ಬಡತನಕ್ಕೆ ಬಗ್ಗದ ಛಲ… ಬೆಳಗಾವಿಯ ಪ್ರಶಾಂತ್’ಗೆ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ
ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಶಕ್ತಿ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದ್ದಾರೆ ಬೆಳಗಾವಿಯ ಯುವಕನ ಈ ಸಾಧನೆ. ಹಾಗಾದರೇ, ಆ ಯುವಕ ಮಾಡಿರುವ ಸಾಧನೆಯಾದರೂ ಯಾವುದು? ಎಂಬುದನ್ನು ನೋಡೋಣ ಬನ್ನಿ.
ಹೌದು, ಬೆಳಗಾವಿಯ ಕಂಗ್ರಾಳಿ ಬುದ್ರುಕ್ ಗ್ರಾಮದ ಪ್ರಶಾಂತ್ ಮಂಗೇಶ್ ಚೌಗುಲೆ. ಆರ್ಥಿಕ ಸಂಕಷ್ಟಗಳಿಂದ ಜರ್ಜರಿತ ಕುಟುಂಬದಿಂದ ಬಂದ ಈ ಪ್ರತಿಭಾವಂತ ಯುವಕ. ಈತ ತನ್ನ ಬುದ್ಧಿಮತ್ತೆ ಮತ್ತು ಪರಿಶ್ರಮದಿಂದ ಸಿಎ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾನೆ.
ಅವರ ತಂದೆ ‘ಮುಜಾವರ್ ಪೆಟ್ರೋಲಿಯಂ’ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್‌ಗಳ ದುರಸ್ಥಿಯ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆಯನ್ನು ಮಾಡುತ್ತಾರೆ. ಕುಟುಂಬದಲ್ಲಿ ಯಾರಿಗೂ ಉನ್ನತ ಶಿಕ್ಷಣವಿಲ್ಲದ ಈ ಸ್ಥಿತಿಯಲ್ಲಿಯೂ ಪ್ರಶಾಂತ್ ತನ್ನ ಕನಸುಗಳಿಗೆ ದಿಕ್ಕು ನೀಡಿ, ಶ್ರದ್ಧೆ ಮತ್ತು ಪರಿಶ್ರಮದಿಂದ ಮುಂದುವರಿದು ಈ ಸಾಧನೆ ಮಾಡಿದ್ದಾರೆ.
ಅವರ ಈ ಯಶಸ್ಸನ್ನು ಕಂಡು ಬೆಳಗಾವಿ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಸತ್ಕರಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬಡ ಕುಟುಂಬದ ಈ ವಿಜಯದಿಂದ ಮನೆಯಲ್ಲೂ ಹಾಗೂ ಗ್ರಾಮದಲ್ಲೂ ಸಂತಸ ಮೂಡಿಸಿದೆ. ಪ್ರಶಾಂತ್ ಅವರ ಈ ಸಾಧನೆ ಬಡ ಮಕ್ಕಳಿಗೂ ಪ್ರೇರಣೆಯಾಗಿದೆ.