Breaking News

ಶೀಘ್ರವೇ ಮಾರುಕಟ್ಟೆ ಬರಲಿದೆ ಮೂಗಿಗೆ ಹಾಕುವ ಕೊರೊನಾ ವ್ಯಾಕ್ಸಿನ್

Spread the love

ಹೈದರಾಬಾದ್: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ನೇಸಲ್ ವ್ಯಾಕ್ಸಿನ್​ ಮೊದಲ ಹಂದ ಪ್ರಯೋಗ ಮುಕ್ತಾಯಗೊಂಡಿದೆ. ನಾಗ್ಪುರದ ರಾಹತೆ ಆಸ್ಪತ್ರೆಯಲ್ಲಿ 50 ಜನರ ಮೇಲೆ ನೇಸಲ್ ವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಮಾಡಲಾಗಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ನೇಸಲ್ ವ್ಯಾಕ್ಸಿನ್​ ಪ್ರಯೋಗಕ್ಕೆ ಅನುಮತಿ ಸಿಕ್ಕಿತ್ತು.. ಈ BBV 154 ಇಂಟ್ರಾ ನೇಸಲ್ ವ್ಯಾಕ್ಸಿನ್​ನ್ನು ಮೂಗಿನ ಎರಡೂ ಹೊಳ್ಳೆಗೆ 0.2 ml ಎರಡು ಡ್ರಾಪ್ ಹಾಕಲಾಗುತ್ತೆ.

ಮ್ಯುಕೋಸಲ್ ಇಮ್ಯುನಿಟಿಯನ್ನ ಹೆಚ್ಚಿಸುವ ವ್ಯಾಕ್ಸಿನ್ ಇದಾಗಿದ್ದು ಮೊದಲ ಹಂತ ಮುಕ್ತಾಯಗೊಂಡ ಹಿನ್ನೆಲೆ ಇದೀಗ ಎರಡೂ ಹಾಗೂ ಮೂರನೇ ಹಂತದ ಟ್ರಯಲ್ ಗೆ ಭಾರತ್ ಬಯೋಟೆಕ್ ತಯಾರಿ ನಡೆಸಿದೆ. ಎರಡು ಹಾಗೂ ಮೂರನೇ ಹಂತದಲ್ಲಿ 6,000 ಜನರ ಮೇಲೆ‌ ಎರಡು ಹಾಗೂ ಮೂರನೇ ಹಂತದ ಟ್ರಯಲ್ ನಡೆಯಲಿದೆ. ಬೆಂಗಳೂರಿನ ಹಲವು ಸೆಂಟರ್​ಗಳನ್ನ ಭಾರತ್ ಬಯೋಟೆಕ್ 2-3 ನೇ ಹಂತದ ಪ್ರಯೋಗಕ್ಕಾಗಿ ಗುರುತಿಸಿದೆ ಎನ್ನಲಾಗಿದೆ.

ಈ ವ್ಯಾಕ್ಸಿನ್​ನ್ನು ಒಮ್ಮೆ ಹಾಕಿದ್ರೆ ಜೀವನಪೂರ್ತಿ ಪ್ರೊಟೆಕ್ಷನ್ ನೀಡಬಲ್ಲದು ಎನ್ನಲಾಗಿದೆ. ನೇಸಲ್ ವ್ಯಾಕ್ಸಿನ್ RNA ವ್ಯಾಕ್ಸಿನ್ ಆಗಿದ್ದು ಬಹಳ ಬೇಗ ವ್ಯಾಕ್ಸಿನೇಶನ್ ಮಾಡಬಹುದು.. ಪೊಲೀಯೋ ಡ್ರಾಪ್ ರೀತಿ ವ್ಯಾಕ್ಸಿನೇಷನ್‌ ಮಾಡಬಹುದು.. ನಾವೇ ಮೂಗಿಗೆ ವ್ಯಾಕ್ಸಿನೇಶನ್ ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಕೂಡ ಇರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.

ಇನ್ನು ನಾಲ್ಕು ತಿಂಗಳ ಒಳಗೆ ಈ ನೇಸಲ್ ವ್ಯಾಕ್ಸಿನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ನೇಸಲ್ ವ್ಯಾಕ್ಸಿನ್ ಬಗ್ಗೆ ಅಮೆರಿಕಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು.. ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸನ್​ನಲ್ಲಿಯೂ ನೇಸಲ್ ವ್ಯಾಕ್ಸಿನೇಶನ್ ಶುರುವಾಗಿದೆ.


Spread the love

About Laxminews 24x7

Check Also

ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ಯ ರಾಮತೀರ್ಥ ನಗರದ ಸಭಾಭವನದಲ್ಲಿ ರಕ್ತದಾನ

Spread the love ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