Breaking News

Monthly Archives: ಜೂನ್ 2020

ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ………

ಬೆಂಗಳೂರು, ಜೂ.1- ತಮ್ಮ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿರುವ ಭಿನ್ನಮತೀಯರ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ. ಒಂದೆರಡು ದಿನಗಳಲ್ಲಿ ಶಾಸಕರು ಮತ್ತೆ ಸಭೆ ನಡೆಸಬಹುದೆಂಬ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಅಸಮಾಧಾನಿತ ಶಾಸಕರ ಜೊತೆ ಸಭೆ ನಡೆಸಿ ಅವರ ಬೇಕುಬೇಡುಗಳನ್ನು ಆಲಿಸಲಿದ್ದಾರೆ. ಮೂರ್ನಾಲ್ಕು ದಿನಗಳೊಳಗೆ ಯಡಿಯೂರಪ್ಪನವರು ತಮ್ಮ ನಿವಾಸ ಕಾವೇರಿಯಲ್ಲಿ ಶಾಸಕರ ಸಭೆ ನಡೆಸಲಿದ್ದು, ಕ್ಷೇತ್ರಗಳಿಗೆ ಬೇಕಾದ ಅನುದಾನ, ಅಧಿಕಾರಿಗಳ ವರ್ಗಾವಣೆ, ಮಂಜೂರಾಗಬೇಕಾದ …

Read More »

ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿಯ ದೇವಸ್ಥಾನಕ್ಕೆ ನಿನ್ನೆ ಗಣ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತಿತ್ತು.

ಮಂಡ್ಯ ಜಿಲ್ಲೆಯ ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿ ದೇವಸ್ಥಾನದ ಸೆಕ್ಯುರಿಟಿ ಗಾರ್ಡ್ ಮಹೇಂದ್ರ ಅವರ ಮೇಲೆ ಕಿಡಿಗೇಡಿಗಳಿಂದ ಮಾರಣಾಂತಿಕ ಹಲ್ಲೆ…ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು. ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿರುವ ಪೋಲಿಸರು ವರಹನಾಥಕಲ್ಲಹಳ್ಳಿಯ ಭೂವರಾಹಸ್ವಾಮಿಯ ದೇವಸ್ಥಾನಕ್ಕೆ ನಿನ್ನೆ ಗಣ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮಹಾಮಂಗಳಾರತಿಯನ್ನು ಮಾಡಲಾಗುತ್ತಿತ್ತು.

Read More »

ಕೊರೊನಾ ಎಫೆಕ್ಟ್: ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಪ್ರಯಾಣ…………

ಮಂಗಳೂರು: ಕೊರೊನಾ ಎಫೆಕ್ಟ್‍ನಿಂದಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‍ಗಳು ಕ್ಯಾಶ್‍ಲೆಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈ ಮೂಲಕ ಸುಗಮ ಪ್ರಯಾಣಕ್ಕೆ ಅನುಕೂಲವಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರ ನಡೆಸುವುದು ಖಾಸಗಿ ಬಸ್‍ಗಳು. ಆದರೆ ಲಾಕ್‍ಡೌನ್ ನಿಂದ ಎರಡು ತಿಂಗಳುಗಳ ಕಾಲ ಸಂಚಾರ ನಡೆಸದೇ ನಿಂತಿದ್ದ ಖಾಸಗಿ ಬಸ್‍ಗಳು ಮತ್ತೆ ಸಂಚಾರ ಆರಂಭಿಸುತ್ತಿವೆ. ಆದರೆ ಖಾಸಗಿ …

Read More »

ಮಹಾಮಾರಿ ಕೊರೊನಾ ಗೆದ್ದ 7 ವರ್ಷದ ಮಕ್ಕಳು………….

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಜಗತ್ತಿನ ಮೇಲೆ ಸವಾರಿ ಹೆಚ್ಚು ಮಾಡುತ್ತಿರುವ ಕೊರೊನಾ ವೈರಸ್ ಈಗಾಗಲೇ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇತ್ತ ಹಲವರು ಮಹಾಮಾರಿಯ ವಿರುದ್ಧ ಹೋರಾಟ ಮಾಡಿ ಗುಣಮುಖರಾಗುತ್ತಿದ್ದು, ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಏಳು ವರ್ಷದ ಇಬ್ಬರು ಮಕ್ಕಳು ಕೊರೊನಾಗೆ ಸೆಡ್ಡು ಹೊಡೆದಿದ್ದಾರೆ. ಮೇ 19 ಹಾಗೂ 22 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಇಬ್ಬರು ಮಕ್ಕಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬದುಕಿನ ಅನಿವಾರ್ಯತೆಗೆ ಮುಂಬೈ ಸೇರಿದ್ದ ಇವರು ಕೊರೊನಾ …

