Breaking News

ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು: ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನ್ಯೂಸ್​​ಫಸ್ಟ್ ಜೊತೆ ಜಿಲ್ಲಾಧಿಕಾರಿ ಶರತ್ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನ ನೇಮಿಸಿರುವ ವಿಚಾರವಾಗಿ ಮಾತನಾಡಿದ ಡಾ.ಯತೀಂದ್ರ.. ಯಾವ ಅಧಿಕಾರಿಯನ್ನೂ ದಿಢೀರ್ ಎಂದು ವರ್ಗಾವಣೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ರೆ ಅನುಮಾನಗಳು ವ್ಯಕ್ತವಾಗುತ್ತವೆ. ಹಣ ಪಡೆದು ವರ್ಗಾವಣೆ ಮಾಡಿದ್ರಾ? ಅಥವಾ ಯಾರದೋ ಪ್ರಭಾವದಿಂದ ವರ್ಗಾವಣೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟುತ್ತದೆ ಎಂದರು. …

Read More »

ಪಂಚಾಂಗ : ಶನಿವಾರ, 03.10.2020

ನಿತ್ಯನೀತಿ : ದೈವವೆಂಬುದು ದೂರದಾಕಾಶದಲ್ಲಿ ಎಲ್ಲೋ ಇರುವ ವ್ಯಕ್ತಿ ಅಥವಾ ವಸ್ತುವಲ್ಲ. ಆ ಶಕ್ತಿ ನನ್ನೊಳಗೇ ಅವಿರ್ಭೂತವಾಗಿದೆ. ಅಜ್ಞಾನದಲ್ಲಿ ಹುಡುಕಿದರೆ ಆ ದಿವ್ಯತೆ ವ್ಯಕ್ತವಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶನಿವಾರ, 03.10.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08 ಚಂದ್ರ ಉದಯ ರಾ.07.17 / ಚಂದ್ರ ಅಸ್ತ ಬೆ.07.08 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ …

Read More »

ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು

ನವ​ದೆ​ಹ​ಲಿ : ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು ಕೇಂದ್ರ ಸರ್ಕಾ​ರದ ಒಟ್ಟಾ​ರೆ 65 ಇಲಾ​ಖೆ​ಗ​ಳ ರಾರ‍ಯಂಕಿಂಗ್‌​ನಲ್ಲಿ 3ನೇ ಸ್ಥಾನ ಪಡೆ​ದಿ​ದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿ​ವಾ​ಲ​ಯ​ಗ​ಳಲ್ಲಿ 2ನೇ ಸ್ಥಾನ ಗಳಿ​ಸಿ​ದೆ. ನೀತಿ ಆಯೋಗದ ಅಭಿ​ವೃದ್ಧಿ ಮೇಲ್ವಿ​ಚಾ​ರಣೆ ಹಾಗೂ ಮೌಲ್ಯ​ಮಾ​ಪನ ಕಚೇರಿ (ಡಿ​ಇ​ಎಂಒ​), ಕೇಂದ್ರ ಸರ್ಕಾ​ರದ ಯೋಜ​ನೆ​ಗಳನ್ನು ಇಲಾ​ಖೆ​ಗಳು ಹೇಗೆ ಅನು​ಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾ​ವಳಿ ಆಧ​ರಿತ ಆನ್‌​ಲೈ​ನ್‌ ಸಮೀಕ್ಷೆ ನಡೆ​ಸಿತ್ತು. ಇದರ ಫಲಿ​ತಾಂಶ ಆಧ​ರಿಸಿ …

Read More »

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ

ಶಿಮ್ಲಾ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಟಲ್ ಸುರಂಗ ಮನಾಲಿ-ಲೇಹ್‌ ಸಂಪರ್ಕಕ್ಕಾಗಿ 9 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗ. ಈ ಸುರಂಗದಿಂದ 4-5 ಗಂಟೆ ಪ್ರಯಾಣದ ಅವಧಿ ಕಡಿತವಾಗುತ್ತೆ. ಮನಾಲಿಯಲ್ಲಿ ಭಾರಿ ಹಿಮಪಾತ ಸಂಭವಿಸುತ್ತೆ. ಹೀಗಾಗಿ ಹಿಮಪಾತ ಸಂಭವಿಸಿದ ಸಂದರ್ಭದಲ್ಲಿ ರಸ್ತೆ ಮುಚ್ಚಲಾಗುತ್ತಿತ್ತು. ಆರು ತಿಂಗಳು ಮಾತ್ರ ಸಂಚಾರವಿರುತ್ತಿತ್ತು. ಆದರೆ ಈಗ …

Read More »

ಬೈಕ್ ಮುಖಾಮುಖಿ: ಮೂವರ ಸಾವು, ಎಲ್ಲಿ?

