Breaking News

Daily Archives: ನವೆಂಬರ್ 14, 2020

10 ವರ್ಷದ ಲವ್ ಫೇಲ್- ಭಗ್ನ ಪ್ರೇಮಿ ಆತ್ಮಹತ್ಯೆ

ಮೈಸೂರು: ತಂಗಿ ಮದುವೆ ರದ್ದು ಹಾಗೂ ಇತ್ತ ತನ್ನ ಲವ್ ಕೂಡ ಫೇಲ್ ಆಗಿರುವುದರಿಂದ ಮನನೊಂದು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿಜಯಶ್ರೀಪುರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಚೇತನ್ ಶರ್ಮ(29) ಎಂದು ಗುರುತಿಸಲಾಗಿದೆ. ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್, ಮೂಲತಃ ಬೆಂಗಳೂರು ನಿವಾಸಿ. ಈತ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದನು. ಈತ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ …

Read More »

ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಮೂರು ದಿನ ಕಳೆದರೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ

ಬೆಂಗಳೂರು, ನ.14- ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಧಿಸೂಚನೆ ಹೊರಡಿಸಿ ಮೂರು ದಿನ ಕಳೆದರೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನವೆಂಬರ್ 11ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಳೆದ ಮೂರು ದಿನಗಳಲ್ಲಿ ಯಾವುದೇ ಪಕ್ಷ ಅಥವಾ ಯಾವೊಬ್ಬ ಅಭ್ಯರ್ಥಿಯೂ ಉಮೇದುವಾರಿಕೆ ಸಲ್ಲಿಸಿಲ್ಲ. ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ ಚುನಾವಣಾ …

Read More »

ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ

ಬೆಂಗಳೂರು, ನ.14- ಮಾಸ್ಕ್ ಇಲ್ಲ… ಸಾಮಾಜಿಕ ಅಂತರ ಇಲ್ಲ… ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ… ನಗರದ ಕೆಆರ್ ಮಾರುಕಟ್ಟೆ, ಶಿವಾಜಿನಗರ, ಮಲ್ಲೇಶ್ವರಂ, ಯಶವಂತಪುರ ಮುಂತಾದೆಡೆ ಹಬ್ಬದ ಸಾಮಾನುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಹೂವು, ಹಣ್ಣು, ಬಾಳೆಕಂದು, ದೀಪ, ಹೊಸ ಬಟ್ಟೆಗಳನ್ನು ಖರೀದಿಸಲು ಜನ ನಾ ಮುಂದು ತಾ ಮುಂದು ಎಂದು ಮಾರುಕಟ್ಟೆಗಳು, ಅಂಗಡಿಗಳು, ಶಾಪ್‍ಗಳಿಗೆ ಲಗ್ಗೆ ಇಟ್ಟರು. ಕೊರೊನಾ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ …

Read More »

ಲಾಕ್‍ಡೌನ್‍ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ಸಂಸ್ಥೆಗಳು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ವೇತನ ನೀಡಲಾಗದ ಸ್ಥಿತಿಗೆ ತಲುಪಿವೆ.

ಬೆಂಗಳೂರು, ನ.14- ಕೋವಿಡ್-19ರ ಲಾಕ್‍ಡೌನ್‍ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾರಿಗೆ ಸಂಸ್ಥೆಗಳು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ವೇತನ ನೀಡಲಾಗದ ಸ್ಥಿತಿಗೆ ತಲುಪಿವೆ. ನವೆಂಬರ್ ತಿಂಗಳ ಎರಡು ವಾರ ಕಳೆದರೂ ಅಕ್ಟೋಬರ್ ತಿಂಗಳ ವೇತನವನ್ನು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಿಲ್ಲ. ರಾಜ್ಯಸರ್ಕಾರ ಈ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿದರೆ ಮಾತ್ರ ವೇತನ ನೀಡಲು ಸಾಧ್ಯ ಎಂದು ಸಾರಿಗೆ …

Read More »

2019-20 ರ ಬಜೆಟ್ ನಲ್ಲಿ ಘೋಷಿಸಿದ್ದಂತೆ  ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ

ಬೆಂಗಳೂರು: 2019-20 ರ ಬಜೆಟ್ ನಲ್ಲಿ ಘೋಷಿಸಿದ್ದಂತೆ  ರಾಜ್ಯದ ವಿವಿಧ ಮಠ-ಮಂದಿರ, ದೇವಾಲಯ ಟ್ರಸ್ಟ್ ಧಾರ್ಮಿಕ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 88.75 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.  39 ಮಠಗಳಿಗೆ ತಲಾ 1ಕೋಟಿ ರೂ.,   143 ಮಠ, ಹಾಗೂ ದೇವಾಲಯಗಳ ಟ್ರಸ್ಟ್ ಗಳಿಗೆ 49.75 ಕೋಟಿ ಹಣ ನೀಡಲಾಗಿದೆ. 2019 -20 ಮತ್ತು 2020 – 21 ನೇ ಸಾಲಿನ ಬಜೆಟ್ ನಲ್ಲಿ ಮಠ-ಮಂದಿರ, ಧಾರ್ಮಿಕ ಸಂಸ್ಥೆಗಳಿಗೆ …

Read More »

ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಯ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು:ಲಕ್ಷ್ಮಣ ಸವದಿ

ಬೆಳಗಾವಿ : ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಯ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಅಂತಾ ಡಿಸಿಎಂ, ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಶನಿವಾರ  ಕೆೆಎಸ್ ಆರ್ ಟಿಸಿ, ಬಿಎಂಟಿಸಿ ಸಿಬ್ಬಂದಿ ವೇತನ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕೊರೊನಾ ಸೋಂಕು, ಲಾಕ್ ಡೌನ್ ನಿಂದ ಸಾರಿಗೆ ಇಲಾಖೆ ಸಿಬ್ಬಂದಿ ಸಂಬಳ ನೀಡುವುದು ವಿಳಂಬವಾಗಿದೆ. ಆದರೆ ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಸಂಬಳ ಪಾವತಿಗೆ ಕ್ರಮ …

Read More »

ಉಡುಪಿಯಲ್ಲಿ ಸೌಂಡ್ ಮಾಡ್ತಿದೆ ಬಿದಿರು ಪಟಾಕಿ

ಉಡುಪಿ: ಕೊರೊನಾ ಕರಾಳತೆಯಿಂದ ಹೊರಬಂದು ದೀಪಾವಳಿಗೆ ಪಟಾಕಿ ಸಿಡಿಸೋಣ ಅಂತ ಜನ ಹಾಕಿದ್ದ ಲೆಕ್ಕಾಚಾರ ಉಲ್ಟಾ ಆಗಿದೆ. ರಾಜ್ಯ ಸರ್ಕಾರ ರಾಸಾಯನಿಕ ಪಟಾಕಿ ನಿಷೇಧ ಮಾಡಿ, ದುಷ್ಪರಿಣಾಮ ರಹಿತ ಪಟಾಕಿಗೆ ಮಣೆ ಹಾಕಿದೆ. ನಿಮ್ಮ ಪಟಾಕಿ ರಗಳೆಯೇ ಬೇಡ ಅಂತ ಉಡುಪಿಯ ಪರ್ಕಳ ಫ್ರೆಂಡ್ಸ್ ತಾವೇ ಪಟಾಕಿ ತಯಾರು ಮಾಡಲು ಮುಂದಾಗಿದ್ದಾರೆ. ಭೂಮಿ ಅದುರಿ ಬಾನು ಬಿರಿಯುವ ಪಟಾಕಿಗೆ ಈ ಬಾರಿ ಕೊರೊನಾ ಬ್ರೇಕ್ ಹಾಕಿದೆ. ಕಣ್ಣು ಬಿಡಲಾಗದ, ದಟ್ಟ …

Read More »

ಮೂರು ರಾಜ್ಯಗಳ ಉಸ್ತುವಾರಿ ಹೊಣೆ- ಸಿಟಿ ರವಿಗೆ ಅಣ್ಣಾಮಲೈ ವಿಶ್

ಬೆಂಗಳೂರು: ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಬಿಜೆಪಿ ಉಸ್ತುವಾರಿಯಾಗಿ ಆಯ್ಕೆಯಾಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಾಜಿ ಐಪಿಎಸ್ ಅಣ್ಣಾಮಲೈ ಶುಭ ಕೋರಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಮಾಜಿ ಸಚಿವ ಸಿಟಿ ರವಿ ಅವರ ಹೆಗಲಿಗೆ ಮೂರು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿಯನ್ನು ಸಿಟಿ ರವಿ ಅವರಿಗೆ ವಹಿಸಲಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೇರಳ …

Read More »

ಸಚಿವರು, ಶಾಸಕರು, ಜನಪ್ರತಿನಿಧಿಗಳ ವಿರುದ್ಧದ 570ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ

ಸಚಿವರು, ಶಾಸಕರು, ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿದ್ದ 570 ಕ್ರಿಮಿನಲ್ ಪ್ರಕರಣ ಬೆಂಗಳೂರು, ನ.13: ಸಚಿವರು, ಶಾಸಕರು, ಜನಪ್ರತಿನಿಧಿಗಳ ವಿರುದ್ಧದ 570 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಡಿ.9ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ    ಅರ್ಜಿದಾರರ …

Read More »

ಡಿ.1ರಂದು ರಾಜ್ಯಸಭೆಯ ಒಂದು ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ.

ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿ.1ರಂದು ರಾಜ್ಯಸಭೆಯ ಒಂದು ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೂ ಸಹ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಸಂಖ್ಯಾಬಲದಲ್ಲಿ ಬಿಜೆಪಿ ಸ್ಥಾನಗಳನ್ನು ಹೊಂದಿದೆ. ರಾಜ್ಯಸಭೆಗೆ ಹಾಕುವ ಮತವನ್ನು ಪಕ್ಷದ ವೀಕ್ಷಕರಿಗೆ ತೋರಿಸಬೇಕಿರುವುದರಿಂದ ಅಡ್ಡಮತದಾನ ಮಾಡಿಸುವುದು ಬಹಳ ಕಷ್ಟ. ಆಡಳಿತಾರೂಢ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಸೋಲಿಸುವುದು ಕಷ್ಟವಾಗಿರುವುದರಿಂದ …

Read More »