ಹಗೇದಾಳ ಗ್ರಾಮದ ಯುವಕರಿಂದ ರಾಹುಲ್ ಜಾರಕಿಹೊಳಿಗೆ ಸತ್ಕಾರ
ಹುಕ್ಕೇರಿ : ತಾಲ್ಲೂಕಿನ ಹಗೇದಾಳ ಗ್ರಾಮದ ಯುವಕರು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಬುಧವಾರ ಸತ್ಕರಿಸಿ ಗೌರವಿಸಿದರು.
ಗುಟಗುದ್ದಿ ಗ್ರಾಮದಲ್ಲಿ ಇಂದು ನಡೆಯಲಿರುವ ರಾಹುಲ್ ಜಾರಕಿಹೊಳಿ ಯುವಕ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಹಗೇದಾಳ ಗ್ರಾಮದ ಯುವಕರು, ರಾಹುಲ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಹಗೇದಾಳ ಗ್ರಾಮದ ಯುವಕರು ನನ್ನ ಹಾಗೂ ನಮ್ಮ ತಂದೆಯವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ಮನಸೋತಿದ್ದೇನೆ. ನಿಮ್ಮ ಪ್ರೀತಿ, ಸಹಕಾರ ಮುಂದೆಯೂ ಹೀಗೆ ಇರಲಿ ಎನ್ನುವ ಮೂಲಕ ಎಲ್ಲ ಯುವಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುಗೌಡ ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರು, ಯುವಕರು ಇದ್ದರು.
Laxmi News 24×7