ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆಯ 20 ಲಕ್ಷ ಕೋಟಿಯ ಪ್ಯಾಕೇಜ್ ನ ನಾಲ್ಕನೇ ಹಂತದ ಪ್ರಕಟನೆಯನ್ನ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಟಿಯಲ್ಲಿ ಮಂಡಿಸಿದರು.
ಪಿಎಂ ಮೋದಿ ಸುಧಾರಣೆಯ ಕುರಿತು ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ. ನೇರ ವರ್ಗಾವಣೆಯ ಅವಶ್ಯಕತೆ ಹೆಚ್ಚಿದ್ದು, ಈ ಕುರಿತು ಹಲವು ನಿಯಮಗಳನ್ನು ಸರಳೀಕರಣಕೊರಿಸುವ ಬಗ್ಗೆ ಕೇಂದ್ರ ಸಚಿವರು ಆರಂಭದಲ್ಲಿಯೇ ಮಾತನಾಡಿದರು. ಕೈಗಾರಿಕಾ ಮೂಲಭೂತ ಸುಧಾರಣೆಗೆ ಕ್ರಮ, ಉದ್ಯೋಗ ಸೃಷ್ಟಿ, ಉದ್ಯಮಗಳ ಮೇಲೆ ನಿಯಮಗಳ ಸರಳೀಕರಣ, ಭಾರತ ಮತ್ತು ಆರ್ಥಿಕತೆಯ ಮರು ನಿರ್ಮಾಣ ಕುರಿತ ಮಹತ್ವದ ಘೋಷಣೆಗಳನ್ನು ಘೋಷಿಸಿದರು. ಇಂದು 8 ವಲಯಗಳಾದ ಕಲ್ಲಿದ್ದಲು, ರಕ್ಷಣಾ ವ್ಯವಸ್ಥೆ, ಖನಿಜ ಸಂಪತ್ತು, ಏರ್‍ಪೋರ್ಟ್, ಏರ್ ಸ್ಪೇಸ್, ಎಂಆರ್‍ಓ (ಮೇಂಟೇನ್ಸ್ ರಿಪೇರ್ ಓವರ್ ಆಲ್), ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ಘಟಕಗಳು ಹಾಗೂ ಬಾಹ್ಯಾಕಾಶಕ್ಕೆ ಅನುದಾನ ಘೋಷಿಸಲಾಯ್ತು.
ಸುದ್ದಿಗೋಷ್ಠಿಯ ಪ್ರಮುಖಾಂಶಗಳು:
1. ಕಲ್ಲಿದ್ದಲು
* ಕಲ್ಲಿದ್ದಲು ಕ್ಷೇತ್ರದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದ್ದು, ಸರ್ಕಾರದ ಏಕಸ್ವಾಮ್ಯ ಅಂತ್ಯ. ಅವಶ್ಯಕತೆ ಇರೋ ಕಲ್ಲಿದ್ದಲ್ಲನ್ನ ಮಾತ್ರ ಆಮದು ಮಾಡಿಕೊಳ್ಳುವುದು. ಆಮದು ಕಡಿಮೆ ಮಾಡಿಕೊಳ್ಳುವ ರೀತಿಯಲಿ ಕೆಲಸ ಮಾಡೋದು. ನಮ್ಮಲ್ಲಿಯೇ ಹೆಚ್ಚು ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡೋದರಿಂದ ಉದ್ಯೋಗ ನಿರ್ಮಾಣವಾಗಲಿದೆ.
* ಸರಳ ನಿಯಮಗಳ ಅನ್ವಯ 50 ಕಲ್ಲಿದ್ದಲು ಉತ್ಪದಾನ ಕ್ಷೇತ್ರಗಳ ಹರಾಜು ಪ್ರಕ್ರಿಯೆ.
* ಕೋಲ್ ಇಂಡಿಯಾ ಲಿಮಿಟೆಡ್ ಗಣಿಯನ್ನು ಖಾಸಗೀಕರಣ ಮಾಡಲು ಸರ್ಕಾರದ ಸಮ್ಮತಿ. ಕಲ್ಲಿದ್ದಲು ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ. ಅನುದಾನ.
* 2023-24 ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ
2. ಖನಿಜ ಸಂಪತ್ತು:
* 500 ಮೈನಿಂಗ್ ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಗಣಿಗಾರಿಕೆಯ ಗುತ್ತಿಗೆಯನ್ನು ವರ್ಗಾಯಿಸಲಾಗುವುದು.
* ಖನಿಜ ಸಂಪತ್ತು ವಲಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ.
* ಆತ್ಮನಿರ್ಭರಭಾರತ ಅಭಿಯಾನದಡಿಲ್ಲಿ ವಿಶ್ವ ಮಾರುಕಟ್ಟೆಯ ಜೊತೆ ಸ್ಪರ್ಧೆಗೆ ಭಾರತ ಸಿದ್ಧವಾಗಬೇಕಿದೆ. ಮಿನರಲ್ ಇಂಡೆಕ್ಸ್ ಆರಂಭಿಸೋದರ ಜೊತೆ ಟ್ಯಾಕ್ಸ್ ಸರಳೀಕರಣದ ವ್ಯವಸ್ಥೆ.
