ಹಾಸನ, ನ.20- ಸುಮಾರು 906 ವರ್ಷಗಳ ಇತಿಹಾಸಹೊಂದಿರುವ ಬೇಲೂರು ರಸ್ತೆಯ ದೊಡ್ಡಗದವಳ್ಳಿ ಲಕ್ಷ್ಮೀದೇವಾಲಯದಲ್ಲಿರುವ ಮಹಾಕಾಳಿ ವಿಗ್ರಹ ಇದ್ದಕ್ಕಿದ್ದಂತೆ ಛಿದ್ರವಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಹಾಸನ-ಬೇಲೂರು ರಸ್ತೆಯ ಹಗರೆ ಬಳಿ ಇರುವ ಪುರಾತನ ಲಕ್ಷ್ಮೀದೇವಾಲಯದಲ್ಲಿ ಮಹಾಕಾಳಿ ವಿಗ್ರಹವಿತ್ತು. ಈ ವಿಗ್ರಹ ಕೊಲ್ಲಾಪುರದ ಮಹಾಲಕ್ಷ್ಮಿ ವಿಗ್ರಹಕ್ಕೆ ಸ್ವಾಮ್ಯತೆ ಇತ್ತು. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಒಳಪಟ್ಟಿದ್ದು, ಇದೀಗ ಈ ವಿಗ್ರಹ ಹಾನಿಗೀಡಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಪುರಾತನ ದೇವಾಲಯಕ್ಕೆ ಪ್ರತಿನಿತ್ಯ ಹಲವಾರು …
Read More »Monthly Archives: ನವೆಂಬರ್ 2020
ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧತೆ
ಬೆಂಗಳೂರು,ನ.20- ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕೃತವಾದ ಮಸೂದೆಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತದೆ ಎಂಬ ಕಾರಣಕ್ಕೆ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಜ್ಜಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಪರಿಷತ್‍ಗೆ ಹೊಸ ಸಭಾಪತಿ ಆಯ್ಕೆ ಮಾಡಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಉಭಯ ಪಕ್ಷಗಳ ನಡುವೆ ಮೈತ್ರಿಯಾದರೆ, ಬಿಜೆಪಿಗೆ ಸಭಾಪತಿ ಹಾಗೂ ಜೆಡಿಎಸ್‍ಗೆ ಉಪಸಭಾಪತಿ ಸ್ಥಾನ ಹಂಚಿಕೆಯಾಗಲಿದೆ. ಡಿಸೆಂಬರ್ 7 ರಿಂದ 15 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ …
Read More »ರೈಲು ಏರಿ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯುವಕ ಸಾವು
ಚೆನ್ನೈ,ನ.20- ಸರಕು ರೈಲಿನ(ಗೂಡ್ಸ್ ರೈಲ್) ಮೇಲೆ ಹತ್ತಿ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿದ್ದ ಯುವಕನಿಗೆ ಹೈಟೆಕ್ಷಂನ್ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವೆನಲಿಯಲ್ಲಿ ನಡೆದಿದೆ. ಎಂ.ಗಣೇಶ್ವರ(15) ವಿದ್ಯುದ್ಘಾತಕ್ಕೆ ತುತ್ತಾಗಿರುವ ಯುವಕ. ರೈಲ್ವೆ ಜಂಕ್ಷನ್‍ನಲ್ಲಿ ಗೂಡ್ಸ್ ರೈಲು ಮೂಲಕ ಸಾಗಿಸುವ ಆಹಾರ ಧಾನ್ಯಗಳನ್ನು ಪರಿಶೀಲಿಸುವ ಇನ್‍ಸ್ಪೆಕ್ಟರ್ ಮಗ ಈತ. ನಿನ್ನೆ ತನ್ನ ತಂದೆಯೊಂದಿಗೆ ಬಂದಿದ್ದ. ಬೇರೆ ಪ್ಲಾಟ್‍ಫಾರ್ಮ್‍ನಲ್ಲಿ ರೈಲು ಹತ್ತಿದ್ದನು. ಅಲ್ಲೇ ಹಾದುಹೋಗಿರುವ ಹೈಟೆನ್ಷನ್ ತಂತಿಯನ್ನು ಗಮನಿಸದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದನು.ಈ ವೇಳೆ …
Read More »ಆರೋಪಿ ಭೀಮಶಿ ಭಜಂತ್ರಿ ತಲೆಗೂದಲು ಹಿಡಿದು ಪರೇಡ್ ವೇಳೆ ಎಸ್‍ಪಿ ಅನುಪಮ ಅಗ್ರವಾಲ ಕೆನ್ನೆಗೆ ಬಾರಿಸಿದ್ದಾರೆ.
