Breaking News

ಶಕುನಿ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಜಿಟಿಡಿ ವಾಗ್ದಾಳಿ

Spread the love

ಮೈಸೂರು: ಜೆಡಿಎಸ್ ನಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಕುನಿ, ಮಂಥರೆಯ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ಡಿ., ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ನಾಶವಾಯಿತು. ರಾಮಾಯಣದಲ್ಲಿ ಮಂಥರೆ ಮಾತು ಕೇಳಿ ಕೈಕೇಯಿ ರಾಮನನ್ನು ವನವಾಸಕ್ಕೆ ಕಳುಹಿಸಿದಳು. ಇದೀಗ ರಾಜಕೀಯದಲ್ಲಿ ಕುಮಾರಸ್ವಾಮಿ ಶಕುನಿ, ಮಂಥರೆ ಮಾತು ಕೇಳಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದರು.

ಮಾಜಿ ಸಚಿವ ಸಾ.ರಾ. ಮಹೇಶ್ ಅವರನ್ನು ಶಕುನಿಗೆ ಹೋಲಿಸಿದ ಜಿ.ಟಿ. ದೇವೇಗೌಡ, ಕುಮಾರಸ್ವಾಮಿಯವರೇ ನಿವ್ಯಾಕೆ ಶಕುನಿ ಮಾತು ಕೇಳುತ್ತೀರಿ? ಸಾ.ರಾ. ಮಹೇಶ್ ಮಾತು ಕೇಳಿ ನನ್ನನ್ನು ಜೆಡಿಎಸ್ ನಿಂದ ಹೊರ ಹಾಕುತ್ತೇನೆ ಎಂದಿದ್ದೀರಿ.

ಪದೇ ಪದೇ ನನ್ನನ್ನು ಯಾಕೆ ಅವಮಾನಿಸುತ್ತೀರಿ? ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್ ನಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿದೆ. ಮೈಮುಲ್ ಚುನಾವಣೆ ವೇಳೆಯೂ ನನ್ನ ವಿರುದ್ಧ ಮಾತನಾಡಲಾಗಿದೆ. ಜಿ.ಟಿ.ದೇವೇಗೌಡ ಎನ್ನುವ ಆಲದ ಮರವನ್ನು ಬುಡ ಸಮೇತ ಕಿತ್ತುಹಾಕಿ ಹೊಸ ಗಿಡ ನೆಡುತ್ತೇವೆ ಎಂದು ಹೇಳಿದ್ದಾರೆ. ಇದೆಲ್ಲ ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ ಎಂದು ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Spread the love ವಿಜಯಪುರ :ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ* ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