೆ ಮತ್ತು ಜೀವಂತ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾದ ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡ

ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡದಿಂದ ಮತ್ತೊಂದು ಜೀವಂತ ಹೃದಯ ರವಾನೆ ಮತ್ತು ಜೀವಂತ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ನಾರಾಯಣ ಹೆಲ್ತ್ ಸಿಟಿ ಹೃದ್ರೋಗ ತಜ್ಞರಾದ ಡಾ ಭಗೀರಥ್ ಮತ್ತು ವರುಣ್ ಶೆಟ್ಟಿ ತಂಡದಿಂದ ಬೆಂಗಳೂರು ಮೂಲದ ಸುಮಾರು 42 ವರ್ಷ ವಯಸ್ಸಿನ ವ್ಯಕ್ತಿಗೆ ಯಶಸ್ವಿಯಾಗಿ ಹೃದಯ ಕಸಿ ನಡೆಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬೆಂಗಳೂರು …

Read More »

ತಿರುಪತಿ ತಿಮ್ಮಪ್ಪ ಕಲ್ಯಾಣ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಕೇವಲ 1 ಗಂಟೆ 5 ನಿಮಿಷದಲ್ಲಿ ಕಲಬುರ್ಗಿಯಿಂದ ತಿರುಪತಿಗೆ ಹೋಗೋ ಅವಕಾಶವನ್ನು ಜನ ಪಡೆದಿದ್ದಾರೆ.

ಕಲಬುರ್ಗಿ(ಡಿಸೆಂಬರ್​. 16): ಕಲ್ಯಾಣ ಕರ್ನಾಟಕಕ್ಕೂ ತಿರುಪತಿಗೂ ಅವಿನಾಭಾವ ಸಂಬಂಧ. ಒಂದು ಕಾಲಕ್ಕೆ ತಿರುಪತಿ ಮೇಲೆ ದಾಳಿ ನಡೆದಂತಹ ಸಂದರ್ಭದಲ್ಲಿ ಕ್ಷೇತ್ರದ ಸಂರಕ್ಷಣೆಗೆ ನಿಂತವರು ಸುರಪುರ ಸಂಸ್ಥಾನದ ದೊರೆಗಳು. ಅದೇ ಕಾರಣಕ್ಕೆ ವಿಜಯದಶಮಿ ಸಂದರ್ಭದಲ್ಲಿ ತಿರುಪತಿಯಲ್ಲಿ ನಡೆಯುವ ಬ್ರಹ್ಮತ್ಸವದಲ್ಲಿ ಮೊದಲ ಪೂಜೆ ನಡೆಯುವುದು ಸುರಪುರ ದೊರೆಗಳದ್ದು. ಈಗಲೂ ಸಹ ಸುರಪುರ ಸಂಸ್ಥಾನವನ್ನು ಪ್ರತಿನಿಧಿಸುವವರಿಗೆ ಅಗ್ರ ಪೂಜೆಯ ಭಾಗ್ಯ ಕಲ್ಪಿಸಲಾಗಿದೆ. ಹೀಗಾಗಿ ತಿರುಪತಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ಬಗ್ಗೆ ಒಂದಷ್ಟು ಪ್ರೀತ್ಯಾದರಗಳಿವೆ. ಪ್ರತಿ ವರ್ಷವೂ …

Read More »

ಕಾಲೇಜ್​ ಆಡ್ಮಿಷನ್​ ನೆಪದಲ್ಲಿ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಬೆಂಗಳೂರು (ಡಿ. 16): ಕಾಲೇಜಿಗೆ ದಾಖಲಾತಿ ಮಾಡಿಸುತ್ತೇನೆಂದು ತನ್ನ ರೂಮ್​ಗೆ ಕರೆಸಿಕೊಂಡ ಸ್ನೇಹಿತನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯದಿಂದ ಇಲ್ಲಿಗೆ ಆಗಮಿಸಿದ್ದ ಯುವತಿಯನ್ನು ಆಕೆಯ ಸಹಪಾಠಿ ಯುವಕನೇ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಲಾಕ್​ಡೌನ್​ ಹಿನ್ನಲೆ ಒಂದು ಕಂತಿನ ಫೀಜ್​ ಅನ್ನುಬಾಕಿ ಉಳಿಸಿಕೊಂಡಿದ್ದು, ಅದನ್ನು  ಕಟ್ಟಲು ಆಕೆ ನಗರಕ್ಕೆ …

Read More »

ರಾಜ್ಯದ ಪ್ರಮುಖ ರಾಜಕಾರಣಿ BIGBOSS ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ…………..?

