ಬೆಂಗಳೂರು, ಅ.14- ನಮ್ಮ ಪಕ್ಷ ಅಕಾರದಲ್ಲಿದ್ದಾಗ ಮಾಡಿರುವ ಸಾಧನೆಗಳು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ವೈಫಲ್ಯಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ವಿ.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದೇವೆ ಎಂದರು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಜನರು ಮಳೆಯಿಂದ ಮನೆ-ಮಠ ಕಳೆದುಕೊಂಡಿದ್ದಾರೆ. ಅಲ್ಲದೆ …
Read More »Daily Archives: ಅಕ್ಟೋಬರ್ 14, 2020
ಡಿಜೆಹಳ್ಳಿ ಗಲಭೆ ಪ್ರಕರಣ : ಸಂಪತ್‍ರಾಜ್-ಜಾಕೀರ್ ವಿಚಾರಣೆಗೆ ಮುಂದಾದ ಎನ್‍ಐಎ
ಬೆಂಗಳೂರು,ಅ.14-ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಗಲಭೆಗೆ ಸಂಬಂಸಿದಂತೆ ತನಿಖೆ ನಡೆಸುತ್ತಿರುವ ಎನ್‍ಐಎ ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಅವರ ಆಪ್ತ, ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‍ನ್ನು ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈ ಇಬ್ಬರಿಗೂ ವಿಚಾರಣೆಗೆ ಹಾಜರಾಗು ವಂತೆ ಸದ್ಯದಲ್ಲೇ ಎನ್‍ಐಎ ನೋಟಿಸ್ ನೀಡಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶಾಸಕರಾದ ಜಮೀರ್ ಅಹಮ್ಮದ್ ಖಾನ್ ಮತ್ತು ರಿಜ್ವಾನ್ ಅವರನ್ನು ಎನ್‍ಐಎ ವಿಚಾರಣೆಗೊಳಪಡಿಸಿ ಗಲಭೆಗೆ ಸಂಬಂಸಿದಂತೆ ಹಲವು …
Read More »ತಮಿಳು ಚಿತ್ರನಟರಿಗೆ ಬಾಂಬ್ ಬೆದರಿಕೆ..!
ಚೆನ್ನೈ, ಅ. 14- ತಮಿಳುನಾಡಿನ ಸೂಪರ್‍ಸ್ಟಾರ್ ರಜನಿಕಾಂತ್, ತಲ್ಲಾ ಅಜಿತ್, ಸೂರ್ಯ, ಇಳಯದಳಪತಿ ವಿಜಯ್ ಮನೆಗಳಲ್ಲಿ ಬಾಂಬ್ ಇರಿಸುವುದಾಗಿ ಬೆದರಿಕೆ ಒಡ್ಡಿರುವ ಘಟನೆ ಮಾಸುವ ಮುನ್ನವೇ ಈಗ ಧನುಷ್ ಹಾಗೂ ಕ್ಯಾಪ್ಟನ್ ಪ್ರಭಾಕರ್ ಖ್ಯಾತಿಯ ವಿಜಯಕಾಂತ್‍ಗೂ ಬೆದರಿಕೆ ಕರೆಗಳು ಬಂದಿವೆ. ತಮಿಳಿನ ಸೂಪರ್‍ಸ್ಟಾರ್ ರಜನಿಕಾಂತ್‍ರ ಅಳಿಯ, ನಟ ಧನುಷ್ ಹಾಗೂ ನಟ ಹಾಗೂ ಡಿಎಂಡಿಕೆ ಪಕ್ಷದ ಮುಖಂಡ ವಿಜಯಕಾಂತ್‍ರ ಮನೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ …
Read More »ಕಲ್ಬುರ್ಗಿ ನಗರದಲ್ಲಿ ಭಾರಿ ಮಳೆ
