Breaking News

ರಾಜ್ಯದಲ್ಲಿ 1 ಲಕ್ಷ ದಾಟಿದ ಸೋಂಕು – 1 ಲಕ್ಷ ಏರಿದ್ದು ಹೇಗೆ? ಟಾಪ್‌ 10 ಕಾರಣ ಇಲ್ಲಿದೆ

Spread the love

ಬೆಂಗಳೂರು: ರಾಜ್ಯದ ಜನತೆ ಪಾಲಿಗೆ ಕೊರೊನಾ ಪ್ರಕರಣ 1 ಲಕ್ಷ ದಾಟಿದ ದುರ್ದಿನ.  ಒಂದೇ ದಿನ 5,324 ಮಂದಿಗೆ ಸೋಂಕು ಬರುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ಕಾಣಿಸಿಕೊಂಡು ಇಂದಿಗೆ ಬರೋಬ್ಬರಿ 150 ದಿನ. ಮಾರ್ಚ್ 8ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಕಾಣಿಸಿಕೊಂಡಿತ್ತು. ಮೊದಲ ಮೂರು ತಿಂಗಳು ತೆವಳುತ್ತಾ ಹರಡಿದ್ದ ಕೊರೊನಾ ಸೋಂಕು, ನಂತರ ತೋರಿಸಿದ್ದು ತನ್ನ ರಾಕ್ಷಸಿ ಸ್ವರೂಪ. ಮೊದ ಮೊದಲು ರಾಜ್ಯ ಸರ್ಕಾರ ಕೊರೊನಾ ಸೋಂಕು ಪ್ರಕರಣಗಳನ್ನು ಉತ್ತಮವಾಗಿ ನಿಭಾಯಿಸಿತ್ತು. ಕೇಂದ್ರ ಸರ್ಕಾರ, ಬಿಎಸ್‍ವೈ ಸರ್ಕಾರವನ್ನು ಶ್ಲಾಘಿಸಿತ್ತು. ಆದ್ರೆ ತಬ್ಲಿಘಿ ಪ್ರಕರಣ ಮತ್ತು ವಲಸೆ ಕಾರ್ಮಿಕರನ್ನು ಸ್ವಸ್ಥಳಗಳಿಗೆ ಕಳಿಸುವ ಕೇಂದ್ರದ ಆದೇಶ, ರಾಜ್ಯ ಸರ್ಕಾರ ತೆಗೆದುಕೊಂಡ ಯಡವಟ್ಟು ನಿರ್ಧಾರಗಳು, ರಾಜ್ಯದಲ್ಲಿನ ಚಿತ್ರಣವನ್ನೇ ಸಂಪೂರ್ಣ ಬುಡಮೇಲು ಮಾಡಿತು.

ಅದರಲ್ಲೂ ರಾಜ್ಯ ರಾಜಧಾನಿಯ ಸ್ಥಿತಿ ಬಗ್ಗೆ ದಯನೀಯ. ಪರಿಣಾಮ ಇಂದು ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ನಂಬರ್ 2 ಸ್ಥಾನಕ್ಕೇರಿದೆ. ಒಟ್ಟಾರೆ ಸೋಂಕು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಒಟ್ಟು ಸೋಂಕಿತರ ಸಂಖ್ಯೆ 1,01,465 ಆಗಿದ್ದು ಈ ಪೈಕಿ 61,819 ಸಕ್ರಿಯ ಪ್ರಕರಣಗಳಿದ್ದರೆ 37,685 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 1,953 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 46,923 ಮಂದಿಗೆ ಸೋಂಕು ಬಂದಿದ್ದರೆ ಈ ಪೈಕಿ 33,816 ಸಕ್ರಿಯ ಪ್ರಕರಣಗಳಿವೆ. 12,189 ಮಂದಿ ಬಿಡುಗಡೆಯಾಗಿದ್ದಾರೆ.

ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ?
* ಮಾರ್ಚ್ 8 – ಮೊದಲ ಪ್ರಕರಣ
* ಮಾರ್ಚ್ ಅಂತ್ಯಕ್ಕೆ – 101 ಪ್ರಕರಣ, 03 ಸಾವು (22 ದಿನದಲ್ಲಿ 100 ಪ್ರಕರಣ)
* ಏಪ್ರಿಲ್ ಅಂತ್ಯಕ್ಕೆ – 565 ಪ್ರಕರಣ, 21 ಸಾವು (30 ದಿನದಲ್ಲಿ 464 ಪ್ರಕರಣ)
* ಮೇ ಅಂತ್ಯಕ್ಕೆ – 3,221 ಕೇಸ್, 51 ಸಾವು (30 ದಿನದಲ್ಲಿ 2656 ಪ್ರಕರಣ)
* ಜೂನ್ ಅಂತ್ಯಕ್ಕೆ – 15,242 ಕೇಸ್, 246 ಸಾವು (30 ದಿನದಲ್ಲಿ 12,021 ಪ್ರಕರಣ) ಅನ್‍ಲಾಕ್ 1ರ ಅವಧಿ
* ಜುಲೈನ 27 ದಿನ – 1,01,465 ಮಂದಿಗೆ ಸೋಂಕು

 

ಕರ್ನಾಟಕದ ಇಂದಿನ ಕೊರೊನಾ ಲಕ್ಷಕ್ಕೆ ಕಾರಣ ಹಲವಾರು.. ಅವುಗಳಲ್ಲಿ ಟಾಪ್ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ
1. ಅನ್ಯ ರಾಜ್ಯದಿಂದ ಬಂದವರನ್ನು ಬೇಕಾಬಿಟ್ಟಿ ಒಳಗೆ ಬಿಟ್ಟುಕೊಂಡಿದ್ದು.
2. ಅನ್ಯ ರಾಜ್ಯದಿಂದ ಕಳ್ಳದಾರಿಯಲ್ಲಿ ಬಂದ ಎಲ್ಲರನ್ನೂ ಪತ್ತೆ ಹಚ್ಚುವಲ್ಲಿ ವಿಫಲ
3. ಹೋಂ ಕ್ವಾರಂಟೈನ್ ಆದವರ ಮೇಲೆ ನಿಗಾ ಇಡದಿರುವುದು
4. ಆರಂಭದಿಂದಲೇ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸದಿರುವುದು
5. ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸದಿರುವುದು


6. ಅಗತ್ಯವಿರುವಷ್ಟು ಆಂಬುಲೆನ್ಸ್ ಒದಗಿಸಲು ಸಾಧ್ಯವಾಗದಿರುವುದು
7. ಆಸ್ಪತ್ರೆಗಳಲ್ಲಿ ಬೆಡ್, ಐಸಿಯು ಬೆಡ್ ಕೊರತೆ ನೀಗಿಸುವಲ್ಲಿ ನಿರ್ಲಕ್ಷ್ಯ
8. ಐಎಲ್‍ಐ, ಸಾರಿ ಕೇಸ್ ಪತ್ತೆ ಹಚ್ಚಿ ಚಿಕಿತ್ಸೆ ಕೊಡುವಲ್ಲಿ ವಿಳಂಬ.
9. ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಇಟ್ಟುಕೊಳ್ಳುವಲ್ಲಿ ಫೇಲ್
10. ಕಟ್ಟುನಿಟ್ಟಿನ ಲಾಕ್, ಕಂಟೈನ್ಮೆಂಟ್ ಮತ್ತು ಸೀಲ್ ಮಾಡುವಲ್ಲಿ ಫೇಲ್


Spread the love

About Laxminews 24x7

Check Also

ಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್

Spread the loveಬಿಪಿಎಲ್ ಕಾರ್ಡುದಾರರಿಗೆ ಗುಡ್​ನ್ಯೂಸ್! ಕಾರ್ಡ್ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣ, ಡಿಸೆಂಬರ್​ನಿಂದ ಸಿಗಲಿದೆ ರೇಷನ್ ಬೆಂಗಳೂರು, ನವೆಂಬರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