Breaking News

Monthly Archives: ನವೆಂಬರ್ 2020

ದಿನನಿತ್ಯದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದಮತ್ತೆ ಲಾಕ್‍ಡೌನ್

ಬೆಂಗಳೂರು, ನ.1- ಕಿಲ್ಲರ್ ಕೊರೊನಾ ವೈರಸ್ ಹಾವಳಿ ಇಳಿಮುಖವಾಗುತ್ತಿರುವ ಸಂತಸದಲ್ಲಿದ್ದ ಯೂರೋಪ್ ಖಂಡದ ಅನೇಕ ರಾಷ್ಟ್ರಗಳ ಜನತೆಗೆ ಹೆಮ್ಮಾರಿಯ ಎರಡನೆ ಹಂತದ ದಾಳಿ ಬರಸಿಡಿಲು ಬಡಿದಂತಾಗಿದೆ. ಕೊರೊನಾ ಎರಡನೆ ಅಲೆಯ ಆರ್ಭಟ ತೀವ್ರವಾಗಿದ್ದು, ದಿನನಿತ್ಯದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ವಿವಿಧ ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಫ್ರಾನ್ಸ್, ಜರ್ಮನಿ, ಸ್ಪೇನ್ ನಂತರ ಈಗ ಇಂಗ್ಲೆಂಡ್‍ನಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ನಾಲ್ಕು ವಾರಗಳ ಕಾಲ ಲಾಕ್‍ಡೌನ್ …

Read More »

ಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ತೆರೆ, ಇನ್ನೇನಿದ್ದರೂ ಮನೆಮನೆ ಮತಬೇಟೆ

ಬೆಂಗಳೂರು, ನ.1- ಮಿನಿ ಕುರುಕ್ಷೇತ್ರ ಎಂದೇ ಭಾವಿಸಲಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮತದಾರರ ಮನವೊಲಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳಾದ ಅಶ್ವತ್ಥನಾರಾಯಣ, ಗೋವಿಂದ್‍ಕಾರಜೋಳ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು …

Read More »

ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ.

ಮೈಸೂರು, ನ.1- ಕೊರೊನಾ ಹಿನ್ನೆಲೆಯಲ್ಲಿ ನಡೆದ ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ. ಸರ್ಕಾರ ದಸರಾ ಆಚರಣೆಗಾಗಿ 10 ಕೋಟಿ ರೂ.ವನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತಾದರೂ ಸಂಪ್ರದಾಯವನ್ನು ಕೈ ಬಿಡದಂತೆ ವಿಶ್ವ ವಿಖ್ಯಾತ ದಸರಾವನ್ನು ಸರಳವಾಗಿ ಆಚರಿಸಿ ವೆಚ್ಚ ಮಾಡಿದ್ದು ಕೇವಲ 2 ಕೋಟಿ ರೂ. ಮಾತ್ರ. 25 ವರ್ಷಗಳ ಇತಿಹಾಸದಲ್ಲಿ ಒಂದು ವಾರದೊಳಗೆ ದಸರಾ ವೆಚ್ಚವನ್ನು ನೀಡಿರುವುದು ಇದೇ ಮೊದಲ …

Read More »

ಕುಸುಮಾರನ್ನು ಗೆಲ್ಲಿಸಲು ಡಿಕೆಶಿ ಕೊನೆ ಕ್ಷಣದ ಕಸರತ್ತು, ಅಬ್ಬರದ ಪ್ರಚಾರ

ಬೆಂಗಳೂರು, ನ.1-ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಕಾಂಗ್ರೆಸ್ ಪಡೆ ಇಂದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ಬರೇಕಾ, ಅತುಮನೇಸಾರ್ ಚರ್ಚ್‍ಗೆ ಭೇಟಿ ನೀಡಿದರು. ನಂತರ ಯಶವಂತಪುರದ ಜುಮ್ಮಾ ಮಸೀದಿಗೂ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು ಎಂಬ ಅರಿವು ನಮಗೂ ಇದೆ. ಹಾಗಾಗಿ ಚರ್ಚ್ ಮತ್ತು ಮಸೀದಿಗೆ …

Read More »

ಬೆಳಗಾವಿ, ವಿಜಯಪುರ ಮೈಸೂರಿನ ಪಬ್ಲಿಕ್ ಟಿವಿ ವರದಿಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೆಳಗಾವಿಯ ದಿಲೀಪ್ ಕುರಂದವಾಡೆ, ವಿಜಯಪುರದ ಪುರುಷೋತ್ತಮ ಮತ್ತು ಮೈಸೂರಿನ ಕೆ.ಪಿ.ನಾಗರಾಜ್ ಪಬ್ಲಿಕ್ ಟಿವಿಯ ವರದಿಗಾರರು ಆಯ್ಕೆಯಾಗಿದ್ದಾರೆ. ಮೂವರು ವರದಿಗಾರರಿಗೆ ನಾಳೆ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೈಸೂರು ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಕೆ.ಪಿ.ನಾಗರಾಜ್ …

