Breaking News

Monthly Archives: ನವೆಂಬರ್ 2020

ಐಪಿಎಲ್2020: 2ನೇ ಸ್ಥಾನ ಯಾರಿಗೆ?ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಬೆಂಗಳೂರು: 2020ರ ಐಪಿಎಲ್ ಟೂರ್ನಿಯಲ್ಲಿ 45 ದಿನಗಳಲ್ಲಿ 54 ತಂಡಗಳು ಪೂರ್ಣಗೊಂಡರೂ ಪ್ಲೇ ಆಫ್ ರೇಸ್ ಅಂತ್ಯವಾಗಿಲ್ಲ. ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು ದೆಹಲಿ ಮತ್ತು ಬೆಂಗಳೂರು ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ. ಇಂದಿನ ಮ್ಯಾಚ್‍ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಗೆದ್ದರಷ್ಟೇ ಪ್ಲೇ ಆಫ್‍ಗೆ ಆರ್ ಸಿಬಿಗೆ ಎಂಟ್ರಿ ಸಿಗುತ್ತೆ. ಅಪ್ಪಿತಪ್ಪಿ ಸೋತರೆ ಆಗ ಬೆಂಗಳೂರು ತಂಡದ ಭವಿಷ್ಯ ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದ ಮೇಲೆ ಅವಲಂಬಿತ ಆಗಿರುತ್ತೆ. …

Read More »

ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ.

ಹೊಸದಿಲ್ಲಿ:  ತರಕಾರಿ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ ಜನತೆಗೆ ಮತ್ತೆ ಎಲ್ ಪಿ ಜಿ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಮತ್ತೆ ಇದೀಗ 19 ಕೆಜಿ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ. ಈ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 19 …

Read More »

ನಟಿ ಉಮಾಶ್ರೀ ಮನೆ ಕಳ್ಳತನ ಮಾಡಲಾಗಿದೆ. ಅಪಾರ ಪ್ರಮಾಣದ ವಸ್ತು ಮತ್ತು ಹಣ ಹೋಗಿರಬಹುದು ಎಂದು ಪೊಲೀಸರು ಶಂಕೆ

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ. ನಟಿ ಉಮಾಶ್ರೀ ಅವರ‌ಮನೆಯನ್ನು ಕಳ್ಳತನ ಮಾಡಲಾಗಿದೆ. ಮನೆಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಅಪಾರ ಪ್ರಮಾಣದ ವಸ್ತು ಮತ್ತು ಹಣ ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಳವು ಮಾಡಿದ ಖದೀಮರಿಗೆ ಬಲೆ‌ಬಿಸಿದ್ದಾರೆ.

Read More »

ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ

        ಗೋಕಾಕ: ಗೋಕಾಕ ನಗರದ ನಗರ್ ಸಭೆ ಚುನಾವಣೆ ಕೊನೆಗೂ ಅಂತ್ಯ ಹಾಡಿದೆ . ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೇಲೆ ಆಗಿದೆ ಗೋಕಾಕ ನಗರಸಭೆ ಅಧ್ಯಕ್ಷ ರಾಗಿ ಜಯಾನಂದ ಹುಣ ಚ್ಯಾಳಿ ಆಯ್ಕೆ ಆದರೆ ಗೋಕಾಕ ನಗರ ಸಭೆ ಉಪಾಧ್ಯಕ್ಷ ರಾಗಿ. ಬಸವ ರಾಜ ಅರೆನ್ನವರ ಆಯ್ಕೆ ಯಾಗಿದ್ದಾರೆ ಈ ಬಾರಿ ಸಾಹುಕಾರರ ಕೃಪಾ ಕಟಾಕ್ಷ ಇವರಿಬ್ಬರ ಮೆಲಾಗಿದ್ದು ಇಬ್ಬರು ಒಳ್ಳೆಯ …

Read More »

ಭಾರತದಲ್ಲಿ ಕೊರೊನಾ ಏರಿಳಿತದ ಆಟ : 24 ಗಂಟೆಯಲ್ಲಿ 45,231 ಪಾಸಿಟಿವ್, 496 ಡೆತ್

ನವದೆಹಲಿ/ಮುಂಬೈ,ನ.2-ದೇಶದಲ್ಲಿ ಕಳೆದ ಏಳು ವಾರಗಳಿಂದ ಹೊಸ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಇಳಿಮುಖದ ವೇಗ ನಿಧಾನವಾಗುತ್ತಿದೆ. ಚಳಿಗಾಲ ಮತ್ತು ಹಬ್ಬದ ಋತುವಿನಲ್ಲಿ ಡೆಡ್ಲಿ ಕೊರೊನಾ ವೈರಸ್ ಏರಿಳಿತದ ಆಟ ಮುಂದುವರಿದಿದೆ. ದೇಶಾದ್ಯಂತ ಮಾರಕ ಕೊರೊನಾ ವೈರಸ್‍ನ ಹಾವಳಿ ಇಳಿಮುಖವಾಗುವ ಮುನ್ಸೂಚನೆ ಮತ್ತೆ ಗೋಚರಿಸ ತೊಡಗಿದ್ದು, ದಿನನಿತ್ಯದ ಸೋಂಕು ಪ್ರಕರಣಗಳಲ್ಲಿ ಇಳಿಕೆಯಾದರೂ ಸಾವು ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದೆ.ಕಳೆದ ಆರು ದಿನಗಳಿಂದಲೂ 50,000 ಸನಿಹದಲ್ಲೇ ಪಾಸಿಟಿವ್ ಪ್ರಕರಣಗಳ ದಾಖಲೆ ಮುಂದುವರಿದಿದೆ. ಸತತ ನಾಲ್ಕನೇ ದಿನ …

