ಶಿವಮೊಗ್ಗ: ಬಿಹಾರದಲ್ಲಿ ಮಹಾಮೈತ್ರಿ ಅಧಿಕಾರಕ್ಕೆ ಬರುವುದು ಹಾಗೂ ತೇಜಸ್ವಿ ಯಾದವ್ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಆದರೆ ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಡಿಯೂರಪ್ಪ ಬಿಹಾರಕ್ಕೆ ಹೋಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡುವುದರಲ್ಲಿ ಎಕ್ಸ್‍ಪರ್ಟ್ ಇದ್ದಾರೆ. ಹೀಗಾಗಿ ಬಿಹಾರಕ್ಕೆ ಹೋಗುತ್ತಾರೆ ಎಂದು ಹೇಳಿ ಕಾಲೆಳೆದರು.
Read More »Daily Archives: ನವೆಂಬರ್ 7, 2020
ಆನ್‍ಲೈನ್ ಶಿಕ್ಷಣ ದೂರು – ಕಟ್ಟುನಿಟ್ಟಿನ ಅನುಪಾಲನೆಗೆ ಸುರೇಶ್ ಕುಮಾರ್ ಸೂಚನೆ
ಬೆಂಗಳೂರು: ಆನ್‍ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ, ಸಾರ್ವಜನಿಕರ ಯಾವುದೇ ದೂರುಗಳಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣವಾಣಿ, ಸಾರ್ವಜನಿಕ ಸಹಾಯವಾಣಿಗೆ ಫೋನ್ ಕರೆ ಮೂಲಕ ದಾಖಲಿಸಬಹುದೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆನ್‍ಲೈನ್ ಶಿಕ್ಷಣ ಕುರಿತಂತೆ ಹೊರಡಿಸಲಾದ ಸೂಚನೆಗಳನ್ವಯ ಸೂಕ್ತ ಅನುಪಾಲನಾ ವ್ಯವಸ್ಥೆ ಜಾರಿಯಲ್ಲಿಡುವ ಕುರಿತು ಮತ್ತು ಈ ಸುತ್ತೋಲೆಗಳ ಅನುಷ್ಠಾನದಲ್ಲಿ ಇಲಾಖೆ ಕೈಗೊಂಡಿರುವ …
Read More »20 ವರ್ಷಗಳಿಂದ ಮಳೆಗಾಲದಲ್ಲಿ ಹಲವು ಬಾರಿ ಮುಳುಗ್ತಿದೆ ಹೆಬ್ಬಾಳೆ ಸೇತುವೆ- ಸರ್ಕಾರಕ್ಕೆ ಸ್ಥಳೀಯರು ಹಿಡಿಶಾಪ
ಚಿಕ್ಕಮಗಳೂರು: ಈ ಮಳೆಗಾಲ ಮುಗಿದ ತಕ್ಷಣ ಅದಕ್ಕೊಂದು ಶಾಶ್ವತ ಪರಿಹಾರ ಮಾಡ್ತೀವಿ ಅಂತ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಆದರೂ ಸಮಸ್ಯೆಗೆ ಮಾತ್ರ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೆ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಬೆಂದು ಬೆಂಡಾಗಿರೋ ಜನಸಾಮಾನ್ಯರು ಸರ್ಕಾರದ ವಿರುದ್ಧ ಇಡಿ ಶಾಪ ಹಾಕ್ತಿದ್ದಾರೆ. ಸೇತುವೆ ಮುಳುಗಡೆಯಾದರೆ ಯಾವ …
Read More »ಕೊರೊನಾ ಹೊತ್ತಲ್ಲೇ ಕೊಪ್ಪಳದಲ್ಲಿ ಇಲಿ ಜ್ವರ ಕಾಟ!
ಕೊಪ್ಪಳ: ಒಂದೇಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ನಿರಾಳವಾಗುತ್ತಿದ್ದರು. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಇಲಿ ಜ್ವರ ಆರಂಭವಾಗಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಹೌದು. ಕೊಪ್ಪಳ ಜಿಲ್ಲೆಯಲ್ಲಿ ಇಲಿ ಜ್ವರದ್ದೇ ಮಾತಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 6 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿ ಮುಖವಾಗುತ್ತಿರುವುದು ನೆಮ್ಮದಿ ತಂದಿರುವ ಮಧ್ಯೆಯೇ ಇದೀಗ …
Read More »ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ
ಬೆಂಗಳೂರು: ಕೊರೊನಾ ವೇಳೆಯಲ್ಲೂ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ. ಕೊರೊನಾ ಲಾಕ್‍ಡೌನ್ ಬಳಿಕ ಕೊರೊನಾದ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸರ್ಕಾರ ರಸ್ತೆಗಿಳಿಸಿತ್ತು. ಸಾರ್ವಜನಿರ ಹಿತ ದೃಷ್ಟಿಯಿಂದ ಅಂದು ಬಿಎಂಟಿಸಿ ನೌಕಕರು ಕೊರೊನಾ ನಡುವೆಯೂ ಎದರದೇ ಕಾರ್ಯನಿರ್ವಹಿಸಿದ್ದರು. ಕೊರೊನಾ ವೇಳೆಯೂ ಕೆಲಸ ಮಾಡಿದ್ದ ಸಿಬ್ಬಂದಿಗೆ ಬಿಎಂಟಿಸಿ ಒಂದು ದಿನ ವಂಡರ್ ಲಾಗೆ ಹೋಗುವ ಆಫರ್ ನೀಡಿದೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಒಟ್ಟು 200 ವಂಡರ್ ಲಾ ಉಚಿತ ಪಾಸ್‍ಗಳನ್ನು ವಿತರಿಸಿದ್ದು, …
Read More »