Breaking News

Daily Archives: ಅಕ್ಟೋಬರ್ 13, 2020

ಪ್ರದರ್ಶನಕ್ಕೆ ಸಿಂಗಾರಗೊಳ್ಳುತ್ತಿವೆ ಗಾಂಧಿನಗರದ ಚಿತ್ರಮಂದಿರಗಳು

ಬೆಂಗಳೂರು: ಕೊರೊನಾ ಸಂಕಷ್ಟ.. ಲಾಕ್‌ಡೌನ್‌ ಬಿಕ್ಕಟ್ಟಿನಲ್ಲಿ ಕಳೆಗುಂದಿದ್ದ ಬಣ್ಣದ ಲೋಕ ನಿಧಾನವಾಗಿ ರಂಗೇರುತ್ತಿದೆ. ಮತ್ತೆ ಚಿತ್ರಮಂದಿರದಲ್ಲಿ ರಂಗಿನ ಪರದೆ ತೆರೆಯಲು ಸಜ್ಜಾಗಿದೆ. ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಸಿದ್ಧತೆಯ ಕಾರ್ಯ ಶುರುವಾಗಿದೆ. ಸಂತೋಷ್ ಹಾಗೂ ನರ್ತಕಿ ಚತ್ರಮಂದಿರಗಳಲ್ಲಿ ಶೋ ಪ್ರಾರಂಭಿಸಲು ಸಿಬ್ಬಂದಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಧೂಳೆದ್ದಿದ್ದ ಸೀಟುಗಳನ್ನು, ಚಿತ್ರಮಂದಿರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸಿನಿಮಾಗಳ ಟ್ರೈಲರ್, ಟೀಸರ್​ಗಳನ್ನು ಪ್ರದರ್ಶಿಸಿ ಆಡಿಯೋ, …

Read More »

ಒಂದೇ ಫ್ರೇಮ್​ನಲ್ಲಿ ರಾಷ್ಟ್ರ ಪ್ರಾಣಿ-ರಾಷ್ಟ್ರ ಪಕ್ಷಿ! ಈ ಫೋಟೋಗೆ ಸಿಕ್ತು ಪ್ರಥಮ ಬಹುಮಾನ

ಮೈಸೂರು: 66ನೇ ವನ್ಯ ಜೀವಿ ಸಪ್ತಾಹದ ಅಂಗವಾಗಿ ನಾಗರಹೊಳೆ ಅರಣ್ಯ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಛಾಯಾಗ್ರಹಣ ಸ್ಪರ್ಧೆಯ ಬಹುಮಾನವನ್ನು ಅರಣ್ಯ ಇಲಾಖೆ ಘೋಷಣೆ ಮಾಡಿದೆ. ಅದರಲ್ಲಿ ಅನಿಲ್ ಅಂತರಸಂತೆ ಎಂಬುವವರ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದ ಹುಲಿ ಹಾಗೂ ನವಿಲು ಒಂದೆ ಫ್ರೇಮ್​ನಲ್ಲಿದ್ದ ಫೋಟೋಗೆ ಪ್ರಥಮ ಬಹುಮಾನ ಸಿಕ್ಕಿದೆ. ವನ್ಯ ಜೀವಿ ಸಪ್ತಾಹ ಅಂಗವಾಗಿ ಛಾಯಾಗ್ರಹಣ, ರಸಪ್ರಶ್ನೆ, ಘೋಷವಾಕ್ಯ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು …

Read More »

ಮಾದಕ’ ನಟಿಯರು ಜೈಲಿಗೆ ತರಿಸಿಕೊಳ್ತಿದ್ದ ‘ಪಾರ್ಸಲ್’​ಗೆ ಜೈಲು ಸಿಬ್ಬಂದಿ ತಡೆ

ಬೆಂಗಳೂರು: ಇಷ್ಟು ದಿನ ಎಣ್ಣೆ ಸೀಗೆಕಾಯಿಯಂತಿದ್ದ ನಶೆರಾಣಿಯರಾದ ರಾಗಿಣಿ ಮತ್ತು ಸಂಜನಾರ ಕಾಟ ತಾಳಲಾರದೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಇಬ್ಬರಿಗೂ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದರು. ಇದೀಗ, ಸೈಲೆಂಟಾಗಿದ್ದ ರಾಗಿಣಿ ಮತ್ತೆ ತನ್ನ ಕಿಲಾಡಿ ಬುದ್ಧಿ ತೋರಿದ್ದಾಳೆ. ಬೆನ್ನು ನೋವು ಎಂಬ ನೆಪವೊಡ್ಡಿ ಜೈಲಿನಿಂದ ಹೊರ ಬರಲು ತಂತ್ರ ನಡೆಸುತ್ತಿರುವ ರಾಗಿಣಿ ತಮಗೆ ಬೇಕಾದ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಂದ ಹಾಗೆ, ತುಪ್ಪದ ಬೆಡಗಿ …

Read More »