Read More »

ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರೋರು ಪಾಲಿಸಬೇಕಾದ ನಿಯಮಗಳು

ಬೆಂಗಳೂರು: ಲಾಕ್‍ಡೌನ್ 5.Oನಲ್ಲಿ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶವನ್ನು ನೀಡಿದೆ. ಒಂದು ವೇಳೆ ಅಗತ್ಯವಿದ್ದಲ್ಲಿ ರಾಜ್ಯಗಳು ಅಂತಾರಾಜ್ಯ ಪ್ರಯಾಣಿಕರ ಮೇಲೆ ನಿರ್ಬಂಧ ಹೇರುವ ಅವಕಾಶವನ್ನು ಕೇಂದ್ರ ನೀಡಿತ್ತು. ಇದೀಗ ಕರ್ನಾಟಕ ಹೊರ ರಾಜ್ಯದಿಂದ ಬರೋರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಹೊರಡಿಸಿದೆ. 1. ಸೇವಾ ಸಿಂಧುವಿನಲ್ಲಿ ನೋಂದಣಿ: * ಕರ್ನಾಟಕ ಪ್ರವೆಶಿಸುವ ಮುನ್ನ ಪ್ರಯಾಣಿಯಕರು ಸೇವಾ ಸಿಂಧು ಪೋಟರ್ಲ್ ನಲ್ಲಿ ತಮ್ಮ ಪ್ರಾಥಮಿಕ ಮಾಹಿತಿಯನ್ನು ದಾಖಲಿಸಿರಬೇಕು. ಈ ಹಿಂದೆ ಇದ್ದಂತೆ ಸೇವಾ …

Read More »

ಕೊರೊನಾ ಬಾಧಿತ ಮುಂಬೈನಿಂದ ಇವತ್ತು ಬೆಂಗಳೂರಿಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ…….

ಬೆಂಗಳೂರು: ಕೊರೊನಾ ಸೋಂಕಿನ ಸರಣಿ ಸ್ಫೋಟ ಆಗುತ್ತಿರುವ ಬೆನ್ನಲ್ಲೇ ರಾಜ್ಯಕ್ಕೆ ಜೂನ್ ಆತಂಕ ಶುರುವಾಗಿದೆ. ಇವತ್ತಿನಿಂದ ಸೋಂಕು ಸುನಾಮಿ ನಗರಿ ಮುಂಬೈನಿಂದ ಕರ್ನಾಟಕಕ್ಕೆ ಎರಡು ರೈಲುಗಳು ಸಂಚರಿಸಲಿವೆ. ಕೊರೊನಾ ಬಾಧಿತ ಮುಂಬೈನಿಂದ ಇವತ್ತು ಬೆಂಗಳೂರಿಗೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣ ಬೆಳೆಸುತ್ತಿದೆ. ಇವತ್ತು ಬೆಳಗ್ಗೆ 8.5ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‍ನಿಂದ ಉದ್ಯಾನ್ ಎಕ್ಸ್‌ಪ್ರೆಸ್ ಹೊರಡಲಿದೆ. ಇದು ಕರ್ನಾಟಕದ ಪಾಲಿಗೆ ಅಕ್ಷರಶಃ ಕೊರೊನಾ ಎಕ್ಸ್‍ಪ್ರೆಸ್ ಆಗಿದೆ. ಯಾಕಂದರೆ ಈ ಉದ್ಯಾನ್ …

Read More »

ವಿಶ್ವ ಹಾಲಿನ ದಿನ ಹಾಗೂ ಹುಟ್ಟು ಹಬ್ಬದ ದಿನದಂದು ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಕೊಟ್ಟ ಸಾಹುಕಾರರು

ಬೆಂಗಳೂರು : ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1 ರಂದು ಕರ್ನಾಟಕ ಹಾಲು ಮಹಾಮಂಡಳಿಯು ಕೊರೋನಾದಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ಅವರಲ್ಲಿ ಪೌಷ್ಠಿಕಾಂಶ ಹೆಚ್ಚಳಕ್ಕಾಗಿ ಅರಿಸಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಭಾನುವಾರದಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೋನಾ ದಾಳಿ ಮಾಡಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರೋಗ ನಿರೋಧಕ …

Read More »