ವಿಜಯಪುರ: ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಬೈಕ್ ಸವಾರರು ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಎರಡೂ ಬೈಕ್​ಗಳು ಹೊತ್ತಿ ಉರಿದಿವೆ. ಮೃತರಿಗೆ ತಲೆಗೆ ಮಾತ್ರ ಗಾಯವಾಗಿದ್ದು, ಬೈಕ್ ಗಳು ಭಸ್ಮವಾಗಿವೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು

ಕೋಲಾರ: ಜಿಲ್ಲೆಯ ಕೆಜಿಎಫ್​ ನಗರದಲ್ಲಿ ವೈನ್​ ಶಾಪ್​ ಸೀಲ್​​​ ಮಾಡಲು ಬಂದ ಅಬಕಾರಿ ಅಧಿಕಾರಿಗಳು, ತಪ್ಪಾಗಿ ಸ್ವೀಟ್​ ಸ್ಟಾಲ್ ಸೀಲ್​ ಮಾಡಿ ಯಡವಟ್ಟು ಮಾಡಿದ್ದಾರೆ. ಇಂದು ಗಾಂಧಿಜಯಂತಿಯ ಪ್ರಯುಕ್ತ ಅಬಕಾರಿ ಅಧಿಕಾರಿಗಳು ನಗರದ ಎಲ್ಲಾ ವೈನ್​ಶಾಪ್​ಗಳನ್ನು ಸೀಲ್​ ಮಾಡಲು ಮುಂದಾಗಿದ್ದರು. ಈ ವೇಳೆ ತಿರುಮಲ ವೈನ್​ ಅಂಗಡಿನ್ನು ಸೀಲ್​ ಮಾಡುವ ವೇಳೆ ಎಡವಟ್ಟಾಗಿದೆ ಅದರ ಬದಲಾಗಿ ಶಮ ಸ್ಟೀಟ್​ ಸ್ಟಾಲ್​ ಅನ್ನು ಸೀಲ್​ ಮಾಡಲಾಗಿದೆ.

Read More »

ಬಾಗಲಕೋಟೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ಬರೋಬ್ಬರಿ 23.55 ಲಕ್ಷ ದಂಡ

ಬಾಗಲಕೋಟೆ: ಕೋವಿಡ್ ಅನ್​ಲಾಕ್ ಆರಂಭವಾದ ಬಳಿಕ ಮಾಸ್ಕ್ ಹಾಕಿಕೊಳ್ಳದೆ ಬೇಜವಾಬ್ದಾರಿಯಿಂದ ಓಡಾಡುವವರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸರು ದಂಡದ ಬಿಸಿ ಮುಟ್ಟಿಸಿದರೂ ಇನ್ನೂ ಜನ ಬುದ್ಧಿ ಕಲಿಯುತ್ತಿಲ್ಲ. ಆರಂಭದ ಅನ್​ಲಾಕ್​ನಿಂದ ಸೆಪ್ಟೆಂಬರ್ ಮಾಸಾಂತ್ಯದವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಗೆ ಬರೋಬ್ಬರಿ 23.55 ಲಕ್ಷ ದಂಡ ವಿಧಿಸಿದ್ದಾರೆ. ಆದರೂ ಜನರು ಇನ್ನೂ ಮಾಸ್ಕ್ ಹಾಕಿಕೊಳ್ಳದೆ ಕೊರೋನಾ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿತ್ಯ ನೂರಾರು ಹೊಸ ಕೇಸ್​ಗಳು ಪತ್ತೆಯಾಗುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿ …

Read More »

ಕೈಮುಗಿದು ಕಣ್ಣೀರು ಹಾಕಿದ ಅನುಶ್ರೀ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕಿ ಅನುಶ್ರೀ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಸಂಜನಾ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅನುಶ್ರೆಈ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ‘ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ಹಾಗೂ ನಿರೂಪಕಿ ಅನುಶ್ರೀ ಬಂಧನವಾಗದಂತೆ ಆಕೆಯ ರಕ್ಷಣೆಗೆ ಶುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ’ ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿರುವುದು ಸುದ್ದಿ ಸ್ಫೋಟಕ್ಕೆ ಕಾರಣವಾಗಿದೆ. ಕೈಮುಗಿದು …

Read More »

ರಾಜ್ಯದಲ್ಲಿ ಇಂದು 8793 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 8793 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 6,20,630 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 7094 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 4,99,506 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 1,11,986 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 125 ಮಂದಿ ಮೃತಪಟ್ಟಿದ್ದು ಇದುವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9119 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇವತ್ತು …

Read More »

ಆರ್. ಆರ್‌ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಕುತೂಹಲ

ಬೆಂಗಳೂರು: ನವೆಂಬರ್‌ 3 ರಂದು ನಡೆಯಲಿರುವ ಆರ್. ಆರ್‌ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಕುತೂಹಲ ಕೆರಳಿಸಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರ್ಲಾನ್‌ನಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ ಭಾಗಿಯಾಗಿದ್ದಾರೆ. ಅದಲ್ಲದೆ …

Read More »