ಸಕ್ಕರೆ ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ವಿಜಯಪುರ: ಕೆಲಸ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿಯಲ್ಲಿರುವ KPR ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಆಲಮೇಲ ಪಟ್ಟಣದ ಸುರೇಶ ಪೂಜಾರಿ(19) ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದ ಕಾರಣ ಸುರೇಶ ಮೃತಪಟ್ಟಿದ್ದಾನೆಂದು ಮೃತನ ಸಂಬಂಧಿಕರ ಆರೋಪಿಸಿದ್ದಾರೆ. ಮೃತನ‌ ನಿವಾಸದ ಬಳಿ ಸಂಬಂಧಿಕರು ಹಾಗೂ ಸ್ಥಳಿಯರಿಂದ ಪ್ರತಿಭಟನೆ ನಡೆದಿದ್ದು ಸೂಕ್ತ ಪರಿಹಾರ ನೀಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Read More »

ರಾಜರಾಜೇಶ್ವರಿ ನಗರ: ಕೊರೊನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಿಂದ ಮತ್ತದೇ ಸುಲಿಗೆ

ಬೆಂಗಳೂರು: ಕಿಲ್ಲರ್ ಕೊರೊನಾ ಹೆಸರಲ್ಲಿ ಖಾಸಾಗಿ ಆಸ್ಪತ್ರೆಗಳು ಸುಲಿಗೆಗೆ ನಿಂತಿದ್ದಾವೆ. ರಾಜಾರೋಷವಾಗಿ ಹಗಲು ದರೋಡೆ ಮಾಡ್ತಿವೆ ಎಂದು ರಾಜರಾಜೇಶ್ವರಿ ನಗರದಲ್ಲಿರುವ ಸ್ಪರ್ಶ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಕೊರೊನಾ ಸೋಂಕಿತ ರೋಗಿಯೊಬ್ಬರಿಗೆ 5 ದಿನಕ್ಕೆ ಬರೋಬ್ಬರಿ 1 ಲಕ್ಷದ 80 ಸಾವಿರ ಬಿಲ್ ಆಗಿದೆಯಂತೆ. ಪ್ರತ್ಯೇಕ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಅಂತಾ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರಂತೆ. ಆದ್ರೆ ರೋಗಿ ಜನರಲ್ ವಾರ್ಡ್​ಗೆ ಅಡ್ಮಿಟ್ ಆಗಿದ್ದು …

Read More »

ಸಾಲಿ ಇಲ್ವಾ.. ನಡೀ ಕೂಲಿ ಮಾಡೋಕೆ: ವಿದ್ಯಾಗಮ ಮಕ್ಕಳು ಆಗಿದ್ದಾರೆ ಬಾಲ ಕಾರ್ಮಿಕರು!

ರಾಯಚೂರು: ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಗಮ ಯೋಜನೆಯನ್ನು ಕೊರೊನಾ ಅಬ್ಬರದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅತ್ತ ಮಕ್ಕಳು ಮತ್ತು ಅವರಿಗೆ ಪಾಠ ಮಾಡ್ತಿದ್ದ ಶಿಕ್ಷಕರಿಗೆ ಕಂಟಕವಾಗಿದ್ದ ಯೋಜನೆಗೆ ಬ್ರೇಕ್​ ಹಾಕಲಾಯ್ತು ಎಂದು ಹಲವರು ಸಂತಸಪಡುತ್ತಿದ್ದರೇ ಇತ್ತ ಗ್ರಾಮೀಣ ಭಾಗದ ಮಕ್ಕಳಿಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ.  ನಿತ್ಯ 250 ರೂಪಾಯಿ ಕೂಲಿ ಕಾಸಿನ ಆಸೆಗೆ ಹೌದು, ವಿದ್ಯಾಗಮ ಯೋಜನೆ ತಾತ್ಕಾಲಿಕವಾಗಿ ಸ್ಥಗಿತವಾದ ಬೆನ್ನಲ್ಲೇ ವಠಾರ ಶಾಲೆಗಳು ಬಂದ್​ ಆಗಿವೆ. ಈ …

Read More »

RR ನಗರ ಮುನಿರತ್ನ ಭವಿಷ್ಯ ನಿರ್ಧರಿಸಿದ ಸುಪ್ರೀಂ ಕೋರ್ಟ್‌

ದೆಹಲಿ: ಬೆಂಗಳೂರಿನ R.R. ನಗರ ಬೈಎಲೆಕ್ಷನ್ ಮುಂದೂಡಿಕೆ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. R.R. ನಗರ ಬೈಎಲೆಕ್ಷನ್ ಮುಂದೂಡಲು ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗಾಗಿ, ರಾಜರಾಜೇಶ್ವರಿ ನಗರ ಬೈಎಲೆಕ್ಷನ್ ನಿಗದಿಯಂತೆ ನವೆಂಬರ್ 3ರಂದು ನಡೆಯಲಿದೆ. R.R. ನಗರ ಅಸೆಂಬ್ಲಿ ಕ್ಷೇತ್ರದ ಚುನಾವಣಾ ಭವಿಷ್ಯವೂ ನಿರ್ಧಾರ ಇದರೊಂದಿಗೆ ಸುಪ್ರೀಂ ಕೋರ್ಟ್ ಮುನಿರತ್ನ ನಾಯ್ಡು ಅವರ ರಾಜಕೀಯ ಭವಿಷ್ಯ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ …

Read More »

ಕಾಫಿನಾಡಿಗರೇ ಹುಷಾರ್! ಅಸಲಿ ನೋಟುಗಳನ್ನು ಮೀರಿಸಿ ಚಲಾವಣೆಗೆ ಬಂದಿವೆ ಖೋಟಾ ನೋಟುಗಳು..

