ಕಾರವಾರ : ಕೋವಿಡ್–19 ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರದಿಂದ ನಿರ್ಧರಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾನಿಗೊಳಗಾದ ಕಲ್ಲಂಗಡಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 15 ಸಾವಿರ ಗರಿಷ್ಠ ಪರಿಹಾರ ಧನವನ್ನು ಪ್ರತಿ ಫಲಾನುಭವಿಗೆ ಗರಿಷ್ಠ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ ನೀಡಲಾಗುವುದು. ಅರ್ಜಿ ಸಲ್ಲಿಸಬಯಸುವ ಫಲಾನುಭವಿಯು ಜೂನ್ 12 ರೊಳಗೆ ಸಂಬಂಧಿತ ತಾಲ್ಲೂಕಿನ ತೋಟಗಾರಿಕಾ ಕಛೇರಿಗೆ ನಿಗದಿತ ಅರ್ಜಿ ನಮೂನೆಯೊಂದಿಗೆ …
Read More »Daily Archives: ಜೂನ್ 3, 2020
ಕೊರೊನಾ ಸೋಂಕು ತಗುಲಿಲ್ಲ ಅಂತಾ ಗೆಳೆಯರ ಜತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದು, ಇದೀಗ ಆತನಿಗೆ ಕೊರೊನಾ ಸೋಂಕು
ಬೆಳಗಾವಿ: ಮುಂಬೈನಿಂದ ವಾಪಸ್ ಆಗಿದ್ದ ವ್ಯಕ್ತಿ ಕ್ವಾರಂಟೈನ್ ನಿಂದ ಬಿಡುಗಡೆಯಾಗಿ ತನಗೆ ಕೊರೊನಾ ಸೋಂಕು ತಗುಲಿಲ್ಲ ಅಂತಾ ಗೆಳೆಯರ ಜತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದು, ಇದೀಗ ಆತನಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಹುಕ್ಕೇರಿ ತಾಲೂಕಿನ ಬಿದಿರೆವಾಡಿ ಗ್ರಾಮದ 35 ವರ್ಷ ವ್ಯಕ್ತಿ ಮುಂಬೈನಿಂದ ವಾಪಸ್ ಆಗಿದ್ದ. ಆತನನ್ನ ಆಸ್ತಿಹಾಳ್ ಹೈಸ್ಕೂಲ್ನಲ್ಲಿ ಕ್ವಾರಂಟೀನ್ ಮಾಡಲಾಗಿತ್ತು. ಸರ್ಕಾರ ಇತ್ತೀಚಿಗೆ ಕ್ವಾರಂಟೈನ್ ಅವಧಿಯನ್ನು 14 ದಿನದ ಬದಲು 7 ದಿನಕ್ಕೆ ಕಡಿತ ಮಾಡಿ …
Read More »ಜೈಲಿನಿಂದ ಬಂದ ಪಾದರಾಯನಪುರ ಪುಂಡರಿಗೆ ಭವ್ಯ ಸ್ವಾಗತ ನೀಡಿದ ಶಾಸಕ ಜಮೀರ್..!
ಬೆಂಗಳೂರು,ಜೂ.3- ಪಾದಾರಾಯನಪುರ ದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧಿತರಾಗಿದ್ದ 126 ಆರೋಪಿಗಳು ಇಂದು ಬಿಡುಗಡೆಯಾಗಿ ಬಂದಾಗ ಪೊಷಕರ ದಂಡೇ ಅಲ್ಲಿ ನೆರೆದಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾ ಗಿದ್ದರೂ ಬಹಳಷ್ಟು ಮಂದಿ ಅವರನ್ನು ಬರಮಾಡಿಕೊಳ್ಳಲು ಗುಂಪು ಸೇರಿದ್ದು ಕಂಡುಬಂತು. ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಸ್ಥಳದಲ್ಲಿದ್ದು, ಅವರನ್ನು ಸ್ವಾಗತ ಕೋರಿದರು. ಪಾದರಾಯನಪುರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾದ ವೇಳೆ ತಪಾಸಣೆಗೆ ಬಂದಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಹಾಗೂ …
Read More »ಮುಂದಿನ ವಾರ ಅಮೆರಿಕದ ಭಾರತಕ್ಕೆ ಬರಲಿವೆ 100 ವೆಂಟಿಲೇಟರ್ ……..
