Breaking News

Daily Archives: ಆಗಷ್ಟ್ 13, 2020

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಕುಟುಂಬಕ್ಕೆ ಸರ್ಕಾರದಿಂದ ಪೊಲೀಸ್ ಭದ್ರತೆ

ಬೆಂಗಳೂರು: ಸಿಲಿಕಾನ್ ಸಿಟಿಯ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಕುಟುಂಬಕ್ಕೆ ಸರ್ಕಾರ ಪೊಲೀಸ್ ಭದ್ರತೆಯನ್ನು ಒದಗಿಸಿದೆ.ಶಾಸಕರ ಕುಟುಂಬ ಸದ್ಯ ಖಾಸಗಿ ಹೊಟೇಲ್ ನಲ್ಲಿ ವಾಸವಾಗಿದೆ. ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ನೀಡಿದ್ದಾರೆ. ಅಲ್ಲದೆ ಸದ್ಯಕ್ಕೆ ತಮ್ಮ ನಿವಾಸಕ್ಕೆ ಹೋಗೋದು ಬೇಡ ಅಂತ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನ ಹೊಟೇಲ್ ನಲ್ಲಿ ಉಳಿಯಲು ಶಾಸಕ ಅಖಂಡ ನಿರ್ಧಾರ ಮಾಡಿದ್ದು, …

Read More »

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ.

ಮುಂಬೈ: ಕ್ರಿಕೆಟ್‍ನಿಂದ ಸಲ್ಪ ಸಮಯ ದೂರ ಉಳಿದಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಕೊರೊನಾ ಟೆಸ್ಟ್‍ಗೆ ಒಳಾಗಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಿಂದ ಪ್ರಾರಂಭ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನ ಮಾಡಿದೆ. ಭಾರತದಲ್ಲಿ ಸೋಂಕು ಹಿಡಿತಕ್ಕೆ ಬಾರದ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಈ ನಡುವೆ ಫ್ರಾಂಚೈಸಿಗಳು ತಮ್ಮ ತಂಡದ …

Read More »

ಬೆಂಗ್ಳೂರಲ್ಲಿ ನಡೆದ ಧಾರ್ಮಿಕ ಮತಾಂಧತೆಯನ್ನು ಖಂಡಿಸುತ್ತೇನೆ: ಪ್ರಕಾಶ್ ರಾಜ್

ಬೆಂಗಳೂರು: ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸುವುದಾಗಿ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಬೆಂಗಳೂರು ಗಲಭೆಯ ಸಂಬಂಧ ಟ್ವೀಟ್ ಮಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಅನಾಗರಿಕವಾದದ್ದಾಗಿದೆ. ಈ ಧಾರ್ಮಿಕ ಮತಾಂಧತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆ ತೆಗದುಕೊಂಡ ಪ್ರಚೋದರಕರು ಹಾಗೂ ಗೂಂಡಾಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗರಂ ಆಗಿದ್ದಾರೆ. ನಡೆದಿದ್ದೇನು? ಕಾಂಗ್ರೆಸ್ ಶಾಸಕ ಅಖಂಡ …

Read More »

2 ತಿಂಗಳ ಕಂದಮ್ಮನನ್ನು 45 ಸಾವಿರ ರೂ. ಗೆ ಮಾರಾಟ……

ಹೈದರಾಬಾದ್: ಪತಿ ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಆರ್ಥಿಕ ಸಂಕಷ್ಟದಿಂದಾಗಿ ಮಹಿಳೆಯೊಬ್ಬರು ತನ್ನ 2 ತಿಂಗಳ ಕಂದಮ್ಮನನ್ನು 45 ಸಾವಿರ ರೂ. ಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಹೈದರಾಬಾದ್‍ನ ಸುಭಾನ್‍ಪುರ್ ಪ್ರದೇಶದಲ್ಲಿ ನಡೆದಿದೆ. ಮಹಿಳೆಯನ್ನು ಝೋಯಾ ಖಾನ್ ಎಂದು ಗುರುತಿಸಲಾಗಿದೆ.  ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ಮಗುವನ್ನು ಮಾರಿರುವುದಾಗಿ ದೂರು ನೀಡಿದ್ದ. ಅಲ್ಲದೆ …

Read More »

ಡಿ.ಜೆ.ಹಳ್ಳಿ ಗಲಭೆ : ಪರಾರಿಯಾಗಿರುವ ಪುಂಡರ ಬಂಧನಕ್ಕೆ 3 ಟೀಮ್ ರಚನೆ

ಬೆಂಗಳೂರು, ಆ.13- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಮೊನ್ನೆ ರಾತ್ರಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಬಲೆ ಬೀಸಿವೆ.ಗಲಭೆ ಸಂದರ್ಭದಲ್ಲಿ ತೆಗೆದ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿ ಅವರ ಬಂಧನಕ್ಕೆ ಈ ತಂಡಗಳು ಮುಂದಾಗಿವೆ.ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಈವರೆಗೂ ಸಂಘಟನೆಯ ಮುಖಂಡರು …

Read More »

ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್‍ಗೂ ಕೊರೊನಾ..!

