Breaking News

ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರೆ   ಯಶಸ್ಸು ಕಟ್ಟಿಟ್ಟ ಬುತ್ತಿ

ಕಾಗವಾಡ :  ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರೆ   ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ನಿರೂಪಿಸಿದ್ದಾಳೆ.  ಇಂಗ್ಲೀಷ ಮಾಧ್ಯಮದಲ್ಲಿ 625 ಕ್ಕೆ 604 ಅಂಕ ಗಳಿಸಿ  ಅಥಣಿ ಕಿತ್ತೂರ ರಾಣಿ ಚನ್ನಮ್ನ ವಸತಿ ಶಾಲೆಗೆ ಪ್ರಥಮ‌ ಸ್ಥಾನ ಪಡೆಯುವ ಮೂಲಕ  ಪೋಷಕರ ಹಾಗೂ  ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಪೂಜಾ ಎಂಬ …

Read More »

ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥರಿಗೆ ಕೊರೋನಾ ವೈರಸ್ ದೃಢ

ಹೊಸದಿಲ್ಲಿ: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥರಾಗಿರುವ ಮಹಂತ್ ನೃತ್ಯ ಗೋಪಾಲ್ ದಾಲ್ ಅವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿ ತಿಳಿಸಿವೆ. ಕೋಟ್ಯಾಂತ ಭಾರತೀಯರ ಕನಸ್ಸಾಗಿದ್ದ ಅಯೋಧ್ಯೆ ರಾಮಮಂದಿರದ ಭೂಮಿ ಪೂಜೆ ಆಗಸ್ಟ್ 5 ರಂದು ನೆರವೇರಿಸಲಾಗಿತ್ತು. ಕಾರ್ಯಕ್ರಮದಲ್ಲಿ ಐವರು ಪ್ರಮುಖ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. …

Read More »

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಸ್ವಾತಂತ್ರ್ಯೋತ್ಸವ ಆಚರಣೆ

ಬೆಂಗಳೂರು, ಆ.13- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಯಾವುದೇ ಪಥ ಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೆ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಹೇಳಿದರು.ಈ ಬಾರಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಕಾರ್ಯವೂ ಇರುವುದಿಲ್ಲ. …

Read More »

ಲಾರಿ, ಕಾರು ಡಿಕ್ಕಿ- ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಲಾರಿ ಮತ್ತು ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಸಮೀಪದ ಅದರಗುಂಚಿ ಕ್ರಾಸ್ ಬಳಿ ನಡೆದಿದೆ.ರಸ್ತೆ ಪಕ್ಕ ನಿಲ್ಲಿಸಿದ ಲಾರಿಗೆ ಹಿಂಬದಿಯಿಂದ ಬಂದು ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ಅಯ್ಯನಾರ್(35) ಎಂದು ಗುರುತಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಜನರು ನಾಲ್ಕು ಜನರ ಪ್ರಾಣ ಉಳಿಸಿದ್ದಾರೆ. ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದವರ …

Read More »

ಡಿಸಿಎಂ ಅಶ್ವಥ್ ನಾರಾಯಣ್ ಜೊತೆ ಚರ್ಚೆ ನಡೆಸಿದ ಟಗರು ಶಿವರಾಜ್‍ಕುಮಾರ್

ಬೆಂಗಳೂರು: ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ಇದರ ಬಗ್ಗೆ ನಟ ಶಿವರಾಜ್‍ಕುಮಾರ್ ಅವರು ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಶ್ವಥ್ ನಾರಾಯಣ್ ಅವರ ನಿವಾಸಕ್ಕೆ ಬಂದ ಶಿವಣ್ಣ, ಚಿತ್ರರಂಗದ ಹಲವಾರು ತೊಂದರೆಗಳ ಬಗ್ಗೆ ಡಿಸಿಎಂ ಅವರ ಜೊತೆ ಚರ್ಚೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗದ ಕೆಲಸ ಸ್ಥಗಿತವಾಗಿದೆ. ದೇಶದಲ್ಲಿ ಇದೇ ಪರಿಸ್ಥಿತಿ ಆಗಿದೆ. …

Read More »

ರಮೇಶ ಜಾರಕಿಹೊಳಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯ ರೈತ ಸಂಘದ ಕಾರ್ಯಕರ್ತರು

ಗೋಕಾಕ:  ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪ್ರತಿಭಟನೆ ನಡೆಯುತ್ತಿದ್ದ  ಬಸವೇಶ್ವರ ವೃತ್ತದಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಗೆ ತೆರಳಿ ಮನವಿ ನೀಡಲು ಮುಂದಾದ  ರೈತರನ್ನು ಪೊಲೀಸರು ಅಲ್ಲಿಯೇ ಘೇರಾವ್ ಹಾಕಿ ತಡೆದರು. ಮುಂಜಾಗೃತಾ ಕ್ರಮವಾಗಿ ಸಚಿವರ ಮನೆಯ ಸುತ್ತ ಬಿಗಿ ಭದ್ರತೆಯನ್ನು ಪೊಲೀಸರು ಮಾಡಿದ್ದಾರೆ. ರೈತ ವಿರೋಧಿ …

