Breaking News

Daily Archives: ಜೂನ್ 30, 2020

ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್‍ಡೌನ್ ಅನಿವಾರ್ಯ” : ಆರ್.ಅಶೋಕ್

ಬೆಂಗಳೂರು, ಜೂ.30- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಸ್‌ಎಸ್‌ಲ್‌ಸಿ ಪರೀಕ್ಷೆ ಮುಗಿದ ನಂತರ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸುಳಿವನ್ನು ಸರ್ಕಾರ ನೀಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಹಾಗೂ ಕೋವಿಡ್ ಉಸ್ತುವಾರಿ ಆರ್.ಅಶೋಕ್, ಕೊರೊನಾ ವೇಗಕ್ಕೆ ಕಡಿವಾಣ ಹಾಕಬೇಕಾದರೆ ಲಾಕ್‍ಡೌನ್ ಅನಿವಾರ್ಯ ಎಂದು ಪರೋಕ್ಷವಾಗಿ ಮತ್ತೆ ಲಾಕ್‍ಡೌನ್ ಮಾಡುವ ಸುಳಿವು ಕೊಟ್ಟರು. ರಸ್ತುತ ಎಸ್‌ಎಸ್‌ಲ್‌ಸಿ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂಬ ಏಕೈಕ ಕಾರಣಕ್ಕೆ …

Read More »

ಭಾರತದಲ್ಲಿ ಉಗ್ರ ಸ್ವರೂಪದಲ್ಲಿ ಮುಂದುವರಿದಿರುವ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ

ನವದೆಹಲಿ/ಮುಂಬೈ, ಜೂ.30- ಭಾರತದಲ್ಲಿ ಉಗ್ರ ಸ್ವರೂಪದಲ್ಲಿ ಮುಂದುವರಿದಿರುವ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ನಿಯಂತ್ರಣಕ್ಕೆ ಬರದೇ ಆತಂಕಕಾರಿ ಮಟ್ಟದಲ್ಲೇ ಸಾಗಿದೆ. ಕಳೆದ 24 ತಾಸುಗಳಲ್ಲಿ ಆಘಾತಕಾರಿ ಮಟ್ಟದಲ್ಲಿ ಅಂದರೆ 18,522 ಸೋಂಕು ಪ್ರಕರಣಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 418 ಹೊಸ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ 18,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿರುವುದು ಇದು ಸತತ ಮೂರನೇ ದಿನ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ …

Read More »

ಮದ್ವೆಯಾದ ಎರಡೇ ದಿನಕ್ಕೆ ಮದುಮಗಳು ತವರಿಗೆ- ಕಾಡಿ ಬೇಡಿ ವಿವಾಹವಾಗಿ ಕೈಕೊಟ್ಟ ಭೂಪ

ಮಂಡ್ಯ: ಲಾಕ್‍ಡೌನ್ ನಡುವೆ ಲಕ್ಷಾಂತರ ಹಣ ಸಾಲ ಮಾಡಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಸೋದರತ್ತೆ ಮಗನೇ ಯುವತಿಗೆ ವಂಚಿಸಿದ್ದು, ಮದುವೆಯಾದ ಎರಡೇ ದಿನಕ್ಕೆ ತವರಿಗೆ ಕಳುಹಿಸಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಹರೀಶ್ ಮದುವೆಯಾದ ಎರಡು ದಿನಕ್ಕೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಈತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದವನು. ಜೂನ್ 1ರಂದು ಜಿಲ್ಲೆಯ KRS ಸಮೀಪದ ಹೊಂಗಹಳ್ಳಿ ನಿವಾಸಿಗಳಾದ ತಾಯಮ್ಮ-ಈರಪ್ಪ ಮಗಳ ಜೊತೆ ವಿವಾಹವಾಗಿದ್ದನು. ಹರೀಶ್ ಮದುವೆಯಾದ …

Read More »

ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಕುರಿತು ಸಭೆ……..

ಬೆಂಗಳೂರು: ಕಂಠೀರವ ಸ್ಟುಡಿಯೋ ಆವರಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಂಬರೀಶ್ ಸ್ಮಾರಕ ಪ್ರತಿಷ್ಠಾನದ ಕುರಿತು ಸಭೆ ಮಾಡಲಾಗಿದೆ. ಸಭೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣ ಮಾಡಲು ಸಿಎಂ ಅನುಮತಿ ನೀಡಿದ್ದಾರೆ. ಸ್ಮಾರಕಕ್ಕೆ ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗ ಗುರುತಿಸಲಾಗಿದ್ದು, ರಾಜ್ಯ ಸರ್ಕಾರವು 5 …

Read More »

ವಿಶಾಖಪಟ್ಟಣಂನಲ್ಲಿ ಮತ್ತೆ ವಿಷಾನಿಲ ಸೋರಿಕೆ- ಇಬ್ಬರು ಸಾವು, ನಾಲ್ವರು ಗಂಭೀರ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯೊಂದರಲ್ಲಿ ಮತ್ತೆ ಗ್ಯಾಸ್ ಲೀಕ್ ಆಗಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶಾಖಪಟ್ಟಣಂನ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ಸೋರಿಕೆಯಾಗಿತ್ತು. ಈಗ ಮತ್ತೆ ಇದೇ ವಿಶಾಖಪಟ್ಟಣಂನ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಅನಿಲ ಸೋರಿಕೆಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ …

Read More »

ಸುಧಾಕರ್, ಅಶೋಕ್ ಮಧ್ಯೆ ಕೊರೊನಾ ಫೈಟ್?

