Breaking News

Daily Archives: ಆಗಷ್ಟ್ 11, 2020

ನನ್ನ ಹೇಳಿಕೆಗೆ ನಾನು ಬದ್ಧ. ನನ್ನ ಇಡೀ ಜೀವನವನ್ನು ಜೈಲಿನಲ್ಲೇ ಕಳೆಯಲು ಸಿದ್ಧ

ಶಿವಮೊಗ್ಗ: ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಈಶ್ವರಪ್ಪನವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿರುವ ಈ ಈಶ್ವರಪ್ಪ, ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ಇಡೀ ಜೀವನವನ್ನು ಬೇಕಾದರೂ ಜೈಲಿನಲ್ಲೇ …

Read More »

ಶಿವಮೊಗ್ಗ – ಗದಗ ರಾಜ್ಯ ಹೆದ್ದಾರಿಯಲ್ಲಿ ಭತ್ತದ ನಾಟಿ

ಹಾವೇರಿ: ಹಾವೇರಿಯಲ್ಲಿ ರಟ್ಟಿಹಳ್ಳಿ ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಹಾದು ಹೋಗಿರುವ ಶಿವಮೊಗ್ಗ – ಗದಗ ರಾಜ್ಯ ಹೆದ್ದಾರಿಯಲ್ಲಿ ಜನರು ಭತ್ತದ ನಾಟಿ ಮಾಡುವ ಮೂಲಕ ವಿನೂತನವಾಗಿ ಆಡಳಿತದ ಗಮನ ಸೇಳೆದರು. ಸೋಮವಾರ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 26 ರಲ್ಲಿ ಕಳೆದ ಮೂವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ರಸ್ತೆ ಕೇಸರು ಗದ್ದೆಯಾಗಿ ನಿರ್ಮಾಣವಾಗಿದೆ. ಆದರೆ ಜಿಲ್ಲಾಡಳಿತ, ತಾಲ್ಲೂಕಾಡಳಿತ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ …

Read More »

SSLC ಫಲಿತಾಂಶದಲ್ಲಿ ಯಾದಗಿರಿಯ ರಮ್ಯಾ ರಾಜ್ಯಕ್ಕೆ 14ನೇ ರ್‍ಯಾಂಕ್

ಯಾದಗಿರಿ: ಜೂನ್ ಹಾಗೂ ಜುಲೈನಲ್ಲಿ ನಡೆದ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 225 ಶಾಲೆಗಳ ಫಲಿತಾಂಶ ಹೊರ ಬಿದ್ದಿದೆ. ಜಿಲ್ಲೆಯ 33 ಶಾಲೆಗಳು ಎ ಗ್ರೇಡ್, 56 ಶಾಲೆಗಳು ಬಿ ಗ್ರೇಡ್ ಹಾಗೂ 136 ಶಾಲೆಗಳು ಸಿ ಗ್ರೇಡ್ ಫಲಿತಾಂಶ ಪಡೆದಿವೆ. ಅವುಗಳಲ್ಲಿ ಸರ್ಕಾರಿ ಶಾಲೆಗಳು 122, ಅನುದಾನಿತ 17, ಅನುದಾನ ರಹಿತ …

Read More »

ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ. ಎರಡು …

Read More »

ಗೃಹ ಸಚಿವರ ಚಪ್ಪಲಿಯನ್ನು ಎತ್ತಿಕೊಂಡು ಹೋಗಿದ್ದ ಸಮುದ್ರದ ಚಪ್ಪಲಿಯನ್ನು ದಡಕ್ಕೆ ಎಸೆದಿದೆ

ಉಡುಪಿ: ರಾಜ್ಯ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮೇಲೆ ಸಮುದ್ರ ರಾಜ ಎರಗಿದ್ದಾನೆ. ಉಡುಪಿಯ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಂದರ್ಭ ಸಮುದ್ರದ ಅಲೆ ಸಚಿವ ಬೊಮ್ಮಾಯಿ ಅವರಿಗೆ ಬಡಿದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕು ಪಡುಬಿದ್ರೆ ಕಡಲಕಿನಾರೆಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಕೊಟ್ಟರು. ಸಮುದ್ರ ಕೊರೆತ ವೀಕ್ಷಿಸಿದ ಬೊಮ್ಮಾಯಿ, ಅರಬ್ಬಿ ಸಮುದ್ರಕ್ಕೆ ಇಳಿದರು. ಈ ಸಂದರ್ಭ ಬೃಹತ್ ಗಾತ್ರದ ಅಲೆ ಗೃಹ ಸಚಿವ …

Read More »

ಮದುಮಗಳ ಕೈ ಹಿಡಿಯಲು ಹೋಗಿ ಹೆಣವಾದ ರೌಡಿ ಶೀಟರ್

ಯಾದಗಿರಿ: ಮದುವೆ ಮನೆಗೆ ಹೋಗಿ ಮದುಮಗಳ ಕೈ ಹಿಡಿಯಲು ಮುಂದಾದ ರೌಡಿ ಶೀಟರ್, ಆಕೆಯ ತಂದೆ ಮತ್ತು ಸಹೋದರರಿಂದ ಕೊಲೆಯಾಗಿದ್ದಾನೆ. ಈ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಪರಮೇಶ್ವರಪಲ್ಲಿಯಲ್ಲಿ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮೊಹಮ್ಮದ್ ಹನೀಪ್ (34) ಕೊಲೆಯಾದವನಾಗಿದ್ದು, ಈತ ಚಿನ್ನಕಾರ ಗ್ರಾಮದ ರೌಡಿ ಶೀಟರ್. ಆರೋಪಿಗಳನ್ನು ಮದುಮಗಳ ತಂದೆ ತಂದೆ ರಸೂಲ್ ಮತ್ತು ಮಕ್ಕಳಾದ ಗುಲಾಮ್, ಇರ್ಫಾನ್, ಹಾರೂನ್ ಎಂದು ಗುರುತಿಸಲಾಗಿದೆ.   ಸೋಮವಾರ ಮಧ್ಯಾಹ್ನ …

Read More »

ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ.

