ಬೆಂಗಳೂರು, ಸೆ.3- ನಿರುದ್ಯೋಗಿಗಳ ಕಷ್ಟ ನೋಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವ ರೀತಿಯ ಕನ್ನಡಕಬೇಕು ಹೇಳಿ. ಅದು ಎಷ್ಟೇ ಖರ್ಚಾರಲಿ, ಎಲ್ಲೇ ಇರಲಿ ತರಿಸಿಕೊಡುತ್ತೇವೆ ಎಂದು ಯುವ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಗ್ರಹಣ ನೋಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಜಪಾನ್ನಿಂದ ಕನ್ನಡಕವೊಂದನ್ನು ತರಿಸಿಕೊಂಡಿದ್ದರು. ದುರಾದೃಷ್ಟವಶಾತ್ ಮೋಡ ಕವಿದಿದ್ದರಿಂದ ಸೂರ್ಯಗ್ರಹಣ …
Read More »ಬೆಳಗಾವಿ ಸೂಪರ್ ಕಾಪ್ ಮಾರ್ಕೆಟ್ ಸ್ಟೇಷನ್ ಇಂದ ವರ್ಗಾವಣೆ………
ಬೆಳಗಾವಿ- ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆಯಾಗಿದ್ದು ಅವರ ವರ್ಗಾವಣೆಯಿಂದ ತೆರುವಾದ ಸ್ಥಾನಕ್ಕೆ ಮಾರ್ಕೆಟ್ ಎಸಿಪಿಯಾಗಿ ಸದಾಶಿವ ಕಟ್ಟೀಮನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇಂದು ನಾರಾಯಣ ಭರಮಣಿ ಅವರು ಸದಾಶಿವ ಕಟ್ಟೀಮನಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು ನಾರಾಯಣ ಭರಮಣಿ ಅವರನ್ನು ಸರ್ಕಾರ ಖಾನಾಪೂರ ತರಬೇತಿ ಶಾಲೆಗೆ ವರ್ಗಾವಣೆ ಮಾಡಿದೆ. ಮಾರ್ಕೆಟ್ ಎಸಿಪಿಯಾಗಿ ನಾರಾಯಣ ಭರಮಣಿ ಅವರು ಬೆಳಗಾವಿ ಮಹಾನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡುವಲ್ಲಿ ಪ್ರಮುಖ …
Read More »ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಬಳಿಕ ಇದೀಗ ಮತ್ತೊಬ್ಬ ನಟಿಗೆ ಢವಢವ ಶುರು ಆಗಿದೆ.
ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ, ಸಂಜನಾ ಬಳಿಕ ಇದೀಗ ಮತ್ತೊಬ್ಬ ನಟಿಗೆ ಢವಢವ ಶುರು ಆಗಿದೆ. ಹೌದು. ರಾಗಿಣಿ, ಸಂಜನಾ ಹೆಸರು ಥಳುಕು ಹಾಕಿಕೊಳ್ಳುತ್ತಿದ್ದಂತೆಯೇ ಇದೀಗ ನಟಿ ಶರ್ಮಿಳಾ ಮಾಂಡ್ರೆ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆಯೊಳಗೆ ಶರ್ಮಿಳಾಗೂ ನೋಟಿಸ್ ನೀಡುವ ಸಾಧ್ಯತೆಗಳು ಇವೆ. ಈಗಾಗಲೇ ರಾಗಿಣಿ ಆಪ್ತ ರವಿಶಂಕರ್ ನೀಡಿದ ಮಾಹಿತಿ ಆಧರಿಸಿ ಕಾರ್ತಿಕ್ ರಾಜುವನ್ನು ಸಿಸಿಬಿ …
Read More »ಧಗ ಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಖಾಸಗಿ ಬಸ್
ಬೀದರ್: ಚಲಿಸುತ್ತಿದ್ದ ಖಾಸಗಿ ಬಸ್ ಎಂಜಿನ್ನಲ್ಲಿ ಉಂಟಾದ ಅಗ್ನಿ ಅವಘಡದಿಂದಾಗಿ ನೋಡು ನೋಡುತ್ತಲೇ ಬಸ್ ತುಂಬೆಲ್ಲ ಬೆಂಕಿ ಆವರಿಸಿಕೊಂಡು ಧಗ ಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಜಿಲ್ಲೆಯ ಹುಮನಾಬಾದ್ ಸಮಿಪದ ಬೀದರ್- ಕಲಬುರಗಿ ಹೆದ್ದಾರಿಯ ಧುಮ್ಮನಸೂರು ಗ್ರಾಮದ ಬಳಿ ತಡರಾತ್ರಿ ಘಟನೆ ನಡೆದಿದೆ. ಡ್ರೈವರ್ ಸಮಯ ಪ್ರಜ್ಞೆಯಿಂದಾಗಿ ಬಸ್ನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದಾಗ ರೋಡ್ ಬ್ರೇಕರ್ ಬಳಿ ಒಮ್ಮಲೆ ಜಂಪ್ ಆಗಿದ್ದು, …
Read More »ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ
ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ ಆಗಿದ್ದಾರೆ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್ವುಡ್ ಕೆಲ ಯುವ ನಟಿ-ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಇಂದ್ರಜಿತ್ಗೆ ನೋಟಿಸ್ ನೀಡಿದ್ದರು. ಆದರೆ ಇಂದ್ರಜಿತ್ ಅವರು ಮಾಹಿತಿ ಮಾತ್ರ ನೀಡಿ ಸೂಕ್ತ ದಾಖಲೆಗಳನ್ನು ನೀಡರಲಿಲ್ಲ. ಈಗ ವಿಚಾರಣೆಗೆ ಮತ್ತೆ ಹಾಜರಾಗಿರುವ ಇಂದ್ರಜಿತ್ ಇಂದು ಕೂಡ ಕೇವಲ ಮಾಹಿತಿ ನೀಡಿ ದಾಖಲೆ ನೀಡಿಲ್ಲ. …