ವಾಷಿಂಗ್ಟನ್, ಜೂ.3- ಡೆಡ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕ ಕೊಡುಗೆ ಯಾಗಿ ನೀಡಿರುವ ಮೊದಲ ತಂಡದ 100 ವೆಂಟಿಲೇಟರ್‍ಗಳು (ಪ್ರಾಣವಾಯು ಸಾಧನ) ಮುಂದಿನ ವಾರ ಭಾರತ ತಲುಪಲಿವೆ. ಹಡಗಿನ ಮೂಲಕ 100 ವೆಂಟಿಲೇಟರ್‍ಗಳ ಮೊದಲ ತಂಡ ಮುಂದಿನ ವಾರ ಭಾರತ ತಲುಪಲಿದೆ ಎಂದು ವಾಷಿಂಗ್ಟನ್‍ನಲ್ಲಿರುವ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ …
Read More »ಬಿ.ಎಸ್.ಯಡಿಯೂರಪ್ಪ, ನನೆಗುದಿಗೆ ಬಿದ್ದಿದ್ದ ಕಚೇರಿಗಳ ಸ್ಥಳಾಂತರ ಕಾರ್ಯಕ್ಕೆ ಹಠಾತ್ ಆದೇಶಿಸಿದ್ದಾರೆ.
ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ದಾಳವನ್ನು ಮಾಜಿ ಸಚಿವ ಉಮೇಶ ಕತ್ತಿ ಉರುಳಿಸಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನನೆಗುದಿಗೆ ಬಿದ್ದಿದ್ದ ಕಚೇರಿಗಳ ಸ್ಥಳಾಂತರ ಕಾರ್ಯಕ್ಕೆ ಹಠಾತ್ ಆದೇಶಿಸಿದ್ದಾರೆ. ರಾಜ್ಯಮಟ್ಟದ ನಿಗದಿತ ಸರ್ಕಾರಿ ಕಚೇರಿಗಳನ್ನು ಒಂದು ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಧವಾರ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಮುಂದಿನ ಸಭೆಯೊಳಗೆ …
Read More »ಕಡಿಮೆ ವೆಚ್ಚದಲ್ಲಿ ಕೊರೊನಾ ಚಿಕಿತ್ಸೆಗೆ ಐಸೊಲೇಷನ್ ವಾರ್ಡ್ ಅಭಿವೃದ್ಧಿ
ಬೆಂಗಳೂರು, ಜೂ.3- ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ 10 ಹಾಸಿಗೆ ಸಾಮಥ್ರ್ಯದ ಐಸೊಲೇಷನ್ ವಾರ್ಡ್‍ಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಸುರಕ್ಷತೆಯ ಭಯವನ್ನು ಅಲೆಯನ್ಸ್ ವಿವಿ ನಿವಾರಿಸಿದೆ. ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಅತಿ ಕಡಿಮೆ ಖರ್ಚಿನ ಅತ್ಯಾಧುನಿಕ ಐಸೊಲೇಷನ್ ವಾರ್ಡ್ ನಿರ್ಮಾಣದ ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸ ಬೆಂಗಳೂರಿನ ಅಲೆಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ಇಲ್ಲಿನ ಸಂಶೋಧಕರ ತಂಡ, ಸಾಗಿಸಲು ಪೂರಕವಾದ 10 ಹಸಿಗೆ ಸಾಮಥ್ರ್ಯದ ಐಸೊಲೇಷನ್ ವಾರ್ಡ್ …
Read More »ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಕಣ್ಸನ್ನೆ ಬೆಡಗಿ-
ಚೆನ್ನೈ: ತನ್ನ ಕಣ್ಸನ್ನೆ ಮೂಲಕವೇ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿ, ಕಣ್ಸನ್ನೆ ಚೆಲುವೆ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ದಿಢೀರನೇ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದರು. ಇದೀಗ ಪ್ರಿಯಾ ವಾರಿಯರ್ ಮತ್ತೆ ಇನ್ಸ್ಟಾಗ್ರಾಮ್ ಖಾತೆಯನ್ನು ಆಕ್ವೀವ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಪ್ರಿಯಾ ಕಣ್ಸನ್ನೆ ಮೂಲಕವೇ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಳ್ಳುವ ಮೂಲಕ ಬಹುಬೇಡಿಕೆ ನಟಿಯಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ …
Read More »ಕೊರೊನಾಗೆ ವ್ಯಾಕ್ಸಿನ್ ಸಿಗುವವರೆಗೂ ಶಾಲೆ ಬೇಡ: ಪೋಷಕರು
ಧಾರವಾಡ: ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಸಿಗುವವರೆಗೆ ಶಾಲೆ ಬೇಡ ಎಂದು ಧಾರವಾಡದ ಶಾಲಾ ಮಕ್ಕಳ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಕೊರೊನಾ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಇಲ್ಲ, ಹೀಗಾಗಿ ಶಾಲೆಗೆ ಹೋದರೆ ಮಕ್ಕಳೆಲ್ಲ ಊಟಕ್ಕೆ ಹಾಗೂ ಆಟದಲ್ಲಿ ಗುಂಪಾಗಿ ಭಾಗವಹಿಸ್ತಾರೆ ಎಂದು ಬಹುತೇಕ ಪೋಷಕರು ಹೇಳುತ್ತಿದ್ದಾರೆ. ಅಲ್ಲದೆ ಮಕ್ಕಳು ಶಾಲೆಗೆ ಹೋಗಬೇಕಾದ್ರು ಆಟೋ ಹಾಗೂ ವ್ಯಾನ್‍ಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕಾಗುತ್ತೆ. ಈ ಸಂದರ್ಭದಲ್ಲಿ ಒಂದು ಮಗುವಿಗೆ ಏನಾದ್ರು ಕೊರೊನಾ ಇದ್ರೆ ಅದು ಎಲ್ಲ …
Read More »ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ.: ಮಾಜಿ ಸಿಎಂ ಸಿದ್ದರಾಮಯ್ಯ
ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಬಿಜೆಪಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಸಂವಿಧಾನಾತ್ಮಕ ಮುಖ್ಯಮಂತ್ರಿ ಒಬ್ಬರಿದ್ದರೆ, ಅಸಂವಿಧಾನಿಕವಾಗಿ ಇನ್ನೊಬ್ಬರು ಮುಖ್ಯಮಂತ್ರಿ ಇದ್ದಾರೆ. ವಿಜಯೇಂದ್ರ ಇನ್ನೋರ್ವ ಮುಖ್ಯಮಂತ್ರಿ, ಇನ್ನೊಂದು ಸಲಾ ಹೇಳಲಾ ಎಂದು ಎರಡು ಬಾರಿ ವಿಜಯೇಂದ್ರನ ಹೆಸರು ಹೇಳುವ ಮೂಲಕ ಇದು ನಾನು ಹೇಳಿದ್ದಲ್ಲ ಬಿಜೆಪಿ ಶಾಸಕರೇ ಹೇಳಿರುವುದು ಎಂದು …
Read More »ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಕೊರೋನಾ ಲಗ್ಗೆಯಿಟ್ಟ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಾಲೂಕಾ ಅಧಿಕಾರಿಗಳ ಜೊತೆ ಸಭೆ
ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಕೊರೋನಾ ಲಗ್ಗೆಯಿಟ್ಟ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಾಲೂಕಾ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬುಧವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಅಧಿಕಾರಿಗಳ ಸಭೆ ನಡೆಯಿಸಿದ ನಂತರ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ತಲಾ ಒಂದೊಂದು ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ತಿಳಿಸಿದರು. ಮುಂಬೈ …
Read More »