Breaking News

Daily Archives: ಆಗಷ್ಟ್ 5, 2020

ರಾಮಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ಮಾಡ್ತೀರೋ 82ರ ವೃದ್ಧೆ

ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ದೀಕ್ಷೆ ಸ್ವೀಕಾರ ಮಾಡಿ, ಕಳೆದ 28 ವರ್ಷಗಳಿಂದ ಮಧ್ಯ ಪ್ರದೇಶದ ಜಬಲ್‍ಪುರಕ್ಕೆ ನಿವಾಸಿ ಊರ್ಮಿಳಾ ಚರ್ತುವೇದಿ (82) ಉಪವಾಸ ಮಾಡುತ್ತಿದ್ದಾರೆ.1992ರ ಡಿ.6 ರಂದು ವಿವಾದತ್ಮಾಕ ಕಟ್ಟದ ನೆಲಸಮ ಮಾಡಿದ ಸಮಯದಿಂದ ಊರ್ಮಿಳಾ ಅವರು ಉಪವಾಸ ಮಾಡುತ್ತಿದ್ದಾರೆ. ರಾಮನಿಗೆ ಮತ್ತೆ ಮಂದಿರ ನಿರ್ಮಾಣ ಮಾಡುವವರೆಗೂ ಆಹಾರ ಸೇವಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಕಳೆದ ವರ್ಷ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯ ಅನುಮತಿ …

Read More »

ಕೊಪ್ಪಳದ ಮುಸ್ಲಿಂ ಯುವಕಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು …

Read More »

ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ ಗಳಲ್ಲಿ ರಾಜ್ಯದ ಒಟ್ಟು 37 ಜನರು

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ಪ್ರತಿಷ್ಠಿತ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ರ್ಯಾಂಕ್ ಪಡೆಇದ್ದಾರೆ. ಯಶಸ್ವಿನಿ.ಬಿ ರಾಜ್ಯದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರು ಮೂಲದ ಯಶಸ್ವಿನಿ 71ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಇನ್ನು ಎಚ್. ವಿನೋದ್ ಪಾಟೀಲ್ (132) ಹಾಗೂ ಎಚ್.ಎಸ್.ಕೀರ್ತನಾ(167) ಕ್ರಮವಾಗಿ ರಾಜ್ಯಕ್ಕೆ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ. ಯುಪಿಎಸ್ ಸಿಯ 1 ಸಾವಿರ ರ್ಯಾಂಕ್ …

Read More »

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಇಂದು ಕೂಡ ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ …

Read More »

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವು

ಮುಂಬೈ: 34 ವರ್ಷದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ, ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಇನ್‍ಸ್ಟಾಗ್ರಾಂನಲ್ಲಿ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ. ಸುಶಾಂತ್ ನಿಧನದ ಒಂದು ತಿಂಗಳ ಬಳಿಕ ಅಂಕಿತಾ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಸುಶಾಂತ್ ಜೊತೆಗಿನ ಸ್ನೇಹ, ಒಡನಾಟ, ನಿಗೂಢ ಸಾವಿನ ಬಗ್ಗೆ ಹಲವು ವಿಷಯಗಳನ್ನು ಅಂಕಿತಾ ಶೇರ್ …

Read More »

ದುರ್ಗಾಪರಮೇಶ್ವರಿಗೆ ನದಿ ನೀರ ಅಭಿಷೇಕ- ಕಮಲಶಿಲೆ ದೇಗುಲದೊಳಕ್ಕೆ ಹರಿದ ಕುಬ್ಜಾ ನದಿ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ. ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ …

Read More »

ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್‍ನಿಂದ ಗೇಟ್ ಪಾಸ್ ಸಾಧ್ಯತೆ

ನವದೆಹಲಿ: ಈ ಬಾರಿಯ ಐಪಿಎಲ್-13ರಿಂದ ಚೀನಾ ಪ್ರಾಯೋಜಕತ್ವಕ್ಕೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಕುರಿತು ಆಗಸ್ಟ್ 6ರಂದು ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆಗಳಿವೆ. ಐಪಿಎಲ್ ಲೀಗ್ 19ನೇ ಆವೃತ್ತಿಯ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಚೀನಾದ ವಿವೋ ಸ್ಮಾರ್ಟ್ ಕಂಪನಿ ಐಪಿಎಲ್-13ರ ಪ್ರಾಯೋಜಕತ್ವ ಹೊಂದಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತಿರುವ ಪ್ರಾಯೋಜಕತ್ವದ ಚೀನಾದ ವಿವೋ ಕಂಪನಿಯನ್ನು ಕೈ ಬಿಡಲು ತೀರ್ಮಾನಿಸಿದೆ ಎಂದು …

