ಗೋಕಾಕ: ದೇಶದ ಬೆನ್ನೆಲುಭಾಗಿರುವ ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರಗಳ ಪಾತ್ರ ಪ್ರಮುಖವಾಗಿದ್ದು ಅವುಗಳ ಆರೋಗ್ಯ ರಕ್ಷಣೆಗೆ ರೈತರು ಹೆಚ್ಚಿನ ಮಹತ್ವ ನೀಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ಸೋಮವಾರದಂದು ನಗರದ ಶಾಸಕರ ಕಾರ್ಯಲಯದ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಿಗಳ ವಿತರಿಸಿ ಮಾತನಾಡುತ್ತಿದ್ದರು.
ಸರ್ಕಾರ ರೈತರಿಗೆ ಹಲವಾರು ಯೋಜನೆಗಳ ಮೂಲಕ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆ ಸೇರಿದಂತೆ ಸಾಕು ಪ್ರಾಣಿಗಳ ಪಾಲನೆಯೊಂದಿಗೆ ತಮ್ಮ ಆರ್ಥಿಕವಾಗಿ ಸದೃಢರಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರ ಕೈ ಬಲಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ತಳದಪ್ಪ ಅಮ್ಮಣಗಿ, ಸದಸ್ಯ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಪಶು ಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ: ಮೋಹನ ಕಮತ, ಪಶು ವೈದ್ಯಾಧಿಕಾರಿ ಡಾ: ಶಶಿಕಾಂತ ಕೌಜಲಗಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಉಪ್ಪಾರ, ಎ.ಎನ್.ಗಣಾಚಾರಿ, ಬಿ.ಆರ್.ಹಾರುಗೇರಿ, ಮುಖಂಡ ಕೆಂಚಪ್ಪ ಗೌಡಪ್ಪಗೋಳ ಇದ್ದರು.
Laxmi News 24×7