ಬೆಂಗಳೂರು: ರಾಜ್ಯದಲ್ಲಿ ಜೂನ್ 7ರ ನಂತರ ಬಿಗಿ ಕ್ರಮದೊಂದಿಗೆ ಲಾಕ್ಡೌನ್ ಮುಂದುವರಿಕೆ ಖಚಿತವಾಗಿದ್ದು, ಎಷ್ಟು ದಿನ ವಿಸ್ತರಣೆ ಎಂಬುದು ಇಂದು ಸಂಜೆ ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ರಫ್ತು ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸಂಜೆ ಸಚಿವರ ಜೊತೆಗಿನ ಸಭೆ ಬಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಎಂದು ತಿಳಿಸಿದ್ದಾರೆ.
Laxmi News 24×7