Read More »

ತೆರಿಗೆ ವಂಚಿಸಬೇಡಿ, ಅಡ್ಡದಾರಿ ಹಿಡಿಬೇಡಿ : ಪ್ರಧಾನಿ ಮೋದಿ ಕಿವಿ ಮಾತು

ನವದೆಹಲಿ, ಆ.13-ತೆರಿಗೆ ಪಾವತಿಯಿಂದ ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನರು ತೆರಿಗೆ ವಂಚಿಸಬಾರದು ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿಯಬಾರದು ಎಂದು ಸಲಹೆ ಮಾಡಿದ್ದಾರೆ. ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದ್ದು , ಇದರಲ್ಲಿ ಲಂಚ , ರುಷುವತ್ತುಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ.ತೆರಿಗೆ ಪಾವತಿದಾರರನ್ನು ಸಮಸ್ಯೆಗಳಿಗೆ ಸಿಲುಕಿಸುವ ಪದ್ಧತಿಯನ್ನು ಹೋಗಲಾಡಿಸಿ ಇದರಲ್ಲಿರುವ ಎಲ್ಲಾ ತೊಡಕುಗಳನ್ನು ನಿವಾರಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು …

Read More »

KRS ಭರ್ತಿಗೆ ಇನ್ನೊಂದು ಅಡಿ ಬಾಕಿ-ಮೆಟ್ಟೂರು ಜಲಾಶಯಕ್ಕೆ 33.55 ಟಿಎಂಸಿ ನೀರು

ಮಂಡ್ಯ/ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂ ಭರ್ತಿಗೆ ಇನ್ನೊಂದು ಅಡಿ ಬಾಕಿ ಇದೆ. ನಾಳೆ ವೇಳೆಗೆ ಜಲಾಶಯ ಬಹುತೇಕ ಭರ್ತಿ ಆಗಲಿದೆಜಲಾಶಯದ ಗರಿಷ್ಠ ಸಾಮರ್ಥ್ಯ 124.80 ಅಡಿಗಳಿದ್ದು, ಸದ್ಯ 123.45 ಅಡಿ ಭರ್ತಿಯಾಗಿದೆ. ಜಲಾಶಯಕ್ಕೆ 18,027 ಕ್ಯೂಸೆಕ್ ಒಳ ಹರಿವು, 18,027 ಕ್ಯೂಸೆಕ್ ಒಳ ಹರಿವು ಇದೆ. ಒಂದೇ ವಾರದಲ್ಲಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದ 33.55 ಟಿಎಂಸಿ ನೀರು ಹರಿದಿದ್ದು, ತಲೆದೋರಲಿದ್ದ ಕಾವೇರಿ ಸದ್ಯಕ್ಕೆ ದೂರವಾಗಿದೆ. …

Read More »

ದೇಶದಲ್ಲಿ ಕೊರೊನಾ ಸ್ಫೋಟ- ಒಂದೇ ದಿನ 66,999 ಮಂದಿಗೆ ತಗುಲಿದ ಮಹಾಮಾರಿ

ನವದೆಹಲಿ: ದೇಶದಲ್ಲಿ ಕೊರೊನಾ ರುದ್ರ ನರ್ತನ ಮುಂದುವರಿದಿದ್ದು, ಒಂದೇ ದಿನ 66,999 ಮಂದಿಗೆ ಸೋಂಕು ತಗುಲಿದ್ದು, 942 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,96.638ಕ್ಕೆ ಏರಿಕೆಯಾಗಿದ್ದು, ಸದ್ಯ 6,53,622 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 16,95,982 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 47,033 ಸಾವುಗಳು ದಾಖಲಾಗಿವೆ. ಬುಧವಾರ ಒಂದೇ ದಿನ 8,30,391 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಆಗಸ್ಟ್ 12, 2020ರವೆರೆಗೆ 2,68,45,688 ಜನರು ಕೊರೊನಾ …

Read More »

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಕುಟುಂಬಕ್ಕೆ ಸರ್ಕಾರದಿಂದ ಪೊಲೀಸ್ ಭದ್ರತೆ

ಬೆಂಗಳೂರು: ಸಿಲಿಕಾನ್ ಸಿಟಿಯ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಕುಟುಂಬಕ್ಕೆ ಸರ್ಕಾರ ಪೊಲೀಸ್ ಭದ್ರತೆಯನ್ನು ಒದಗಿಸಿದೆ.ಶಾಸಕರ ಕುಟುಂಬ ಸದ್ಯ ಖಾಸಗಿ ಹೊಟೇಲ್ ನಲ್ಲಿ ವಾಸವಾಗಿದೆ. ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ನೀಡಿದ್ದಾರೆ. ಅಲ್ಲದೆ ಸದ್ಯಕ್ಕೆ ತಮ್ಮ ನಿವಾಸಕ್ಕೆ ಹೋಗೋದು ಬೇಡ ಅಂತ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನ ಹೊಟೇಲ್ ನಲ್ಲಿ ಉಳಿಯಲು ಶಾಸಕ ಅಖಂಡ ನಿರ್ಧಾರ ಮಾಡಿದ್ದು, …

Read More »