ಚಿಕ್ಕಮಗಳೂರು : ಅಂಗಡಿಗೆ ಹೋಗಿ ಚೇಂಜ್ ಇಸ್ಕೊಬೇಕಾದ್ರೆ ಹುಷಾರ್! ಲಕ್ಷಾಂತರ ರೂ ವ್ಯವಹಾರ ಮಾಡ್ಬೇಕಾದ್ರೂ ಜೋಪಾನ! ಅದ್ರಲ್ಲೂ 500-2000 ರೂಪಾಯಿಗಳ ನೋಟ್ ತೆಗೆದುಕೊಳ್ಳಬೇಕಾದ್ರೆ ಬಿ ಕೇರ್ ಫುಲ್! ಅಷ್ಟಕ್ಕೂ ನಾವ್ ನಿಮ್ನ ಸುಮ್ನೇ ಹೆದರಿಸ್ತಿಲ್ಲ, ಹಣದ ವ್ಯವಹಾರ ಮಾಡ್ಬೇಕಾದ್ರೆ ಮೋಸ ಹೋಗ್ಬೇಡಿ ಅಂತಾ ಎಚ್ಚರಿಸ್ತಾ ಇದ್ದೀವಿ. ಏಕೆಂದರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಆ ಎರಡು ಪ್ರಕರಣಗಳು ನೀವು ಹುಷಾರಾಗಿರೋದು ಒಳಿತು ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಪ್ರಕರಣ 1: ನೂರಲ್ಲ, …

Read More »

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಹೈದರಾಬಾದ್: ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಪ್ರೇಮದ ಹೆಸರಲ್ಲಿ ಪಾಗಲ್ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದ ಹನುಮಾನ್ ಪೇಟ್​ನಲ್ಲಿ ನಡೆದಿದೆ. ಈ ಪಾಗಲ್ ಪ್ರೇಮಿಯಿಂದಾಗಿ ಯುವತಿ ಸಜೀವ ದಹನವಾಗಿದ್ದಾಳೆ. ಚಿನ್ನಾರಿ.. ನರ್ಸ್​​ ಆಸ್ಪತ್ರೆಯೊಂದರಲ್ಲಿ ನರ್ಸ್​​ ಆಗಿದ್ದ ಚಿನ್ನಾರಿ ಎಂಬ ಯುವತಿಗೆ‌ ಪ್ರೇಮದ ಹೆಸರಲ್ಲಿ ನಾಗಭೂಷಣ್ ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ಸಹ ನೀಡಿದ್ದಳು. ಆದರೆ ಪೊಲೀಸರು ಈ ವಿಷಯನ್ನು …

Read More »

ನಾನಿದ್ದಾಗ ಸಾವಿರ ಕೇಸ್​ ಇತ್ತಷ್ಟೇ, ಸುಧಾಕರ ಬಂದ್ಮೇಲೆ 5000 ಆಯ್ತು -ರಾಮುಲು ನೇರ ಟಾಂಗ್

ಬೆಂಗಳೂರು: ಸಿಎಂ ಬಿಎಸ್‌ವೈ ನಿವಾಸದಲ್ಲಿ ಸಚಿವರಾದ ಕೆ.ಸುಧಾಕರ್ ಮತ್ತು ಶ್ರೀರಾಮುಲು ಮಧ್ಯೆ ನಡೆದ ಸಂಧಾನ ಸಭೆ ಬಳಿಕ ಇಬ್ಬರು ಸಚಿವರು ಸುದ್ದಿಗೋಷ್ಠಿ ನಡೆಸಿದರು.   ಸಚಿವ ಶ್ರೀರಾಮುಲು ಖಾತೆ ಬದಲಾವಣೆ ಮಾಡಿದ ವಿಚಾರವಾಗಿ ಒಳ್ಳೆಯ ಕೆಲಸ ಮಾಡಲು ಸಿಎಂ ಸಲಹೆ ಕೊಟ್ಟಿದ್ದಾರೆ. ನಮ್ಮಿಬ್ಬರನ್ನೂ ಕರೆಸಿ ಸಿಎಂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಸಿಎಂ ಬಿಎಸ್‌ವೈ ಬಳಿ ಸಮಾಜ ಕಲ್ಯಾಣ ಖಾತೆ ಕೇಳಿದ್ದೆ. ಸಿಎಂ ನನಗೆ ಈಗ ಸಮಾಜ ಕಲ್ಯಾಣ …

Read More »