ಕಲಬುರ್ಗಿ: ಇಲ್ಲಿನ ಕುಸನೂರು ರಸ್ತೆಯ ರಾಜಾಜಿ ನಗರದ ನಿವಾಸಿಗಳಾದ ಗುರುರಾಜ ಕುಲಕರ್ಣಿ, ಮೀನಾಕ್ಷಿ, ಚಂದ್ರಕಾಂತ ಅವರ ಕುಟುಂಬಗಳಿಗೆ ಮಂಗಳವಾರದ ರಾತ್ರಿ ಎಂದಿನಂತಿರಲಿಲ್ಲ. ಸಂಜೆಯವರೆಗೂ ಮಳೆಯ ಸುದ್ದಿಯೇ ಇರದಿದ್ದರಿಂದ ನಿರಾಳರಾಗಿ ನಿದ್ದೆಗೆ ಜಾರಿದವರಿಗೆ ಕೆಲವೇ ನಿಮಿಷಗಳಲ್ಲಿ ಪ್ರವಾಹದ ನೀರಿನ ಸದ್ದು ಕೇಳಿಸಿತು. ಎದ್ದು ನೋಡುವಷ್ಟರಲ್ಲಿ ಕುಲಕರ್ಣಿ ಅವರ ಕೆಳಗಿನ ಮನೆಯಲ್ಲಿ ಕ್ರಮೇಣ ನೀರು ತುಂಬಿಕೊಳ್ಳಲಾರಂಭಿಸಿತು. ಎದುಗಿನ ರಸ್ತೆಯಲ್ಲೇ ಹೊಳೆ ಹರಿದು ಬಂತೇನೋ ಎಂಬಷ್ಟು ಮಳೆಯ ರಭಸ ಅವರನ್ನು ಎಬ್ಬಿಸಿತು. ಗಂಗಾಧರ ಕುಲಕರ್ಣಿ ಅವರು …
Read More »ಭಾರತದಲ್ಲಿ ಲಸಿಕೆ ದೊರೆಯಲಿದೆ :ಕೇಂದ್ರ ಆರೋಗ್ಯ ಸಚಿವ ಹೇಳಿಕೆ
ನವದೆಹಲಿ : ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್ ನಿಗ್ರಹಕ್ಕೆ 2021ರ ಆರಂಭದಿಂದ ಭಾರತದಲ್ಲಿ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಅವರು ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಈ ಲಸಿಕೆಯನ್ನು ಯಾವ ರೀತಿ ವಿತರಣೆ ಮಾಡಬೇಕು ಎಂಬ ಯೋಜನೆ ರೂಪಿಸುವ ಕಾರ್ಯದಲ್ಲಿ ತಜ್ಞರು ಮಗ್ನರಾಗಿದ್ದಾರೆ ಎಂದೂ ಹೇಳಿದ್ದಾರೆ. ಸಚಿವರ ಸಮೂಹದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷಾರಂಭದಲ್ಲಿ ದೇಶದಲ್ಲಿ ಲಸಿಕೆ ದೊರೆಯಲಿದೆ. ಒಂದಕ್ಕಿಂತ ಹೆಚ್ಚು ಕಡೆಯಿಂದ ಲಸಿಕೆ …
Read More »ರಜನೀಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ
ಚೆನ್ನೈ: ತಮಗೆ ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಚಿತ್ರನಟ ರಜನೀಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನೀಕಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದ್ದ ನೋಟಿಸನ್ನು ಅವರು ಪ್ರಶ್ನಿಸಿದ್ದರು. ಕಳೆದ ಏಪ್ರಿಲ್ನಿಂದ ಸೆಪ್ಟಂಬರ್ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ …
Read More »ಮತಾಂತರಗೊಂಡು ಮದುವೆಯಾದಳು : ಹಿಂಸೆಯನ್ನು ಸಹಿಸಲಾರದೇ ವಿಧಾನಸಭೆಯ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡಳು
ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು, ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಿಲಾರದೇ ಇಲ್ಲಿಯ ವಿಧಾನಸಭೆಯ ಕಟ್ಟಡದೆದುರೇ ಎದುರೇ ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ. ಅಂಜನಾ ತಿವಾರಿ ಅಲಿಯಾಸ್ ಆಯೇಷಾ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಈಕೆಯನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಜನಾ ಈ ಮೊದಲು ಅಖಿಲೇಶ್ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅಂಜನಾ, ಆಸಿಫ್ ಎಂಬುವವನ ಬಲೆಗೆ ಬಿದ್ದರು. ಈಕೆಯನ್ನು ಪ್ರೀತಿಸುವ …
