Breaking News

ನಾವು ನಮ್ಮ ಪ್ರಾಣ ಕೊಟ್ಟೆವು ಆದ್ರೆ ನಮ್ಮ ಹಕ್ಕು ಬಿಡಲಾರೆ ವು………

Spread the love

ಇಂದು ಗೋಕಾಕ ನಗರದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ ಗಳಿಗೆ ಅರ್ಜಿ ಸಲ್ಲಿಸಿದ ನಂತರ ನಮ್ಮ ವಾಹಿನಿ ಜೊತೆ ಮಾತನಾಡಿದ ಸಂಘಟನೆ ಅಧ್ಯಕ್ಷರು ಎನ್ ಹೇಳ್ತಾರೆ ನೋಡೋಣ ಬನ್ನಿ
ಪ್ರೊಟೆಸ್ಟ್ ಗಳು ಅಂದರೆ ನಮ್ಮಲಿ ಇದೊಂದು ದಿನದ ಕೆಲಸ ಥರ ಆಗಿದೆ ನಮ್ಮಲ್ಲಿ ನೀರು ಬೇಕು ಅಂದ್ರು ಚಳುವಳಿ ಮಾಡಬೇಕು ಕಬ್ಬಿನ ಬಿಲ್ಲು ಬೇಕು ಅಂದ್ರು ಚಳುವಳಿ ಮಾಡಬೇಕು, ನಮ್ಮಲ್ಲಿ ಈ ಚಳುವಳಿ ಗಳು ಪ್ರತಿಯೊಂದು ಜಿಲ್ಲೆಯಲ್ಲಿ ತಾಲೂಕ ಮಟ್ಟದಲ್ಲಿ ಎಲ್ಲಾದ್ರೂ ಇಂದು ದೈನಂದಿನ ಇದ್ದೆ ಇರುತ್ತೆ . ಆದ್ರೆ ಇವತ್ತು ನಾವು ಹೇಳೊಕ್ ಹೊರಟಿರೋ ಚಳುವಳಿ ಬಹುಶಃ ಎಲ್ಲು ಆಗಿರಲಿಲ್ಲ ಅನ್ಸತ್ತೆ

ಅದೇ ರಕ್ತ ಪತ್ರದ ಸಹಿಯ ಚಳುವಳಿ
ಸುಪ್ರೀಂ ಕೋರ್ಟು ಆದೇಶದ ಪ್ರಕಾರ 4 ಜಾತಿಗಳನ್ನು ಪರಶಿಷ್ಟ ಜಾತಿಯಿಂದ ಕೈ ಬಿಡಬೇಕು ಅನ್ನೋ ವಿಷಯಕ್ಕೆ ರಕ್ತ ಪತ್ರದ ಚಳುವಳಿ ಒಂದು ಇಂದು ಗೋಕಾಕ ನಗರದಲ್ಲಿ ನಡೆಯುತ್ತಿದೆ
ಹಾಗಾದ್ರೆ ಯವು ಅವು ನಾಲ್ಕು ಜಾತಿಗಳು , ಏನಕ್ಕೆ ಈ ಹೋರಾಟ , ಲಂಬಾಣಿ, ಕೊರಮ ,ಕೊಂಚ ಭೋವಿ, ಈ ಜಾತಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪರಿಷಷ್ಟ ಜಾತಿಯಿಂದ ಕೈ ಬಿಡಬೇಕು

ಇವತ್ತು ನಾವೆಲ್ಲರೂ ಸೇರಿ ಇಲ್ಲಿ ರಕ್ತದಿಂದ ಮನವಿ ಕೊಡ್ತಿದಿವಿ ಇದರ ಮೂಲಕ ನಾವು ನಮ್ಮ ಮುಖ್ಯ ಮಂತ್ರಿ ಗಳಾದ ಶ್ರೀ ಯಡಿಯರಪ್ಪನವರಿಗೇ ಮನವಿ ಮಾಡಿ ಕೊಳ್ಳುತ್ತಿದೀವೆ ,ಇದನ್ನ ಏನಾದರೂ ಕೆದಾಗಣಿಸಿದರೆ ಮುಂದೆ ಬರುವ ದಿನಗಳಲ್ಲಿ ಉಗ್ರ ಮಟ್ಟದ ಹೋರಾಟಕ್ಕೆ ಅಣಿಯಾಗಿ ಬೇಕಾಗುತ್ತದೆ..

ನಾವು ನಮ್ಮ ಪ್ರಾಣ ಕೊಟ್ಟೆವು ಆದ್ರೆ ನಮ್ಮ ಹಕ್ಕು ಬಿಡಲಾರೆ ವು ಎಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ದಲಿತ ಸಂಘಟನೆ ಗಳು ಹಾಗೂ ಮಾದಿಗ ಮೀಸಲಾತಿ ಸಮಿತಿ ವತಿಯಿಂದ ಈ ಒಂದು ರಕ್ತದ ಪತ್ರದ ಮೂಲಕ ಮನವಿ ಮಾಡಿ, ಸನ್ಮಾನ್ಯ ಮುಖ್ಯಮಂತ್ರಿ ಗಳಿಗೆ ಕೇಳಿಕೊಂಡರು.

ಇಂದು ಗೋಕಾಕ ನಗರದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ ಗಳಿಗೆ ಅರ್ಜಿ ಸಲ್ಲಿಸಿದ ನಂತರ ನಮ್ಮ ವಾಹಿನಿ ಜೊತೆ ಮಾತನಾಡಿದ ಸಂಘಟನೆ ಅಧ್ಯಕ್ಷರು ಎನ್ ಹೇಳ್ತಾರೆ ನೋಡೋಣ ಬನ್ನಿ


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