ಬೆಂಗಳೂರು: ರಾಜ್ಯದ ಪ್ರಮುಖ ರಾಜಕಾರಣಿಗಳ ಪೈಕಿ ಒಬ್ಬರಾದ, ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಅನುಗುಣವಾಗಿ, ಕ್ಷಣಾರ್ಧದಲ್ಲಿ ಗುಣಕಾರ ಭಾಗಕಾರ ಹಾಕಿ ಮಾತನಾಡುವ, ಮಾತಿನ ಮಧ್ಯೆ ಹಾಸ್ಯವನ್ನು ಹರಿಬಿಡುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈಗ ರಾಜ್ಯದ ಜನತೆ ಮುಂದೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ‘ಕಲರ್ಸ್ ಕನ್ನಡ’ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ನಲ್ಲಿ ಭಾಗವಹಿಸುವಂತೆ ‘ಮಾತಿನ ಮಲ್ಲ’ ಹೆಚ್. ವಿಶ್ವನಾಥ್ ಅವರನ್ನು …

Read More »

ಉಸ್ತುವಾರಿ ಸಚಿವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೆಸ್ ಶಾಸಕ : ಆಡಿಯೋ ವೈರಲ್

ಚಾಮರಾಜನಗರ(ಡಿಸೆಂಬರ್. 16): ಚಾಮರಾಜನಗರ ಜಿಲ್ಲೆಯಲ್ಲಿ ಕೆರೆ ನೀರು ತುಂಬಿಸುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನೇ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಮೂರು ಹಾಗು ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರೈತರೊಬ್ಬರೊಡನೆ ಪೋನ್ ನಲ್ಲಿ ಮಾತನಾಡುತ್ತಾ ಉಸ್ತುವಾರಿ ಸಚಿವರನ್ನೆ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ್ದಾರೆ. ಅಲ್ಲದೆ ಕಾವೇರಿ ನೀರಾವರಿ …

Read More »

ಈ ವೇಳೆ ರಾಹುಲ್​ ಗಾಂಧಿಯವರಿಗೆ ಮಾತನಾಡದಲು ಸಮಿತಿ ಅಧ್ಯಕ್ಷರು ಅವಕಾಶ ನೀಡಲಿಲ್ಲ. ಈ ಹಿನ್ನಲೆ ಕಾಂಗ್ರೆಸ್​ ನಾಯಕರು ಸಭೆಯಿಂದ ಹೊರ ನಡೆಯಲು ನಿರ್ಧರಿಸಿದರು ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಮತ್ತಿಬ್ಬರು ನಾಯಕರಾದ ಸತ್ವ ಹಾಗೂ ರೆಡ್ಡಿ ಕೂಡ ಅವರ ಹಾದಿ ಹಿಡಿದರು.

ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಮಧ್ಯಭಾಗದಲ್ಲಿಯೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೊರ ನಡೆದಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್​ ಸಂಸದರಾದ ರಾಜೀವ್​ ಸತ್ವ ಹಾಗೂ ರೇವಂತ್​ ರೆಡ್ಡಿ ಕೂಡ ಹೊರ ನಡೆದಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಬದಲು ಸಶಸ್ತ್ರ ಪಡೆಗಳ ಸಮವಸ್ತ್ರ ಕುರಿತು ಚರ್ಚಿಸುವ ಮೂಲಕ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು …

Read More »

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ನೋಟಿಸ್‌…?

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಗಡಿ ಭಾಗದ ಹಲವು ರಸ್ತೆಗಳಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಸ್ಥಳಾಂತರಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತಾಗಿ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ನೋಟಿಸ್‌ ಜಾರಿ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ಪೀಠವು,’ಕೃಷಿ ಕಾನೂನು ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮತ್ತು ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರೂಪಿಸುವುದಾಗಿ ಹೇಳಿದೆ. ಈ ಪೀಠವು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು …

Read More »