ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಸೇನೆಗಳ ಸಂಘರ್ಷವಾಗಿರುವ ವಿಷಯದ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.
ಸಂಜೆ 5ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಯಲಿದೆ. ಭಾರತ ಮತ್ತು ಚೀನಾ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷವಾಗಿ 20 ಮಂದಿ ಭಾರತೀಯ ಸೈನಿಕರು ಮೃತಪಟ್ಟಿರುವ ಬಗ್ಗೆ ನಡೆಸಲಾಗುತ್ತದೆ.
ಅಲ್ಲದೆ ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ.
ಬಿಜೆಪಿ- ಜೆಪಿ ನಡ್ಡಾ ಕಾಂಗ್ರೆಸ್- ಸೋನಿಯಾ ಗಾಂಧಿ ಸಿಪಿಎಂ- ಸೀತಾರಾಮ್ ಯೆಚೂರಿ ಸಿಪಿಐ- ಡಿ. ರಾಜ ಅಕಾಲಿ ದಳ – ಸುಖ್ವೀರ್ ಸಿಂಗ್ ಬಾದಲ್ ಶಿವಸೇನೆ – ಉದ್ಧವ್ ಠಾಕ್ರೆ ಎಲ್ಜೆಪಿ- ಚಿರಾಗ್ ಪಾಸ್ವಾನ್ ತೃಣಮೂಲ ಕಾಂಗ್ರೆಸ್- ಮಮತಾ ಬ್ಯಾನರ್ಜಿಎನ್‌ಸಿಪಿ- ಶರದ್ ಪವಾರ್ ಜೆಡಿಯು- ನಿತೀಶ್ ಕುಮಾರ್ ಸಮಾಜವಾದಿ ಪಕ್ಷ- ರಾಮ್ ಗೋಪಾಲ್ ಯಾದವ್
ಇದನ್ನೂ ಓದಿ: ಇಂದು ಎಂಟು ರಾಜ್ಯಗಳಲ್ಲಿ 19 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಗುಜರಾತ್, ಮ.ಪ್ರ., ರಾಜಸ್ಥಾನದಲ್ಲಿ ಪೈಪೋಟಿ