ಶಿವಮೊಗ್ಗ: ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲಿ ಡೀಸೆಲ್ ಹಾಕಿ ಬಂಕ್ ಸಿಬ್ಬಂದಿ ಎಡವಟು ಮಾಡಿದ್ದಾರೆ.ವಿಜಯ್ ರಾಘವೇಂದ್ರ ಕುಟುಂಬದ ಜೊತೆ ಶಿವಮೊಗ್ಗ ಪ್ರವಾಸಕ್ಕೆ ಬಂದಿದ್ದರು. ಜೋಗ ನೋಡಿಕೊಂಡು ನಗರದ ಬಂಕ್ ನಲ್ಲಿ ಕಾರ್ ಗೆ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾರೆ. ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ. ತಪ್ಪಿನ ಅರಿವಾಗುತ್ತಲೇ ಎಚ್ಚೆತ್ತ ಸಿಬ್ಬಂದಿ ವಿಜಯ್ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ. ನಂತರ …

Read More »

ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವಿಟ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 

ಬೆಳಗಾವಿ:  ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವಿಧಾನ ಸಭೆ ಮತಕ್ಷೇತ್ರದಲ್ಲಿ ಬರುವ ಮಣಗುತ್ತಿ ಗ್ರಾಮದಲ್ಲಿಯ ಶಿವಾಜಿ ಪ್ರತಿಮೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವಿಟ್ ವೊಂದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.  ಮಣಗುತ್ತಿಯಲ್ಲಿಯ ಶಿವಾಜಿ ಪ್ರತಿಮೆಯನ್ನು ತೆರವು ಮಾಡಿದ್ದನ್ನು ಆಕ್ಷೇಪಿಸಿದ ಶಾಸಕಿ ನಿಂಬಾಳ್ಕರ್ ಅವರು, ಸಕಲ ಸರಕಾರಿ ಗೌರವದೊಂದಿಗೆ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಬೇಕು ಮತ್ತು ರಾಜ್ಯ ಸರ್ಕಾರ ಕ್ಷಮೆಯನ್ನು ಕೇಳಬೇಕು ಎಂದು  ಟ್ವೀಟ್ ಮೂಲಕ ಆಗ್ರಹಿಸಿದ್ದು ಕನ್ನಡಿಗರ …

Read More »

ಮನೆಯಲ್ಲೇ ಪತ್ನಿಯ ಪುತ್ಥಳಿ ಸ್ಥಾಪಿಸಿದ ಉದ್ಯಮಿ

ಕೊಪ್ಪಳ: ಆ ಮಹಿಳೆಗೆ ಹೀಗೆಯೇ ಮನೆಕಟ್ಟಿಸಬೇಕೆಂದು ಕನಸಿತ್ತು. ಮನೆ ನಿರ್ಮಾಣದ ಭೂಮಿ ಪೂಜೆಗೆ ಇದ್ದ ಆಕೆ ಮನೆಯ ಗೃಹ ಪ್ರವೇಶಕ್ಕೆ ಜೀವಂತವಾಗಿದ್ದಿಲ್ಲ. ಆದರೆ ಅದೇ ಮನೆಯಲ್ಲಿ ಜೀವಂತ ಪ್ರತಿಮೆಯಾಗಿದ್ದಳು. ಅರೇ ಇದೇನಪ್ಪ ಜೀವಂತ ಪ್ರತಿಮೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ಓದಿ. ಒಂದೆಡೆ ಜೀವಂತ ಇರಬೇಕಾದಾಗಿನ ಫೋಟೋದಲ್ಲಿನ ಮಹಿಳೆ, ಇನ್ನೊಂದೆಡೆ ಮನೆಯಲ್ಲಿ ಜೀವಂತ ಇದ್ದಾರೇನೋ ಎನ್ನುವ ರೀತಿಯಲ್ಲಿ ಪ್ರತಿಮೆಯಾಗಿ ಕುಳಿತಿರುವ ಮಹಿಳೆ. ಮತ್ತೊಂದೆಡೆ ಮನೆಯೊಡತಿ ಜೊತೆ ಕುಳಿತಿರುವ ಪತಿ, ಮಕ್ಕಳು. …

Read More »

ಕೊಡಗು ಜಿಲ್ಲೆಯಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಓಡಾಟದ ಮೇಲಿನ ನಿಷೇಧ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಓಡಾಟದ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ.ಆಗಸ್ಟ್ 31 ರವರೆಗೆ ಭಾರೀ ವಾಹನಗಳ ಓಡಾಟವನ್ನು ಮುಂದುವರಿಸಲಾಗಿದೆ. ಮಲ್ಟಿ ಆಕ್ಸಲ್ ಟ್ರಕ್, ಬುಲೆಟ್ ಟ್ಯಾಂಕರ್ಸ್ ಮತ್ತು ಕಂಟೈನರ್ ಲಾರಿ ಓಡಾಟವನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಮರಳು, ಮರದ ದಿಮ್ಮಿ ಸಾಗಣೆ ವಾಹನಗಳ ಸಂಚಾರವನ್ನು ಕೂಡ ನಿಷೇಧ ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆಯೇ ಜಿಲ್ಲೆಯಲ್ಲಿ ಭಾರೀ …

Read More »