3. ರಕ್ಷಣಾ ವಲಯ:
* ರಕ್ಷಣಾ ವಲಯಕ್ಕೆ ಬೇಕಾಗುವ ಉತ್ಪನ್ನಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದಿಸಲಾಗುವುದು. ಸೇನೆಗೆ ಅವಶ್ಯಕವಾಗಿರು ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುವುದು.
* ಆರ್ಡಿನಸ್ ಫ್ಯಾಕ್ಟರಿ ಸಾಂಸ್ಥೀಕರಣ ಮಾಡಲಾಗುವುದು. ಇದು ಖಾಸಗೀಕರಣಕ್ಕೆ ಒಳಪಡಲ್ಲ. ಆರ್ಡಿನಸ್ ಫ್ಯಾಕ್ಟರಿಯನ್ನು ಷೇರು ಮಾರುಕಟ್ಟೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.
* ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಉತ್ಪಾದಾನದಲ್ಲಿ ಎಫ್‍ಡಿಐ ಹೂಡಿಕೆಯನ್ನು ಶೇ 49ರಿಂದ ಶೇ.74ಕ್ಕೆ ಏರಿಕೆ.
4 ನಾಗರಿಕ ವಿಮಾನಯಾನ ಕ್ಷೇತ್ರ-ಏರ್ ಸ್ಪೇಸ್ 5.ಎಂಆರ್‍ಓ
* ನಾಗರಿಕ ವಿಮಾನಯಾನ ಕ್ಷೇತ್ರದ ಸುಧಾರಣೆ ಹಿನ್ನೆಲೆಯಲ್ಲಿ ಆರು ವಿಮಾನ ನಿಲ್ದಾಣಗಳನ್ನು ಹರಾಜು ಹಾಕಲಾಗುವುದು. ಈಗಾಗಲೇ 12 ಏರ್ ಪೋರ್ಟ್ ಹರಾಜು ಹಾಕಲಾಗಿದೆ. ಈ ಪ್ರಕ್ರಿಯೆ ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯುಲಿದೆ.
* ಹರಾಜು ಮೂಲಕ ಒಟ್ಟು 13 ಸಾವಿರ ಕೋಟಿ ಆದಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
* ಖಾಸಗೀಕರಣ ಮತ್ತು ಹರಾಜು ಪ್ರಕ್ರಿಯೆಯಿಂದ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚ ತಗ್ಗಲಿದೆ.
* ಸಮಯ ಉಳಿತಾಯಕ್ಕಾಗಿ ವಾಯು ಮಾರ್ಗದಲ್ಲಿ ಸರಳೀಕರಣಕ್ಕಾಗಿ ಚಿಂತನೆ. ಸಮಯ ಉಳಿತಾಯದಿಂದ ವಿಮಾನ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ.ಯ ಲಾಭವಾಗಲಿದೆ. ವಾಯುಮಾರ್ಗದ ಸರಳೀಕರಣದಿಂದ ಇಂಧನ ಮತ್ತು ಪರಿಸರ ಮಾಲಿನ್ಯ ಸಹ ತಗ್ಗಲಿದೆ.
. ವಿದ್ಯುತ್ ಪ್ರಸರಣ:
* ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಸ್ಕಾಂಗಳ ಸುಧಾರಣೆಗಾಗಿ ಖಾಸಗೀಕರಣ
* ವಿದ್ಯುತ್ ಉತ್ಪಾದನಾ ಕಂಪನಿಗಳಿ ನಿಗದಿತ ಸಮಯದಲ್ಲಿ ಪಾವತಿ. ಗ್ರಾಹಕರ ರಕ್ಷಣೆಗಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಅಳವಡಿಕೆ.
* ದೇಶದ ವಿದ್ಯುತ್ ಪ್ರಸರಣಗಳಲ್ಲಿ ಬದಲಾವಣೆ
7. ಆಸ್ಪತ್ರೆಗಳ ಅಭಿವೃದ್ಧಿ:
* ಸಾಮಾಜಿಕ ಅಭಿವೃದ್ಧಿಯಲ್ಲಿ 8100 ಕೋಟಿ ರೂ. ಹೂಡಿಕೆ.
* ಆಸ್ಪತ್ರೆಗಳಿಗೆ ಸಾಮಾಜಿಕ ಭದ್ರತೆ
8. ಬಾಹ್ಯಾಕಾಶ:
* ಬಾಹ್ಯಾಕಾಶ ಸುಧಾರಣೆಗಾಗಿ ಕ್ರಮ
* ಭವಿಷ್ಯದ ಬಾಹ್ಯಾಕಾಶ ಅಧ್ಯಯನದಲ್ಲಿ ಖಾಸಗಿಯವರಿಗೆ ಪಾಲು
* ಉಪಗ್ರಹ ಉಡಾವಣೆಯಲ್ಲಿ ಖಾಸಗಿ ಕಂಪನಿಯವರಿಗೆ ಅವಕಾಶ
* ಖಾಸಗಿ ಕಂಪನಿಗಳು ಇಸ್ರೋ ಸೌಲಭ್ಯ ಪಡೆಯಬಹುದು.
https://youtu.be/yjgTcLX3tDc