ವಿಜಯಪುರ: ರೌಡಿಗಳ ಪರೇಡ್ ವೇಳೆ ಎಸ್‍ಪಿ ಅನುಪಮ ಅಗರವಾಲ ಅವರು ರೌಡಿಶೀಟರ್ ತಲೆಗೂದಲು ಹಿಡಿದು ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳಿಗೆ ಪರೇಡ್ ನಡೆದಿದೆ. ಇದೆ ವೇಳೆ ಬಡ್ಡಿ ವ್ಯವಹಾರದ ರೌಡಿಶೀಟರ್‍ಗೆ ಎಸ್‍ಪಿ ಕೆನ್ನೆಗೆ ಬಾರಿಸಿದ್ದಾರೆ. ವಿಜಯಪುರ ನಗರದ ನಾನಾ ಪೊಲೀಸ್ ಠಾಣೆಗಳ ಸುಮಾರು 110ಕ್ಕೂ ಹೆಚ್ಚು ರೌಡಿಗಳಿಗೆ ಪೊಲೀಸರು ಪರೇಡ್ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕ್ರೈಂ ಹೆಚ್ಚಾಗುತ್ತಿದ್ದಂತೆ ಎಸ್‍ಪಿ ರೌಡಿಶೀಟರ್ …
Read More »ಬಿಜೆಪಿ ಮುಖಂಡರಿಂದ ಬಿಜೆಪಿ ಮುಖಂಡನಿಗೇ ಬ್ಲ್ಯಾಕ್ ಮೇಲ್,
ಮೈಸೂರು: ಖಾಸಗಿ ವೀಡಿಯೋ ಹೊಂದಿರುವ ಮೆಮೋರಿ ಕಾರ್ಡನ್ನ ತೋರಿಸುತ್ತ ಬಿಜೆಪಿ ಮುಖಂಡನಿಗೆ ಬಿಜೆಪಿ ಮುಖಂಡರೇ ಮುಂದಾಗಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಕುವೆಂಪುನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡರಿಂದ ಬಿಜೆಪಿ ಮುಖಂಡನಿಗೇ ಬ್ಲ್ಯಾಕ್ ಮೇಲ್, ಸುಲಿಗೆ. ಖಾಸಗಿ ವೀಡಿಯೋವುಳ್ಳ ಮೇಮೋರಿ ಕಾರ್ಡ್‌ಗಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದೆ. ಬರೋಬ್ಬರಿ ಒಂದು ವರ್ಷದ ಬಳಿಕ ಡಾ.ಕೆ.ಪ್ರಕಾಶ್ ಬಾಬುರಾವ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ. ಆರೋಪಿಗಳಾದ …
Read More »ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ
ಬೆಂಗಳೂರು: ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆಯೇ ಇದರ ವಿರುದ್ಧ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿದ್ದವು. ಈ ವಿಚಾರವಾಗಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ …
Read More »ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರ: ಸತೀಶ್ ಜಾರಕಿ ಹೊಳಿ
ಗೋಕಾಕ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರವಾಗಿದೆ. ನಿಗಮ, ಪ್ರಾಧಿಕಾರ ಸ್ಥಾಪನೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕು. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಭಾರತದಲ್ಲಿ 5 ರಿಂದ ಆರು ಸಾವಿರ ಜಾತಿಗಳಿವೆ ಎಲ್ಲಾ ಜಾತಿಗಳಿಗೆ ಬಿಜೆಪಿಯು ನಿಗಮ ಪ್ರಾಧಿಕಾರ ಮಾಡುವ ಮುಖಾಂತರ ಪ್ರಜಾಪ್ರಭುತ್ವ ವಿರೋಧಿ ಕೆಲಸವನ್ನು ಮಾಡಲು ಹೊರಟಿದೆ ಎಂದು ಶಾಸಕ, ಕೆಪಿಸಿಸಿ …
Read More »ಸರಕಾರದ ನಿರ್ಧಾರ ಖಂಡಿಸಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಬೆಂಗಳೂರು : ಮರಾಠ ಅಭಿವೃಧಿ ಪ್ರಾಧಿಕಾರ ರಚನೆ ಖಂಡಿಸಿ ಇಂದು ವಾಟಲ್ ನಾಗರಾಜ್ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರಕಾರದ ನಿರ್ಧಾರವನ್ನು ಖಂಡಿಸಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿ ಬೆಂಬಲ ಸೂಚಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವಿರೋಧ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಈ ಹಿಂದೆ …
Read More »ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಬಿ.ಎಲ್ ಸಂತೋಷರನ್ನ ಭೇಟಿಯಾದ ಸಚಿವ ರಮೇಶ ಜಾರಕಿಹೊಳಿ
ಬೆಂಗಳೂರು : ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಹಿರಿಯ ನಾಯಕ ಬಿ.ಎಲ್ ಸಂತೋಷ್ ಅವರಿಗೆ ಕಳೆದ ಆರು ತಿಂಗಳಿನಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಸಮಾಲೋಚನೆ …
Read More »ಸರ್ಕಾರಿ ಜಮೀನು ವಿವಾದದಿಂದ ಪಿಡಿಓ ವಾಹನಕ್ಕೆ ಬೆಂಕಿ ಇಟ್ಟ ಘಟನೆ
ಚಿಕ್ಕಮಗಳೂರು: ಸರ್ಕಾರಿ ಜಮೀನು ವಿವಾದದಿಂದ ಪಿಡಿಓ ವಾಹನಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನ ಬಾಸಾಪುರ ಗ್ರಾಮದಲ್ಲಿ ನಡೆದಿದೆ. ಬಗರ್ ಹುಕುಂ ಜಮೀನಿಗಾಗಿ 2 ಕುಟುಂಬಗಳ ನಡುವೆ ಕಲಹ ಉಂಟಾಗಿದ್ದು, ಜಮೀನಿನಲ್ಲೇ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸರು ಭದ್ರಾವತಿ ತಾಲೂಕಿನ ಪಿಡಿಓ ಹನುಮಂತಪ್ಪನನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ …
Read More »