Read More »ಇನ್ನೂ ನಾಲ್ಕು ದಿನ ಮಳೆ : ಉತ್ತರ ಕರ್ನಾಟಕಕ್ಕೆ ಜಲಕಂಟಕ
ಬೆಂಗಳೂರು : ರಾಜ್ಯದಲ್ಲಿ ಕಳೆದೊಂದು ವಾರದಿಂದ ಬೀಳುತ್ತಿರುವ ನಿರಂತರ ಮಳೆ ಇನ್ನೂ ನಾಲ್ಕು ದಿನ ಮುಂದುವರೆಯುವ ಸಾಧ್ಯತೆಗಳಿವೆ.ನಿನ್ನೆ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾದ ವರದಿಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಬೀದರ್, ಗುಲ್ಬರ್ಗ ಭಾಗದಲ್ಲಿ ಅಕ ಪ್ರಮಾಣದ ಮಳೆಯಾದ ವರದಿಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು. ಮುಂಗಾರು ಮಳೆ ಮರಳುವಿಕೆ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಪ್ರಮಾಣದ …
Read More »50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ
ಉಡುಪಿ ; ಮಹಿಳೆಯೊಬ್ಬರು ರಿಕ್ಷಾದಲ್ಲಿ ಮರೆತು ಬಿಟ್ಟುಹೋದ 50 ಸಾವಿರ ರೂಪಾಯಿಯನ್ನು ಮರಳಿ ಮಹಿಳೆಗೆ ಹಿಂದಿರುಗಿಸಿ ರಿಕ್ಷಾ ಚಾಲಕ ಅಂಬಲಪಾಡಿಯ ಜಯ ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ. ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ರಿಕ್ಷಾದಿಂದ ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಮಹಿಳೆಯನ್ನು ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ …
Read More »ಶ್ರೀರಾಮುಲು ಅವರೇ ಖುದ್ದು ಯಡಿಯೂರಪ್ಪನವರ ಮುಂದೆಯೇ ತಮ್ಮ ಅಸಮಾನಧವನ್ನು ಹೊರಹಾಕಿದರು
ಬೆಂಗಳೂರು: ಸಚಿವ ಶ್ರೀರಾಮುಲು ಅವರಿಗೆ ಆರೋಗ್ಯ ಖಾತೆ ಕಿತ್ತುಕೊಂಡು ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆ ಮೂಲಕ ಬಗೆಹರಿಸಿದ್ದಾರೆ. ಆದ್ರೆ, ಶ್ರೀರಾಮುಲು ಅಸಮಾಧಾನ ಶಮನವಾಗಿಲ್ಲ. ತಮಗೆ ಒಂದು ಮಾತು ತಿಳಿಸದೇ ಏಕಾಏಕಿ ಖಾತೆ ಬದಲಾವಣೆ ಮಾಡಿರುವುದಕ್ಕೆ ಶ್ರೀರಾಮುಲು, ಯಡಿಯೂರಪ್ಪನವರ ಮುಂದೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಮಂಗಳವಾರ ಶ್ರೀರಾಮುಲು ಅವರೇ ಖುದ್ದು ಯಡಿಯೂರಪ್ಪನವರ ಮುಂದೆಯೇ ತಮ್ಮ …
Read More »