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಧ್ಯೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಇಂದಿನಿಂದ ಬೆಂಗಳೂರು ಕೊರೊನಾ ನಿರ್ವಹಣೆ ಪಾತ್ರ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ. ಸಚಿವ ಡಾ.ಕೆ.ಸುಧಾಕರ್ ಕ್ವಾರಂಟೈನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಶೋಕ್‍ಗೆ ಸಿಕ್ಕಿತ್ತು. ಮುಖ್ಯಮಂತ್ರಿಗಳು ಆರ್ ಅಶೋಕ್‍ಗೆ ಮೌಖಿಕವಾಗಿ ತಾತ್ಕಾಲಿಕ ಹೊಣೆ ಹೊರಿಸಿದ್ದರು. ಆದರೆ ಇದೀಗ ಸುಧಾಕರ್ ಹೋಂ ಕ್ವಾರಂಟೈನ್ ಅವಧಿ ಮುಗಿಸಿ ರೀ ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ ಹೊಣೆ ಯಾರಿಗೆ..? …

Read More »

ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಎಚ್ಚರಿಕೆ …….

ಬೆಂಗಳೂರು,ಜೂ.29- ನಾಳೆಯೊಳಗೆ ಖಾಸಗಿ ಆಸ್ಪತ್ರೆಯವರು ಸೋಂಕಿತರಿಗೆ ಕೊರೊನಾ ಚಿಕಿತ್ಸೆ ನೀಡಲು ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲೇಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಖಾಸಗಿ ಆಸ್ಪತ್ರೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಅವರು, ಏನು ಮಾಡುತ್ತೀರೋ ಬಿಡುತ್ತೀರೋ ಗೊತ್ತಿಲ್ಲ.ನಾಳೆಯೊಳಗೆ ಕನಿಷ್ಠ ಪಕ್ಷ ಎರಡುವರೆ ಸಾವಿರ ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲೇಬೇಕೆಂದು ತಾಕೀತು ಮಾಡಿದರು. ಒಂದು ಹಂತದಲ್ಲಿ ಖಾಸಗಿ ಆಸ್ಪತ್ರೆ ಇಷ್ಟು ಪ್ರಮಾಣದ ಹಾಸಿಗೆಗಳನ್ನು ನೀಡಲುಸಾಧ್ಯವಿಲ್ಲ ಎಂದು …

Read More »

ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆಮುಂದಿನ ಆರು ತಿಂಗಳು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ

ಬೆಂಗಳೂರು : ಪ್ರಸಕ್ತ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂಬ ತಜ್ಞರ ಅಭಿಪ್ರಾಯವನ್ನು ಆಧರಿಸಿ ಕೊರೊನಾ ಮಹಾಮಾರಿಯನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕಂದಾಯ ಸಚಿವ ಆರ್ ಅಶೋಕ್ ಅವರು ಭಾನುವಾರ ತಾವು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಶುಶ್ರೂಷೆ ನೀಡಲು ಮುಂದಿನ ಆರು ತಿಂಗಳು ಮಾನಸಿಕವಾಗಿ …

Read More »

ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್……

ನವದೆಹಲಿ,ಜೂ.29-ಕರೋನವೈರಸ್ ರೋಗಿಗಳ ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ತೆರೆದಿದ್ದು, ಇನ್ನೆರಡು ದಿನಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ತಿಳಿಸಿದರು. ಕೋವಿಡ್ ಚಿಕಿತ್ಸೆಗಾಗಿ ಪ್ಲಾಸ್ಮಾ ಕೊರತೆಯಿದ್ದು, ಇದನ್ನು ಮನಗಂಡು ಸರ್ಕಾರ ಪ್ಲಾಸ್ಮ ಬ್ಯಾಂಕ್ ತೆರೆಯುತ್ತಿದೆ.ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್‍ಬಿಎಸ್) ನಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸುತ್ತಿದ್ದು, ಕೊರೊನಾ ವಿರುದ್ದ ಹೋರಾಡಿ ರೋಗಮುಕ್ತರಾದ ವ್ಯಕ್ತಿಗಳು ಮುಂದೆ ಬಂದು ಇತರ ಕೊರೊನಾ ಸೋಂಕಿತರಿಗೆ …

Read More »

ಅಗಸರು- ಕ್ಷೌರಿಕರಿಗೆ 5000ರೂ. ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ರಾಮನಗರ ಜೂ.30-ಅಗಸರು ಹಾಗೂ ಕ್ಷೌರಿಕರಿಗೆ ಕೋವಿಡ್-19ರ ಲಾಕ್‌ಡೌನ್ ಕಾರಣ 5000 ರೂ.ಗಳ ಪರಿಹಾರ ನೆರವು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 10ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿತ್ತು. ಆದರೆ, ಈ ಸಂಬಂಧ ರಾಮನಗರ ಜಿಲ್ಲೆಯ 04 ತಾಲ್ಲೂಕುಗಳಿಂದ ಇಲ್ಲಿಯವರೆಗೂ 1041 ಅರ್ಜಿಗಳು ಮಾತ್ರ ಆನ್‌ಲೈನ್ ಅಲ್ಲಿ ಸ್ವೀಕೃತಗೊಂಡಿವೆ.ಈ ವೃತ್ತಿಯಲ್ಲಿ ಯಾವುದೇ ಅಗಸ, ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕಾರ್ಮಿಕರು …

Read More »