ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೆಳಗಾವಿಯ ದಿಲೀಪ್ ಕುರಂದವಾಡೆ, ವಿಜಯಪುರದ ಪುರುಷೋತ್ತಮ ಮತ್ತು ಮೈಸೂರಿನ ಕೆ.ಪಿ.ನಾಗರಾಜ್ ಪಬ್ಲಿಕ್ ಟಿವಿಯ ವರದಿಗಾರರು ಆಯ್ಕೆಯಾಗಿದ್ದಾರೆ. ಮೂವರು ವರದಿಗಾರರಿಗೆ ನಾಳೆ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೈಸೂರು ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಕೆ.ಪಿ.ನಾಗರಾಜ್ …
Read More »Daily Archives: ನವೆಂಬರ್ 1, 2020
ಕುಡಿದ ಮತ್ತಿನಲ್ಲಿ ಎರಡು ತಂಡಗಳು ಕೈ ಕೈ ಮಿಲಾಯಿಸಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ ಮೂರು ಬೈಕ್ ಗಳು ಭಸ್ಮ
ಉಡುಪಿ: ಕುಡಿದ ಮತ್ತಿನಲ್ಲಿ ಎರಡು ತಂಡಗಳು ಕೈ ಕೈ ಮಿಲಾಯಿಸಿಕೊಂಡಿದ್ದು, ಜಗಳ ಅತಿರೇಕಕ್ಕೆ ಹೋಗಿ ಮೂರು ಬೈಕ್ ಗಳು ಭಸ್ಮವಾಗಿದೆ. ಉಡುಪಿ ತಾಲೂಕಿನ ಕೊಳಲಗಿರಿಯಲ್ಲಿ ಈ ಘಟನೆ ಸಂಭವಿಸಿದ್ದು, ಕೊಳಲಗಿರಿ ಸರ್ಕಾರಿ ಶಾಲೆ ಬಳಿ ಕಳೆದ ರಾತ್ರಿ ಜಗಳ ನಡೆದಿತ್ತು. ಉಪ್ಪೂರಿನ ಸೂರಜ್, ಅಲ್ವಿನ್, ಮೋಹಿತ್, ಬಾಲಕೃಷ್ಣ, ಮಣಿಕಂಠ ಹಾಗೂ ಪಪ್ಪು ಮದ್ಯಪಾನ ಮಾಡಿ ಜಗಳವಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಆರಂಭವಾಗಿದೆ. ಗುಂಪಲ್ಲಿದ್ದ ದುಷ್ಕರ್ಮಿ ಬೈಕಿಗೆ ಬೆಂಕಿ ಹಚ್ಚಿದ್ದಾನೆ.ಗಲಾಟೆ …
Read More »ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ.
ಬೆಳಗಾವಿ: ಕುಂದಾನಗರಿಯಲ್ಲಿ ಕರಾಳ ದಿನಾಚರಣೆಗೆ ಮುಂದಾಗಿದ್ದ ಎಂಇಎಸ್ ಗೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದ್ದರೂ, ಕೆಲ ಎಂಇಎಸ್ ಪುಂಡರು ಮತ್ತೆ ಕರಾಳ ದಿನ ಆಚರಿಸಲು ಮುಂದಾಗಿದ್ದಾರೆ. ಬೆಳಗಾವಿಯ ಮರಾಠಾ ಭವನದಲ್ಲಿ ಸೇರಿರುವ ಎಂಇಎಸ್ ಕಾರ್ಯಕರ್ತರು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದಾರೆ. ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಸಚಿವರು ಕೂಡ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕರ್ತರು ಮರಾಠಾ ಭವನದಲ್ಲಿ ಸೇರಿದ್ದಾರೆ. ಬೆಳಗಾವಿ, ಕಾರವಾರ, …
Read More »ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ
ಬೆಳಗಾವಿ: ಪೊಲೀಸರ ಕಣ್ಣುತಪ್ಪಿಸಿ ಎನ್‌ಸಿಪಿ ಮಹಿಳಾ ಘಟಕದ ರೂಪಾಲಿ ಚಾಕನಕರ ಬೆಳಗಾವಿಗೆ ಆಗಮಿಸಿ ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದಾರೆ. ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ. ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ. …
Read More »ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರ ಲಾಠಿ ಚಾರ್ಜ್
ಬೆಳಗಾವಿ: ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದ ಯುವಕ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮಹಾರಾಷ್ಟ್ರ ಬಸ್ ಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವ ಆಚರಿಸುತ್ತಿದ್ದ ಗುಂಪು ಗುಂಪಾಗಿ ಸೇರಿದ ಯುವಕರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸ್ ಲಾಠಿ ಏಟು ಬೀಳುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರ ನಡೆಗೆ ಕರವೇ ಜಿಲ್ಲಾಧ್ಯಕ್ಷ ಅಸಮಧಾನ ವ್ಯಕ್ತವಾಡಿಸಿದ್ದು, ಎಂಇಎಸ್ ಮುಖಂಡರು ಪ್ರತಿಭಟನಾ ಸಭಾ ನಡೆಸಿದರು ಅದಕ್ಕೆ …
Read More »ಸಿದ್ದರಾಮಯ್ಯ ಮನೆಯಿಂದ ಹಣ ತಂದು ಕೊಟ್ಟಿಲ್ಲ: ಎಸ್.ಟಿ ಸೋಮಶೇಖರ್
ಮೈಸೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಶೇ.100 ರಷ್ಟು ಮುನಿರತ್ನ ಗೆಲ್ಲುತ್ತಾರೆ. ಆರ್‍ಆರ್ ನಗರ ಕ್ಷೇತ್ರವನ್ನು ಮುನಿರತ್ನ ಅಭಿವೃದ್ಧಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು. ನಗರದ ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಹೀಗಾಗಿ ಅಭಿವೃದ್ಧಿ ಹಣ ಬಿಡುಗಡೆಯಾಗಿದೆ. ಬಜೆಟ್ ನಲ್ಲಿ ಕೊಟ್ಟ ಹಣವನ್ನು ಮುನಿರತ್ನ ಸರಿಯಾಗಿ ಅವರ ಕ್ಷೇತ್ರಕ್ಕೆ ಬಳಸಿದ್ದಾರೆ. ಕ್ಷೇತ್ರದ …
Read More »ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ: ಲಕ್ಷಣ ಸವದಿ
ರಾಯಚೂರು: ಸಿಎಂ ಬದಲಾವಣೆ ಹೇಳಿಕೆ ವಿಚಾರ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಉಪಮುಖ್ಯಮಂತ್ರಿ ಲಕ್ಷಣ ಸವದಿ ಹೇಳಿದ್ದಾರೆ .ನಗರದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಆ ಬಗ್ಗೆ ಸೂಕ್ತ ಸಂದರ್ಭದಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದರು. ಕಳೆದ ವರ್ಷದ ಬೆಳೆ ವಿಮೆಯ ಹಣ ರೈತರಿಗೆ ಸಿಗದೆ ಹೋಗಿದೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು. ಭತ್ತ, ತೊಗರಿ, ಉದ್ದು …
Read More »ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಿಯಾಜ್ ಚೌಗಲಾ ನಿರ್ದೇಶನದಲ್ಲಿ ಮೂಡಿದ ಕನ್ನಡ ಆಲ್ಬಮ್ ಸಾಂಗ್ ಗಳನ್ನು ರಾಹುಲ್ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಇಂದು ಬಿಡುಗಡೆಗೊಳಿಸಿದರು.
ಗೋಕಾಕ : ಕರ್ನಾಟಕ ರಾಜ್ಯೋತ್ಸವದ ಹಿನ್ನಲೆಯಲ್ಲಿ ರಿಯಾಜ್ ಚೌಗಲಾ ನಿರ್ದೇಶನದಲ್ಲಿ ಮೂಡಿದ ಕನ್ನಡ ಆಲ್ಬಮ್ ಸಾಂಗ್ ಗಳನ್ನು ರಾಹುಲ್ ಜಾರಕಿಹೊಳಿ ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಇಂದು ಬಿಡುಗಡೆಗೊಳಿಸಿದರು. ‘ನಾಡ ತಾಯಿಯ ಉತ್ಸವ ನೋಡ ಬನ್ನಿ, ವೈಭವ. ಕನ್ನಡ ಕೀರ್ತಿ ಬೆಳೆಸುವ ಉತ್ಸವ’ ಹಾಗೂ ‘ಬದುಕು ಕಲಿಸಿದ ಭಾಷೆ ಕನ್ನಡ, ಹೃದಯ ತಟ್ಟಿದ ಭಾಷೆ ಕನ್ನಡ’ ಎಂಬ ಎರಡು ಕನ್ನಡ ಆಲ್ಬಮ್ ಸಾಂಗ್ ಗಳನ್ನು ಉತ್ತಮ ತಂಡ ರಚಿಸಿದ್ದಾರೆ. …
Read More »ನಮ್ಮ ಕರ್ನಾಟಕದ ಸಚಿವರಾದ ವೀ ಸೋಮಣ್ಣ ಹಾಗೂ ಶ್ರೀ ರಾಮ ಲು ಅವರಿಗೆ ಕನ್ನಡದ ಬಗ್ಗೆ ಜ್ಞಾನ ಇಲ್ಲ ಯಾರ ಯಾರದೋ ಹೆಸರು ಹೇಳಿ ಭಾಷಣ ಮಾಡಿದ ಸಚಿವರೂ.
ಕೊಡಗು: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಭಾಷಣದಲ್ಲಿ ಸಚಿವ ವಿ.ಸೋಮಣ್ಣ ಯಡವಟ್ಟು ಮಾಡಿಕೊಂಡಿದ್ದು, ಕವಿ ಕುಮಾರವ್ಯಾಸನ ಬದಲು ಕುಮಾರಸ್ವಾಮಿ ಅವರನ್ನು ಹಾಡಿಹೊಗಳಿದ ಪ್ರಸಂಗ ನಡೆದಿದೆ. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ, ಕರ್ನಾಟಕದ ಕವಿಗಳ ಸಾಲಿನಲ್ಲಿ ಕುಮಾರಸ್ವಾಮಿ ಹೆಸರು ಸೇರಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪಂಪ, ರನ್ನ, ಪೊನ್ನ,ಜನ್ನ, ಕುಮಾರಸ್ವಾಮಿ ಮುಂತಾದವರು ಭಾಷೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಭಾಷಣದಲ್ಲಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ. ತಮ್ಮ ತಪ್ಪು ಸುಧಾರಿಸಿಕೊಳ್ಳದೇ …
Read More »ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.
ಬೆಳಗಾವಿ : ಸಮರ್ಥನಂ ಅಂಥ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವಿರೇಶ ಕಿವಡಸಣ್ಣವರಗೆ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಜನರಿಗೆ …
Read More »