ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಓಮಿನಿ ವಾಹನವನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಯಚೂರು ಮಾನ್ವಿ ಮಧ್ಯೆ ರಸ್ತೆಯಲ್ಲಿ ಓಮಿನಿ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಶೇಕ್ ಅಬ್ದುಲ್, ಗುರುಕುಮಾರ್, ಸೈಯದ್ ಹಕೀಂ ,ಅಸ್ಲಾಂ ಷಾ ಹಾಗೂ ದರೋಡೆಗೆ ಸಾಥ್ ನೀಡಿದ್ದ ಓಮಿನಿ ಚಾಲಕ ಗುರುರಾಜನನ್ನ ಬಂಧಿಸಲಾಗಿದೆ ನಾಲ್ಕು ಜನರ ತಂಡ ವಾಹನವನ್ನ ಅಡ್ಡಗಟ್ಟಿ 5 ಲಕ್ಷ …
Read More »Daily Archives: ನವೆಂಬರ್ 20, 2020
ಡಿಸೆಂಬರ್ 10ರ ವರೆಗೆ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಸಂಚರಿಸಬಹುದಾಗಿದೆ.
ಬೆಂಗಳೂರು: ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ ಬಳಸಿ ಡಿಸೆಂಬರ್ 10ರ ವರೆಗೆ ಸಂಚರಿಸಲು ಅವಕಾಶ ನೀಡಿದೆ. ಈ ಕುರಿತು ಸಾರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 17ರಿಂದ ರಾಜ್ಯದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಪದವಿ, ವೂದ್ಯಕೀಯ, ತಾಂತ್ರಿಕ, ಡಿಪ್ಲೋಮಾ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. …
Read More »ಸದ್ಯದಲ್ಲೇ ಕೊರೋನಾ ಲಸಿಕೆ,,,!
ಬೆಂಗಳೂರು: ಸದ್ಯದಲ್ಲೇ ಕೊರೋನಾ ಲಸಿಕೆಯ ಗುಡ್‍ನ್ಯೂಸ್ ಸಿಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೋರೋನಾ ಲಸಿಕೆ ಹಂಚಿಕೆ, ಸುರಕ್ಷಿತ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಲಸಿಕೆ ವಿತರಿಸಲು ಮಾಡಿಕೊಂಡಿರುವ ವ್ಯವಸ್ಥೆಗಳ ಕುರಿತು ಅಂಕಿ ಅಂಶ ಸಮೇತ ಕೇಂದ್ರಕ್ಕೆ ಮಾಹಿತಿ ನೀಡಿದೆ. ಸಾರ್ವಜನಿಕರಿಗೆ ಕೊರೋನಾ ಲಸಿಕೆ ನೀಡಲು ರಾಜ್ಯ ರೆಡಿ ಇದೆ ಎಂಬ ಸಂದೇಶ ರವಾನಿಸಿದೆ.ಈಗಾಗಲೇ ಲಸಿಕೆ ಸ್ಟೋರೇಜ್‍ಗೆ ಬೆಂಗಳೂರಿನ ದಾಸಪ್ಪ ಆಸ್ಪತ್ರೆ, ಬಾಗಲಕೋಟೆಯ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲಾ …
Read More »ಮದುವೆಯಾಗು ಎಂದಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ
ಕಲಬುರಗಿ: ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಸೂರು ನಾಯಕ ತಾಂಡಾದಲ್ಲಿ ನಡೆದಿದೆ. ಮೃತ ಯುವತಿಯನ್ನು ಕಾವೇರಿ ಪವಾರ್(23) ಎಂದು ಗುರುತಿಸಲಾಗಿದೆ. ಪ್ರಿಯಕರ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮನನೊಂದು ಕಾವೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಾವೇರಿ ಮತ್ತು ಸಲಗರ ಕಾಲೋನಿ ಯುವಕ ಮಾನಸಿಂಗ್ ರಾಠೋಡ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತನ್ನನ್ನು ಮದುವೆಯಾಗು ಎಂದಿದ್ದಕ್ಕೆ ಮಾನಸಿಂಗ್ ನಿರಾಕರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ …
Read More »ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಗದಗ: ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಘಟನೆ ನಡೆದಿದೆ. ಬ್ಯಾಡಗಿ ಮೂಲದ ಹರ್ಷವರ್ಧನ್ ಅರಕೇರಿ ಈಜಲು ಬಾರದೆ ಹೊಂಡದಲ್ಲಿ ಸಾವನ್ನಪ್ಪಿದ ಬಾಲಕ. ದೀಪಾವಳಿ ಹಬ್ಬಕ್ಕೆಂದು ಬ್ಯಾಡಗಿಯಿಂದ ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ, ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಬಟ್ಟೆಗಳನ್ನು ಹೊಂಡದ ದಡದಲ್ಲಿಟ್ಟು ನೀರಿಗೆ ಹಾರಿದ್ದಾರೆ. ಹೊಂಡದಲ್ಲಿದ್ದ ಹೂಳಲ್ಲಿ ಸಿಲುಕಿದ್ದರಿಂದ ಈಜಲು ಬಾರದೆ …
Read More »ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಧರ್ಮದೇಟು
ಬೆಂಗಳೂರು: ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಧರ್ಮದೇಟು ಬಿದ್ದಿದೆ. ಬೆಂಗಳೂರಿನ ಗಾಂಧಿನಗರದ ತ್ರಿಭವನ್ ಥೇಟರ್ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಗೆ ಸ್ಥಳೀಯರು ಥಳಿಸುತ್ತಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ತೆಲುಗು ಭಾಷೆ ಮಾತನಾಡುವ ವ್ಯಕ್ತಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಧರ್ಮದೇಟು ಕೊಟ್ಟ ಬಳಿಕ ಸಾರ್ವಜನಿಕರೇ ಆ ವ್ಯಕ್ತಿಯನ್ನ ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. …
Read More »