Read More »

ಕುಡಿದ ಮತ್ತಿನಲ್ಲಿ ಎರಡು ತಂಡಗಳು ಕೈ ಕೈ ಮಿಲಾಯಿಸಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ ಮೂರು ಬೈಕ್ ಗಳು ಭಸ್ಮ

ಉಡುಪಿ: ಕುಡಿದ ಮತ್ತಿನಲ್ಲಿ ಎರಡು ತಂಡಗಳು ಕೈ ಕೈ ಮಿಲಾಯಿಸಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ ಮೂರು ಬೈಕ್ ಗಳು ಭಸ್ಮವಾಗಿದೆ. ಉಡುಪಿ ತಾಲೂಕಿನ ಕೊಳಲಗಿರಿಯಲ್ಲಿ ಈ ಘಟನೆ ಸಂಭವಿಸಿದ್ದು, ಕೊಳಲಗಿರಿ ಸರ್ಕಾರಿ ಶಾಲೆ ಬಳಿ ಕಳೆದ ರಾತ್ರಿ ಜಗಳ ನಡೆದಿತ್ತು. ಉಪ್ಪೂರಿನ ಸೂರಜ್, ಅಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಂಠ ಹಾಗೂ ಪಪ್ಪು ಮದ್ಯಪಾನ ಮಾಡಿ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಆರಂಭವಾಗಿದೆ. ಗುಂಪಲ್ಲಿದ್ದ ದುಷ್ಕರ್ಮಿ ಬೈಕಿಗೆ ಬೆಂಕಿ ಹಚ್ಚಿದ್ದಾನೆ.ಗಲಾಟೆ …

Read More »

ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ.

ಬೆಳಗಾವಿ:  ಕುಂದಾನಗರಿಯಲ್ಲಿ  ಕರಾಳ ದಿನಾಚರಣೆಗೆ ಮುಂದಾಗಿದ್ದ ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರೂ, ಕೆಲ ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ. ಬೆಳಗಾವಿಯ ಮರಾಠಾ ಭವನದಲ್ಲಿ ಸೇರಿರುವ ಎಂಇಎಸ್ ಕಾರ್ಯಕರ್ತರು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದಾರೆ. ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಸಚಿವರು ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕರ್ತರು ಮರಾಠಾ ಭವನದಲ್ಲಿ ಸೇರಿದ್ದಾರೆ. ಬೆಳಗಾವಿ, ಕಾರವಾರ, …

Read More »

ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ

ಬೆಳಗಾವಿ: ಪೊಲೀಸರ ಕಣ್ಣುತಪ್ಪಿಸಿ ಎನ್‌ಸಿಪಿ ಮಹಿಳಾ ಘಟಕದ ರೂಪಾಲಿ ಚಾಕನಕರ ಬೆಳಗಾವಿಗೆ ಆಗಮಿಸಿ ಎಂಇಎಸ್  ಪ್ರತಿಭಟನಾ  ಸಭೆಯಲ್ಲಿ ಭಾಗಿಯಾಗಿದ್ದಾರೆ.  ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.  ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ.‌ ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ.‌ …

Read More »

ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರ ಲಾಠಿ ಚಾರ್ಜ್

ಬೆಳಗಾವಿ:  ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮಹಾರಾಷ್ಟ್ರ ಬಸ್ ಗೆ  ಕೆಲವು ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ  ಚನ್ನಮ್ಮ ವೃತ್ತದಲ್ಲಿ  ರಾಜ್ಯೋತ್ಸವ ಆಚರಿಸುತ್ತಿದ್ದ   ಗುಂಪು ಗುಂಪಾಗಿ ಸೇರಿದ  ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸ್ ಲಾಠಿ ಏಟು ಬೀಳುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರ ನಡೆಗೆ  ಕರವೇ ಜಿಲ್ಲಾಧ್ಯಕ್ಷ ಅಸಮಧಾನ ವ್ಯಕ್ತವಾಡಿಸಿದ್ದು, ಎಂಇಎಸ್ ಮುಖಂಡರು ಪ್ರತಿಭಟನಾ ಸಭಾ ನಡೆಸಿದರು ಅದಕ್ಕೆ …

Read More »

ಸಿದ್ದರಾಮಯ್ಯ ಮನೆಯಿಂದ ಹಣ ತಂದು ಕೊಟ್ಟಿಲ್ಲ: ಎಸ್.ಟಿ ಸೋಮಶೇಖರ್

ಮೈಸೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಶೇ.100 ರಷ್ಟು ಮುನಿರತ್ನ ಗೆಲ್ಲುತ್ತಾರೆ. ಆರ್‍ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು. ನಗರದ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಹೀಗಾಗಿ ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ. ಕ್ಷೇತ್ರದ …

Read More »