Read More »

ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್

ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಕೇವಲ ಗಾಯಕರಾಗಿ ಅಲ್ಲದೇ ಎಸ್‍ಪಿಬಿ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಎಸ್‍ಪಿಬಿ ನಟಿಸಿದ್ದಾರೆ. 8 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಮಿಥುನಂ ಕನ್ನಡದಲ್ಲಿ ಮಿಥುನನಾಗಿ ತೆರೆಗೆ ಅಪ್ಪಳಿಸಲಿದೆ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಎಸ್‍ಪಿಬಿ …

Read More »

ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲು ಸಾಕ್ಷಿ:.ಕಾಂಗ್ರೆಸ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಕಾಂಗ್ರೆಸ್ ಅಧಿಕೃತ ಟ್ವೀಟ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದೆ. ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗುತ್ತದೆ ಎನ್ನುವ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲು ಸಾಕ್ಷಿ. ಇವರ ಮಾತಲ್ಲಿ ಘನತೆ, ಗೌರವ, ಬದ್ಧತೆ, ಯಾವುದೂ ಇಲ್ಲ. …

Read More »

ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ:ಬಸವರಾಜ ಬೊಮ್ಮಾಯಿ

ಹಾವೇರಿ:  ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸಲು ಯೋಜಿಸಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್  ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾದ ನಂತರ ಸಮ್ಮೇಳನಕ್ಕೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.  86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವಾಗ ನಡೆಸಬೇಕು ಎಂಬ ಕುರಿತು ಪರಿಷತ್ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಕುರಿತು …

Read More »

ಯಾರ್ ಆಗ್ತಾರೆ ಗೋಕಾಕ ನಗರ್ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ… .?

ಗೋಕಾಕ- ಗೋಕಾಕ ನಲ್ಲಿ ಇಂದು ನಗರ್ ಸಭೆ ಚುನಾವಣೆ ನಡೆಯುತ್ತಿದ್ದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಒಟ್ಟು 31ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು 31ರಲ್ಲಿ ಇಬ್ಬರು ತಿರಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಉಳಿದ ಜನರಲ್ಲಿ ಚುನಾವಣೆ ಜಟಾಪಟಿ ನಡೆಯುತ್ತಿದ್ದು ಯಾರು ಗೋಕಾಕ ನಗರ್ ಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ ರಮೇಶ್ ಜಾರಕಿಹೊಳಿ ಅವರ್ ಕೃಪಾ ಕಟಾಕ್ಷ ಯಾರ್ ಮೇಲಾಗುತ್ತದೆ ಅನ್ನೋದು …

Read More »

ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಗ್ರಾಮಸ್ಥರು,‌ ಕನ್ನಡಪರ‌ ಸಂಘಟನೆಗಳು ಘೇರಾವ್

ಅಥಣಿ: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಗ್ರಾಮಸ್ಥರು,‌ ಕನ್ನಡಪರ‌ ಸಂಘಟನೆಗಳು ಘೇರಾವ್ ಹಾಕಿದ ಘಟನೆ ನಡೆದಿದೆ. ಹಿಪ್ಪರಗಿ ಬ್ಯಾರೇಜ್ ಸಂಪರ್ಕ ಕಲ್ಲಿಸುವ‌ ರಸ್ತೆ ಕಾಮಗಾರಿಗೆ ಭೂಮಿ ಪೂಜೆ‌ ನೆರವೇರಿಸಲು ಆಗಮಿಸುತ್ತಿದ್ದರು.ಈ ವೇಳೆ ರಸ್ತೆಯ ಮಧ್ಯದಲ್ಲಿಯೇ ಗ್ರಾಮಸ್ಥರು, ಕನ್ನಡಪರ ಹೋರಾಟಗಾರರು ಘೇರಾವ್ ಹಾಕುವ ಮೂಲಕ ಸಮಸ್ಯೆಗಳನ್ನು ಆಲಿಸುವಂತೆ ಪಟ್ಟು ಹಿಡಿದರು. ಹಿಪ್ಪರಗಿ, ನಂದೇಶ್ವರ ಗ್ರಾಮದಲ್ಲಿ ಮೂಲ ಸೌಕರ್ಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ. ಚುನಾವಣೆ ಬಳಿಕ …

Read More »