ಚಿಕ್ಕೋಡಿ: ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಮಕ್ಕಳಿಗೆ ಕೊಡಬೇಕಾದ ಆಹಾರ ಧಾನ್ಯಗಳನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಹಿಡಿದು ಇಲಾಖಾ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆಯೊಂದು ತಾಲೂಕಿನ ಹಿರೇಕೂಡಿ ಗ್ರಾಮದ ಮಿರ್ಜಿಕೋಡಿಯಲ್ಲಿ ಶನಿವಾರ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ ಸುನೀತಾ ಕೋಟೆ ಎಂಬುವರು ತಮ್ಮ ಅಂಗನವಾಡಿಯಲ್ಲಿನ ಬೆಲ್ಲ, ಬೇಳೆ ಮುಂತಾದ ಆಹಾರ ದಾನ್ಯಗಳನ್ನು ದ್ವಿಚಕ್ರವಾಹನದ ಮೇಲೆ ಕದ್ದು ತೆಗೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಅಲ್ಲಿನ ಸಾರ್ವಜನಿಕರು ಕೂಡಲೇ ಅವರನ್ನು ತಡೆದು ಅವರ ಹತ್ತಿರವಿದ್ದ ಬೆಲ್ಲ ಮತ್ತು ಬೆಳೆ ಕಾಳುಗಳನ್ನು ಬಹಿರಂಗವಾಗಿ ಜನರ ಮಧ್ಯದಲ್ಲಿಯೇ ಇಟ್ಟು ಅಲ್ಲಿನ ಸಾರ್ವಜನಿಕರು ನಿಪ್ಪಾಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾವಿತ್ರಿ ಗುಗ್ಗರೆ ಅವರಿಗೆ ದೂರವಾಣಿ ಮುಖಾಂತರ ದೂರು ನೀಡಿದ್ದಾರೆ. ಸುದ್ದಿ ತಿಳಿಸಿದ ತಕ್ಷಣ ಗ್ರಾಮಕ್ಕೆ ನಿಪ್ಪಾಣಿ ಸಿಡಿಪಿಓ ಸಾವಿತ್ರಿ ಗುಗ್ಗರೆ ಬೇಟಿ ನೀಡಿದರು.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ನಿಪ್ಪಾಣಿ ಸಿಡಿಪಿಓ ಸಾವಿತ್ರಿ ಗುಗ್ಗರೆ ಅವರು, ನಾನು ಶನಿವಾರ ಹಿರೇಕೂಡಿ ಗ್ರಾಮದಿಂದ ದೂರವಾಣಿ ಮುಖಾಂತರ ದೂರು ಬಂದ ನಂತರ ಸ್ಥಳಕ್ಕೆ ಬೇಟಿ ನೀಡಿದೆ. ಆದರೆ ನಾನು ಗ್ರಾಮಕ್ಕೆ ಹೋದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂಬ ಸಬೂಬು ಹೇಳಿ ಕೈ ಚೆಲ್ಲಿದರು.