Read More »ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್
ಬೆಂಗಳೂರು: ನಟಿ ಶರ್ಮಿಳಾ ಮಾಂಡ್ರೆಗೆ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ.ಈ ಸಂಬಂಧ ಸ್ವತಃ ನಟಿ ಟ್ವೀಟ್ ಮಾಡಿದ್ದು, ನನಗೆ ಹಾಗೂ ನನ್ನ ಕುಟುಂಬದ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಆದರೆ ನಮಗೆ ಹೆಚ್ಚಿನ ರೋಗ ಲಕ್ಷಣ ಇಲ್ಲದಿರುವುದುರಿಂದ ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇವೆ. ವೈದ್ಯರ ಸಲೆಹೆಯಂತೆ ನಾನು ಸೆಲ್ಫ್ ಕ್ವಾರಂಟೈನ್ ಆಗಿದ್ದೇನೆ. ಹಾಗೆಯೇ ಡಾಕ್ಟರ್ ಸಲಹೆಯಂತೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Read More »ಹೆಚ್.ಡಿ ಕುಮಾರಸ್ವಾಮಿಯವರು ಡ್ರಗ್ಸ್ ನ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ……?: ಪ್ರಮೋದ್ ಮುತಾಲಿಕ್
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಡ್ರಗ್ಸ್ ನ ಹಣದಿಂದಲೇ ನಮ್ಮ ಸರ್ಕಾರ ಕೆಡವಿದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ ಇಂದ್ರಜಿತ್ ಲಂಕೇಶ್ ರೀತಿ ಕುಮಾರಸ್ವಾಮಿಯವರನ್ನು ಕೂಡ ವಿಚಾರಣೆ ನಡೆಸಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಕೂಡ ಸತ್ತಿದ್ದು ಡ್ರಗ್ಸ್ ನಿಂದಲೇ ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯನವರಿಗೆ ಯುವ ಜನತೆಯೆ ಬಗ್ಗೆ ಕಾಳಜಿ …
Read More »ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟುವಿಚಾರಣೆ ವೇಳೆ ಹಲವು ನಟ-ನಟಿಯರ ಹೆಸರನ್ನು ಕೂಡ ಹೇಳಲಾಗಿದೆ
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಮತ್ತೋರ್ವ ಡ್ರಗ್ಸ್ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ತಿಕ್ ರಾಜು ಎಂದು ತಿಳಿದುಬಂದಿದೆ. ಈಗಾಗಲೇ ಬಂಧಿತನಾಗಿರುವ ಆರ್ ಟಿಒ ಅಧಿಕಾರಿ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಕಾರ್ತಿಕ್ ರಾಜುನನ್ನು ಬಂಧಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ನಿನ್ನೆ ನಟಿ ರಾಗಿಣಿ ಆಪ್ತ, ಆರ್ ಟಿ ಒ ಅಧಿಕಾರಿ ರವಿಶಂಕರ್ ಎಂಬಾತನನ್ನು ಸಿಸಿಬಿ …
Read More »ನಿರುದ್ಯೋಗ ದಿಂದಾಗಿ ಆತ್ಮ ಹತ್ಯೆ ಮಾಡಿಕೊಂಡ ಜನ ನಮ್ಮ ಕರ್ನಾಟಕದವರೇ ಹೆಚ್ಚು……!
ಹೊಸದಿಲ್ಲಿ: ದೇಶದಲ್ಲಿ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಸಂಖ್ಯೆಯೂ ಹೆಚ್ಚುಚಾಗುತ್ತಿದ್ದು, ಕಳೆದ ವರ್ಷದ ನಿರುದ್ಯೋಗದಿಂದ 2,851 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2019ರಲ್ಲಿ ದೇಶದಾದ್ಯಂತ 1,39,123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3.4ರಷ್ಟು ಅಧಿಕ. 2018ರಲ್ಲಿ ಒಟ್ಟು 1,34,516 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2017ರಲ್ಲಿ ನಿರುದ್ಯೋಗ ಕಾರಣದಿಂದ 2,741 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಒಟ್ಟು ಆತ್ಮಹತ್ಯೆಯ ಶೇಕಡ 2ರಷ್ಟಾಗಿದೆ. ಇನ್ನೂ ದೇಶದಲ್ಲಿಯೇ ಮಹಾರಾಷ್ಟ್ರ ಅಗ್ರಸ್ಥಾನಿಯಾಗಿದೆ. ನಿರುದ್ಯೋಗ …
Read More »ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್
ಬೆಂಗಳೂರು: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ. ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಈ ಹಿಂದೆ ಒಬ್ಬ ನಟನ ಕುರಿತು …
Read More »