Breaking News
Home / Uncategorized / ಚಾಮರಾಜನಗರ ದುರಂತ: ಜಿಲ್ಲಾಸ್ಪತ್ರೆ, ಆಕ್ಸಿಜನ್ ಪ್ಲಾಂಟ್​ನಲ್ಲಿ ತನಿಖಾಧಿಕಾರಿ ಕಳಸದ್ ಪರಿಶೀಲನೆ

ಚಾಮರಾಜನಗರ ದುರಂತ: ಜಿಲ್ಲಾಸ್ಪತ್ರೆ, ಆಕ್ಸಿಜನ್ ಪ್ಲಾಂಟ್​ನಲ್ಲಿ ತನಿಖಾಧಿಕಾರಿ ಕಳಸದ್ ಪರಿಶೀಲನೆ

Spread the love

ಚಾಮರಾಜನಗರ: ನಿನ್ನೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದ ಬಗ್ಗೆ ಹಾಗೂ 20ಕ್ಕೂ ಅಧಿಕ ಕೊರೊನಾ ರೋಗಿಗಳು ಮೃತಪಟ್ಟ ಹಿನ್ನೆಲೆ ವಿಚಾರಣಾಧಿಕಾರಿ ಶಿವಯೋಗಿ ಕಳಸದ್​ ಇಂದಿನಿಂದ ತನಿಖೆ ಆರಂಭಿಸಿದ್ದಾರೆ.

ಇಂದು ಕಳಸದ್​ ಜಿಲ್ಲಾಸ್ಪತ್ರೆಗೆ ಹಾಗೂ ಆಕ್ಸಿಜನ್ ಪ್ಲಾಂಟ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆಗೆ ಕೋವಿಡ್​ ಕೇರ್​ ಸೆಂಟರ್​​​​ಗೆ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು. ಆಕ್ಸಿಜನ್ ಪ್ಲಾಂಟ್ ಸಾಮರ್ಥ್ಯ ಹಾಗೂ ಆಕ್ಸಿಜನ್ ಪೂರೈಕೆ ಬಗ್ಗೆ ಜಿಲ್ಲಾಸ್ಪತ್ರೆ ಡೀನ್​ರಿಂದ ಮಾಹಿತಿ ಕೇಳಿದ್ರು. ಇದೇ ವೇಳೆ ಜಂಬೋ ಸಿಲಿಂಡರ್ ಕೌಂಟರ್​ಗೆ ತೆರಳಿ ಮಾಹಿತಿ ಕಲೆ ಹಾಕಿದ್ರು. ಒಂದು ಸಿಲಿಂಡರ್​​ನಲ್ಲಿ ಎಷ್ಟು ನಿಮಿಷ ಆಕ್ಸಿಜನ್ ಪೂರೈಕೆಯಾಗುತ್ತೆ, ಎಷ್ಟು ಸೋಂಕಿತರಿಗೆ ಆಕ್ಸಿಜನ್ ಪೂರೈಕೆಯಾಗುತ್ತೆ ಎಂದು ವೈದ್ಯರಿಂದ ಡೀಟೇಲ್ಸ್​ ಪಡೆದರು.

ರೋಗಿಗಳಿಂದೊಂದಿಗೆ ಸಮಾಲೋಚನೆ ನಡೆಸಿ, ಕೋವಿಡ್ ಟೆಸ್ಟ್​ಗೆ ಯಾಕೆ ಬಂದಿದ್ದೀರಿ? ರೋಗ ಲಕ್ಷಣ ಇದೆಯಾ ಅಥವಾ ಕುಟುಂಬಸ್ಥರಿಗೆ ಕೋವಿಡ್ ಬಂದಿದೆಯಾ ಎಂದು ಕೇಳಿ ತಿಳಿದುಕೊಂಡರು. ಸುಮಾರು ಹದಿನೈದು ನಿಮಿಷ ಜಿಲ್ಲಾಸ್ಪತ್ರೆ ರೌಂಡ್ಸ್ ಹಾಕಿದ ಕಳಸದ್​, ಇನ್ನಿತರ ಮಾಹಿತಿ ಪಡೆಯಲು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಗುದದ್ವಾರಕ್ಕೆ ಏರ್‌ಬಿಟ್ಟು ಯುವಕ ದುರ್ಮರಣ!

Spread the loveಬೆಂಗಳೂರು: ಇಬ್ಬರು ಸ್ನೇಹಿತರು ತಮಾಷೆ ಮಾಡುವ ಬರದಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ವಾಹನ ಸರ್ವೀಸ್‌ ಸೆಂಟರ್‌ನಲ್ಲಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