ನವದೆಹಲಿ, ಆ.13- ಕೇಂದ್ರ ಆಯುಷ್ (ಆಯುರ್ವೇದ, ಯೋಗ, ಯುನಾನಿ ಮತ್ತು ಸಿದ್ಧ) ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಸಚಿವರು ಈಗ ಐಸೋಲೇಷನ್‍ನಲ್ಲಿ ಇದ್ದು, ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಮಂತ್ರಿಮಂಡಲದ ಐದನೇ ಸಚಿವರಿಗೆ ಕೋವಿಡ್-19 ತಗುಲಿದಂತಾಗಿದೆ.ಈ ಕುರಿತು ಟ್ವೀಟ್ ಮಾಡಿರುವ ಸಚಿವರು ನನಗೆ ಕೊರೊನಾ ಸೋಂಕು ದೃಢಪಟಿದೆ. …

Read More »

ಡೀಪ್ ಕೋಮಾಗೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ನವದೆಹಲಿ, ಆ.13- ಮೆದುಳು ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ವಿಷಮವಾಗಿದ್ದು, ಡೀಪ್ ಕೋಮಾ (ತೀವ್ರ ಪ್ರಜ್ಞಾಶೂನ್ಯ ಸ್ಥಿತಿ) ತಲುಪಿಸಿದ್ದಾರೆ. ಮೆದುಳಿನ ಸೂಕ್ಷ್ಮ ನರದಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮುಖರ್ಜಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಆರ್ಮಿಸ್ ರಿಸರ್ಚ್ ಅಂಡ್ ರೆಫರೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಸೋಂಕು ಸಹ ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರ ಮೆದುಳಿನಲ್ಲಿ …

Read More »

ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ.

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ. ಭಾರೀ ಮಳೆಯಿಂದ ಕಂಗೆಟ್ಟಿದ್ದ ಜನರು ಈಗ ಮಳೆಯಿಂದ ಮನೆಯ ಸುತ್ತಮುತ್ತ ಆಗಿರುವ ಅವಾಂತರಗಳನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ……. -ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್​ ಇಂದಿನ ಮಟ್ಟ- 662 ಮೀಟರ್​ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 48.37 ಟಿಎಂಸಿ ಇಂದಿನ …

Read More »

ಆರೋಗ್ಯ ಸಚಿವ ಶ್ರೀರಾಮುಲುಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ಅವರ ತಾಯಿ ಹಾಗೂ ತಮ್ಮನಿಗೂ ಸೋಂಕು ದೃಢ

ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲುಗೆ ಕೊರೊನಾ ಸೋಂಕು ಪತ್ತೆಯಾದ ಬೆನ್ನಲ್ಲೇ ಇದೀಗ ಅವರ ತಾಯಿ ಹಾಗೂ ತಮ್ಮನಿಗೂ ಸೋಂಕು ದೃಢಪಟ್ಟಿದೆ.ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿ ಸಚಿವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರ ತಾಯಿ ಹಾಗೂ ತಮ್ಮನಿಗೆ ಕೊರೊನಾ ದೃಢಪಟ್ಟಿದೆ. ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿಗೆ 85 ವರ್ಷ ವಯಸ್ಸಾಗಿದ್ದು, ಅವರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವರು ಇನ್ನೂ ಸರ್ಕಾರ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಡೆಯುತ್ತಿದ್ದು, ಇದರ ಮಧ್ಯೆ ಇವರಿಬ್ಬರಿಗೆ …

Read More »

ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ:

ಕೋಲಾರ: ಕೊರೊನಾ ಹಿನ್ನೆಲೆ ಈ ಬಾರಿ ಸಾರ್ವಜನಿಕವಾಗಿ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಹಿನ್ನೆಲೆ ಗಣೇಶ ಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ, ಸರಳವಾಗಿ ಮತ್ತು ಭಕ್ತಿ-ಭಾವದಿಂದ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು. ಈ ಹಿಂದೆ ಗಣೇಶ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಟಾಪನೆ ಮಾಡುವ ಜೊತೆಗೆ ಸಾರ್ವಜನಿಕವಾಗಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ …

Read More »