Read More »

366 ಸ್ತಂಭಗಳ ಆಧಾರ, 24 ಅಮೃತಶಿಲೆಯ ಬಾಗಿಲುಗಳು – ವಿಶ್ವದ ಮೂರನೇ ಅತೀದೊಡ್ಡ ಹಿಂದೂ ದೇಗುಲ

ಲಕ್ನೋ: ಇಂದು ದೇಶದ ರಾಜಕೀಯ, ಸಾಮಾಜಿಕ ಚರಿತ್ರೆಯಲ್ಲಿ ಒಂದು ಅಪೂರ್ವ ದಿನ. ಶತಮಾನಗಳ ಕನಸು ನನಸಾಗುವ ಸಂದರ್ಭ ಬಂದಿದೆ. ಸರಿಯಾಗಿ ವರ್ಷದ ಹಿಂದೆ ಜಮ್ಮು ಕಾಶ್ಮೀರದಲ್ಲಿ 370ನೇ ಆರ್ಟಿಕಲ್ ರದ್ದು ಮಾಡಿದಾಗ ಅದನ್ನು ಐತಿಹಾಸಿಕ ಘಟ್ಟ ಎಂದು ಬಣ್ಣಿಸಲಾಗಿತ್ತು. ಇದು ದಶಕಗಳ ವಿವಾದವಷ್ಟೇ ಆಗಿತ್ತು. ಆದರೆ ಭರತ ಖಂಡದ ಅಸ್ತಿತ್ವದ ಚಿನ್ಹೆಯಾದ ರಾಮಜನ್ಮ ಭೂಮಿಯಲ್ಲಿ ಒಂದು ಮಸೀದಿ ನಿರ್ಮಾಣ ಆಗಿ ಶತಮಾನಗಳು ಕಳೆದು ಹೋಗಿದ್ವು. ಪುರಾತತ್ವ ಇಲಾಖೆಯಲ್ಲಿ ಮಾತ್ರವಲ್ಲ, ಮೊಗಲ್ …

Read More »

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಭಾರೀ ಮಳೆ

ಶಿವಮೊಗ್ಗ/ಮಡಿಕೇರಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿರುವ ಘಟನೆ ನಗರ ಹೋಬಳಿಯ ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂದ್ರಮನೆಯಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಮಗು ಹಾಗೂ ನಾಲ್ವರು ಅಪಾಯದಿಂದ ಪಾರಾಗಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯರಿಗೆ ಮಾಸ್ತಿಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಳಿ …

Read More »

ಬೆರೂತ್ ನಲ್ಲಿ ಭಯಾನಕ ಸ್ಫೋಟ……….

ಬೆರೂತ್: ಲೆಬನಾನ್ ರಾಜಧಾನಿ ಬೆರೂತ್ ನಲ್ಲಿ ಭಯಾನಕ ಸ್ಫೋಟವಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಸ್ಫೋಟಕ್ಕೂ ಮೊದಲು ಶ್ವೇತ ಬಣ್ಣದ ಬಲೂನ್ ರೀತಿಯಲ್ಲಿ ದೊಡ್ಡ ಗುಳ್ಳೆ ಕಾಣಿಸಿಕೊಂಡ ಕ್ಷಣ ಗಳಿಗೆಯಲ್ಲಿ ಸ್ಫೋಟವಾಗಿದೆ. ಸ್ಫೋಟದ ಬಳಿಕ ಬೆರೂತ್ ನಲ್ಲಿ ಹೊಗೆ ಆವರಿಸಿದೆ. ಸ್ಫೋಟಗೊಂಡ ಸ್ಥಳದಲ್ಲಿನ ಬಹುತೇಕ ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.15 ನಿಮಿಷದೊಳಗೆ ಬಂದರು ಮತ್ತು ಬೆರೂತ್ ನಗರದೊಳಗೆ ಸ್ಫೋಟಕ ವಸ್ತು …

Read More »